Health Tips: ತಲೆಗೆ ಗಾಯವಾದ್ರೆ ನಿರ್ಲಕ್ಷ್ಯ ಬೇಡ, ಚಿಕಿತ್ಸೆ ಹೀಗಿರಲಿ!

Published : May 24, 2023, 03:36 PM IST
Health Tips: ತಲೆಗೆ ಗಾಯವಾದ್ರೆ ನಿರ್ಲಕ್ಷ್ಯ ಬೇಡ, ಚಿಕಿತ್ಸೆ ಹೀಗಿರಲಿ!

ಸಾರಾಂಶ

ತಲೆಗೆ ಹೊಡೆತ ಬಿದ್ದಿರುತ್ತೆ, ಆದ್ರೆ ಗಾಯ ಆಗಿರೋದಿಲ್ಲ. ಏನೂ ಅಪಾಯವಿಲ್ಲ ಅಂತಾ ಸುಮ್ಮನಾದವರು ಜೀವ ಕಳೆದುಕೊಂಡ ಉದಾಹರಣೆಯಿದೆ. ತಲೆ ತುಂಬಾ ಸೂಕ್ಷ್ಮವಾಗಿರುವ ಕಾರಣ ಅದಕ್ಕೆ ಸಣ್ಣ ಗಾಯವಾದ್ರೂ ಚಿಕಿತ್ಸೆ ಮುಖ್ಯ.   

ತಲೆ ನಮ್ಮ ದೇಹದ ಸೂಕ್ಷ್ಮ ಭಾಗ. ಇಲ್ಲಿ ಗಾಯವಾದ್ರೆ ಅದು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಲೆಗೆ  ಸಣ್ಣಪುಟ್ಟ ಗಾಯವಾದ್ರೆ ಜನರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ದೊಡ್ಡ ಗಾಯವಾದ್ರೆ, ಹೆಚ್ಚಿನ ರಕ್ತ ಸೋರಿಕೆಯಾದ್ರೆ ಮಾತ್ರ ವೈದ್ಯರ ಬಳಿ ಹೋಗ್ತಾರೆ. ಆದ್ರೆ ಸಾಮಾನ್ಯ ಗಾಯವೂ ಗಂಭೀರವಾಗುವ ಸಾಧ್ಯತೆಯಿರುತ್ತದೆ.  ತಲೆಗೆ ಗಾಯವಾದ ಸಂದರ್ಭದಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಊತ, ರಕ್ತಸ್ರಾವ ಎದುರಿಗೆ ಕಾಣಿಸೋದಿಲ್ಲ. ತಲೆಯೊಳಗೆ  ರಕ್ತ ಹೆಪ್ಪುಗಟ್ಟುವಿಕೆ ಅಪಾಯವುಂಟಾಗುತ್ತದೆ. ತಲೆಗೆ ಆಗುವ ಗಾಯ, ವ್ಯಕ್ತಿಯ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುವ ಜೊತೆಗೆ ಜೀವ ತೆಗೆಯುವ ಅಪಾಯವಿರುತ್ತದೆ. ತಲೆಗೆ ಗಾಯವಾದ್ರೆ ಏನೇನು ಮಾಡ್ಬೇಕು ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ತುರ್ತು ಸಂದರ್ಭದಲ್ಲಿ ಇದು ನೆರವಿಗೆ ಬರುತ್ತದೆ.

ತಲೆ (Head) ಗೆ ಗಾಯ (Injury) ವಾದ್ರೆ ಏನೆಲ್ಲ ಮಾಡ್ಬೇಕು? : ತಲೆಗೆ ಗಾಯವಾಗಿದ್ರೆ ಮೊದಲು ಗಾಯವನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ನೀವು ಆಂಟಿಸೆಪ್ಟಿಕ್ ಸ್ಪ್ರೇ ಮತ್ತು ಹತ್ತಿ (Cotton) ಯ ಸಹಾಯದಿಂದ ಗಾಯವನ್ನು ಸ್ವಚ್ಛಗೊಳಿಸಬೇಕು. ಗಾಯದಿಂದ ರಕ್ತ (Blood) ಸೋರಿಕೆಯಾಗ್ತಿದೆಯೇ ಎಂಬುದನ್ನು ಗಮನಿಸಬೇಕು. ರಕ್ತ ಸೋರಿಕೆ ಹೆಚ್ಚಿದ್ದಲ್ಲಿ ತಕ್ಷಣ ವೈದ್ಯ (Doctor) ರನ್ನು ಭೇಟಿಯಾಗ್ಬೇಕಾಗುತ್ತದೆ. ರಕ್ತಸ್ರಾವ ಕಡಿಮೆಯಿದೆ ಅಥವಾ ನಿಂತಿದೆ ಎಂದಾದ್ರೆ ನೀವು ಗಾಯದ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಿದ ನಂತ್ರ ಅದರ ಮೇಲೆ ಐಸ್ ಕ್ಯೂಬ್ ಇಡಬಹುದು. ಐಸ್ ಕ್ಯೂಬನ್ನು ನೇರವಾಗಿ ಗಾಯದ ಮೇಲೆ ಇಡಬೇಡಿ. ಒಂದು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಇದ್ರಿಂದ ಊತ ಕಡಿಮೆಯಾಗುತ್ತದೆ. ನೋವು ನಿಲ್ಲುತ್ತದೆ. 

ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನಲೇಬೇಕು, ಯಾಕೆ ಗೊತ್ತಾ?

ಗಾಯವನ್ನು ಸಂಪೂರ್ಣವಾಗಿ ಕ್ಲೀನ್ ಮಾಡಿದ ನಂತ್ರ, ರಕ್ತಸ್ರಾವ ನಿಂತಾಗ ಗಾಯದ ಮೇಲೆ ಔಷಧವನ್ನು ಅನ್ವಯಿಸಿ. ನಂತ್ರ  ಬ್ಯಾಂಡೇಜ್  ಕಟ್ಟಿಕೊಳ್ಳಿ. ಬ್ಯಾಂಡೇಜ್ ತುಂಬಾ ಸಡಿಲವಾಗಿರಬಾರದು ಅಥವಾ ತುಂಬಾ ಬಿಗಿಯಾಗಿರಬಾರದು. ಬ್ಯಾಂಡೇಜ್ ಅನ್ನು ಪ್ರತಿದಿನ ಬದಲಾಯಿಸಬೇಕು. ನೀವು ಬ್ಯಾಂಡೇಜ್ ಅನ್ನು ಬದಲಾಯಿಸಿದಾಗ ಪ್ರತಿ ಬಾರಿ ನಂಜುನಿರೋಧಕದಿಂದ ಗಾಯವನ್ನು ಸ್ವಚ್ಛಗೊಳಿಸಿ.

ತಲೆಗೆ ಪಟ್ಟು ಬಿದ್ದಿದ್ದರೆ ನೀವು ವಿಶ್ರಾಂತಿ ಪಡೆಯುವುದು ಮುಖ್ಯವಾಗುತ್ತದೆ. ತಲೆಗೆ ಗಾಯವಾದ ಎರಡು ಮೂರು ದಿನ ದೈಹಿಕ ಶ್ರಮವನ್ನು ತಪ್ಪಿಸಿ. ಗರಿಷ್ಠ ವಿಶ್ರಾಂತಿ ಅಗತ್ಯವಿರುತ್ತದೆ. ತಲೆಗೆ ಗಾಯವಾದ ಸಂದರ್ಭದಲ್ಲಿ ತಲೆಸುತ್ತು, ಸುಸ್ತು ಕಾಡುತ್ತದೆ. ಮೆದುಳಿನ ಅಂಗಾಂಶಗಳ ಅಲುಗಾಡುವಿಕೆಯಿಂದಾಗಿ ಇದು ಸಂಭವಿಸುತ್ತದೆ. ಈ ರೋಗಲಕ್ಷಣಗಳು ಸ್ವಲ್ಪ ಸಮಯದ ನಂತರ ನಿಲ್ಲುತ್ತದೆ. ಆದ್ರೆ ತಲೆಸುತ್ತುವ ಸಮಯದಲ್ಲಿ ನೀವು ದೈಹಿಕ ಶ್ರಮ ಅಥವಾ ಮನೆಯಿಂದ ಹೊರಗೆ ಹೋದ್ರೆ ಬಿದ್ದು ಮತ್ತೆ ಅಪಾಯ ತಂದುಕೊಳ್ಳುವ ಸಾಧ್ಯತೆಯಿರುತ್ತದೆ. ಇದೇ ಕಾರಣಕ್ಕೆ ವೈದ್ಯರು ಬೆಡ್ ರೆಸ್ಟ್ ಅನ್ನು ಶಿಫಾರಸು ಮಾಡುತ್ತಾರೆ.

ಇಡೀ ಪ್ರಪಂಚ ಗಿರಗಿರನೇ ಸುತ್ತುತ್ತಿರುವ ಅನುಭವವಾಗ್ತಿದ್ಯಾ? ಈ ಕಾಯಿಲೆ ಆಗಿರ್ಬೋದು ಹುಷಾರ್‌!

ತಲೆಗೆ ಗಾಯವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗ್ತಿದ್ದರೆ ಅವರನ್ನು ನಡೆಸಬೇಡಿ. ಆಸ್ಪತ್ರೆ ಸೇರುವವರೆಗೂ ಅವರು ಮಲಗಿರುವಂತೆ ನೋಡಿಕೊಳ್ಳಿ. ರಕ್ತಸ್ರಾವದ ಸಂದರ್ಭದಲ್ಲಿ ತಲೆ ಹಾಗೂ ಭುಜವನ್ನು ಸ್ವಲ್ಪ ಮೇಲೆತ್ತಿದರೆ ರಕ್ತ ಸೋರುವುದು ಕಡಿಮೆಯಾಗುತ್ತದೆ. ಹೆಚ್ಚು ಗಾಯವಾದ ಸಂದರ್ಭದಲ್ಲಿ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಕಾಡುತ್ತದೆ. ಆಗ ಸಿಪಿಆರ್ ಚಿಕಿತ್ಸೆ ನೀಡಬೇಕಾಗುತ್ತದೆ. ತಲೆಗೆ ಪೆಟ್ಟಾದ ಸಮಯದಲ್ಲಿ ವೈದ್ಯರು ಸ್ಮರಣಶಕ್ತಿ, ದೇಹದ ಸಮತೋಲನ, ಕಣ್ಣು ಇತ್ಯಾದಿಗಳನ್ನೂ ಪರೀಕ್ಷಿಸುತ್ತಾರೆ.  
ಆಪ್ತರ ತಲೆಗೆ ಗಾಯವಾಗಿದ್ದು, ಅವರು ಮೂರ್ಛೆ ಹೋಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ರಕ್ತ ಸೋರಿಕೆ ನಿಲ್ಲುತ್ತಿಲ್ಲ ಎನ್ನುವ ಸಮಯದಲ್ಲಿ ಕೂಡ ನೀವು ನಿರ್ಲಕ್ಷ್ಯ ಮಾಡಬಾರದು. ಗಾಯಗೊಂಡ ವ್ಯಕ್ತಿಗೆ ವಾಂತಿಯಾಗ್ತಿದ್ದರೆ ಇಲ್ಲವೆ ಮಾತು ತೊದಲುತ್ತಿದ್ದರೆ, ತಲೆಸುತ್ತುವ ಅನುಭವವಾಗಿದ್ದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇವರಿಗೆಲ್ಲಾ ಬಿಯರ್ ವಿಷ ಇದ್ದಂತೆ, ಸ್ವಲ್ಪ ಕುಡಿದರೆ ಅಷ್ಟೇ.. ಕುಡಿಯುವಾಗ ಇದೂ ಗಮನದಲ್ಲಿರಲಿ
Health Tips: ಈ ವರ್ಷ ಮಾಡಿದ ತಪ್ಪನ್ನು ಹೊಸ ವರ್ಷದಲ್ಲಿ ಮಾಡೋದು ಬೇಡ, ನಿಮ್ಮ ಹಾರ್ಟ್, ನಿಮ್ಮ ಕೇರ್