ಅನ್ನ ನೀಡಿದ ಇಸ್ಕಾನ್‌ ಮೇಲೇ ಬಾಂಗ್ಲಾದೇಶದಲ್ಲೀಗ ದೌರ್ಜನ್ಯ: ದೇಗುಲ ಮುಚ್ಚದಿದ್ದರೆ ಭಕ್ತರ ಬರ್ಬರ ಹತ್ಯೆ: ಬೆದರಿಕೆ

By Kannadaprabha News  |  First Published Nov 16, 2024, 7:27 AM IST

ಬಾಂಗ್ಲಾದೇಶದ ಇಸ್ಕಾನ್‌ಗೆ ಸಂಬಂಧಿಸಿದ ವಿವಾದ ನ.5ರಂದು ಸ್ಥಳೀಯ ಉದ್ಯಮಿಯೊಬ್ಬರು ಫೇಸ್‌ಬುಕ್ ಪೋಸ್ಟ್‌ನೊಂದಿಗೆ ಪ್ರಾರಂಭವಾಯಿತು. ಅವರು ಇಸ್ಕಾನ್ ಅನ್ನು ಉಗ್ರರ ಗುಂಪು ಎಂದು ಹೇಳಿದ್ದರು. ಈ ಪೋಸ್ಟ್ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿ ಹಿಂಸೆಗೆ ಕಾರಣವಾಗಿತ್ತು.


ಢಾಕಾ(ನ.16): ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಸರಣಿ ಮುಂದುವರಿದಿದ್ದು, ಇದೀಗ ಇಸ್ಕಾನ್ ನಿಷೇಧಕ್ಕೆ ಇಸ್ಲಾಮಿಕ್ ಸಂಘಟನೆಯೊಂದು ಕರೆ ನೀಡಿದೆ ಎಂದು ವರದಿಯಾಗಿದೆ. 

ಈ ಹಿಂದೆ ಕೋವಿಡ್ ವೇಳೆ ಅಬಲರಿಗೆ ಅನ್ನ ಹಾಕಿದ್ದ, ಇತ್ತೀಚೆಗೆ ನಡೆದ ದಂಗೆಯ ವೇಳೆಯೂ ಸಂತ್ರಸ್ತರಿಗೆ ಉಚಿತ ಅನ್ನಾಹಾರ ನೀಡಿದ್ದ ಇಸ್ಕಾನ್ ಸಂಘಟನೆ ಮೇಲೇ ಇಸ್ಲಾಮಿಕ್ ಮೂಲಭೂತ ವಾದಿಗಳು ಸಮರಸಾರಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶೇಖ್ ಹಸೀನಾ ಪದಚ್ಯುತಿ ಬಳಿಕ ದೇಶವ್ಯಾಪಿ ನಡೆದ ಹಿಂಸಾಚಾರದ ವೇಳೆಯೂ ಇಸ್ಕಾನ್ ಮೇಲೆ ದಾಳಿ ನಡೆಸಿದ್ದವು. 

Latest Videos

undefined

ಜಾತ್ಯತೀತ ಕೈಬಿಟ್ಟು ಇಸ್ಲಾಮಿಕ್‌ ದೇಶ ಆಗಲು ಬಾಂಗ್ಲಾದೇಶ ಸರ್ಕಾರ ಯತ್ನ!

ಈ ಸಂಘಟನೆಗಳು ಇದೀಗ ನೇರವಾಗಿ ದೇಗುಲಗಳನ್ನೇ ಮುಚ್ಚಬೇಕೆಂಬ ತಾಕೀತು ಮಾಡುವ ಹಂತಕ್ಕೆ ಬಂದು ನಿಂತಿವೆ. ಚಿತ್ತಗಾಂಗ್ ಮೂಲದ 'ಹಿಫಾಜತ್ -ಎ-ಇಸ್ಲಾಂ' ಎಂಬ ಇಸ್ಲಾಮಿಕ್ ಸಂಘಟ ನೆಯು ಇಸ್ಕಾನ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿರುವ ವಿಡಿಯೋವನ್ನು ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ ದಾಸ್ ಹಂಚಿಕೊಂಡಿದ್ದಾರೆ. 

'ಬಾಂಗ್ಲಾದೇಶಿ ಮುಸ್ಲಿಮರು ಇಸ್ಕಾನ್ ನಿಷೇಧಿಸುವಂತೆ ದೇಶದ ಆಡಳಿತ ಮುಖ್ಯಸ್ಥ ಮೊಹಮ್ಮದ್ ಯೂನಸ್‌ಗೆ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಅವರು ಇಸ್ಕಾನ್ ಭಕ್ತರನ್ನು ಹಿಡಿದು ಬರ್ಬರವಾಗಿ ಕೊಲ್ಲಲು ಪ್ರಾರಂಭಿಸುವ ಬೆದರಿಕೆ ಹಾಕಿದ್ದಾರೆ' ಎಂದಿದ್ದಾರೆ. 

ಟ್ರಂಪ್ ಗೆಲುವಿನ ಬೆನ್ನಲ್ಲೇ ಗರ್ಭನಿರೋಧಕ ಉತ್ಫನ್ನಗಳ ಮಾರಾಟದಲ್ಲಿ ಭಾರೀ ಏರಿಕೆ

ಇದೇ ವೇಳೆ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಲೇಖಕಿ ತಸ್ಲಿಮಾ ನಸೀನ್ ಅವರು, 'ಹಿಫಾಜತ್-ಎ-ಇಸ್ಲಾಂ ಸಂಘಟನೆ ಇಸ್ಕಾನ್ ಸದಸ್ಯರನ್ನು ಕೊಲ್ಲಲು ಬಯಸುತ್ತದೆ. ಇಸ್ಕಾನ್ ಒಂದು ಭಯೋತ್ಪಾದಕ ಸಂಘಟನೆಯೇ ಮತ್ತು ಅದನ್ನು ನಿಷೇಧಿಸಬೇಕೇ? ಇಸ್ಕಾನ್ ಪ್ರಪಂಚದಾದ್ಯಂತ ಇದೆ. ಅದು ಎಂದಿಗೂ ಹಿಂಸೆ ಪ್ರಚೋದಿಸಿಲ್ಲ' ಎಂದಿದ್ದಾರೆ. 

ವಿವಾದ ಎಲ್ಲಿಂದ ಶುರು?: 

ಬಾಂಗ್ಲಾದೇಶದ ಇಸ್ಕಾನ್‌ಗೆ ಸಂಬಂಧಿಸಿದ ವಿವಾದ ನ.5ರಂದು ಸ್ಥಳೀಯ ಉದ್ಯಮಿಯೊಬ್ಬರು ಫೇಸ್‌ಬುಕ್ ಪೋಸ್ಟ್‌ನೊಂದಿಗೆ ಪ್ರಾರಂಭವಾಯಿತು. ಅವರು ಇಸ್ಕಾನ್ ಅನ್ನು ಉಗ್ರರ ಗುಂಪು ಎಂದು ಹೇಳಿದ್ದರು. ಈ ಪೋಸ್ಟ್ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿ ಹಿಂಸೆಗೆ ಕಾರಣವಾಗಿತ್ತು.

click me!