ಚುಂಬನ ರೋಗದ ಬಗ್ಗೆ ಗೊತ್ತಾ?‌ ಡಿಸೀಸ್‌ಗೆ ಕೊರೋನಾದ್ದೇ ಲಕ್ಷಣ, ಆದ್ರೆ ಭಯ ಪಡಬೇಕಿಲ್ಲ!

By Kannadaprabha News  |  First Published Jul 23, 2020, 8:51 AM IST

ಆ..ಕ್ಷೀ.. ಅಂತ ಒಂದರ ಮೇಲೊಂದು ಸೀನು, ತಲೆ ಭಾರ, ಗಂಟಲು ನೋವು, ಸುಸ್ತು, ಜ್ವರ. ಅಯ್ಯೋ ಕೊರೋನಾ ನಂಗೂ ಬಂತಾ ಅಂತ ಭಯ ಪಡ್ಬೇಕಿಲ್ಲ. ಇದು ಕಿಸ್ಸಿಂಗ್‌ ಡಿಸೀಸ್‌ ಅಥವಾ ಮೋನೋ ಲಕ್ಷಣ ಆಗಿರಬಹುದು. ಎಪ್‌ಸ್ಟೀನ್‌ ಬಾರ್‌ ವೈರಸ್‌( ಇಬಿವಿ) ಮೂಲಕ ಹರಡೋ ಈ ರೋಗದ ಬಗ್ಗೆ ಮಾಹಿತಿ ಇಲ್ಲಿದೆ.


ಪ್ರಿತಾ ಕೆರ್ವಾಶೆ

ಕಿಸ್ಸಿಂಗ್‌ ಡಿಸೀಸ್‌ ಅನ್ನೋದ್ಯಾಕೆ?

Latest Videos

undefined

ಈ ರೋಗ ಬರೋದು ಎಂಜಲಿನಿಂದ. ನೆಗಡಿ, ಸೀನುವಾಗ ಬರುವ ಶೀತದ ಹನಿಯಿಂದ, ಕೆಲವೊಮ್ಮೆ ಲೈಂಗಿಕ ಕ್ರಿಯೆ ನಡೆಸಿದಾಗಲೂ ಇದು ಒಬ್ಬರ ದೇಹದಿಂದ ಇನ್ನೊಬ್ಬರ ದೇಹಕ್ಕೆ ಹರಡುತ್ತೆ. ಹೆಚ್ಚಾಗಿ ಕಿಸ್‌ ಮಾಡುವಾಗ ಹರಡೋ ಕಾರಣ ಈ ಮೋನೋ ಎಂಬ ರೋಗಕ್ಕೆ ‘ಕಿಸ್ಸಿಂಗ್‌ ಡಿಸೀಸ್‌’ ಎಂದೂ ಕರೆಯುತ್ತಾರೆ. ಆದರೆ ಯಾರನ್ನೂ ಚುಂಬಿಸದೆಯೂ ಈ ರೋಗ ಬರಬಹುದು. ಇನ್ನೊಬ್ಬರ ಟೂತ್‌ಬ್ರಶ್‌ ಶೇರ್‌ ಮಾಡಿದಾಗ, ಒಂದೇ ಪ್ಲೇಟ್‌ನಲ್ಲಿ ತಿಂದಾಗ, ಒಬ್ಬರು ಕುಡಿದ ಗ್ಲಾಸ್‌ ಅನ್ನು ತೊಳೆಯದೇ ಬಳಸಿದಾಗ, ಇನ್ನೊಬ್ಬರು ನಮ್ಮ ಪಕ್ಕದಲ್ಲೇ ಸೀನಿದಾಗ, ಹತ್ತಿರದಲ್ಲಿ ಕೂತಿದ್ದಾಗಲೂ ಇದು ಬರಬಹುದು.

30ರ ನಂತರ ಈ ಪ್ರಾಬ್ಲಮ್‌ ಬರೋದು ಕಡಿಮೆ. ಆದರೆ ಹದಿನೈದರಿಂದ 30ರೊಳಗಿನ ವಯೋಮಾನದವರಲ್ಲಿ ಈ ರೋಗದ ಪ್ರಮಾಣ ಶೇ.75ರಷ್ಟಿರುತ್ತದೆ. ಆದರೆ ಹತ್ತರ ಒಳಗಿನ ಮಕ್ಕಳಲ್ಲಿ ಬಹಳ ಮೈಲ್ಡ್‌ ಆಗಿ ಈ ರೋಗ ಬಂದು ಹೋಗಬಹುದು.

ಲಕ್ಷಣಗಳೇನು?

- ಜ್ವರ, ಗಂಟಲ ಕೆರೆತ, ನೋವು, ಎಂಜಲು ನುಂಗಲಾಗದಂತಾಗುವುದು, ತಲೆನೋವು, ಗುಳ್ಳೆಗಳು, ಅತಿಯಾಗುವ ಸುಸ್ತು, ಸ್ವಲ್ಪ ತಿಂದ ಕೂಡಲೇ ಹೊಟ್ಟೆತುಂಬಿದಂತಾಗೋದು.

ಕೊರೋನಾದಿಂದ ಚೇತರಿಸಿಕೊಂಡವ  'ಆ' ಕೆಲಸ ಮಾಡಲು ಎಷ್ಟು ದಿನ ಕಾಯಬೇಕು?

ವಾರಗಟ್ಟಲೆ ಕಾಡುತ್ತೆ

ಎರಡು ವಾರಗಳಾದರೂ ಈ ಸಮಸ್ಯೆಗಳು ಕಡಿಮೆಯಾಗೋದಿಲ್ಲ. ಕೆಲವೊಮ್ಮೆ ಜ್ವರ, ತಲೆನೋವು ಕಡಿಮೆಯಾದರೂ ಸುಸ್ತು ಆಮೇಲೂ ಒಂದಿಷ್ಟುದಿನಗಳವರೆಗೆ ಇರುತ್ತದೆ. ಕೆಲವರಿಗೆ ಕೆಲವು ವಾರಗಳಲ್ಲಿ ಈ ಸಮಸ್ಯೆಯಿಂದ ಮುಕ್ತಿ ಸಿಗಬಹುದು. ಆದರೆ ಕೆಲವರು ಆರು ತಿಂಗಳ ಕಾಲ ನರಳಬೇಕಾಗಿ ಬರಬಹುದು, ರಕ್ತ ಪರೀಕ್ಷೆ ಮಾಡುವಾಗ ಬಿಳಿ ರಕ್ತ ಕಣಗಳ (್ಝyಞphಟ್ಚyಠಿಛಿs) ಟೆಸ್ಟ್‌ ಮಾಡಿಸಿದರೆ ಈ ರೋಗ ಪತ್ತೆ ಮಾಡಬಹುದು.

ಹೈಜಿನ್‌ ಆಗಿದ್ರೆ ಬರಲ್ಲ

ಹೆಚ್ಚು ಕಡಿಮೆ ಕೊರೋನಾ ಬರದಂತೆ ವಹಿಸುವ ಮುನ್ನೆಚ್ಚರಿಕೆಯನ್ನು ಈ ರೋಗದ ಬಗ್ಗೆಯೂ ವಹಿಸಿದ್ರೆ ಆಯ್ತು. ಆಗಾಗ ಕೈ ತೊಳೆಯೋದು, ಇನ್ನೊಬ್ಬರಿಂದ ಅಂತರ ಕಾಯ್ದುಕೊಳ್ಳೋದು ಇತ್ಯಾದಿ ಎಚ್ಚರಿಕೆಗಳಿರಲಿ. ಈ ಸಮಸ್ಯೆ ಮಾರಾಣಾಂತಿಕವಲ್ಲ, ಹಾಗಂತ ನೆಗ್ಲೆಕ್ಟ್ ಮಾಡೋ ಹಾಗೂ ಇಲ್ಲ. ಯಾವುದಕ್ಕೂ ಹುಷಾರಾಗಿರಿ.

click me!