ಜೀವ ಉಳಿಸಿಕೊಳ್ಳಲು ಯುದ್ಧಪೀಡಿತ ಪ್ರದೇಶದಲ್ಲಿ 10 ಕಿ.ಮೀ. ನಡೆದ 98 ವರ್ಷದ ಹಣ್ಣು ಹಣ್ಣು ಮುದುಕಿ

By Anusha KbFirst Published Apr 30, 2024, 1:25 PM IST
Highlights

98 ವರ್ಷದ ಉಕ್ರೇನ್‌ನ ಹಣ್ಣು ಹಣ್ಣು ಮುದುಕಿಯೊಬ್ಬರು ಜೀವ ಉಳಿಸಿಕೊಳ್ಳುವ ಸಲುವಾಗಿ ದೊಣ್ಣೆಯೂರಿಕೊಂಡು 10 ಕಿಲೋ ಮೀಟರ್ ದೂರ ನಡೆದುಕೊಂಡು ಬಂದಿರುವ ವಿಚಾರ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಉಕ್ರೇನ್ ರಷ್ಯಾ ನಡುವಣ ನಾಗರಿಕ ಯುದ್ಧ ಆರಂಭವಾಗಿ ವರ್ಷಗಳೆ ಕಳೆದಿವೆ.  ಎರಡು ದೇಶಗಖ ನಡುವಣ ಯುದ್ಧದಿಂದಾಗಿ ಉಕ್ರೇನ್ ನಾಗರಿಕರು ಅಕ್ಷರಶಃ ಬಸವಳಿದಿದ್ದು, ದೇಶದ ಬಹುತೇಕ ನಗರಗಳು ಧ್ವಂಸವಾಗಿದ್ದರೆ, ಮತ್ತೆ ಕೆಲವು ನಿರ್ಜನ ಪ್ರದೇಶಗಳಾಗಿ ಮಾರ್ಪಟ್ಟಿವೆ. ಈ ಯುದ್ಧದಿಂದ ಈಗಾಗಲೇ ಮಕ್ಕಳು, ಮಹಿಳೆಯರು ದೊಡ್ಡವರು ಎಂಬ ಬೇಧವಿಲ್ಲದೇ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ 98 ವರ್ಷದ ಉಕ್ರೇನ್‌ನ ಹಣ್ಣು ಹಣ್ಣು ಮುದುಕಿಯೊಬ್ಬರು ಜೀವ ಉಳಿಸಿಕೊಳ್ಳುವ ಸಲುವಾಗಿ ದೊಣ್ಣೆಯೂರಿಕೊಂಡು 10 ಕಿಲೋ ಮೀಟರ್ ದೂರ ನಡೆದುಕೊಂಡು ಬಂದಿರುವ ವಿಚಾರ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಉಕ್ರೇನ್ ರಷ್ಯಾ ನಡುವಣ ಪರಸ್ಪರ ಶೆಲ್ ದಾಳಿಯ ಮಧ್ಯೆಯೇ ತಾನು ಕೋಲಿನ ಸಹಾಯದಿಂದ 10 ಕಿಲೋ ಮೀಟರ್ ದೂರ ನಡೆದಿದ್ದಾಗಿ ಹೇಳಿದ್ದಾರೆ. ಈ ಅಜ್ಜಿ ಈಗ ರಷ್ಯಾ ಆಕ್ರಮಿಸಿಕೊಂಡಿರುವ ಡೊನೆಟ್ಸ್ಕ್‌ನಲ್ಲಿರುವ ಓಚೆರೆಟೈನ್ ಪ್ರದೇಶವನ್ನು ತೊರೆದು ಉಕ್ರೇನ್ ರಾಜಧಾನಿ ಕೈವ್ ತಲುಪಲು ಪ್ರಯತ್ನಿಸುತ್ತಿದ್ದರು. 

ಜಾಗತಿಕ ರಕ್ಷಣಾ ವೆಚ್ಚದಲ್ಲಿ ಶೇ.6.8ರಷ್ಟು ಏರಿಕೆ: ಭಾರತಕ್ಕೆ 4ನೇ ಸ್ಥಾನ

ಈ ಬಗ್ಗೆ ಉಕ್ರೇನ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ 10 ಕಿಲೋ ಮೀಟರ್ ನಡೆದು ಬಂದು ಪೊಲೀಸರನ್ನು ತಲುಪಿದ ವೃದ್ಧ ಮಹಿಳೆಯನ್ನು ಲಿಡಿಯಾ ಸ್ಟೇಪ್ನಿವ್ನಾ ಎಂದು ಗುರುತಿಸಲಾಗಿದೆ. ಆಕೆ ತನ್ನ 10 ಕಿಲೋ ಮೀಟರ್ ಪ್ರಯಾಣದ ಮಧ್ಯೆ ಹಲವು ಅನ್ನ ನೀರಿಲ್ಲದೇ ಹಲವು ಬಾರಿ ಬಿದ್ದರು ಎದ್ದುಕೊಂಡು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಉಕ್ರೇನ್ ಪ್ರದೇಶವನ್ನು ತಲುಪಬೇಕೆಂಬ ಅವರ ಮನೋಬಲವೇ ಈ ಇಳಿವಯಸ್ಸಿನಲ್ಲಿ ಅವರನ್ನು ಇಷ್ಟು ದೂರ ನಡೆಯುವಂತೆ ಮಾಡಿದೆ. 

ನಾನು 2ನೇ ಮಹಾಯುದ್ಧದಲ್ಲಿ ಬದುಕುಳಿದಿದ್ದೇನೆ ಹಾಗೂ ಈ ಯುದ್ಧದಲ್ಲೂ ಬದುಕುಳಿಯುತ್ತೇನೆ ಎಂದು ಇಂತಹ ಸಂದರ್ಭದಲ್ಲೂ ಆಶಾವಾದದ ಮಾತಾಡಿದ್ದಾರೆ  ಅಜ್ಜಿ ಲಿಡಿಯಾ ಸ್ಟೇಪ್ನಿವ್ನಾ. ಪೊಲೀಸರು ಶೇರ್ ಮಾಡಿರುವ ವೀಡಿಯೋದಲ್ಲಿ ಪುನರ್ವಸತಿ ಕೇಂದ್ರದಲ್ಲಿ ಅಜ್ಜಿ ತನ್ನ ಗಾತ್ರಕ್ಕಿಂತ ದೊಡ್ಡದಾದ ಕೋಟ್‌ ಅನ್ನು ಧರಿಸಿ ಸ್ಕಾರ್ಪೊಂದನ್ನು ಕತ್ತಿಗೆ ಸುತ್ತಿಕೊಂಡು ಕೈಯಲ್ಲೊಂದು ಮರದ ಕೋಲು ಹಿಡಿದುಕೊಂಡು ಮಾತನಾಡುವ ಅಜ್ಜಿ, ನನ್ನದು ಅಂತ ಈಗ ಏನು ಉಳಿದಿಲ್ಲ, ನಾನು ಬರೀಗಾಲಲ್ಲಿ ಉಕ್ರೇನ್ ಬಿಟ್ಟು ಬಂದೇ ಎಂದು ಹೇಳಿದ್ದಾರೆ. ತನ್ನ ಉಕ್ರೇನ್ ದೇಶದ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವೇನು 2ನೇ ಮಹಾಯುದ್ಧದಂತೆ ಇಲ್ಲ,  ಮನೆಗಳು ಸುಡುತ್ತಿವೆ. ಮರಗಳನ್ನು ಕತ್ತರಿಸಿ ಹಾಕಲಾಗುತ್ತಿದೆ ಎಂದು ವೃದ್ಧ ಮಹಿಳೆ ಹೇಳಿದ್ದಾರೆ. 

ಉಕ್ರೇನ್‌ನ ಆಂತರಿಕ ಸಚಿವಾಲಯವು ತನ್ನ ವೆಬ್‌ಸೈಟ್‌ನ ಈ ವೃದ್ಧ ಮಹಿಳೆಯ ರಕ್ಷಣೆ ಮಾಡಿದ ಬಗ್ಗೆ ಪ್ರಕಟಣೆ ನೀಡಿದೆ. ಈ ಮಹಿಳೆಯನ್ನು ಉಕ್ರೇನ್‌ನ ಮಿಲಿಟರಿಯೂ ಸಂಜೆ ಪತ್ತೆ ಹಚ್ಚಿತು ಮತ್ತು ಪೊಲೀಸರಿಗೆ ಒಪ್ಪಿಸಿತು, ಅವರು ಮತ್ತೊಂದೆಡೆ ಶಿಫ್ಟ್ ಆಗುವವರೆಗೆ ಅವರನ್ನು ಆಶ್ರಯ ಕೇಂದ್ರದಲ್ಲಿ ಇಡಲಾಗುತ್ತದೆ ಎಂದು ಹೇಳಿದೆ. ಹಾಗೆಯೇ ಆಡಳಿತವೂ ಮಹಿಳೆಯ ಸಂಬಂಧಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ರಷ್ಯಾ ಉಕ್ರೇನ್ ನಡುವಣ ಯುದ್ಧ ಈಗ ಮೂರನೇ ವರ್ಷಕ್ಕೆ ಕಾಲಿರಿಸಿದ್ದು, ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ,  ಈ ಯುದ್ಧದಿಂದಾಗಿ ಲಕ್ಷಾಂತರ ಉಕ್ರೇನ್ ಪ್ರಜೆಗಳು  ನೆಲೆ ಕಳೆದುಕೊಂಡಿದ್ದು, ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದಾರೆ.

Karl Erivan Haub: ಸಾವು ಕಂಡಿದ್ದಾರೆ ಎಂದು ಘೋಷಿಸಲಾಗಿದ್ದ 30 ಸಾವಿರ ಕೋಟಿ ಒಡೆಯ ರಷ್ಯಾದಲ್ಲಿ ಪತ್ತೆ!

click me!