ನಮ್ಮ ದೇಹದ ಪ್ರಮುಖ ಭಾಗವಾದ ಮೆದುಳು ಅನೇಕ ಅಚ್ಚರಿಯನ್ನು ಒಳಗೊಂಡಿದೆ. ಮೆದುಳು ಬರೀ ಆಲೋಚನೆಗೆ ಮಾತ್ರವಲ್ಲ ಇನ್ನೂ ಅನೇಕ ಅದ್ಭುತ ಕೆಲಸಗಳನ್ನು ಮಾಡುತ್ತದೆ. ಅದ್ರ ಕೆಲ ಮಾಹಿತಿ ಇಲ್ಲದೆ.
ವ್ಯಕ್ತಿ ಒಂದು ವಿಷ್ಯವನ್ನು ಬೇಗ ಅರ್ಥ ಮಾಡಿಕೊಂಡಿಲ್ಲ ಎಂದಾಗ, ಟ್ಯೂಬ್ ಲೈಟ್ ಎಂದು ಜನರು ಅವರನ್ನು ಕರೆಯೋದಿದೆ. ಟ್ಯೂಬ್ ಲೈಟ್ ಬೇಗ ಹತ್ತಿಕೊಳ್ತಿಲ್ಲ, ಪಿಕ್ ಪಿಕ್ ಎನ್ನುತ್ತಿದೆ ಎಂದು ಕಾಲೆಯೋದನ್ನು ನೀವು ಕೇಳಿರುತ್ತೀರಾ? ನಮ್ಮ ಮೆದುಳನ್ನು ನಾವು ಲೈಟ್ ಗೆ ಏಕೆ ಹೋಲಿಸ್ತೇವೆ ಎಂಬ ಪ್ರಶ್ನೆ ನಿಮಗೆ ಆಗ ಬರದೆ ಇರಬಹುದು. ನಮ್ಮ ಮೆದುಳು ಅನೇಕ ವಿಶೇಷತೆಗಳನ್ನು ಹೊಂದಿದೆ. ಅದ್ರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. ಮೆದುಳು ಕೇವಲ ಯೋಚನೆ ಮಾಡುವ ಅದ್ಭುತ ಸಾಮಾರ್ಥ್ಯವನ್ನು ಮಾತ್ರ ಹೊಂದಿಲ್ಲ. ಮೆದುಳಿಗೆ ಸಂಬಂಧಿಸಿದಂತೆ ನಮಗೆ ತಿಳಿಯದ ವಿಷಯ ಬಹಳಷ್ಟಿದೆ. ಅದು ನಿಮಗೆ ಗೊತ್ತಾದ್ರೆ ದಂಗಾಗ್ತೀರಾ.
ಮೆದುಳಿ (Brain) ನ ಬಗ್ಗೆ ಅನೇಕ ಸಂಶೋಧನೆ, ಅಧ್ಯಯನ (Study) ನಡೆದಿದೆ. ಆದ್ರೂ ಮೆದುಳಿನ ಸಾಮರ್ಥ್ಯವನ್ನು ಸರಿಯಾಗಿ ತಿಳಿಯಲು ನಮಗೆ ಸಾಧ್ಯವಾಗಿಲ್ಲ. ಅದರ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಮ್ಮಿಂದ ಆಗ್ತಿಲ್ಲ. ನಾವಿಂದು ಮೆದುಳು ಬಗ್ಗೆ ನಿಮಗೊಂದಿಷ್ಟು ಆಸಕ್ತಿಕರ ಮಾಹಿತಿ ನೀಡ್ತೇವೆ.
undefined
ರಂಗೋಲಿ ಹಾಕುವುದರಿಂದ ಕಲ್ಪನಾ ಶಕ್ತಿ ವೃದ್ಧಿಸುತ್ತದೆ: ಡಾ.ಪ್ರೇಮಾ ಹೆಚ್.ಎಸ್
ಮೆದುಳಿನ ಆಸಕ್ತಿಕರ ವಿಷ್ಯಗಳೇನು? :
ಮೆದುಳಿನಿಂದ ದೀಪ (Light) ಬೆಳಗಬಹುದೇ? : ಹಿಂದೆ ಜನರು ಎರಡು ಕಲ್ಲುಗಳನ್ನು ಉಜ್ಜಿದ್ರೆ ಬೆಂಕಿ ಬಳಸುತ್ತಿದ್ದರು. ಈಗ ಕಾಲ ಬದಲಾಗಿದೆ. ಆಧುನಿಕ ಜಗತ್ತಿನಲ್ಲಿ ಬೆಳಕು, ದೀಪಕ್ಕೆ ಸಾಕಷ್ಟು ವ್ಯವಸ್ಥೆ ಇದೆ. ಆದ್ರೆ ಈ ಎಲ್ಲಕ್ಕಿಂತ ವಿಶೇಷವಾದದ್ದು ನಮ್ಮ ಮೆದುಳು. ನಮ್ಮ ಮೆದುಳಿನಲ್ಲಿ ಪ್ರಹರಿಸುವು ಶಕ್ತಿಯಿಂದಲೂ ನಾವು ದೀಪ ಬೆಳಗಬಹುದು. ಅಂದ್ರೆ ನಮ್ಮ ಮೆದುಳು 10 ರಿಂದ 23 ವ್ಯಾಟ್‌ಗಳಿಗೆ ಸಮಾನವಾದ ಶಕ್ತಿಯನ್ನು ಉತ್ಪಾದಿಸುತ್ತದೆ. ನಮ್ಮ ಮೆದುಳಿನಿಂದ ಉತ್ಪಾದನೆಯಾಗುವ ಶಕ್ತಿಯಿಂದ ಚಿಕ್ಕ ಬಲ್ಬ್ ಬೆಳಗಿಸಬಹುದು.
ಅಚಾನಕ್ ಕಾಣೆಯಾಗುವ ಈ ಜಾಗದಲ್ಲಿ ಕೇಳುತ್ತೆ ವಿಚಿತ್ರ ಶಬ್ಧ!
ಮೆದುಳಿನಲ್ಲಿ ಹುಟ್ಟಿಕೊಳ್ಳುತ್ತೆ ಅನಿಯಮಿತ ಆಲೋಚನೆ : ಮನಸ್ಸಿನ ನಿಯಂತ್ರಣ ಬಹಳ ಕಷ್ಟ. ಒಂದು ಕಡೆ ಗಮನ ಕೇಂದ್ರೀಕರಿಸಲು ಹರಸಾಹಸ ಮಾಡ್ಬೇಕು. ಒಂದು ಕೆಲಸ ಮಾಡ್ತಿರುವಾಗ ನೂರಾರು ಕೆಲಸ, ಆಲೋಚನೆ, ನೆನಪುಗಳು ಬಂದು ಹೋಗಿರುತ್ತವೆ. ಒಂದೇ ಕೆಲಸವನ್ನು ಏಕಾಗ್ರತೆಯಿಂದ ಮಾಡೋದು ಸಾಮಾನ್ಯರಿಗೆ ಕಷ್ಟ. ಮೆದುಳಿನಲ್ಲಿ ಅನೇಕ ಪ್ರಶ್ನೆಗಳಿವೆ. ಕೆಲವೊಂದಕ್ಕೆ ಆ ಕ್ಷಣ ಉತ್ತರ ಸಿಕ್ಕಿದರೆ ಮತ್ತೆ ಕೆಲವಕ್ಕೆ ವರ್ಷಗಳೇ ಹಿಡಿಯಬಹುದು. ಒಬ್ಬ ಮನುಷ್ಯ ಒಂದು ದಿನದಲ್ಲಿ 50 -70 ಸಾವಿರ ಬಾರಿ ಆಲೋಚನೆ ಮಾಡ್ತಾನೆ ಮಾಡ್ತಾನೆ ಅಂದ್ರೆ ನಿಮಗೆ ಅಚ್ಚರಿ ಆಗ್ಬಹುದು.
ಮೆದುಳಿನಲ್ಲಿದೆ ಈ ಜೀವಕೋಶ : ನಿಮ್ಮ ಮುಂದೆ ನಿಂತಿರುವ ವ್ಯಕ್ತಿ ಆಕಳಿಕೆ ತೆಗೆದ್ರೆ ನಿಮಗೂ ಆಕಳಿಕೆ ಬರಲು ಶುರುವಾಗುತ್ತದೆ. ಇದಕ್ಕೆ ಕಾರಣ ನಿಮ್ಮ ಮೆದುಳಿನಲ್ಲಿರುವ ಮಿಮಿಕ್ ಜೀವಕೋಶ. ಅದು ಸಂವಹನ ನಡೆಸುವ ಹಾಗೂ ಸಂಬಂಧ ಬೆಳೆಸುವ ಕೆಲಸವನ್ನು ಮಾಡುತ್ತದೆ. ದೇಹದಲ್ಲಿ ಆಕ್ಸಿಜನ್ ಮಾತ್ರ ಕಡಿಮೆ ಇದ್ದಾಗ, ನಮ್ಮ ಉಸಿರಾಟ ನಿಧಾನವಾಗುತ್ತದೆ. ಈ ಸಮಯದಲ್ಲಿ ಹೆಚ್ಚು ಆಮ್ಲಜನಕ ಪಡೆಯಲು ಹಾಗೂ ಇಂಡಗಾಲ ಡೈ ಆಕ್ಸೈಡನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರ ಹಾಕಲು ಆಕಳಿಕೆ ತೆಗೆಯಬೇಕಾಗುತ್ತದೆ.
ವಿದ್ಯುತ್ ಶಾಕ್ : ಮಾನಸಿಕ ಸ್ಥಿತಿ ಸರಿಯಿಲ್ಲದ ವ್ಯಕ್ತಿಗೆ ವಿದ್ಯುತ್ ಶಾಕ್ ನೀಡೋದನ್ನು ನೀವು ನೋಡಿರಬಹುದು. ಹೀಗೆ ಮಾಡಿದ್ರೆ ರೋಗಿಯ ಮೆದುಳಿನ ಎರಡು ವಿಭಿನ್ನ ಭಾಗಗಳ ನಡುವೆ ಸ್ಥಾಪಿಸಲಾದ ಅನಗತ್ಯ ಸಂಪರ್ಕ ಕಡಿಯುತ್ತದೆ. ಇದ್ರಿಂದ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮೆದುಳಿನ ಒಂದು ಭಾಗ ವ್ಯಕ್ತಿಯ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಇನ್ನೊಂದು ಭಾಗ ಯೋಚಿಸುವ ಮತ್ತು ಕೇಂದ್ರೀಕರಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿದೆ. ವಿದ್ಯುತ್ ಶಾಕ್ ನೀಡಿದಾಗ ಮಿದುಳಿನ ನೈಸರ್ಗಿಕ ರಾಸಾಯನಿಕ ಸಮತೋಲನಕ್ಕೆ ಬರುತ್ತದೆ.