2100ರ ವೇಳೆಗೆ 1.2 ಶತಕೋಟಿ ಜನರನ್ನು ಕಾಡುತ್ತದಂತೆ #HeatStress

By Suvarna News  |  First Published May 15, 2020, 6:10 PM IST

ಏರುವ ಜಾಗತಿಕ ತಾಪಮಾನದಿಂದ ಕೇವಲ ಹೀಟ್ ಸ್ಟ್ರೆಸ್ ಅಲ್ಲ, ಆ ಮೂಲಕ ಮನುಷ್ಯನ ಆರೋಗ್ಯ, ಕೃಷಿ, ಆರ್ಥಿಕ ಸ್ಥಿತಿ ಹಾಗೂ ಪರಿಸರ ಎಲ್ಲವೂ ಹದಗೆಡಲಿವೆ.


ಹಸಿರುಮನೆ ಅನಿಲಗಳು ಇಂದಿನ ಮಟ್ಟದಲ್ಲೇ ವಾತಾವರಣ ಸೇರುತ್ತಿದ್ದರೆ 2100ರ ವೇಳೆಗೆ ಅತಿಯಾದ ಶಾಖ ಹಾಗೂ ತೇವಾಂಶತೆಯಿಂದ ಒತ್ತಡಕ್ಕೊಳಗಾಗುವರ ಸಂಖ್ಯೆ ವಾರ್ಷಿಕ 1.2 ಶತಕೋಟಿಯಷ್ಟಾಗಲಿದೆ ಎಂದು  ಹೊಸ ಅಧ್ಯಯನವೊಂದು ಹೇಳಿದೆ. 

ಇದು ಇಂದು ಹೀಟ್ ಸ್ಟ್ರೆಸ್‌ಗೆ ಒಳಗಾಗುತ್ತಿರುವವರ ನಾಲ್ಕು ಪಟ್ಟು ಹೆಚ್ಚು. ಹೀಗೆ ಏರುವ ಜಾಗತಿಕ ತಾಪಮಾನದಿಂದ ಕೇವಲ ಹೀಟ್ ಸ್ಟ್ರೆಸ್ ಅಲ್ಲ, ಆ ಮೂಲಕ ಮನುಷ್ಯನ ಆರೋಗ್ಯ, ಕೃಷಿ, ಆರ್ಥಿಕ ಸ್ಥಿತಿ ಹಾಗೂ ಪರಿಸರ ಎಲ್ಲವೂ ಹದಗೆಡಲಿವೆ ಎಂದು  ಅಮೆರಿಕದ ರಟ್ಜರ್ಸ್ ಯೂನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ. 

ತಂಪು ತಂಪು ತರಕಾರಿ ಜ್ಯೂಸ್, ಬಾಯಿಗೂ ರುಚಿ, ದೇಹಕ್ಕೂ ಹಿತ

Latest Videos

undefined

ಎನ್ವಿರಾನ್‌ಮೆಂಟಲ್ ರಿಸರ್ಚ್ ಲೆಟರ್‌ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿದೆ. ಇದುವರೆಗಿನ ಇತರೆಲ್ಲ ಅಧ್ಯಯನಗಳು ಕೇವಲ ತಾಪಮಾನದತ್ತ ಗಮನ ಹರಿಸಿದ್ದರು. ಆದರೆ, ಈ ಅಧ್ಯಯನದಲ್ಲಿ ತಾಪಮಾನ ಹಾಗೂ ತೇವಾಂಶದ ಒಟ್ಟು ಪರಿಣಾಮವನ್ನು ಪರಿಗಣಿಸಲಾಗಿದ್ದು, ಇದು ಮನುಷ್ಯನ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 

ಏರಿಕೆಯಿಂದೇನಾಗುತ್ತೆ?
ಜಾಗತಿಕ ತಾಪಮಾನದಲ್ಲಾಗುವ ಕೊಂಚ ಏರಿಕೆ ಕೂಡಾ ಬೇಸಿಗೆ ಹಾಗೂ ಚಳಿಯ ದಿನಗಳನ್ನು ಅತಿರೇಖಕ್ಕೆ ಕೊಂಡೊಯ್ಯಬಲ್ಲದು. ನಮ್ಮ ನಗರಗಳಲ್ಲೇ 19ನೇ ಶತಮಾನಕ್ಕೆ ಹೋಲಿಸಿದರೆ ಈಗ ಹಾಟ್ ಹಾಗೂ ಹ್ಯೂಮಿಡ್  ದಿನಗಳು ಅಂದಿಗಿಂತ 11  ಪಟ್ಟು ಹೆಚ್ಚು ತಾಪಮಾನ ವ್ಯತ್ಯಾಸ ಹೊಂದಿವೆ ಎನ್ನುತ್ತಾರೆ ಸಂಶೋಧಕ ದವೇ ಲಿ.

19ನೇ ಶತಮಾನಕ್ಕೆ ಹೋಲಿಸಿದರೆ ಭೂಮಿಯ ಮೇಲಿನ ತಾಪಮಾನ ಈಗಾಗಲೇ 1.2 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಿದೆ.  ಇನ್ನು 80 ವರ್ಷಗಳಲ್ಲಿ ಮತ್ತೆ 1.5ಯಿಂದ  2 ಡಿಗ್ರಿ ಸೆಲ್ಶಿಯಸ್‌ನಷ್ಟು ತಾಪಮಾನ ಏರಬಹುದು. ಹೀಗಾದಲ್ಲಿ, ಅತಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕೂಡಾ 500-800 ದಶಲಕ್ಷ ಜನರು ವಾಸಿಸುವ ಸ್ಥಳ ಈ ತಾಪಮಾನದ ಕೋಪಕ್ಕೆ ಸಿಲುಕುತ್ತದೆ. ಇನ್ನು 1.2 ಶತಕೋಟಿಯಷ್ಟು ಜನ ಈಗಿಗಿಂತಾ  3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಿನ ತಾಪಮಾನ ಏರಿಕೆಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

ಹೀಟ್ ಸ್ಟ್ರೆಸ್‌ನಿಂದ ಏನಾಗುತ್ತದೆ?
ಹೀಟ್ ಸ್ಟ್ರೆಸ್ ಎಂಬುದು ದೇಹವು ಬೆವರುವ ಸಾಮರ್ಥ್ಯ ಕಳೆದುಕೊಂಡು ತಣ್ಣಗಾಗಲು ಅಶಕ್ತವಾಗುವುದರಿಂದ ಉಂಟಾಗುತ್ತದೆ. ಹೀಗಾದಾಗ ದೇಹದ ಉಷ್ಣತೆಯು ಸಿಕ್ಕಾಪಟ್ಟೆ ಏರಿಕೆಯಾಗಿ, ಹೃದಯ ಬಡಿತ ಹೆಚ್ಚುತ್ತದೆ. ಮೆದುಳು ಸೇರಿದಂತೆ ಇತರೆ ಪ್ರಮುಖ ಅಂಗಗಳಿಗೆ ಹಾನಿಯಾಗಬಹುದು. ದೇಹದಲ್ಲೇ ಅತಿಯಾದ ಉಷ್ಣತೆ ಹೆಚ್ಚು ಕಾಲ ಇದ್ದರೆ ವ್ಯಕ್ತಿಯು ಏಕಾಗ್ರತೆ ಕಳೆದುಕೊಂಡು ಯಾವ ಕೆಲಸದತ್ತಲೂ ಗಮನ ಹರಿಸಲಾಗದ ಸ್ಥಿತಿ  ತಲುಪುತ್ತಾನೆ. ಕುಡಿಯಬೇಕೆನ್ನುವ ಯೋಚನೆಯೇ ಬಾರದೆ ಹೋಗುತ್ತದೆ. ಹೀಟ್ ಸ್ಟ್ರೆಸ್ ಎಂಬುದು ಸಾಮಾನ್ಯವಾಗಿ ರ್ಯಾಶಸ್, ಹೀಟ್ ಕ್ರ್ಯಾಂಪ್ಸ್‌ನಿಂದ ಹಿಡಿದು ಸ್ಟ್ರೋಕ್, ಹೀಟ್ ಎಕ್ಸ್ಹಾಶನ್‌ವರೆಗೆ ಕಾಣಿಸಿಕೊಳ್ಳಬಹುದು. 

ಪ್ರಾಡಕ್ಟಿವ್ ಆಗಿರಕ್ಕಾಗ್ತಿಲ್ಲ ಎಂದು ಪಶ್ಚಾತ್ತಾಪ ಪಡೋದ್ ನಿಲ್ಸಿ

ಉದ್ಯೋಗ ಸ್ಥಳಗಳಲ್ಲಿ ಅತಿಯಾದ ಹೀಟ್‌ನ್ನು ಎದುರಿಸಬೇಕಾಗಿ ಬಂದವರು ಹೀಟ್ ಸ್ಟ್ರೆಸ್‌ಗೆ ಒಳಗಾಗುವುದಿದೆ. ಹೀಗೆ ಅತಿಯಾದ ತಾಪಮಾನವನ್ನು ಹೆಚ್ಚು ಕಾಲ ತಾಳಿಕೊಳ್ಳಬೇಕಾಗಿ ಬಂದರೆ ಅದರಿಂದ ಸುಟ್ಟುಕೊಳ್ಳುವುದು, ತಲೆ ತಿರುಗುವುದು, ಪದೇ ಪದೆ ಪೆಟ್ಟು ಮಾಡಿಕೊಳ್ಳುವುದು ಮುಂತಾದ ಅಪಾಯಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಫೈರ್‌ಫೈಟರ್ಸ್, ಬೇಕರಿಯ ಕೆಲಸಗಾರರು, ರೈತರು, ಕಟ್ಟಡ ನಿರ್ಮಾಣ ಕಾರ್ಮಿಕರು, ಗಣಿಗಳಲ್ಲಿ ಕೆಲಸ ಮಾಡುವವರು, ಬಾಯ್ಲರ್ ರೂಂ ವರ್ಕರ್‌ಗಳು, ಫ್ಯಾಕ್ಟರಿ ಕೆಲಸಗಾರರು ಸಧ್ಯ ಹೀಗೆ ಅತಿಯಾದ ತಾಪಮಾನದೊಂದಿಗೆ ಕೆಲಸ ಮಾಡುತ್ತಾರೆ. ಇವರು ಅನುಭವಿಸುವ ಬವಣೆ ಮುಂದಿನ ತಲೆಮಾರಿಗರಿಗೆ ಇಂಥ ಉದ್ಯೋಗದಲ್ಲಿಲ್ಲದೆಯೂ ಪರಿಸರದ ಮೂಲಕವೇ ಬಂದೊದಗುವ ಅಪಾಯ ಎದುರಾಗಿದೆ. 

click me!