ಮಾದಕದ್ರವ್ಯ ಕಳ್ಳಸಾಗಣೆ, ರಕ್ಷಣೆ ಹಣ ಮತ್ತು ದೇಣಿಗೆಗಳ ಮೂಲಕ ತಾಲಿಬಾನ್‌ಗೆ ಆದಾಯ ಬರುತ್ತದೆ ಎಂದು ಫೋರ್ಬ್ಸ್ ಹೇಳಿತ್ತು. ನ್ಯಾಟೋ ವರದಿಯ ಪ್ರಕಾರ, 2019-20ರ ಹಣಕಾಸು ವರ್ಷಕ್ಕೆ ತಾಲಿಬಾನ್ ಬಜೆಟ್ 1.6 ಬಿಲಿಯನ್ ಡಾಲರ್ ಆಗಿದ್ದು, 2016 ರ ಫೋರ್ಬ್ಸ್ ಅಂಕಿಅಂಶಗಳಿಗೆ ಹೋಲಿಸಿದರೆ ನಾಲ್ಕು ವರ್ಷಗಳಲ್ಲಿ 400% ಹೆಚ್ಚಳವಾಗಿದೆ. ಒಂದು ವರದಿಯ ಪ್ರಕಾರ, ತಾಲಿಬಾನ್ ಗಣಿಗಾರಿಕೆಯಿಂದ 464 ಮಿಲಿಯನ್ ಡಾಲರ್, ಔಷಧಿಗಳಿಂದ 416 ಮಿಲಿಯನ್ ಡಾಲರ್, ವಿದೇಶಿ ದೇಣಿಗೆಯಿಂದ 240 ಮಿಲಿಯನ್ ಡಾಲರ್, ರಫ್ತಿನಿಂದ 240 ಮಿಲಿಯನ್ ಡಾಲರ್, ಸುಲಿಗೆಯಿಂದ 160 ಮಿಲಿಯನ್ ಡಾಲರ್ ಹಾಗೂ ರಿಯಲ್ ಎಸ್ಟೇಟ್ ನಿಂದ 80 ಮಿಲಿಯನ್ ಡಾಲರ್ ಗಳಿಸುತ್ತದೆ ಎನ್ನಲಾಗಿದೆ.