ಪುರುಷರ ಥೈರಾಯ್ಡ್ ಪ್ರಮಾಣ ಎಷ್ಟಿರಬೇಕು ಗೊತ್ತಾ?

By Suvarna News  |  First Published Jan 31, 2023, 3:10 PM IST

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಮಹಿಳೆಯರನ್ನು ಹೆಚ್ಚಾಗಿ ಕಾಡುವ ಈ ರೋಗ ಪುರುಷರನ್ನೂ ಬಿಟ್ಟಿಲ್ಲ. ಪುರುಷರಿಗೂ ಥೈರಾಯ್ಡ್ ಕಾಣಿಸಿಕೊಳ್ಳುವ ಕಾರಣ, ಅದ್ರ ಬಗ್ಗೆ ಅವರು ತಿಳಿಯಬೇಕಾದ ಅವಶ್ಯಕತೆಯಿದೆ.
 


ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೆ ಥೈರಾಯ್ಡ್ ಗ್ರಂಥಿ ಕೂಡ ಚಿಕ್ಕದಾದರೂ ಇದರ ಕಾರ್ಯನಿರ್ವಹಣೆ ಬಹಳ ದೊಡ್ಡದು. ಥೈರಾಯ್ಡ್ ಗ್ರಂಥಿಯು ಧ್ವನಿಪೆಟ್ಟಿಗೆಯ ಕೆಳಗೆ ಮತ್ತು ಕಾಲರ್ ಬೋನ್ ಗಳ ಮೇಲಿರುತ್ತದೆ. ಇದು ನಮ್ಮ ದೇಹದ ಕಾರ್ಯಚಟುವಟಿಕೆಗೆ ಬೇಕಾದ ಪ್ರಮುಖ ಹಾರ್ಮೋನ್ ಆಗಿದೆ. ಇದು ದೇಹದ ಉಷ್ಣತೆ, ಕೊಬ್ಬನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯು ಸರಾಗವಾಗಿ ನಡೆಯುವಂತೆ ಮಾಡುತ್ತದೆ ಹಾಗೂ ಹೃದಯ ಬಡಿತ, ಉಸಿರಾಟ ಕ್ರಿಯೆ, ಜೀರ್ಣಕ್ರಿಯೆ ಮತ್ತು ಮೆದುಳಿನ ಬೆಳವಣಿಗೆಯ ಕಾರ್ಯದಲ್ಲಿ ಥೈರಾಯ್ಡ್ ಗ್ರಂಥಿ ಮಹತ್ವದ ಪಾತ್ರವಹಿಸುತ್ತದೆ.

ಇತ್ತೀಚೆಗೆ ಥೈರಾಯ್ಡ್ (Thyroid ) ಸಮಸ್ಯೆ ಕಾಮನ್ ಆಗಿಬಿಟ್ಟಿದೆ. ಥೈರಾಯ್ಡ್ ಗ್ರಂಥಿಯಲ್ಲಿ ಹಾರ್ಮೋನು (Hormone) ಗಳು ಅತೀ ಕಡಿಮೆಯಾದರೆ ಅದನ್ನು ಹೈಪೋಥೈರಾಯ್ಡ್ (Hypothyroid ) ಎಂದೂ, ಹೆಚ್ಚು ಉತ್ಪತ್ತಿಯಾದರೆ ಹೈಪರ್ ಥೈರಾಯ್ಡ್ ಎಂದು ಕರೆಯಲಾಗುತ್ತದೆ. ಯಾವ ಥೈರಾಯ್ಡ್ ಆದರೂ ಅದು ಮನುಷ್ಯನ ಜೀವನಶೈಲಿಯನ್ನೇ ಬದಲಿಸಿಬಿಡುತ್ತದೆ. ಥೈರಾಯ್ಡ್ ಸಮಸ್ಯೆಯಲ್ಲಿ ಮೊದಮೊದಲು ತೂಕ ಏರುವುದು, ಸುಸ್ತು, ಸ್ನಾಯುಗಳು ಬಲಹೀನಗೊಳ್ಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಪ್ರಾರಂಭದ ಹಂತದಲ್ಲಿ ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಈಗ ಪುರುಷರಲ್ಲೂ ಕಾಣಿಸುತ್ತಿದೆ. ಈ ಥೈರಾಯ್ಡ್ ಮಟ್ಟ ಪುರುಷರಲ್ಲಿ ಎಷ್ಟಿರಬೇಕು ಎಷ್ಟಿರಬಾರದು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

NEWBORN SCREENING TEST : ಜನನದ ನಂತರ ತಕ್ಷಣ ಮಗುವಿಗೆ ಈ ಟೆಸ್ಟ್ ಮಾಡಿಸಿ

Latest Videos

undefined

ಪುರುಷರಲ್ಲಿ ಟಿಎಸ್ಎಚ್ ಮಟ್ಟ ಎಷ್ಟಿರಬೇಕು ಗೊತ್ತಾ? : ಟಿಎಸ್ಎಚ್ (ಸಬ್ ಕ್ಲಿನಿಕಲ್ ಹೈಪೋಥೈರಾಯ್ಡಿಸಮ್)ನ ಸಾಮಾನ್ಯ ಮಟ್ಟ 0.4 mU/L ನಿಂದ 4.0 mU/L ವರೆಗೆ ಇರುತ್ತದೆ. 18ರಿಂದ 50 ವರ್ಷದೊಳಗಿನ ಪುರುಷರಲ್ಲಿ ಟಿಎಸ್ಎಚ್ ಮಟ್ಟ 0.5 – 4.1 mU/L ವರೆಗೆ ಇರಬೇಕು. 51 ರಿಂದ 70 ವರ್ಷದ ವಯಸ್ಸಿನ ಪುರುಷರಲ್ಲಿ ಟಿಎಸ್ಎಚ್ ಪ್ರಮಾಣ 0.5ರಿಂದ 4.5 mU/L  ವರೆಗೆ ಇರಬೇಕು. 70 ವರ್ಷ ಮೇಲ್ಪಟ್ಟ ಪುರುಷರಲ್ಲಿ ಟಿಎಸ್ಎಚ್ ಪ್ರಮಾಣ 0.4 - 5.2 mU/L ಇರಬೇಕು.

ಇದು ಥೈರಾಯ್ಡ್ ನ ಅಪಾಯಕಾರಿ ಮಟ್ಟ: ಹೈಪೋಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್ ಎರಡೂ ಅಪಾಯಕಾರಿಯೇ ಆಗಿದೆ. ಥೈರಾಯ್ಡ್ ಉತ್ತೇಜಿಸುವ ಹಾರ್ಮೋನುಗಳನ್ನು ಪರೀಕ್ಷಿಸಲು ಟಿಎಸ್ಎಚ್ ಪರೀಕ್ಷೆ ನಡೆಸಲಾಗುತ್ತದೆ. ಟಿಎಸ್ಎಚ್ ನ ಸಾಮಾನ್ಯ ಮಟ್ಟ 0.4 mU/L ನಿಂದ 4.0 mU/L ವರೆಗೆ ಇರುತ್ತದೆ. ಟಿಎಸ್ಎಚ್ ಪ್ರಮಾಣ 2.0ಕ್ಕಿಂತ ಹೆಚ್ಚಾದರೆ ಇದು ಹೈಪೋಥೈರಾಯ್ಡ್ ಎನಿಸಿಕೊಳ್ಳುತ್ತದೆ. ಅದೇ ಥೈರಾಯ್ಡ್ ಮಟ್ಟ 0.4 mU/L ನಿಂದ 4.0 mU/L ಗಿಂತ ಕಡಿಮೆ ಇದ್ದರೆ ಅದು ಹೈಪರ್ ಥೈರಾಯ್ಡ್ ಆಗಿರುತ್ತದೆ.

ಟಿ0, ಟಿ1, ಟಿ2 ಎಂದರೇನು? : ಥೈರಾಯ್ಡ್ ರಿಪೋರ್ಟ್ ಗಳಲ್ಲಿ ನೀವು ಟಿ1, ಟಿ2 ಮುಂತಾದವುಗಳನ್ನು ನೋಡಿರಬಹುದು. ಇದು ಥೈರಾಯ್ಡ್ ಗಳ ಮೇಲೆ ನಡೆಸುವ ಪರೀಕ್ಷೆಯಾಗಿದೆ.

ಟಿ3 ಎಂದರೇನು? : ಮನುಷ್ಯನ ಶರೀರದಲ್ಲಿ ಓವರ್ ಆಕ್ಟಿವ್ ಥೈರಾಯ್ಡ್ ಲಕ್ಷಣ ಕಾಣಿಸಿದಾಗ ವೈದ್ಯರು ಟಿ3 ಟೆಸ್ಟ್ ನಡೆಸಲು ಹೇಳುತ್ತಾರೆ. ಟಿ3ಯ ಸಾಮಾನ್ಯ ಮಟ್ಟ 100 – 200 ng/dL ಇರುತ್ತದೆ. ಟಿ3 ಹಾರ್ಮೋನುಗಳ ಪರೀಕ್ಷೆಗಾಗಿ ಟಿ3 ಅಥವಾ ಟ್ರೈಯೋಡೋಥೈರೋನಿನ್ ಅನ್ನು ಪರೀಕ್ಷಿಸಲಾಗುತ್ತದೆ.

ಟಿ4 ಎಂದರೇನು? : ಆರೋಗ್ಯವಂತ ಶರೀರವು ಸರಿಯಾದ ಪ್ರಮಾಣದ ಟಿ3 ಮತ್ತು ಟಿ4 ಹಾರ್ಮೋನುಗಳನ್ನು ಹೊಂದಿರುತ್ತದೆ. ಈ ಎರಡೂ ಹಾರ್ಮೋನ್ ಗಳು ಟಿಎಸ್ಎಚ್ ನಿಂದ ನಿಯಂತ್ರಿಸಲ್ಪಡುತ್ತವೆ. ಶರೀರದಲ್ಲಿ ಟಿ4 ಪ್ರಮಾಣ ಹೆಚ್ಚುವುದರಿಂದ ಆತಂಕ, ತೂಕ ನಷ್ಟ, ಶರೀರ ನಡುಗುವುದು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಶರೀರದಲ್ಲಿ ಟಿ4 ಮಟ್ಟವನ್ನು ಪರೀಕ್ಷಿಸಲು ಥೈರಾಕ್ಸಿನ್ ಪರೀಕ್ಷೆ ನಡೆಸಲಾಗುತ್ತದೆ.

ಗರ್ಭಿಣಿಯ ಮುಖ ಹೊಳೆಯುತ್ತಿದ್ರೆ ಹೆಣ್ಣು ಮಗು ಹುಟ್ಟುತ್ತಂತೆ… ಇದು ನಿಜಾನ?

ಥೈರಾಯ್ಡ್ ಮಟ್ಟವನ್ನು ಹೇಗೆ ನಿಯಂತ್ರಿಸಬೇಕು?
• ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಮತ್ಸ್ಯಾಸನ, ಉಷ್ಟ್ರಾಸನ, ಧನುಷಾಸನ ಮತ್ತು ವಜ್ರಾಸನದಂತಹ ಯೋಗಗಳು ಪ್ರಯೋಜನಕಾರಿಯಾಗಿದೆ.
• ಪುರುಷರಲ್ಲಿ ಹೆಚ್ಚುತ್ತಿರುವ ಥೈರಾಯ್ಡ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಧೂಮಪಾನ ಮತ್ತು ಕುಡಿತದಂತಹ ಚಟಗಳನ್ನು ಬಿಡಬೇಕು.
• ಥೈರಾಯ್ಡ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಮ್ಯಾಗ್ನೀಶಿಯಂ, ಆಯೋಡಿನ್, ವಿಟಮಿನ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಮುಂತಾದ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು.
 

click me!