
ನಿದ್ರೆ ಬಹಳ ಮುಖ್ಯವಾಗಿದ್ದು. ಆರೋಗ್ಯಕ್ಕೆ ಉತ್ತಮ ನಿದ್ರೆ ಅನಿವಾರ್ಯವಾಗಿದೆ. ಪ್ರತಿ ರಾತ್ರಿ ಶಾಂತಿಯುತವಾಗಿ ಮಲಗಲು ಎಲ್ಲರೂ ಬಯಸುತ್ತಾರೆ. ತಪ್ಪು ಜೀವನಶೈಲಿ, ಆರೋಗ್ಯಕ್ಕೆ ಸಂಬಂಧಿತ ಸಮಸ್ಯೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ. ಈಗಿನ ದಿನಗಳಲ್ಲಿ ನಿದ್ರೆಗೆ ಸಂಬಂಧಿಸಿದ ಅನೇಕ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಇದ್ರಿಂದ ನಿದ್ರಾಹೀನತೆ ಅಥವಾ ಗೊರಕೆ ಸಮಸ್ಯೆಗೆ ಕಾರಣವಾಗ್ತಿದೆ. ಆರಂಭಿಕ ಸಮಯದಲ್ಲಿ ಜನರು ಅವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ನಿದ್ರಾಹೀನತೆ ಮತ್ತು ಗೊರಕೆ ಸಮಸ್ಯೆ ದೀರ್ಘಾವಧಿಯಲ್ಲಿ ಗಂಭೀರ ಮಾನಸಿಕ ಮತ್ತು ದೈಹಿಕ ಕಾಯಿಲೆಗೆ ಕಾರಣವಾಗುವ ಸಾಧ್ಯತೆಯಿರುತ್ತದೆ. ಈ ಸಮಸ್ಯೆಗೆ ಮೌತ್ ಟ್ಯಾಪಿಂಗ್ ಮನೆಮದ್ದು ಕೆಲವು ಸಮಯದಿಂದ ಟ್ರೆಂಡ್ ಆಗಿವೆ. ಇದು ಗೊರಕೆ ಮತ್ತು ದುರ್ವಾಸನೆಯ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ನಾವಿಂದು ಮೌತ್ ಟ್ಯಾಪಿಂಗ್ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೆವೆ.
ಮೌತ್ ಟ್ಯಾಪಿಂಗ್ (Mouth Taping) ಅಂದ್ರೇನು? : ಸ್ಲೀಪ್ ಫೌಂಡೇಶನ್ ಪ್ರಕಾರ, ಮೌತ್ ಟೇಪಿಂಗ್ ಎಂದರೆ ರಾತ್ರಿ (Night) ಮಲಗುವ ಮುನ್ನ ಟೇಪ್ (Tape) ನಿಂದ ಬಾಯಿ ಮುಚ್ಚುವುದನ್ನು ಮೌತ್ ಟ್ಯಾಪಿಂಗ್ ಎಂದು ಕರೆಯುತ್ತಾರೆ. ಮೌತ್ ಟ್ಯಾಪಿಂಗ್ ನಲ್ಲಿ ನಾವು ಮೂಗಿನಿಂದ ಉಸಿರಾಡುತ್ತೇವೆ. ಬಾಯಿ ಸಂಪೂರ್ಣವಾಗಿ ಮುಚ್ಚಿರುವ ಕಾರಣ ಇಲ್ಲಿ ಬಾಯಿ (Mouth) ಯಿಂದ ಉಸಿರಾಡಲು ಸಾಧ್ಯವಿಲ್ಲ. ಬಾಯಿಯ ಮೂಲಕ ಉಸಿರಾಡುವ ಜನರು ನಿದ್ರಾಹೀನತೆಯ ಅಪಾಯವನ್ನು ಹೊಂದಿರುತ್ತಾರೆ. ಇದು ಗೊರಕೆಗೆ ಕಾರಣವಾಗುತ್ತದೆ.
ಮೌತ್ ಟ್ಯಾಪಿಂಗ್ ಬಗ್ಗೆ ನಡೆದಿದೆ ಅಧ್ಯಯನ : ಮೌತ್ ಟ್ಯಾಪಿಂಗ್ ಯಾವ ಪ್ರಭಾವ ಬೀರುತ್ತದೆ ಎನ್ನುವ ಬಗ್ಗೆ ಈಗಾಗಲೇ ಅಧ್ಯಯನ ನಡೆದಿದೆ. 50 ಜನರ ಮೇಲೆ ಮೌತ್ ಟ್ಯಾಪಿಂಗ್ ಅಧ್ಯಯನ ನಡೆಸಲಾಗಿದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ 36 ಜನರು 28 ರಾತ್ರಿ ಬಾಯಿಗೆ ಟೇಪ್ ಹಾಕಿ ಮಲಗಿದ್ದರು. ಅದ್ರಲ್ಲಿ 26 ರಾತ್ರಿ ಬಾಯಿಗೆ ಟೇಪ್ ಹಾಕಿ ಮಲಗಿದ್ದು ಗಣನೀಯ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಿತ್ತು ಎಂದು ಹೇಳಿದ್ದಾರೆ. ಮೌತ್ ಟ್ಯಾಪಿಂಗ್ ಬಗ್ಗೆ ಸಣ್ಣ ವೈಜ್ಞಾನಿಕ ಪ್ರಯೋಗ (Scientific Experiment) ಮಾತ್ರ ನಡೆದಿದೆ. ಹಾಗಾಗಿ ಇದು ಹೆಚ್ಚು ಪರಿಣಾಮಕಾರಿ ಎನ್ನಲು ಸಾಧ್ಯವಿಲ್ಲ. ನಾವು ಅದ್ರ ಬಗ್ಗೆ ದೊಡ್ಡ ಮಟ್ಟದ ಅಧ್ಯಯನ ನಡೆಸಿದ ನಂತ್ರವೇ ಇದ್ರ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ಸಾಧ್ಯ.
ವಯಸ್ಸಾದ ಮೇಲೆ ಕೀಲು ನೋವು, ಮೂತ್ರ ಸೋಂಕು ಕಾಡಬಾರದು ಅಂದ್ರೆ ಹೀಗ್ ಮಾಡ್ಬೇಡಿ!
ಗೊರಕೆ ನಿಲ್ಲಿಸುತ್ತಾ ಮೌತ್ ಟ್ಯಾಪಿಂಗ್ ? : ರಾತ್ರಿ ಪೂರ್ತಿ ಗೊರಕೆ ಹೊಡೆಯುತ್ತೀರಿ ಎನ್ನುವವರು ಈ ಮೌತ್ ಟ್ಯಾಪಿಂಗ್ ಮದ್ದನ್ನು ಪ್ರಯೋಗಿಸಬಹುದು. ಗೊರಕೆ ಚಿಕಿತ್ಸೆಗೆ ಮೌತ್ ಟ್ಯಾಪಿಂಗ್ ಪ್ರಯೋಜನಕಾರಿಯಾಗಿದೆ. ಬಾಯಿಗೆ ಟೇಪ್ ಹಾಕಿದ್ದರಿಂದ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರು ಮೂಗಿನ ಮೂಲಕ ಉಸಿರಾಡುತ್ತಿದ್ದರು. ಹಾಗಾಗಿ ಅವರ ಗೊರಕೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿತ್ತು, ಉಸಿರಾಟದಲ್ಲಿ ಸುಧಾರಣೆಯಾಗಿತ್ತು ಎನ್ನುತ್ತದೆ ಅಧ್ಯಯನ ವರದಿ.
ಮೌತ್ ಟ್ಯಾಪಿಂಗ್ ಪ್ರಯೋಜನಗಳು ಯಾವುವು? : ಮೌತ್ ಟ್ಯಾಪಿಂಗ್ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ. ಆದ್ರೆ ಈಗಿನ ಅಧ್ಯನದ ಪ್ರಕಾರ, ಮೌತ್ ಟ್ಯಾಪಿಂಗ್ ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಬಾಯಿ ಒಣಗುವ ಸಮಸ್ಯೆ ಇರೋದಿಲ್ಲ. ವಸಡು ರೋಗ, ವಾಸನೆಯುಕ್ತ ಉಸಿರಾಟಕ್ಕೆ ಇದ್ರಿಂದ ಬ್ರೇಕ್ ಸಿಗುತ್ತದೆ. ಮಕ್ಕಳ ಬೆಳವಣಿಗೆ ನಿಧಾನವಾಗ್ತಿದ್ದರೆ ಆ ಸಮಸ್ಯೆ ದೂರವಾಗುತ್ತದೆ. ಅರಿವಿನ ಸಾಮರ್ಥ್ಯ ಮೌತ್ ಟ್ಯಾಪಿಂಗ್ ನಿಂದ ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಮೌತ್ ಟ್ಯಾಪಿಂಗ್ ನಿಂದಾಗುವ ನಷ್ಟ : ಮೌತ್ ಟ್ಯಾಪಿಂಗ್ ವೇಳೆ ಮುಖಕ್ಕೆ ನಾವು ಟೇಪ್ ಹಚ್ಚಿರುತ್ತೇವೆ. ಈ ಟೇಪ್ ತೆಗೆಯುವಾಗ ನೋವಾಗುತ್ತದೆ. ಹಾಗೆಯೇ ಅನೇಕರಿಗೆ ದೀರ್ಘಕಾಲ ಮೂಗಿನಲ್ಲೇ ಉಸಿರಾಡುವುದು ಕಷ್ಟ. ಇದ್ರಿಂದ ನಿದ್ರೆಗೆ ಸ್ವಲ್ಪ ಸಮಸ್ಯೆಯಾಗಬಹುದು. ನಾಲ್ಕೈದು ದಿನದ ನಂತ್ರ ಇದು ಅಭ್ಯಾಸವಾದ್ರೆ ಓಕೆ. ಇಲ್ಲವೆಂದ್ರೆ ಬೌತ್ ಟ್ಯಾಪಿಂಗ್ ಬಿಡೋದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.