ಈವರೆಗೆ ಹಂಚಿಕೊಳ್ಳದ ಫೋಟೋಗಳನ್ನು ರಿವೀಲ್‌ ಮಾಡಿದ ರಶ್ಮಿಕಾ ಮಂದಣ್ಣ: ಅಂತದ್ದೇನಿದೆ?

First Published | Nov 16, 2024, 4:19 PM IST

ಡಿಸೆಂಬರ್‌ 5ಕ್ಕೆ ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರ ಬಿಡುಗಡೆ. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಚಿತ್ರ. ಸತತ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ. ಈ ವೇಳೆ ‘ಪುಷ್ಪ-1’ ಚಿತ್ರದ ನೆನಪು ಮೆಲುಕು ಹಾಕಿದ ನಟಿ.

‘ಪುಷ್ಪ 2’ ರಿಲೀಸ್‌ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ ಮಂದಣ್ಣ ‘ಪುಷ್ಪ 1’ ಸಿನಿಮಾದ ಈವರೆಗೆ ಹಂಚಿಕೊಳ್ಳದ ಫೋಟೋಗಳನ್ನು ರಿವೀಲ್‌ ಮಾಡಿದ್ದಾರೆ.

ವರ್ಷಗಳ ಕೆಳಗೆ ನಡೆದ ‘ಪುಷ್ಪ’ ಚಿತ್ರದ ಮೊದಲ ಭಾಗದ ಶೂಟಿಂಗ್, ಮೇಕಪ್, ಸೆಟ್‌, ಹಾಡಿನ ಚಿತ್ರೀಕರಣದ ವಿಡಿಯೋ, ಸಹ ಕಲಾವಿದರು, ನೃತ್ಯಗಾರರ ಫೋಟೋ, ಜೊತೆಗೆ ತಮ್ಮ ಉಡುಪು, ಆ ಚಿತ್ರದ ಪ್ರಮೋಷನ್ ವೇಳೆ ನಟ ಅಲ್ಲು ಅರ್ಜುನ್ ಜೊತೆಗಿದ್ದ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಇವು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ.

Tap to resize

ಮೊದಲ ದಿನವೇ ದಾಖಲೆ ₹270 ಕೋಟಿ ಗಳಿಕೆ ಸಾಧ್ಯತೆ: ನಟ ಅಲ್ಲು ಅರ್ಜುನ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪುಷ್ಪ-2: ದ ರೂಲ್‌’ ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ 270 ಕೋಟಿ ರು. ಕಲೆಕ್ಷನ್‌ ಮಾಡುವ ಸಾಧ್ಯತೆಯಿದೆ. 

ಒಂದು ವೇಳೆ ಈ ರೀತಿ ಆದರೆ ಚಿತ್ರ ಹೊಸ ದಾಖಲೆ ಸೃಷ್ಟಿಸಲಿದೆ. ಮೊದಲ ದಿನ ಭಾರತದಲ್ಲಿ 200 ಕೋಟಿ ರು. ಹಾಗೂ ವಿದೇಶಗಳಲ್ಲಿ 70 ಕೋಟಿ ರು. ಒಟ್ಟು 270 ಕೋಟಿ ರು. ಬಾಚಿಕೊಳ್ಳುವ ಸಾದ್ಯತೆಯಿದೆ ಎಂದು ಅಂದಾಜಿಸಲಾಗಿದೆ. 

2021ರಲ್ಲಿ ಬಿಡುಗಡೆಯಾದ ‘ಪುಷ್ಪ ದ ರೈಸ್‌’ ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ಡಿ.5 ರಂದು ಬಿಡುಗಡೆಯಾಗಲಿದೆ. ಸುಕುಮಾರ್‌ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ.

Latest Videos

click me!