ಅನಗತ್ಯ ಚಿಕಿತ್ಸೆ ಮೂಲಕ ರೋಗಿಗಳ ಕುಟುಂಬದ ಮೇಲೆ ಬಿಲ್ ಭರಿಸುವ ಹೊರೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಐಸಿಯು ರೋಗಿಗಳನ್ನು ದಾಖಲಿಸಬೇಕಾದರೆ ಆಸ್ಪತ್ರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ನವದೆಹಲಿ: ಅನಗತ್ಯ ಚಿಕಿತ್ಸೆ ಮೂಲಕ ರೋಗಿಗಳ ಕುಟುಂಬದ ಮೇಲೆ ಬಿಲ್ ಭರಿಸುವ ಹೊರೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ರೋಗಿಗಳನ್ನು ಅವರ ಕುಟುಂಬ ಸದಸ್ಯರು ಅಥವಾ ಸಂಬಂಧಿಕರು ನಿರಾಕರಿಸಿದರೆ ಆಸ್ಪತ್ರೆ ಅಥವಾ ವೈದ್ಯರು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಇತ್ತೀಚಿನ ಮಾರ್ಗಸೂಚಿಗಳಲ್ಲಿ ತಿಳಿಸಿದೆ. ಐಸಿಯು ದಾಖಲಾತಿಗಳ ಮಾರ್ಗಸೂಚಿಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. 24 ತಜ್ಞರು ಸಂಗ್ರಹಿಸಿದ ಮಾರ್ಗಸೂಚಿಗಳಲ್ಲಿ ರೋಗಿಯ ಚಿಕಿತ್ಸೆಯ ಮುಂದುವರಿಕೆಯು ಫಲಿತಾಂಶದ ಮೇಲೆ ಪರಿಣಾಮ ಬೀರದಿದ್ದರೆ, ವಿಶೇಷವಾಗಿ ಬದುಕುಳಿಯುವ ಸಾಧ್ಯತೆ ಕಡಿಮೆಯಿದ್ದಾಗ ಐಸಿಯುನಲ್ಲಿ ಇಡುವುದು ನಿರರ್ಥಕ ಆರೈಕೆಯಾಗಿದೆ ಎಂದು ಶಿಫಾರಸು ಮಾಡಿದೆ
ಐಸಿಯುಗೆ ದಾಖಲಿಸಲು ಮಾನದಂಡ ಏನು?
ರೋಗಿಯನ್ನು ಐಸಿಯುಗೆ ಸೇರಿಸಲು ಅಂಗಾಂಗ ವೈಫಲ್ಯದ ಸಮಸ್ಯೆ ಅಥವಾ ವೈದ್ಯಕೀಯ ಸ್ಥಿತಿಯಲ್ಲಿ ಕ್ಷೀಣಿಸುವ ನಿರೀಕ್ಷೆಯಲ್ಲಿರಬೇಕು ಎಂದು ಮಾರ್ಗಸೂಚಿಗಳು ತಿಳಿಸಿವೆ. ಪ್ರಜ್ಞೆಯ ಬದಲಾದ ಮಟ್ಟ, ಹಿಮೋಡೈನಮಿಕ್ ಅಸ್ಥಿರತೆ, ಉಸಿರಾಟದ ಬೆಂಬಲದ ಅವಶ್ಯಕತೆ, ತೀವ್ರವಾದ ಮೇಲ್ವಿಚಾರಣೆಯ ಅಗತ್ಯವಿರುವ ತೀವ್ರ ಅನಾರೋಗ್ಯದ ರೋಗಿಗಳಾದರೆ ಅಥವಾ ಯಾವುದೇ ವೈದ್ಯಕೀಯ ಸ್ಥಿತಿ ಹದಗೆಡುವ ನಿರೀಕ್ಷೆಯಿದ್ದರೆ ಅಂಥವರನ್ನು ICUಗೆ ಸೇರಿಸಬಹುದು ಎಂದು ತಿಳಿಸಲಾಗಿದೆ.
undefined
ದೇಶದ ಮೊದಲ ಯಕೃತ್ ಕಸಿಗೆ 25 ವರ್ಷ : ಯಕೃತ್ ಕಸಿಗೊಳಗಾದ ಮೊದಲ ಮಗು ಈಗ ವೈದ್ಯ
ಹೃದಯರಕ್ತನಾಳದ ಅಥವಾ ಉಸಿರಾಟದ ಅಸ್ಥಿರತೆಯಂತಹ ಯಾವುದೇ ಪ್ರಮುಖ ಇಂಟ್ರಾಆಪರೇಟಿವ್ ತೊಡಕುಗಳನ್ನು ಅನುಭವಿಸಿದ ಅಥವಾ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ಸಹ ಐಸಿಯು ದಾಖಲಾತಿಗೆ ಅರ್ಹರಾಗಿರುತ್ತಾರೆ. ಈ ಮೇಲೆ ಹೇಳಿರುವ ಯಾವುದೇ ಸಮಸ್ಯೆಯಿಲ್ಲದಿದ್ದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬಾರದು. ಸಂಬಂಧಿಕರು ICUಗೆ ದಾಖಲಿಸಲು ನಿರಾಕರಿಸಿದರೆ, ಚಿಕಿತ್ಸೆಯ ಮಿತಿಯ ಯೋಜನೆ ಹೊಂದಿರುವ ಯಾವುದೇ ಕಾಯಿಲೆಯಾಗಿದ್ದರೆ ಅಂಥವರನ್ನು ಐಸಿಯುಗೆ ಒತ್ತಾಯಪೂರ್ವಕವಾಗಿ ದಾಖಲಿಸಬಾರದು' ಎಂದು ಮಾರ್ಗಸೂಚಿಗಳು ಹೇಳಿವೆ.
ಕಡ್ಡಾಯವಾಗಿ ಹಲವು ಪರೀಕ್ಷೆ ನಡೆಸಿದ ನಂತರ ICUಗೆ ಸೇರ್ಪಡೆ
ಯಾವುದೇ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಯು ಐಸಿಯು ಬೆಡ್‌ನ ನಿರೀಕ್ಷೆಯಲ್ಲಿದ್ದರೆ ಅಂಥವರ ರಕ್ತದೊತ್ತಡ, ನಾಡಿ ಮಿಡಿತ, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ, ಉಸಿರಾಟ ಪ್ರಕ್ರಿಯೆ, ಹೃದಯದ ಆರೋಗ್ಯ, ಮೂತ್ರ ವಿಸರ್ಜನೆ ಪ್ರಮಾಣ ಮತ್ತು ನರವ್ಯೂಹದ ಸ್ಥಿತಿಗತಿಯ ತಪಾಸಣೆ ನಡೆಸಿಯೇ ಐಸಿಯುಗೆ ದಾಖಲಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶಾರೀರಿಕ ವಿಚಲನಗಳನ್ನು ಸಾಮಾನ್ಯ ಅಥವಾ ಬೇಸ್‌ಲೈನ್ ಸ್ಥಿತಿಗೆ ಹಿಂತಿರುಗಿಸುವುದು, ಐಸಿಯು ಪ್ರವೇಶದ ಅಗತ್ಯವಿರುವ ತೀವ್ರ ಅನಾರೋಗ್ಯದ ಸಮಂಜಸವಾದ ನಿರ್ಣಯ ಮತ್ತು ಸ್ಥಿರತೆ, ಚಿಕಿತ್ಸೆ-ಸೀಮಿತಗೊಳಿಸುವ ನಿರ್ಧಾರ ಅಥವಾ ಉಪಶಾಮಕ ಆರೈಕೆಗಾಗಿ ಐಸಿಯು ಡಿಸ್ಚಾರ್ಜ್‌ಗೆ ರೋಗಿಯ/ಕುಟುಂಬದ ಒಪ್ಪಿಗೆಯನ್ನು ಐಸಿಯು ಡಿಸ್ಚಾರ್ಜ್ ಮಾನದಂಡದಲ್ಲಿ ಉಲ್ಲೇಖಿಸಲಾಗಿದೆ.
ಹೃದಯಾಘಾತದ ಬಳಿಕ ಗಂಟೆಗೂ ಹೆಚ್ಚು ಕಾಲ ನಿಂತಿದ್ದ ಹೃದಯ ಬಡಿತ: ಆದರೂ ವ್ಯಕ್ತಿ ಬದುಕುಳಿದಿದ್ದು ಹೀಗೆ..
ಐಸಿಯು ಲಭ್ಯತೆಯೂ ಹೆಚ್ಚಳ
ಆಸ್ಪತ್ರೆಗಳಲ್ಲಿ ಕೆಲವೊಮ್ಮೆ ಶ್ರೀಮಂತರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದ್ದರೂ ಅಂಥ ರೋಗಿಯನ್ನು ಐಸಿಯುನಲ್ಲಿಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ನಿಜವಾಗಿಯೂ ಐಸಿಯು ಅಗತ್ಯವಿರುವ ರೋಗಿಗೆ ಅದು ಸಿಗದಂತಾಗುತ್ತದೆ. ಇದನ್ನು ತಪ್ಪಿಸುವುದು ಸಹ ಸರಕಾರದ ಮಾರ್ಗಸೂಚಿಯ ಉದ್ದೇಶವಾಗಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.