ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಮನೆಯಿಂದ ಹೊರಗೆ ಬಿದ್ರೆ ವಾಹನ, ಲಿಫ್ಟ್ ನಿಂದಾಗಿ ನಡೆಯೋದು, ಮೆಟ್ಟಿಲೇರೋದು ಕಷ್ಟವಾಗ್ತಿದೆ. ಯುವಜನತೆ ಕೂಡ ಮೆಟ್ಟಿಲು ಹತ್ತಲು ಕಷ್ಟಪಡ್ತಿದ್ದಾರೆ. ಅವರಲ್ಲಿ ನೀವೂ ಒಬ್ಬರಾಗಿದ್ದರೆ ಸುಲಭವಾಗಿ ಸ್ಟೆಪ್ಸ್ ಏರೋಕೆ ಏನು ಮಾಡ್ಬೇಕು ಎಂಬುದನ್ನು ತಿಳಿದುಕೊಳ್ಳಿ.
ಮೆಟ್ಟಿಲು ಹತ್ತೋದು ಅಂದ್ರೆ ಕೆಲವರಿಗೆ ಕಷ್ಟ. ಹಾಗಾಗಿಯೇ ಗ್ರೌಂಡ್ ಫ್ಲೋರ್ ಮನೆಯನ್ನು ನೋಡ್ತಾರೆ. ಅಪರೂಪಕ್ಕೆ ನಾಲ್ಕು ಮೆಟ್ಟಿಲು ಹತ್ತಿದ್ರೂ ಅವರ ಉಸಿರು ಮೇಲೆ ಕೆಳಗೆ ಆಗ್ತಿರುತ್ತದೆ. ವಯಸ್ಸಾದ್ಮೇಲೆ ಇದು ಸಾಮಾನ್ಯ. ಆದ್ರೆ ಈಗಿನ ದಿನಗಳಲ್ಲಿ ಯುವಜನತೆ ಕೂಡ ಮೆಟ್ಟಿಲು ಹತ್ತುವ ಸಮಸ್ಯೆಗೆ ಒಳಗಾಗ್ತಿದ್ದಾರೆ. ನಾಲ್ಕೈದು ಮೆಟ್ಟಿಲು ಹತ್ತುತ್ತಿದ್ದಂತೆ ಅವರಿಗೆ ಉಸಿರುಗಟ್ಟಿದಂತಾಗುತ್ತದೆ. ವಾಕರಿಕೆ, ಬೆವರು ಬರಲು ಶುರುವಾಗುತ್ತದೆ. ತಲೆ ಸುತ್ತಿದ ಅನುಭವವಾಗುತ್ತದೆ. ಮುಂದೆ ಹತ್ತಲಾಗದೆ ಅಲ್ಲಿಯೇ ಕುಳಿತುಕೊಳ್ತಾರೆ.
ಹೌದು, ನನಗೂ ಹೀಗೆ ಆಗ್ತಿದೆ ಎನ್ನುವವರು ನೀವಾಗಿದ್ದರೆ ನಿಮಗೆ ರಕ್ತಹೀನತೆ (Anemia) ಸಮಸ್ಯೆಯಾಗಿರಬಹುದು. ರಕ್ತಹೀನತೆ ಮಾತ್ರವಲ್ಲದೆ ನೀವು ದೀರ್ಘಕಾಲದ ಆಯಾಸ (Tiredness) ಸಿಂಡ್ರೋಮಕ್ಕೆ ಒಳಗಾಗಿರಬಹುದು. ನೀವು ಹೃದ್ರೋಗ, ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೆ ಆಗ್ಲೂ ಮೆಟ್ಟಿಲು ಹತ್ತುವಾಗ ಸಮಸ್ಯೆ ಕಾಡಬಹುದು. ಬೇಗ ಆಯಾಸವಾಗ್ತಿದೆ ಎಂದಾದ್ರೆ ನೀವು ವೈದ್ಯ (Doctor) ರನ್ನು ಭೇಟಿಯಾಗುವುದು ಒಳ್ಳೆಯದು. ಇದ್ರ ಹೊರತಾಗಿ ಮೆಟ್ಟಿಲು ಹತ್ತುವ ಸಂದರ್ಭದಲ್ಲಿ ನೀವು ಕೆಲ ಟಿಪ್ಸ್ ಫಾಲೋ ಮಾಡಿ.
undefined
ಶಾಸ್ತ್ರಗಳಲ್ಲಿ ನಿದ್ರಾ ನಿಯಮಗಳು; ಈ ಸಮಯದಲ್ಲಿ ಮಲಗಿದ್ರೆ ಕಾಯಿಲೆ ಗ್ಯಾರಂಟಿ
ಉಸಿರಾಟ (Breathing) ದ ಬಗ್ಗೆ ಗಮನ ನೀಡಿ – ವಿಶ್ರಾಂತಿ ತೆಗೆದುಕೊಳ್ಳಿ : ಮೆಟ್ಟಿಲನ್ನು ಹತ್ತುವಾಗ ನಿಮಗೆ ಉಸಿರಾಡಲು ತೊಂದರೆಯಾಗ್ತಿದೆ ಎಂದಾದ್ರೆ ನೀವು ತಕ್ಷಣ ನಿಂತುಕೊಳ್ಳಿ. ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಅಲ್ಲಿಯೇ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ. ನಂತ್ರ ನಿಧಾನವಾಗಿ ಮೆಟ್ಟಿಲನ್ನು ಹತ್ತಿ. ನೀವು ಗಡಿಬಿಡಿಯಲ್ಲಿ ಮೆಟ್ಟಿಲು ಹತ್ತಿದ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಮೆಟ್ಟಿಲು ಹತ್ತಬೇಡಿ : ಖಾಲಿ ಹೊಟ್ಟೆಯಲ್ಲಿ ಮೆಟ್ಟಿಲು ಏರುವುದು ಕೂಡ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಏನು ಇರದ ಕಾರಣ ನಿಮಗೆ ಶಕ್ತಿ ಇರೋದಿಲ್ಲ. ದೇಹಕ್ಕೆ ಸುಸ್ತಾಗುತ್ತದೆ. ಆ ಸಂದರ್ಭದಲ್ಲಿ ನೀವು ಮೆಟ್ಟಿಲು ಏರಲು ಶುರು ಮಾಡಿದ್ರೆ ಮತ್ತಷ್ಟು ಶಕ್ತಿ ಕಡಿಮೆಯಾಗುತ್ತದೆ. ಉಸಿರು ಮೇಲೆ ಕೆಳಗೆ ಆಗಲು ಶುರುವಾಗುತ್ತದೆ. ನೀವು ಮೆಟ್ಟಿಲು ಹತ್ತುವ ಮೊದಲು ಆಹಾರ ಸೇವನೆ ಮಾಡಲು ಮರೆಯದಿರಿ. ಹಾಗೆ ಫಾಸ್ಟ್ ಫುಡ್, ಅನಾರೋಗ್ಯಕರ ಆಹಾರ ಸೇವನೆ ಮಾಡಬೇಡಿ. ನಿಮ್ಮ ಆಹಾರದಲ್ಲಿ ವಿಟಮಿನ್, ಕಬ್ಬಿಣ, ಆಂಟಿಆಕ್ಸಿಡೆಂಟ್ ಗಳು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಇರುವಂತೆ ನೋಡಿಕೊಳ್ಳಿ.
Health Tips : ಐ ಡ್ರಾಪ್ಸ್ ಬಳಸೋ ಮುನ್ನ ಇರಲಿ ಎಚ್ಚರ
ನೀರಿನ ಸೇವನೆ ಕೂಡ ಬಹಳ ಮುಖ್ಯ : ನೀರಿನ ಕೊರತೆಯಿಂದ ದೇಹ ದಣಿಯುತ್ತದೆ. ಆಯಾಸ, ತಲೆ ಸುತ್ತು ಸೇರಿದಂತೆ ಕೆಲ ಸಮಸ್ಯೆ ಕಾಡುತ್ತದೆ. ನಿಮಗೂ ಸದಾ ಆಯಾಸವಾಗ್ತಿದೆ ಅಂದ್ರೆ ಅದಕ್ಕೆ ಕಡಿಮೆ ನೀರು ಕುಡಿಯುವುದು ಕೂಡ ಕಾರಣವಾಗಿರಬಹುದು. ಹಾಗಾಗಿ ನೀವು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಿರಿ. ನಿಮ್ಮೊಂದಿಗೆ ಸದಾ ನೀರಿನ ಬಾಟಲಿಯನ್ನು ಒಯ್ಯಿರಿ. ಬೇಸಿಗೆಯಲ್ಲಂತೂ ನಿಮ್ಮ ಬಳಿ ನೀರಿರುವಂತೆ ನೋಡಿಕೊಳ್ಳಿ. ಸೂರ್ಯ ಬಿಸಿಲು ನಿಮ್ಮನ್ನು ಮತ್ತಷ್ಟು ದಣಿವುಗೊಳಿಸಿರುತ್ತದೆ. ಮತ್ತೆ ಮೆಟ್ಟಿಲು ಏರಬೇಕೆಂದ್ರೆ ಆಯಾಸ, ಉಸಿರಾಟದಲ್ಲಿ ಸಮಸ್ಯೆ ಸಾಮಾನ್ಯ. ಮೆಟ್ಟಿಲು ಏರುವ ಮುನ್ನ ನೀವು ನೀರು ಕುಡಿಯಲು ಮರೆಯಬೇಡಿ.
ಉತ್ತಮ ನಿದ್ರೆಗೆ ಮಹತ್ವ ನೀಡಿ : ನಿದ್ರೆ ಸರಿಯಾಗಿ ಆಗಿಲ್ಲವೆಂದ್ರೆ ದೇಹ ಆಯಾಸಗೊಳ್ಳುತ್ತದೆ. ಆಯಾಸಗೊಂಡ ದೇಹಕ್ಕೆ ಮೆಟ್ಟಿಲು ಏರೋದು ಕಷ್ಟವಾಗುತ್ತದೆ. ಇದ್ರಿಂದ ಉಸಿರಾಟದ ತೊಂದರೆಯೂ ಉಂಟಾಗಬಹುದು. ಪ್ರತಿ ದಿನ ನೀವು ಸರಿಯಾಗಿ ನಿದ್ರೆ ಮಾಡಿ, ಪ್ರತಿದಿನ 7 ರಿಂದ 8 ಗಂಟೆ ನಿದ್ದೆ ಮಾಡಲು ಮರೆಯಬೇಡಿ.
ವ್ಯಾಯಾಮ ಮಾಡಿ : ನಿಯಮಿತವಾಗಿ ವ್ಯಾಯಾಮ ಮಾಡಿದರೆ ಉಸಿರಾಟದ ತೊಂದರೆ ಕಾಡುವುದಿಲ್ಲ. ಶ್ವಾಸಕೋಶವನ್ನು ಬಲಪಡಿಸುವ ವ್ಯಾಯಾಮಗಳು ಮತ್ತು ಯೋಗಾಸವನ್ನು ನೀವು ಪ್ರತಿ ದಿನ ಮಾಡಿ. ನಿತ್ಯ ವಾಕಿಂಗ್ ಕೂಡ ಮಾಡಬಹುದು.