ಈ ಕುಟುಂಬದಲ್ಲಿ ಅಣ್ಣಂದಿರೇ ಮಾಡ್ತಿದ್ರು ತಂಗಿಯರ ರೇಪ್!

First Published May 17, 2020, 6:19 PM IST

ವಿಶ್ವಾದ್ಯಂತ ಅನೇಕ ರೀತಿಯ ಜನರಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಗುರುತು ಹೊಂದಿರುತ್ತಾರೆ. ಕೆಲವೊಂದು ಕುಟುಂಬದಲ್ಲಿ ಒಬ್ಬ ಸದಸ್ಯ ಅಪರಾಧಿ ಕೃತ್ಯದಲ್ಲಿ ತೊಡಗಿದ್ದರೆ, ಇಡೀ ಕುಟುಂಬ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಅಮೆರಿಕದ ಕುಟುಂಬವೊಂದರ ಪ್ರತಿ ಸದಸ್ಯನಿಗೆ ರೇಪ್ ಹಾಗೂ ಕೊಲೆ ಮಾಡುವ ಕೆಟ್ಟ ಚಟವಿತ್ತು. ಅಮೆರಿಕದ ಲೇಖಕ ರಾಬರ್ಟ್ ಕೋಲ್ಕರ್ ತಮ್ಮ ಲೇಟೆಸ್ಟ್ ಕೃತಿ ಅಮೆರಿಕದ ಗೋಲ್ವಿಟ್ ಕುಟುಂಬದ ಕುರಿತು ಬರೆದಿದ್ದಾರೆ. ಈ ಕುಟುಂಬದ ಪ್ರತಿ ಸದಸ್ಯನಿಗೂ ಅಪರಾಧ ಕೃತ್ಯ ಮಾಡುವ ಚಟವಿತ್ತು. ಇದೇ ಕಾರಣದಿಂದ ಈ ಕುಟುಂಬವನ್ನು ಅಮೆರಿಕದ ಅತತ್ಯಂತ ಅಪಾಯಕಾರಿ ಕುಟುಂಬಗಳಲ್ಲಿ ಒಂದು ಎನ್ನಲಾಗುತ್ತದೆ. ಈ ಕುಟುಂಬದ ಸದಸ್ಯರಿಗೆ ಯಾವ ಬಗೆಯ ಕ್ರೈ ಹುಚ್ಚಿತ್ತು? ಇಲ್ಲಿದೆ ವಿವರ

ಅಮೆರಿಕದ ಲೇಖಕ ತಮ್ಮ ಹೊಸ ಕೃತಿಯಲ್ಲಿ ಈ ಕುಟುಂಬದ ಕುರಿತು ಉಲ್ಲೇಖಿಸಿದ್ದಾರೆ. ಡಾನ್ ಹಾಗೂ ಮಿಮಿ ಗಾಲ್ವಿನ್ ಈ ಕುಟುಂಬದ ಹಿರಿಯರು. ಈ ದಂಪತಿಗೆ ಹತ್ತು ಸುರ ಸುಂದರ ಗಂಡು ಮಕ್ಕಳು ಹಾಗೂ ಇಬ್ಬರು ಚೆಂದದ ಹೆಣ್ಮಕ್ಕಳಿದ್ದರು. ಈ ಎಲ್ಲಾ ಮಕ್ಕಳು 1945 ರಿಂದ 1965 ರ ನಡುವೆ ಜನಿಸಿದ್ದರು. ಹೊರಗಿನಿಂದ ನೋಡುವವರಿಗೆ ಇದೊಂದು ಪರ್ಫೆಕ್ಟ್ ಫ್ಯಾಮಿಲಿ ಎಂದೆನಿಸುತ್ತಿತ್ತು.
undefined
ಈ ದಂಪತಿ ಮನೆ ಅಮೆರಿಕದ ಕೋಲೋರಾಡೋ ಏರ್‌ ಫೋರ್ಸ್‌ ಅಕಾಡೆಮಿ ಬಳಿ ಹಿಡನ್ ವ್ಯಾಲಿ ರಸ್ತೆ ಬಳಿ ಇತ್ತು. ಡಾನ್ ಈ ಅಕಾಡೆಮಿಯಲ್ಲಿ ಇನ್ಸ್‌ಸ್ಟ್ರಕ್ಟರ್ ಆಗಿದ್ದರು. ಅತ್ತ ಪತ್ನಿ ಮಿಮಿ ಟೆಕ್ಸಾಸ್‌ನ ಓರ್ವ ಶ್ರೀಮಂತ ಕುಟುಂಬದವರಾಗಿದ್ದರು. ಮಿಮಿ ಓರ್ವ ಹೌಸ್ ವೈಫ್ ಆಗಿದ್ದು, ಎಲ್ಲಾ ಮಕ್ಕಳು ಪ್ರತಿಭಾನ್ವಿತರಾಗಿದ್ದರು. ಒಬ್ಬ ಸಂಗೀತಗಾರನಾಗಿದ್ದರೆ, ಇನ್ನೊಬ್ಬ ಕ್ರೀಡಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದ. ಇನ್ನೊಬ್ಬ ಚೆಸ್‌ನಲ್ಲಿ ಚಾಂಪಿಯನ್ ಆಗಿದ್ದ. ಆದರೆ ಈ ಕುಟುಂಬದಲ್ಲಿ ನಡೆಯುತ್ತಿದ್ದ ಅಪಾಯಕಾರಿ ಕೃತ್ಯ ಹೊರ ಜಗತ್ತಿಗೆ ತಿಳಿದಿರಲಿಲ್ಲ.
undefined
ಈ ಕುಟುಂಬದ ಆರು ಗಂಡು ಮಕ್ಕಳಿಗೆ schizophrenia ಇತ್ತು. ಈ ರೋಗಕ್ಕೀಡಾದವರು ನಾರ್ಮಲ್ ಆಗಿ ಯೋಚಿಸುವುದನ್ನು ಬಿಡುತ್ತಾರೆ. ಅವರು ರಿಯಾಲಿಟಿ ಬಿಟ್ಟು ತಮ್ಮದೇ ಕನಸಿನ ಲೋಕದಲ್ಲಿರುತ್ತಾರೆ. ಈ ಮಾನಸಿಕ ರೋಗದ ಚಿಕಿತ್ಸೆ ಜೀವನ ಪರ್ಯಂತವಿರುತ್ತದೆಸದ್ಯ ಇಂತಹ ರೋಗದಿಂದ ಬಳಲುತ್ತಿರುವವರ ಚಿಕಿತ್ಸೆಗೆ ಈ ಕುಟುಂಬ ಸದಸ್ಯರ ಡಿಎನ್‌ಎ ಬಳಕೆ ಮಾಡಲಾಗುತ್ತಿದೆ.
undefined
ಈ ರೋಗ ಕುಟುಂಬದ ಹಿರಿಯ ಮಗನಲ್ಲಿ ಕಂಡು ಬಂದಿತ್ತು. ಮೆಡಿಕಲ್ ಸ್ಟೂಡೆಂಟ್ ಆಗಿದ್ದ ಡೊನಾಲ್ಡ್ ಕಾಲೇಜಿನ ಪ್ರಥಮ ವರ್ಷದಲ್ಲೇ ತನಗೇ ತಾನು ಬೆಂಕಿ ಹಚ್ಚಿಕೊಂಡಿದ್ದ. ಇದಾದ ಬಳಿಕ ಕುಟುಂಬದ ಎರಡನೇ ಪುತ್ರ ಜಿಮ್‌ನಲ್ಲೂ ಈ ರೋಗ ಕಂಡು ಬಂತು. ಆತ ತನ್ನ ಪತ್ನಿ ಹಾಗೂ ಇಬ್ಬರು ಸಹೋದರಿಯರಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ.
undefined
ಇದಾದ ಬಳಿಕ ಈ ಕುಟುಂದ ಕಿರಿಯ ಪುತ್ರ ಮಾಡಿದ ಅಪರಾಧ ಇಡೀ ಕುಟುಂ ಹೊರ ಜಗತ್ತಿನಿಂದ ಮುಚ್ಚಿಟ್ಟಿತ್ತು. 14 ವರ್ಷದ ಪೀಟರ್ ತನ್ನನ್ನು ತಾನು ನೀರಿನಲ್ಲಿ ಮುಳುಗಿಸಿದ್ದ. ತನ್ನನ್ನು ಮನೆಯಲ್ಲಿರುವ ಕೆಟ್ಟ ಆತ್ಮ ನೀರಿನಲ್ಲಿ ಮುಳುಗಿಸಿದೆ ಎಂದು ಆತ ನುಡಿದಿದ್ದ. ಈ ಎಲ್ಲಾ ಘಟನೆಗಳ ಬಳಿಕ ಗೋಲ್ವಿನ್ ಕುಟುಂಬದಲ್ಲಿ ಮತ್ತಿಬ್ಬರು ಗಂಡು ಮಕ್ಕಳ್ಲೂ ಈ ಕಾಯಿಲೆ ಕಾಣಿಸಿಕೊಂಡಿತು. ಇವರಲ್ಲಿ ಮ್ಯಾಟ್‌ಗೆ ತಾನು ಯಾರೋ ಬೇರೆ ವ್ಯಕ್ತಿಯ ಪುನರ್ಜನ್ಮ ಎಂಬ ಭಾವನೆ ಇದ್ದರೆ ಜೋಗೆ ವಿಚಿತ್ರ ಸದ್ದುಗಳು ಕೆಳುತ್ತಿದ್ದವು. ಫೋಟೋದಲ್ಲಿ ಇಡೀ ಕುಟುಂಬ ಡಿನ್ನರ್ ಮಾಡುತ್ತಿರುವ ದೃಶ್ಯ.
undefined
ಈ ಕುಟುಂಬ ಅಂತಿಮವಾಗಿ ತಮ್ಮ ಮನೆಯ ಗಂಡು ಮಕ್ಕಳ ಈ ರೋಗದ ಬಗ್ಗೆ ವೈದ್ಯರನ್ನು ಸಂಪರ್ಕಿಸಿದಾಗ, ಇದಕ್ಕೆಲ್ಲಾ ತಾಯಿಯೇ ಕಾರಣ ಎನ್ನಲಾಯ್ತು. ಮಕ್ಕಳ ಮೇಲೆ ಕಠಿಣ ಶಿಸ್ತು ಹೇರಿದಾಗ ಇಂತಹ ಘಟನೆ ನಡೆಯುತ್ತದೆ. ಮಿಮಿ ಕೂಡಾ ಮಕ್ಕಳನ್ನು ಶಿಸ್ತಿನಿಂದಿರಲು ಒತ್ತಡ ಹಾಕುತ್ತಿದ್ದಳು. ಆದರೆ ಜನರು ಮಾತ್ರ ಈ ಕುಟುಂಬದ ವಿಚಾರವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ.
undefined
ಇಲ್ಲೇ ಎಲ್ಲರೂ ಎಡವಿದ್ದು, ಕಾಯಿಲೆಯಿಂದ ಬಳಲುತ್ತಿದ್ದ ಡೊನಾಲ್ಡ್ ಅಷ್ಟರಲ್ಲ ತನ್ನ ಹೆಂಡತಿ ಜೀನ್‌ಗೆ ಸೈನೆಡ್ ತಿನ್ನಿಸಿ ಕೊಂಲ್ಲು ಯತ್ನಿಸಿದ್ದಲ್ಲದೇ, ಆತ್ಮಹತ್ಯೆಗೂ ಯತ್ನಿಸಿದ್ದ. ಆದರೆ ಜೀನ್‌ ಅದು ಹೇಗೋ ತನ್ನ ಜೀವ ಉಳಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆದರೆ ಈ ಕುಟುಂಬದ ಮತ್ತೊಬ್ಬ ಗಂಡು ಮಗ ಬ್ರಾಯನ್ ಹೆಂಡತಿ ಅಷ್ಟೊಂದು ಅದೃಷ್ಟವಂತೆಯಾಗಿರಲಿಲ್ಲ. ಬ್ರಾಯನ್ ಮೊದಲು ಆಕೆಯನ್ನು ಗುಂಡು ಹಾರಿಸಿ ಕೊಂದಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದ. ಪೊಲೀಸರು ಇಬ್ಬರ ಮೃತದೇಹವನ್ನು ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆ ಮಾಡಿದ್ದರು. ಇಷ್ಟೇ ಅಲ್ಲದೇ ಈ ಕುಟುಂಬದಲ್ಲಿ ಗಂಡು ಮಕ್ಕಳು ತಮ್ಮ ತಂಗಿಯರನ್ನೇ ಅತ್ಯಾಚಾರಗೈದಿದ್ದರು. ಈ ಕುಟುಂಬದ ಕಿರಿಯ ಹೆಣ್ಮಗು ಮೇರಿ 13 ವರ್ಷದವಳಾಗಿದ್ದಾಗ ಆಕೆಯ ಅಣ್ಣ ಜಿಮ್ ಅತ್ಯಾಚಾರ ಮಾಡಿದ್ದ.
undefined
ಈ ಕುಟುಂಬದ ಮೇಲೆ ಬಳಿಕ ಹಲವಾರು ಅಧ್ಯಯನಗಳು ನಡೆದವು. 2017ರಲ್ಲಿ ಕುಟುಂಬದ ಯಜಮಾನಿ ಮಿಮಿ ಮೃತಪಟ್ಟಳು. ಇದಕ್ಕೂ ಮುನ್ನ 2003ರಲ್ಲಿ ಗಂಡ ಡಾನ್‌ ಕ್ಯಾನ್ಸರ್‌ನಿಂದ ಮೃತಪಟಟ್ಟಿದ್ದ. ಈಗಲೂ ಈ ಕುಟುಂಬದ ಸದಸ್ಯರ ನಡವಳಿಕೆ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. schizophrenia ಎಂಬ ಮಾನಸಿಕ ರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ಪರಿಸ್ಥಿತಿ ತೀರಾ ಹದಗೆಡುತ್ತದೆ.
undefined
click me!