ಈಗಿನ ದಿನಗಳಲ್ಲಿ ಬಿಪಿ ಹಾಗೂ ಸಕ್ಕರೆ ಕಾಯಿಲೆ ಕಾಮನ್ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಮನೆಯಲ್ಲೇ ಬಿಪಿ ಪರೀಕ್ಷೆ ಕಲಿತಿದ್ದಾರೆ. ಆದ್ರೆ ಯಾವ ಭಂಗಿಯಲ್ಲಿ ಕುಳಿತು, ಮಲಗಿ ಪರೀಕ್ಷೆ ಮಾಡಿಕೊಂಡ್ರೆ ಉತ್ತಮ ಎನ್ನುವ ಪ್ರಶ್ನೆ ಅವರನ್ನು ಕಾಡ್ತಿದೆ. ಅದಕ್ಕೆ ಹೊಸ ಅಧ್ಯಯನವೊಂದು ಉತ್ತರ ನೀಡಿದೆ.
ಯಾವುದೇ ಅನಾರೋಗ್ಯವಿರಲಿ ಆಸ್ಪತ್ರೆಗೆ ಹೋದ ತಕ್ಷಣ ನಮ್ಮ ರಕ್ತದೊತ್ತಡವನ್ನು ಪರೀಕ್ಷೆ ಮಾಡಲು ವೈದ್ಯರು ಮುಂದಾಗ್ತಾರೆ. ರಕ್ತದೊತ್ತಡವನ್ನು ಪರೀಕ್ಷೆ ಮಾಡುವಾಗ ಕುಳಿತುಕೊಳ್ಳುವಂತೆ ಸಲಹೆ ನೀಡ್ತಾರೆ. ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳ ಬಿಪಿ ಪರೀಕ್ಷೆಯನ್ನು ಕುಳಿತುಕೊಂಡಾಗಲೇ ತೆಗೆದುಕೊಳ್ತಾರೆ. ಕುಳಿತಾಗ ಪರೀಕ್ಷೆ ಮಾಡಿದ್ರೆ ನಮ್ಮ ರಕ್ತದೊತ್ತಡ ಎಷ್ಟಿದೆ ಎನ್ನುವ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದು ಈ ಹಿಂದೆ ನಂಬಲಾಗಿತ್ತು. ಮನೆಯಲ್ಲಿ ಬಿಪಿ ಪರೀಕ್ಷೆ ಮಾಡಿಕೊಳ್ಳುವವರು ಕೂಡ ಖುರ್ಚಿ ಮೇಲೆ ಕುಳಿತು ಬಿಪಿ ಪರೀಕ್ಷೆ ಮಾಡಿಕೊಳ್ತಾರೆ. ಆದ್ರೀಗ ಅಮೆರಿಕಾದಲ್ಲಿ ನಡೆಸಿದ ಅಧ್ಯಯನವೊಂದು ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದೆ. ಕುಳಿತುಕೊಂಡು ರಕ್ತದೊತ್ತಡವನ್ನು ರೀಡಿಂಗ್ ಮಾಡುವ ಬದಲು ಮಲಗಿದಾಗ ರೀಡಿಂಗ್ ಮಾಡಿದ್ರೆ ಹೆಚ್ಚು ನಿಖರವಾದ ಮಾಹಿತಿ ನಮಗೆ ಸಿಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಈ ಹಿಂದೆಯೂ ರೋಗಿಯು ಬಿಪಿ (BP) ರೀಡಿಂಗ್ ಅನ್ನು ಯಾವ ಸ್ಥಾನದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಕಂಡುಹಿಡಿಯಲು ಹಲವು ಅಧ್ಯಯನಗಳು ನಡೆದಿವೆ. ಹೊಸ ಅಧ್ಯಯನ (Study) ಹೇಳೋದೇನು? : ಅಮೆರಿಕನ್ ಹಾರ್ಟ್ (Heart) ಅಸೋಸಿಯೇಷನ್ ಈ ಅಧ್ಯಯನ ನಡೆಸಿದೆ. ಕುಳಿತಾಗ ಅಥವಾ ಮಲಗಿದ್ದಾಗ ಅಥವಾ ಇನ್ನಾವ ಭಂಗಿಯಲ್ಲಿ ಬಿಪಿ ರೀಡಿಂಗ್ ಮಾಡಿದ್ರೆ ಉತ್ತಮ ಮತ್ತು ನಿಖರವಾದ ವರದಿ ಪೆಡೆಯಲು ಸಾಧ್ಯ ಎಂಬ ಬಗ್ಗೆ ಅಧ್ಯಯನ ನಡೆದಿದೆ. ಸದ್ಯ ಅಧ್ಯಯನ ಆರಂಭಿಕ ಹಂತದಲ್ಲಿದೆ. ಸದ್ಯ ಬಂದ ಅಧ್ಯಯನದ ವರದಿ ಪ್ರಕಾರ, ಮಲಗಿದಾಗ ಬಿಪಿ ರೀಡಿಂಗ್ ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ ಎಂಬುದು ಪತ್ತೆಯಾಗಿದೆ. ಮಲಗಿದ್ದಾಗ ಬಿಪಿ ಪರೀಕ್ಷೆ ಮಾಡಿದ್ರೆ ಪಾರ್ಶ್ವವಾಯು, ಹೃದಯ ಸಂಬಂಧಿ ಗಂಭೀರ ಕಾಯಿಲೆ ಮತ್ತು ಸಂಭವನೀಯ ಸಾವನ್ನು ಊಹಿಸುವುದು ಸುಲಭವಾಗುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುವವರ ಜೀವ ಉಳಿಸಲು ನೆರವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
undefined
ಕೇರಳದಲ್ಲಿ ಡೇಂಜರಸ್ ನಿಫಾ ಆರ್ಭಟ, ಶಾಲಾ-ಕಾಲೇಜಿಗೆ ರಜೆ; ಲಾಕ್‌ಡೌನ್ ಘೋಷಿಸುತ್ತಾ ಸರ್ಕಾರ?
ಸುಮಾರು 12 ಸಾವಿರ ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಅಧ್ಯಯನದಲ್ಲಿ 25ರಿಂದ 55 ವರ್ಷದ ಜನರು ಪಾಲ್ಗೊಂಡಿದ್ದರು. ಅವರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಅಧ್ಯಯನ ನಡೆಸಲಾಗಿತ್ತು. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರನ್ನು ಸಾಮಾನ್ಯ, ಅಧಿಕ ರಕ್ತದೊತ್ತಡ ಹಾಗೂ ಕಡಿಮೆ ಬಿಪಿ ಹೊಂದಿದ್ದ ರೋಗಿಗಳೆಂದು ಬೇರ್ಪಡಿಸಲಾಗಿತ್ತು. ಎಲ್ಲಾ ರೋಗಿಗಳ ರಕ್ತದೊತ್ತಡವನ್ನು ಮಲಗಿ ಹಾಗೂ ಕುಳಿತುಕೊಂಡು ಎರಡೂ ರೀತಿಯಲ್ಲಿ ತೆಗೆದುಕೊಳ್ಳಲಾಗಿತ್ತು. ಎರಡೂ ರೀತಿಯಲ್ಲಿ ರೀಡಿಂಗ್ ತೆಗೆದುಕೊಂಡ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸಲಾಯ್ತು. ಹೆಚ್ಚು ಬಿಪಿ ಹೊಂದಿದ್ದ ಹಾಗೂ ಕಡಿಮೆ ರಕ್ತದೊತ್ತಡ ಸಮಸ್ಯೆ ಹೊಂದಿದ್ದ ರೋಗಿಗಳು ಕುಳಿತುಕೊಂಡಾಗ ಬಂದ ರೀಡಿಂಗ್ ಗಿಂತ ಮಲಗಿದ್ದಾಗ ತೆಗೆದುಕೊಂಡ ರೀಡಿಂಗ್ ವರದಿ ಹೆಚ್ಚು ನಿಖರವಾಗಿತ್ತು ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ತಜ್ಞರು ಹೇಳಿದ್ದಾರೆ.
ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರಲ್ಲಿ ಪಾರ್ಶ್ವವಾಯು ಅಪಾಯವು ಶೇಕಡಾ 62 ರಷ್ಟು ಕಂಡುಬಂದರೆ, ಹೃದಯದ ಪರಿಧಮನಿಯ ಕಾಯಿಲೆಯ ಅಪಾಯವು ಶೇಕಡಾ 72 ರಷ್ಟು ಜನರಲ್ಲಿ ಕಂಡುಬಂದಿದೆ.
57ರ ಹರೆಯದಲ್ಲೂ ಎಂಟು ಪ್ಯಾಕ್ ಆಬ್ಸ್, ಸಖತ್ ಫಿಟ್; ಕಿಂಗ್ ಖಾನ್ ತಿನ್ನೋದೇನು?
ಮನೆಯಲ್ಲಿ ರಕ್ತದೊತ್ತಡ ಪರೀಕ್ಷೆ (Blood Pressure Test) ಮಾಡುವ ಮುನ್ನ ಇದು ನೆನಪಿರಲಿ : ಈಗಿನ ದಿನಗಳಲ್ಲಿ ಅನೇಕರು ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪದೇ ಪದೇ ವೈದ್ಯರ ಭೇಟಿ ಸಾಧ್ಯವಾಗದ ಕಾರಣ ಮನೆಯಲ್ಲೇ ಬಿಪಿ ಪರೀಕ್ಷೆ ಮಾಡಿಕೊಳ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ, ಬಿಪಿ ಪರೀಕ್ಷೆಗೆ ಮುನ್ನ ಕೆಲ ವಿಷ್ಯ ಗಮನದಲ್ಲಿಟ್ಟುಕೊಳ್ಳಿ.
• ಯಾವುದೇ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರೆ ತಕ್ಷಣ ನಿಮ್ಮ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಡಿ.
• ಮೂತ್ರ ವಿಸರ್ಜನೆ ನಂತ್ರ ಬಿಪಿ ರೀಡಿಂಗ್ ಮಾಡಿ. ಮೂತ್ರಕೋಶ ತುಂಬಿರುವಾಗ ಬಿಪಿ ಪರೀಕ್ಷೆ ಬೇಡ.