SHOCKING NEWS: 'ಅಮರನ್' ಚಿತ್ರ ಪ್ರದರ್ಶನದ ವೇಳೆ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ!

First Published | Nov 16, 2024, 4:14 PM IST

ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ನಟಿಸಿರುವ 'ಅಮರನ್' ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಘಟನೆ ನಡೆದಿದೆ. ಈ ದಾಳಿಗೆ ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿನಿಮಾದಲ್ಲಿನ ಕೆಲವು ವಿವಾದಾತ್ಮಕ ದೃಶ್ಯಗಳೇ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಅಮರನ್ ಸಿನಿಮಾ

ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಜೋಡಿ ನಟಿಸಿರುವ 'ಅಮರನ್' ಸಿನಿಮಾ ರಿಲೀಸ್ ಆಗಿ ಒಳ್ಳೆ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಆದ್ರೆ ತಿರುನಲ್ವೇಲಿ ಜಿಲ್ಲೆಯಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್‌ನಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ.

ಇಬ್ಬರು ಅಪರಿಚಿತ ವ್ಯಕ್ತಿಗಳು ಥಿಯೇಟರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಈ ದೃಶ್ಯ ಸೆರೆಯಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಏನಾಯ್ತು, ಯಾಕೆ ಪೆಟ್ರೋಲ್ ಬಾಂಬ್ ದಾಳಿ ನಡೆಯಿತು ಅನ್ನೋದು ತಿಳಿದಿಲ್ಲ.

ಅಮರನ್ ಶಿವಕಾರ್ತಿಕೇಯನ್

ತಮಿಳು ಸ್ಟಾರ್ ನಟ ಶಿವಕಾರ್ತಿಕೇಯನ್‌ಗೆ ಸ್ವಲ್ಪ ಸಮಯದಿಂದ ಹಿಟ್ ಸಿಕ್ಕಿರಲಿಲ್ಲ. 'ಪ್ರಿನ್ಸ್', 'ಅಯಲಾನ್' ಸಿನಿಮಾಗಳು ಗೆಲ್ಲಲಿಲ್ಲ. ಇದೀಗ ಸಾಯಿ ಪಲ್ಲವಿ ಜೋಡಿಯಾಗಿ ವೀರಮರಣ ಹೊಂದಿದ ಯೋಧ ಮುಕುಂದನ್ ಅವರ ಜೀವನಾಧಾರಿತ  'ಅಮರನ್' ಸಿನಿಮಾ ಮಾಡಿದ್ದಾರೆ. ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಹರಿದುಬಂದಿದೆ.

ಮುಕುಂದ್ ಪಾತ್ರದಲ್ಲಿ ಶಿವಕಾರ್ತಿಕೇಯನ್, ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸಾಯಿ ಪಲ್ಲವಿ ಚಾಲೆಂಜಿಂಗ್ ಪಾತ್ರ ಮಾಡಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ನಿರ್ಮಿಸಿದೆ.

Tap to resize

ಸಿನಿಮಾ ಈ ಮಧ್ಯೆ ವಿವಾದಕ್ಕೆ ಸಿಲುಕಿತ್ತು. ಸಿನಿಮಾ ನಿಲ್ಲಿಸಬೇಕೆಂದು ಪ್ರತಿಭಟನೆಗಳು ನಡೆದವು. ಆಗ ಈ ಸಿನಿಮಾ ಮಾಧ್ಯಮಗಳ ಮೂಲಕ ಎಲ್ಲೆಡೆ ಗಮನ ಸೆಳೆಯಿತು. ಆದರೆ ರಿಲೀಸ್ ಆದ ಮೇಲೆ ಏನೂ ಆಗಿರಲಿಲ್ಲ. ಹೀಗಾಗಿ ಎಲ್ಲರೂ ನಿರಾಳರಾಗಿದ್ದರು.

ಆದರೆ ಈಗ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಈ ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು,. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ದಾಳಿಗೆ ಕಾರಣವೇನೆಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ. ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸ್ಥಳೀಯ ಗಲಾಟೆಯೇ ಕಾರಣವಿರಬಹುದು ಎಂದು ಹೇಳಿದ್ದಾರೆ.

'ಅಮರನ್' ಸಿನಿಮಾದಲ್ಲಿ ಮುಸ್ಲಿಮರನ್ನು ಉಗ್ರರಂತೆ ತೋರಿಸಿರುವುದನ್ನು ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಚೆನ್ನೈನಲ್ಲಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಇತ್ತೀಚೆಗೆ ಕಮಲ್ ಹಾಸನ್ ಅವರ ರಾಜ್ ಕಮಲ್ ಇಂಟರ್‌ನ್ಯಾಷನಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು.

ಥಿಯೇಟರ್ ಮುಂದೆ ನಡೆದ ಪೆಟ್ರೋಲ್ ಬಾಂಬ್ ದಾಳಿ ಈ ಪ್ರತಿಭಟನೆಗಳಿಗೆ ಸಂಬಂಧಿಸಿರಬಹುದು ಎನ್ನಲಾಗಿದೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.

ಟೀಸರ್ ರಿಲೀಸ್ ಆದಾಗಲೇ ಕೆಲವು ವಿವಾದಾತ್ಮಕ ದೃಶ್ಯಗಳಿವೆ, ಸಿನಿಮಾ ನಿಲ್ಲಿಸಬೇಕೆಂದು ತಮಿಳುನಾಡು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ನಾಯಕರು ಪ್ರತಿಭಟನೆ ನಡೆಸಿದ್ದರು. ಟೀಸರ್‌ನಲ್ಲಿ ಕಾಶ್ಮೀರಿಗಳು ಮತ್ತು ಮುಸ್ಲಿಮರನ್ನು ಉಗ್ರರಂತೆ ತೋರಿಸಲಾಗಿದೆ ಎಂದು ಆರೋಪಿಸಿದ್ದರು.

ಸೌಹಾರ್ದಯುತವಾಗಿ ಬಾಳುತ್ತಿರುವ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯ ಮೂಡಿಸುವಂತಹ ದೃಶ್ಯಗಳಿವೆ ಎಂದು ಪ್ರತಿಭಟನೆ ನಡೆಸಿದ್ದರು.

ಭಾರತೀಯ ಸೇನೆಗೆ ವಿಶೇಷ ಸೇವೆ ಸಲ್ಲಿಸಿದ್ದ ಮೇಜರ್ ಮುಕುಂದ್ ವರದರಾಜನ್ ಬಗ್ಗೆ ರಾಹುಲ್ ಸಿಂಗ್ ಮತ್ತು ಶಿವ್ ಅರೂರ್ ಬರೆದ 'ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್' ಪುಸ್ತಕ ಆಧರಿಸಿ 'ಅಮರನ್' ಸಿನಿಮಾ ನಿರ್ಮಾಣವಾಗಿದೆ. ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರ ಜೀವನದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ.

ರಾಷ್ಟ್ರೀಯ ರೈಫಲ್ಸ್ 44ನೇ ಬೆಟಾಲಿಯನ್‌ನ ಮೇಜರ್ ವರದರಾಜನ್ 2014ರ ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು.

Latest Videos

click me!