ಪೆಮಾ ಚೋಡ್ರನ್ 84 ರ ಹರೆಯದ ಬುದ್ಧಿಸ್ಟ್ ಸನ್ಯಾಸಿನಿ. ಈಕೆಯ ಪ್ರಸಿದ್ಧ ಕೃತಿ - ‘ವೆಲ್‌ಕಮಿಂಗ್ ಅನ್‌ವೆಲ್‌ಕಮ್’. ನೋವು, ಸಿಟ್ಟು, ವೇದನೆಯನ್ನು ತಬ್ಬಿಕೊಂಡು ಸ್ವಾಗತಿಸಿ ಅನ್ನುವ ಪೆಮಾ ಲೈಫ್‌ನಲ್ಲಿ ನೆಗೆಟಿವ್ ಭಾವಗಳನ್ನು ಹೇಗೆ ಟ್ರೀಟ್ ಮಾಡಬೇಕು ಅನ್ನೋದನ್ನು ವಿವರಿಸುತ್ತಾರೆ.
ಪ್ರಿಯಾ ಕೆರ್ವಾಶೆ
‘ಪೆಮಾ’ ಅನ್ನೋದನ್ನು ಸಡನ್ನಾಗಿ ಪ್ರೇಮ ಅಂತ ಓದೋರು ಹೆಚ್ಚು. ಕೆಲವರು ಎಲ್ಲೋ ಅಕ್ಷರ ತಪ್ಪಾಗಿರಬೇಕು ಅಂದುಕೊಂಡು ಅದನ್ನು ಪ್ರೇಮ ಅಂತಲೇ ಭಾವಿಸಬಹುದು. ಇದು ಒಂದು ರೀತಿಯಲ್ಲಿ ಸರಿ. ಏಕೆಂದರೆ 84ರ ಹರೆಯದ ಈ ಹೆಣ್ಮಗಳ ಮುಖದಲ್ಲಿ ಅತಿಶಯವಾಗಿ ಕಾಣೋದು ಪ್ರೇಮವೇ. ಈಕೆ ಪೆಮಾ ಚೋಡ್ರನ್. ಅಮೆರಿಕಾ ಮೂಲದ ಈ ಬೌದ್ಧ ಸನ್ಯಾಸಿನಿಯ ಮೂಲ ಹೆಸರು ಡೀಡ್ರ್ರೆ ಬ್ಲಾಮ್‌ಫೀಲ್ಡ್. ಇಪ್ಪತ್ತರ ಹರೆಯದಲ್ಲಿ ಮದುವೆಯಾದಳು. ಇಬ್ಬರು ಮಕ್ಕಳಾದ ಮೇಲೆ ದಾಂಪತ್ಯ ಮುರಿದುಬಿತ್ತು. ಮರು ಮದುವೆಯಾದಳು. ಎಂಟು ವರ್ಷಕ್ಕೆ ಆತನೂ ಕೈ ಬಿಟ್ಟ.
ಈ 5 ಟಿಪ್ಸ್ ಫಾಲೋ ಮಾಡಿ, ಖುಷಿಯಾಗಿರಲಿಲ್ಲವೆಂದರೆ ನಮ್ಮನ್ನು ಕೇಳಿ!
ಒಂಟಿತನ, ಅನಾಥಪ್ರಜ್ಞೆ ಕಂಗಾಲು ಮಾಡಿತು. ಇದರಿಂದ ಹೊರಬರಬೇಕು ಅನಿಸಿತು. ಅಧ್ಯಾತ್ಮದ ಹಿಂದೆ ಬಿದ್ದಳು. ಏನೂ ಪ್ರಯೋಜನವಾಗಲಿಲ್ಲ. ಸದಾ ವಿಷಣ್ಣತೆಯಲ್ಲೇ ಬೇಯುತ್ತಿದ್ದಾಗ ಇವಳ ನೆರವಿಗೆ ಬಂದದ್ದು ಬೌದ್ಧ ಗುರು ತೃಂಗ್ಪಾ ರಿಂಪೋಚೆ ಬರೆದ ಒಂದು ಲೇಖನ. ‘ದುಃಖವನ್ನು ಅರ್ಥ ಮಾಡಿಕೊಳ್ಳಿ. ಅದನ್ನು ತೊಲಗಿಸುತ್ತೇನೆ ಎಂಬ ಹಠ ಬೇಡ’ ಎನ್ನುವ ತಿರುಳು ಆ ಲೇಖನದಲ್ಲಿತ್ತು.
undefined
ಕ್ರಮೇಣ ರಿಂಪೋಚೆಯ ವಿಚಾರಗಳತ್ತ ಆಕರ್ಷಿತಳಾಗಿ ಬೌದ್ಧ ಸಂನ್ಯಾಸಿಯಾದಳು. ಹೆಚ್ಚು ಕಮ್ಮಿ ನಾಲ್ಕು ದಶಕಗಳಿಂದ ತನ್ನೊಳಗನ್ನು ಅರಿಯುತ್ತಾ, ನೋವನ್ನು ಅಕ್ಕರೆಯಿಂದ ಸ್ವಾಗತಿಸಿ, ಅದನ್ನು ಅರಿತುಕೊಳ್ಳುವ ಬಗೆಯನ್ನು ಉಳಿದವರಿಗೂ ತಿಳಿಸುತ್ತಾ ಇರುವ ಈ ಪ್ರೇಮಮಯಿ ಸಂನ್ಯಾಸಿನಿಯ ಮಾತುಗಳು ಹೀಗಿವೆ.
1. ಹೆದರಿಕೆಯನ್ನು ಮೊದಲು ಅರಿಯಿರಿ
ಫ್ಯೂಚರ್ ಬಗ್ಗೆ ಭಯ, ಕೊರೋನಾ ಬಗ್ಗೆ ಭಯ, ಬಾಸ್ ಬಗ್ಗೆ ಭಯ.. ಹೀಗೆ ಹೆದರಿಕೆಯ ಪಟ್ಟಿಬೆಳೆಯುತ್ತದೆ. ಕೆಲವೊಂದು ಭಯವನ್ನು ತೋರಿಸಿದರೆ, ಕೆಲವನ್ನು ಮನಸ್ಸಿನೊಳಗಿನ ಫ್ರೀಜರ್‌ನಲ್ಲಿಟ್ಟು ಪೋಷಿಸುತ್ತಿರುತ್ತೇವೆ. ಆದರೆ ಈ ಭಯದ ಜೊತೆಗೆ ಕೂತು ನೀವ್ಯಾಕೆ ಹರಟಬಾರದು? ಭಯದ ಹಿನ್ನೆಲೆ ಮುನ್ನೆಲೆ ಇತ್ಯಾದಿಗಳನ್ನು ಅರಿತುಕೊಳ್ಳಿ. ಆಮೇಲೆ ಭಯ ನಿರ್ಭಯದ ಸ್ವರೂಪ ತಳೆಯುತ್ತದೆ.
ಬ್ಯುಟಿ ಹೆಚ್ಚಾಗಲು ಅದು-ಇದು ಕ್ರೀಮ್ ಬದಿಗಿಟ್ಟು ಧ್ಯಾನದ ಮೊರೆ ಹೋಗಿ!
2. ಭಗ್ನ ಹೃದಯಿಗಳೇ ತುಂಬಿರುವ ಜಗತ್ತಲ್ಲಿ ಹೃದಯವಂತರಾಗಿ ಬದುಕೋಣ
ಭಗ್ನ ಪ್ರೇಮಿಗಳು, ಒಡೆದ ಮನಸ್ಸಿನವರ ಜೊತೆಗೆ ಕೂತು ಮಾತನಾಡಿ. ಅಲ್ಲೊಂದು ಆದ್ರ್ರತೆ ಇರೋದು ಗೊತ್ತಾಗುತ್ತದೆ. ಇಂಥಾ ವ್ಯಕ್ತಿಗಳ ಜೊತೆಗೆ ನಮ್ಮನ್ನು ಬೆಸೆಯುವುದು ಮಾನವೀಯತೆ. ಈ ಗುಣದಲ್ಲಿ ಹೀಲಿಂಗ್ ಪವರ್ ಇದೆ.
3. ಅವರ ಸ್ಥಾನದಲ್ಲಿ ನಿಂತು ಅವರ ಬದುಕನ್ನು ನೋಡಿ
ಇನ್ನೊಬ್ಬರ ಬದುಕು ನಮಗೆ ಯಾವತ್ತೂ ಸುಲಭವಾಗಿಯೇ ಕಾಣುವುದು. ಅವರ ನೋವು ಕ್ಷುಲ್ಲಕ ಅಂತಲೇ ಅನಿಸೋದು. ಆದರೆ ನೀವು ಅವರ ಶೂವಿನೊಳಗೆ ಕಾಲಿಟ್ಟು ಅರ್ಥಾತ್ ಅವರ ನೆಲೆಯಲ್ಲಿ ನಿಂತು ಯೋಚಿಸಿದಾಗ ಇತರರ ಕಷ್ಟತಿಳಿಯುತ್ತದೆ. ಅದಕ್ಕೆ ಸ್ಪಂದಿಸಿ. ನಿಮ್ಮ ನೋವೂ ಕಡಿಮೆಯಾಗುತ್ತದೆ.
4. ನೋವಿನ ಶರೀರ ಒಳಹೊಕ್ಕು ನೋಡಿ
ಅದು ನಮ್ಮ ನೋವು ಇರಬಹುದು, ಇತರರದ್ದು ಇರಬಹುದು. ಆ ನೋವಿನ ಶರೀರರ ಒಳಹೊಕ್ಕು ನೋಡಿ. ಮೊದ ಮೊದಲಿಗೆ ಒಂದು ಬಗೆಯ ಸ್ಟಿಫ್‌ನೆಸ್, ಸಂಕುಚಿತತೆ ಇತ್ಯಾದಿ ಗಮನಕ್ಕೆ ಬರುತ್ತದೆ. ಆ ಸ್ಟಿಫ್‌ನೆಸ್ ಅನ್ನು ಪರಿಚಯ ಮಾಡಿಕೊಂಡರೆ ನಿಧಾನಕ್ಕೆ ಅದು ಸಡಿಲವಾಗುತ್ತದೆ.
5. ಮೊದಲು ಸಮಸ್ಯೆಯನ್ನು ಗುರುತಿಸಿ, ಅದನ್ನು ಸ್ವಾಗತಿಸಿ, ತಬ್ಬಿಕೊಳ್ಳಿ, ಒಪ್ಪಿಕೊಳ್ಳಿ.
ಸಮಸ್ಯೆ ನಮ್ಮೆದುರು ಬಂದಾಗ ಭಯಪಟ್ಟು ಅದರಿಂದ ಓಡಲು ಯತ್ನಿಸುತ್ತೇವೆ. ಹೀಗೆ ಮಾಡಿದರೆ ನೀವು ಕೊನೆಯವರೆಗೂ ಓಡುತ್ತಲೇ ಇರಬೇಕು. ಬದಲಾಗಿ ಸಮಸ್ಯೆ ಏನು ಅಂತ ಗುರುತಿಸಿ. ಆ ಕಹಿಯನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿ. ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಿ. ಜಟಿಲ ಸಮಸ್ಯೆಯೊಂದು ಹೀಗೆ ಸಡಿಲಾಗುತ್ತಾ ಹೋಗುತ್ತದೆ.
ಟಾಂಗ್ಲಿನ್ ಧ್ಯಾನ
ಇದೊಂದು ಪ್ರಾಚೀನ ಬುದ್ಧಿಸಂನ ಧ್ಯಾನತಂತ್ರ. ಮೂಲತಃ ಜ್ಞಾನವನ್ನು ಎಕ್ಸ್‌ಚೇಂಜ್ ಮಾಡೋದಕ್ಕೆ ಇರುವ ಧ್ಯಾನ ಪದ್ಧತಿ. ಇನ್ನೊಬ್ಬರ ನೋವನ್ನು ಹೀಲ್ ಮಾಡುವುದಕ್ಕಾಗಿಯೂ ಇದನ್ನು ಬಳಸುತ್ತಾರೆ. ತೀರಾ ನೊಂದ ವ್ಯಕ್ತಿಯನ್ನು ಎದುರು ಕೂರಿಸಿಕೊಂಡು ಆತ ತನ್ನೊಳಗಿನ ಎಲ್ಲಾ ನೋವನ್ನೂ ಹೊರಹಾಕುವಂತೆ ಮಾಡುವುದು. ಈ ಮೂಲಕ ಆತನನ್ನು ನೋವಿಂದ ಹೊರತರುವುದು. ಆ ನೋವಿನ ಅಂಶ ನಮ್ಮೊಳಗೆ ಸೇರುತ್ತದೆ. ಧ್ಯಾನಸ್ಥರಾಗಿ ಉಸಿರೆಳೆದುಕೊಳ್ಳುವಾಗ ಆ ನೋವನ್ನು ಗಮನಿಸುತ್ತಾ, ಉಸಿರು ಬಿಡುವಾಗ ಸಾಧ್ಯವಾದಷ್ಟುನೋವನ್ನು, ಆತನ ಮಾತಿನ ನೆನಪನ್ನು ಹೊರಹಾಕುತ್ತಾ ಬರುವುದು. ಈ ಮೂಲಕ ಇಬ್ಬರೂ ನೋವಿಂದ ಪಾರಾಗುವುದು. ಪೆಮಾ ಬಹಳಷ್ಟುಮಂದಿಗೆ ಇಂಥಾ ರಿಲ್ಯಾಕ್ಸೇಶನ್ ಕೊಟ್ಟಿದ್ದಾರೆ.
ಪೇಮಾ ಅಧ್ಯಾತ್ಮ ಅನುಭವಗಳು
ನೂರು ದಿನಗಳ ಕಾಲ ಹೊರಜಗತ್ತಿನ ಸಂಪೂರ್ಣ ಸಂಪರ್ಕ ಕಡಿದುಕೊಂಡು ಪೇಮಾ ಏಕಾಂತ ಧ್ಯಾನದಲ್ಲಿರುತ್ತಾರೆ. ವರ್ಷದಲ್ಲಿ ಎರಡು, ಮೂರು ಬಾರಿಯೂ ಈ ಧ್ಯಾನ ಮಾಡೋದಿದೆ. ಇಂಥಾ ಸಾಧನೆಗಳಿಂದ ಅವರು ಕಂಡುಕೊಂಡದ್ದನ್ನು ಹೀಗೆ ದಾಖಲಿಸುತ್ತಾರೆ.
- ಆಧ್ಯಾತ್ಮ ಸಾಧನೆಯಲ್ಲಿ ಮೊದಲ ಹೆಜ್ಜೆಯನ್ನೂ ನಾನಿನ್ನು ಇಟ್ಟಿಲ್ಲ. ಈ ಹಂತದಲ್ಲಿ ಕಾಲದ ಅನಂತತೆಯ ಅನುಭವಗಳಾಗದವು.
- ಸಮಸ್ಥಿತಿಯಿಂದ ನೋವಿನ ಮೂಲ ಗುರುತಿಸುವುದು ತಿಳಿಯಿತು. ನೋವಿಂದ ಹೊರ ಬರೋದು ಹೇಗೆ ಅನ್ನುವುದನ್ನು ಈಗಲೂ ಕಲಿಯುತ್ತಿರುವೆ.
- ನಮ್ಮ ಎದುರಿರುವ ವ್ಯಕ್ತಿ ರಾಗದ್ವೇಷಗಳಿಂದ ತುಂಬಿಕೊಂಡಿರುತ್ತಾನೆ. ಅವನ ಮಾನವೀಯ ಗುಣವನ್ನಷ್ಟೇ ನಾವು ನೋಡೋಣ.
- ನೋವು, ಸಿಟ್ಟು, ಆಕ್ರೋಶದೊಂದಿಗೆ ಬರುವ ವ್ಯಕ್ತಿಗಳನ್ನು ನಮ್ಮ ಟೀಚರ್‌ಗಳನ್ನಾಗಿ ಮಾಡಬೇಕು.
- ನಮ್ಮನ್ನು ಮತ್ತು ಜಗತ್ತನ್ನು ಇದ್ದ ಹಾಗೆ ಅರ್ಥ ಮಾಡಿಕೊಳ್ಳೋದಕ್ಕಿಂತ ದೊಡ್ಡ ಜ್ಞಾನೋದಯ ಬೇರಿಲ್ಲ.
- ಮಾತೊಂದೇ ಸಂವಹನ ಅಲ್ಲ. ಒಬ್ಬ ವ್ಯಕ್ತಿಯೆದುರು ಗಂಟೆಗಟ್ಟಲೆ ಮೌನವಾಗಿ ಕೂತು ಸಂವಹನ ಮಾಡಬಹುದು.