ದುರ್ವರ್ತನೆ, ಕೆಟ್ಟ ಹವ್ಯಾಸಗಳು ಅದು ಹೇಗೋ ರೂಢಿಯಾಗಿಬಿಡುತ್ತವೆ. ಆದರೆ, ಅವುಗಳನ್ನು ಬಿಟ್ಟುಬಿಡುವುದು ಸುಲಭವಾಗುವುದಿಲ್ಲ. ಮನೋತಜ್ಞರ ಪ್ರಕಾರ, ಕೆಲವು ನಿರ್ದಿಷ್ಟ ಅಂಶಗಳನ್ನು ಪಾಲನೆ ಮಾಡುತ್ತ ಸಾಗಿದರೆ ಕಟ್ಟ ಹವ್ಯಾಸಗಳಿಗೆ ಖಚಿತವಾಗಿ ಬೈ ಬೈ ಹೇಳಬಹುದು.
ಕೆಟ್ಟ ಅಭ್ಯಾಸಗಳನ್ನು ಬಿಡುವುದು ಸುಲಭವಲ್ಲ. ಅವು ಕೆಟ್ಟದ್ದೆಂದು ತಿಳಿದಿದ್ದರೂ ಅಭ್ಯಾಸಬಲದಿಂದ ಮತ್ತೆ ಅವುಗಳನ್ನೇ ಮಾಡುತ್ತಿರುತ್ತೇವೆ. ಹಲವು ರೀತಿಯಲ್ಲಿ ಕೆಟ್ಟ ಅಭ್ಯಾಸಗಳನ್ನು ಅರಿತೋ ಅರಿಯದೆಯೋ ನಾವು ರೂಢಿಸಿಕೊಂಡಿರುತ್ತೇವೆ. ಅತಿಯಾಗಿ ತಿನ್ನುವುದು, ವಿಳಂಬ ಪ್ರವೃತ್ತಿ, ಸೋಮಾರಿತನ, ಉಗುರು ಕಚ್ಚುವುದು ಇಂತಹ ಯಾವುದೇ ಅಭ್ಯಾಸಗಳಾಗಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನೆಗೆಟಿವ್ ಯೋಚನೆಗಳೇ ಆಗಿರಬಹುದು. ಅನೇಕರಲ್ಲಿ ಈ ಕೆಟ್ಟ ಅಭ್ಯಾಸ ಕಂಡುಬರುತ್ತದೆ. ಅವರು ನೆಗೆಟಿವ್ ಯೋಚನೆಗಳಲ್ಲೇ ಮುಳುಗಿರುತ್ತಾರೆ. ಪರಿಣಾಮವಾಗಿ ಕೆಟ್ಟ ವರ್ತನೆ ಮಾಡುತ್ತಾರೆ. ಅನೇಕ ರೀತಿಯ ವ್ಯಸನಗಳಿಗೆ ಮೊರೆ ಹೋಗಬಹುದು. ಇದರಿಂದ ದೈನಂದಿನ ಜೀವನದಲ್ಲಿ ವ್ಯತ್ಯಾಸವಾಗುತ್ತದೆ. ಹೀಗೆ, ಕೆಟ್ಟ ಅಭ್ಯಾಸಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತವೆ. ಇಂತಹ ಅಭ್ಯಾಸಗಳಿಂದ ನಮ್ಮನ್ನು ನಾವು ಹೊರತರುವುದು ಖಂಡಿತವಾಗಿ ಸುಲಭವಲ್ಲ. ಆದರೆ, ಮನೋತಜ್ಞರ ಸಲಹೆ ಪ್ರಕಾರ ನಡೆದುಕೊಂಡಲ್ಲಿ ಸಾಧ್ಯ. ಕೆಟ್ಟ ಅಭ್ಯಾಸಗಳನ್ನು ಹೊಂದಿರುವವರು ಅಧಿಕ ತೂಕ ಹೊಂದಬಹುದು, ಖಿನ್ನತೆ, ಆತಂಕಕ್ಕೆ ಒಳಗಾಗಬಹುದು. ಇವುಗಳಿಂದ ನಮ್ಮ ಸಾಮರ್ಥ್ಯ ಸರಿಯಾಗಿ ಬಳಕೆಯಾಗದಂತೆ ಆಗುತ್ತವೆ. ಹೀಗಾಗಿ, ಕೆಟ್ಟ ಅಭ್ಯಾಸಗಳನ್ನು ದೂರವಿಡುವುದು ಅಗತ್ಯ.
ಕೆಟ್ಟ ಅಭ್ಯಾಸಗಳು (Bad Habits) ಸಾಮಾನ್ಯವಾಗಿ ಆತಂಕ (Anxiety) ಮತ್ತು ಒತ್ತಡದಿಂದ (Stress) ಆರಂಭವಾಗುತ್ತವೆ. ಇನ್ನೊಂದು ಪ್ರಮುಖ ಕಾರಣ ಬೇಸರ (Boredom). ಆತ್ಮಾಭಿಮಾನದ (Self Esteem) ಕೊರತೆ ಸೇರಿದಂತೆ ಹಲವು ರೀತಿಯ ಮಾನಸಿಕ (Mental) ಕಾರಣಗಳನ್ನು ಸಹ ಗುರುತಿಸಲಾಗಿದೆ. ಆದರೆ, ಯಾವುದೇ ಕೆಟ್ಟ ಅಭ್ಯಾಸಗಳನ್ನು ಕೇವಲ ಐದು ಸರಳ ಹಂತಗಳ ಮೂಲಕ ಬಿಟ್ಟುಬಿಡಲು ಸಾಧ್ಯ.
Mental Health: ಒತ್ತಡ ಕಡಿಮೆಯಾಗ್ಬೇಕೆಂದ್ರೆ ಬೆಳಗ್ಗೆ ಈ ಚಿಕಿತ್ಸೆ ಮಾಡ್ಕೊಳ್ಳಿ
undefined
• ಗುರುತಿಸಿ (Find)
ಕೆಟ್ಟ ಅಭ್ಯಾಸಗಳನ್ನು ಬಿಡಬೇಕೆಂದರೆ, ಮೊದಲಿಗೆ ಅವುಗಳನ್ನು ಗುರುತಿಸಬೇಕು. ವರ್ತನೆಗೆ (Behaviour) ಸಂಬಂಧಿಸಿ ಪ್ರಾಮಾಣಿಕರಾಗಿದ್ದರೆ ಗುರುತಿಸಬಹುದು. ಆದರೂ ಇದು ಕಷ್ಟವೇ. ಏಕೆಂದರೆ, ದೈನಂದಿನ ಅಭ್ಯಾಸವಾಗಿದ್ದಾಗ ಅದು ಸಹಜವೆಂದು ಅನಿಸಬಹುದು. ಆದರೆ, ಸ್ವ ಅರಿವು ಹೆಚ್ಚಿಸಿಕೊಳ್ಳುವ ಮೂಲಕ ಗುರುತಿಸಬೇಕು. ಹಾಗಿದ್ದರೆ, ಯಾವ ಅಭ್ಯಾಸವನ್ನು ಕೆಟ್ಟದ್ದು ಎಂದು ಪರಿಗಣಿಸಬಹುದು? ಯಾವುದೇ ಅಭ್ಯಾಸ ನಮ್ಮ ಜೀವನ (Life), ಆರೋಗ್ಯ (Health), ಸಂಬಂಧ (Relationship), ಉತ್ಪಾದಕತೆಯನ್ನು (Productivity) ಕುಂಠಿತವಾಗಿಸಿದರೆ ಅವು ಕೆಟ್ಟ ಅಭ್ಯಾಸ.
• ಕೆಟ್ಟ ಹವ್ಯಾಸ/ವರ್ತನೆಗೆ ಕಾರಣ
ಯಾವುದೇ ಅಭ್ಯಾಸಗಳಿಗೆ ಮೂಲ ಕಾರಣಗಳಿರುತ್ತವೆ. ಅವುಗಳನ್ನು ಗುರುತಿಸಿಕೊಳ್ಳಿ. ಭಾವನೆಗಳು (Feelings), ಪರಿಸ್ಥಿತಿ (Situation) ಅಥವಾ ಜನರು (People) ಅದಕ್ಕೆ ಕಾರಣವಾಗಿರಬಹುದು. ಯಾರ ಮೇಲಾದರೂ ಬೇಸರ, ದ್ವೇಷವಿದ್ದರೆ ಅವರು ಎದುರಾದಾಗ ವರ್ತನೆ ಬದಲಾಗಬಹುದು. ಅದು ಎಲ್ಲರ ಮೇಲೂ ಪರಿಣಾಮ ಬೀರಬಹುದು. ಇಂತಹ ಯಾವುದೇ ಕಾರಣ ಗುರುತಿಸಿದರೆ ನಿಯಂತ್ರಿಸುವುದು ಸುಲಭವಾಗುತ್ತದೆ. ನೀವು ಧೂಮಪಾನಿಗಳಾಗಿದ್ದರೆ (Smokers) ಯಾವ ಸಮಯದಲ್ಲಿ ಧೂಮಪಾನ ಮಾಡಬೇಕೆಂಬ ಬಯಕೆಯಾಗುತ್ತದೆ ಎನ್ನುವುದನ್ನು ಗುರುತಿಸಿದರೆ ನಿಯಂತ್ರಿಸುವ ವಿಧಾನಗಳನ್ನು ಸಹ ಖಚಿತಪಡಿಸಿಕೊಳ್ಳಲು ಸಾಧ್ಯ.
• ಕೆಟ್ಟ ಅಭ್ಯಾಸದ ಬದಲು ಉತ್ತಮ ಅಭ್ಯಾಸ
ನೀವು ಯಾವ ಸಮಯದಲ್ಲಿ ಕೆಟ್ಟ ಅಭ್ಯಾಸಗಳಲ್ಲಿ ನಿರತರಾಗುತ್ತೀರೋ ಆ ಸಮಯದಲ್ಲಿ ಉತ್ತಮ ಇತರ ಅಭ್ಯಾಸಗಳಲ್ಲಿ ತೊಡಗಬೇಕು. ಇದಕ್ಕೆ ಬದಲಿ ವರ್ತನೆ (Replace) ಎಂದು ಕರೆಯಲಾಗುತ್ತದೆ. ಈ ಹಂತ ಭಾರೀ ಪ್ರಮುಖವಾಗಿದ್ದು, ಕೆಟ್ಟದ್ದರ ಬದಲಿಗೆ ಉತ್ತಮ ಅಭ್ಯಾಸ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಧಾನವಾಗಿ ಹೀಗೆ ಮಾಡುತ್ತ ವ್ಯಕ್ತಿ ತನ್ನ ಗಮನವನ್ನು ಬೇರೆಡೆ ಫೋಕಸ್ (Focus) ಮಾಡಲು ಸಾಧ್ಯ. ಉದಾಹರಣೆಗೆ, ಒತ್ತಡವಾದಾಗ ಜಂಕ್ ಫುಡ್ (Junk Food) ತಿನ್ನಬೇಕೆಂಬ ಆಸೆಯಾಗುವುದು ನಿಮ್ಮ ಕೆಟ್ಟ ಅಭ್ಯಾಸವಾಗಿದ್ದರೆ ಆ ಸಮಯದಲ್ಲಿ ವ್ಯಾಯಾಮ ಅಥವಾ ಧ್ಯಾನದಲ್ಲಿ (Meditation) ತೊಡಗಬೇಕು. ಇವುಗಳಿಂದಲೂ ಒತ್ತಡ ಕಡಿಮೆಯಾಗಿ ಉತ್ತಮ ಅಭ್ಯಾಸ ರೂಢಿಸಿಕೊಳ್ಳಲು ಅನುಕೂಲವಾಗುತ್ತದೆ.
Health Tips: ಯುವಜನರಲ್ಲಿ ಕಾಡುವ ಮಾನಸಿಕ ರೋಗಕ್ಕೆ ಕುಟುಂಬವೇ ಕಾರಣ!
• ಸಣ್ಣ ಗುರಿ (Small Start)
ಆರಂಭದಲ್ಲಿ ಸಣ್ಣ ಗುರಿ ನಿಗದಿ ಮಾಡಿಕೊಂಡು ಮುಂದುವರಿಯಬೇಕು. ಸಾಧಿಸುವಂತಹ ಚಿಕ್ಕ ಗುರಿಗಳ ಮೂಲಕ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು. ಏಕಾಏಕಿ ಅವಾಸ್ತವಿಕ ನಿರೀಕ್ಷೆ, ಗುರಿಗಳನ್ನು ಇಟ್ಟುಕೊಂಡರೆ ಕೆಟ್ಟ ಹವ್ಯಾಸ ಬಿಡುವುದು ಕಷ್ಟ.
• ನಿಮಗೆ ನೀವೇ ಪ್ರೇರಣೆ (Motivate)
ಈ ಇಡೀ ಪ್ರಕ್ರಿಯೆಯುದ್ದಕ್ಕೂ ನಿಮಗೆ ನೀವೇ ಪ್ರೇರಣೆಯಂತೆ ಮುಂದುವರಿಯಬೇಕು. ಹೇಳಿದಷ್ಟು ಇದು ಸುಲಭವಲ್ಲ. ಆದರೆ, ನಿಶ್ಚಿತವಾಗಿ ಮುಂದುವರಿದರೆ ಸಾಧ್ಯವಾಗುತ್ತದೆ.