Tips for Pregnants: ಹೆರಿಗೆಯ ನಂತರ ಇವು ಬೇಕೇ ಬೇಕು… ಇಲ್ಲಾಂದ್ರೆ, ನರ್ಸ್ ಸಹ ಸಹಾಯಕ್ಕೆ ಬರೋದಿಲ್ಲ!
First Published | Sep 16, 2022, 5:18 PM ISTತಾಯ್ತನ ಅನ್ನೋದು ಪ್ರತಿಯೊಬ್ಬ ಮಹಿಳೆಯ ಪಾಲಿನ ಒಂದು ಸಂತಸದ ಕ್ಷಣವಾಗಿದೆ. ಒಂಭತ್ತು ತಿಂಗಳು ಆಕೆ ತನ್ನ ಮಗುವಿನ ಬರುವಿಕೆಯಾಗಿ, ತನ್ನನ್ನು ತಾನು ಆರೈಕೆ ಮಾಡುತ್ತಾರೆ. ಆದರೆ ಮಗುವಿಗೆ ಜನ್ಮ ನೀಡೋದು ಕಷ್ಟಕರವಾದ ಮತ್ತು ಆಯಾಸಗೊಳಿಸುವ ಪ್ರಕ್ರಿಯೆ. ಒಬ್ಬ ಮಹಿಳೆ ತಾಯಿಯಾಗಲು ಹೊರಟಾಗ, ಪ್ರತಿಯೊಬ್ಬರೂ ಅವಳಿಗೆ ಸಾಕಷ್ಟು ಸಲಹೆಗಳನ್ನು ನೀಡುತ್ತಾರೆ. ಏನು ಮಾಡಬೇಕು, ಏನು ತಿನ್ನಬೇಕು, ಹೇಗೆ ಬದುಕಬೇಕು, ಹೇಗೆ ಮಲಗಬೇಕು ಮತ್ತು ಏನು ಮಾಡಬಾರದು ಎಂದು ಅವಳಿಗೆ ಹೇಳುತ್ತಾರೆ. ಆದರೆ ಹೆರಿಗೆಯ ನಂತರ ಏನೆಲ್ಲಾ ಮಾಡಬೇಕು ಅನ್ನೋರು ಕಡಿಮೆ. ನಾವೀಗ ಅದರ ಬಗ್ಗೆ ತಿಳಿಯೋಣ.