ಚಳಿಗಾಲದ ಸಾಮಾನ್ಯ ಜ್ವರ, ಶೀತ, ನೆಗಡಿ ಕಾಡದಂತೆ ನೋಡಿಕೊಳ್ಳುವುದು ಸದ್ಯದ ಸವಾಲು. ಅದಕ್ಕಾಗಿ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಚಳಿಗಾಲದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಕೆಲವು ತಪ್ಪುಗಳನ್ನಂತೂ ಮಾಡಲೇಬಾರದು. ಸದಾಕಾಲ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು.
ಚಳಿರಾಯ ಎಲ್ಲೆಡೆ ತನ್ನ ಪ್ರಭಾವ ಬೀರುತ್ತಿದ್ದಾನೆ. ದೇಶದೆಲ್ಲಿ ಬಹಳಷ್ಟು ಕಡೆ ಚಳಿಯಿಂದ ನಡುಗುವಂತಹ ವಾತಾವರಣ ನಿರ್ಮಾಣವಾಗಿದೆ. ಕರಾವಳಿ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದೆಲ್ಲ ಕಡೆಯೂ ಚಳಿಯ ಪ್ರಭಾವ ಸಾಕಷ್ಟು ಕಂಡುಬರುತ್ತಿದೆ. ಉತ್ತರ ಭಾರತದಲ್ಲಂತೂ ತಾಪಮಾನ ಸಿಕ್ಕಾಪಟ್ಟೆ ಇಳಿಕೆಯಾಗಿದೆ. ರಾಜಧಾನಿ ದೆಹಲಿಯ ಕೆಲವು ಭಾಗಗಳಲ್ಲಿ ಉಷ್ಣಾಂಶ 1.8 ಡಿಗ್ರಿಗೆ ಕುಸಿದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ಉತ್ತರ ಪ್ರದೇಶದ ನಗರವೊಂದರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಿರುವುದು ಚಳಿಯ ಭೀಕರತೆಗೆ ಸಾಕ್ಷಿ. ಅಷ್ಟೇ ಅಲ್ಲ, ಪಾರ್ಶ್ವವಾಯು ಪ್ರಕರಣಗಳು ಸಹ ಸಂಭವಿಸುವ ಸಾಧ್ಯತೆ ಸಾಮಾನ್ಯ. ಜತೆಗೆ, ಈ ಪ್ರಮಾಣದ ಚಳಿ ಏಕಾಏಕಿ ಜ್ವರ, ಶೀತ, ಕೆಮ್ಮು ಸಮಸ್ಯೆಗಳು ಹೆಚ್ಚಲು ಕಾರಣವಾಗುತ್ತದೆ. ಮಕ್ಕಳಲ್ಲಂತೂ ಬಹುಬೇಗ ಶೀತ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಈ ಚಳಿಯ ಅಬ್ಬರದಿಂದ ಬಚಾವಾಗಲು ಎಚ್ಚರಿಕೆ ವಹಿಸಬೇಕು. ಕೇವಲ ಬೆಚ್ಚಗಿನ ಬಟ್ಟೆ ಧರಿಸಿದರೆ ಸಾಲದು, ಇತರ ಕೆಲವು ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಜತೆಗೆ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹ ಯತ್ನಿಸಬೇಕಾಗುತ್ತದೆ. ಚಳಿಯ ತೀವ್ರತೆ ಹೆಚ್ಚಿರುವಾಗ ದೇಹ ಹೈಪೋಥೆರ್ಮಿಯಾ ಎನ್ನುವ ಸ್ಥಿತಿಗೆ ಇಳಿಯುತ್ತದೆ. ದೀರ್ಘ ಸಮಯ ಅಧಿಕ ಚಳಿಗೆ ದೇಹ ತೆರೆದುಕೊಂಡಾಗ ಈ ಸ್ಥಿತಿ ಉಂಟಾಗಿ ಹಲವು ರೀತಿಯ ಸಮಸ್ಯೆಗಳಾಗುತ್ತವೆ. ಹೀಗಾಗಿ, ಬಚಾವಾಗಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.
• ಹಲವು ಸ್ತರಗಳಲ್ಲಿ (Layer) ಬಟ್ಟೆ (Clothes) ಧರಿಸಿ
ದೇಹವನ್ನು (Body) ಚಳಿಯಿಂದ (Cold) ರಕ್ಷಿಸಿಕೊಳ್ಳಬೇಕಾದುದು ಮೊದಲ ಆದ್ಯತೆ. ಇದಕ್ಕಾಗಿ ಒಂದೇ ಸ್ವೆಟರ್, ಜರ್ಕಿನ್ ಬಳಸಿದರೆ ಸಾಲದು. ಹಲವು ಸ್ತರಗಳ ಬಟ್ಟೆ ಧರಿಸುವುದು ಅಗತ್ಯ ಎನ್ನುತ್ತಾರೆ ತಜ್ಞರು. ಬಿಗಿಯಾದ (Tight) ಉಡುಪು ಧರಿಸುವುದು ಅಪಾಯಕಾರಿ. ತುಸು ಸಡಿಲವಾದ (Loose) ಬಟ್ಟೆ ಧರಿಸುವುದು ಈ ಸಮಯದಲ್ಲಿ ಅತ್ಯಗತ್ಯ. ಏಕೆಂದರೆ, ಚರ್ಮಕ್ಕೆ (Skin) ಉಸಿರಾಡಿಸಲು ಅವಕಾಶ ದೊರೆಯುವಂತೆ ಇರಬೇಕು. ಥರ್ಮಲ್ಸ್, ಸ್ವೆಟರ್, ಜಾಕೆಟ್ ಹೀಗೆ ಹಲವು ಸ್ತರಗಳಲ್ಲಿ ಉಡುಪುಗಳನ್ನು ಧರಿಸಿ. ಅಷ್ಟೇ ಅಲ್ಲ, ತಲೆ ಹಾಗೂ ಕಿವಿ ಮುಚ್ಚುವಂತೆ ಕ್ಯಾಪ್ (Cap) ಧರಿಸುವುದು ಅತ್ಯಗತ್ಯ, ಕೈಗಳಿಗೂ ಗ್ಲೌಸ್ ಧರಿಸಬಹುದು. ಕೈಗಳು (Hands) ಹಾಗೂ ತಲೆಯ (Head) ಮೂಲಕ ದೇಹದ ಉಷ್ಣತೆ ಬಹುಬೇಗ ಕಳೆದುಹೋಗುತ್ತದೆ.
undefined
ಶೀತ ತಪ್ಪಿಸಲು, ಪದೇ ಪದೇ ಚಹಾ ಕುಡಿತೀರಾ? ಹುಷಾರ್!
• ದೇಹಕ್ಕೆ ಬೇಕು ನೀರಿನಂಶ (Hydrate)
ಚಳಿಗಾಲದಲ್ಲಿ ದೇಹ ಬಹುಬೇಗ ಡಿಹೈಡ್ರೇಟ್ ಆಗುತ್ತದೆ. ಚಳಿಯಲ್ಲಿ ಜನ ನೀರು (Water) ಕುಡಿಯುವ ಪ್ರಮಾಣವೂ ಕಡಿಮೆ. ತಣ್ಣಗಿನ (Cold) ನೀರು ಸೇವಿಸುವುದು ಉತ್ತಮವಲ್ಲ. ಸ್ವಲ್ಪ ಬಿಸಿಯಾದ (Warm) ನೀರನ್ನು ಕುಡಿಯಬೇಕು. ಸೀಸನಲ್ ಹಣ್ಣುಗಳನ್ನು ಸೇವನೆ ಮಾಡಬಹುದು. ಮಧ್ಯಮ ಪ್ರಮಾಣದ ಘನ ಆಹಾರಗಳನ್ನು ಸೇವಿಸಬೇಕು. ಒಟ್ಟಿನಲ್ಲಿ ದೇಹ ಯಾವುದೇ ಕಾರಣಕ್ಕೂ ಡಿಹೈಡ್ರೇಟ್ ಆಗಬಾರದು.
• ಮನೆಯೊಳಗೆ ಬೆಂಕಿ (Fire) ಬೇಡ
ಕೆಲವರು ಮನೆಯೊಳಗೆ ಬೆಚ್ಚಗಿನ ವಾತಾವರಣ ನಿರ್ಮಿಸಬೇಕೆಂದು ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಮನೆಯೊಳಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಹಾಕಿಕೊಳ್ಳುತ್ತಾರೆ. ಇದು ಅಪಾಯಕಾರಿ ಅಭ್ಯಾಸ. ಏಕೆಂದರೆ, ಇದರಿಂದ ಕಾರ್ಬನ್ ಮೊನಾಕ್ಸೈಡ್ (Carbon Monoxide) ವಿಷ ಸೇವನೆ ಮಾಡುವ ಅಪಾಯ ಇರುತ್ತದೆ.
ಕೆಲವು ಜನರಿಗೆ ಮತ್ತೆ ಮತ್ತೆ ಯಾಕೆ ನೆಗಡಿ ಆಗುತ್ತೆ ಗೊತ್ತಾ?
• ಹಿರಿಯರ (Elder) ಬಗ್ಗೆ ಕಾಳಜಿ ವಹಿಸಿ
ಚಳಿಯಲ್ಲಿ ಹಿರಿಯರ ಬಗ್ಗೆ ಕಾಳಜಿ (Care) ಅಗತ್ಯ. ಏಕೆಂದರೆ, ಚಳಿ ಹೆಚ್ಚು ಹಿಂಸಿಸುವುದು ಇವರನ್ನೇ. ಅವರು ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರ (Fluid) ಸೇವನೆ ಮಾಡುತ್ತಾರೋ ಇಲ್ಲವೋ ಎನ್ನುವ ಮೇಲೆ ನಿಗಾ ಇಡಬೇಕು. ಆರೋಗ್ಯದಲ್ಲಿ (Health) ಯಾವುದೇ ರೀತಿ ಏರುಪೇರು ಕಂಡುಬಂದರೂ ವೈದ್ಯರ ಬಳಿ ಕರೆದೊಯ್ಯಬೇಕು. ಅವರ ಆಹಾರದ ಬಗ್ಗೆ ಎಚ್ಚರಿಕೆ ಇರಲಿ.
• ಚಲನಶೀಲರಾಗಿರಿ (Moving)
ಚಳಿಗಾಲದಲ್ಲಿ ಯಾವುದೇ ಕಾರಣಕ್ಕೂ ಹಗಲಿಡೀ ಮುದುಡಿ ಮಲಗಬಾರದು. ಚಟುವಟಿಕೆಯಿಂದ (Activity) ಕೂಡಿರಬೇಕು. ಚಟುವಟಿಕೆ ಇಲ್ಲದಿದ್ದರೆ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟಬಹುದು. ಹಾಗೆಯೇ ಅತಿಯಾದ ಕೆಲಸದಿಂದ ಬಸವಳಿಯಬೇಡಿ.