ಗರ್ಭಾವಸ್ಥೆಯಲ್ಲಿ ಜಾಂಡೀಸ್ ಡೇಂಜರಸ್? ತಜ್ಞರು ಏನ್ ಹೇಳ್ತಾರೆ?

First Published | Sep 13, 2022, 3:55 PM IST

ಗರ್ಭಧಾರಣೆಯು ಪ್ರತಿಯೊಬ್ಬ ಪೋಷಕರಿಗೆ ತುಂಬಾ ವಿಶೇಷವಾದ ಸಮಯ. ಆದರೆ ಈ ಸಮಯ ತಾಯಿಗೆ ನಾವು ನೋಡಿರೋವಷ್ಟು ಸುಲಭವಾಗಿರಲ್ಲ, ಅವಳು ಅನೇಕ ದೈಹಿಕ (Physical) ಮತ್ತು ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗುತ್ತಾಳೆ. ಇದಲ್ಲದೆ, ಸ್ವಚ್ಛತೆ ಮತ್ತು ಆಹಾರದ (Food) ಬಗ್ಗೆ ವಿಶೇಷ ಕಾಳಜಿ ವಹಿಸದಿದ್ದರೆ, ಅನೇಕ ಗಂಭೀರ ರೋಗಗಳನ್ನು ಸಹ ಎದುರಿಸಬೇಕಾಗುತ್ತೆ. ಇವುಗಳಲ್ಲಿ ಕಾಮಾಲೆಯೂ ಒಂದು. ಕಾಮಾಲೆಯು ಗರ್ಭಾವಸ್ಥೆಯಲ್ಲಿ ಮಹಿಳೆಗೆ ಯಾವ ರೀತಿಯ ಅಪಾಯ ಉಂಟುಮಾಡಬಹುದು ಎಂದು ತಿಳಿದುಕೊಳ್ಳೋಣ.

ಗರ್ಭಾವಸ್ಥೆಯಲ್ಲಿ(Pregnancy) ಕಾಮಾಲೆಗೆ ಕಾರಣಗಳು ಯಾವುವು?

ಗರ್ಭಾವಸ್ಥೆಯಲ್ಲಿ ಕಾಮಾಲೆಗೆ ಅನೇಕ ಕಾರಣಗಳಿರಬಹುದು, ಅದನ್ನು ನಾವು ಎರಡು ಭಾಗಗಳಾಗಿ ವಿಂಗಡಿಸಬಹುದು.
ಮೊದಲನೆಯದು: ಗರ್ಭಧಾರಣೆಗೆ ಸಂಬಂಧಿಸಿದೆ
ಎರಡನೆಯದು: ಗರ್ಭಧಾರಣೆಗೆ ಸಂಬಂಧಿಸಿದ್ದಲ್ಲ
ಇವುಗಳ‌ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನೀವು ಮುಂದೆ‌ ಓದಿ. 

ಗರ್ಭಧಾರಣೆಗೆ ಸಂಬಂಧಿಸಿದ್ದಲ್ಲ

ಮೊದಲು ನಾವು ಗರ್ಭಧಾರಣೆಗೆ ಸಂಬಂಧಪಡದ ಪರಿಸ್ಥಿತಿಗಳ ಬಗ್ಗೆ ಮಾತನಾಡೋಣ 

1. ವೈರಲ್ ಹೆಪಟೈಟಿಸ್(Viral hepatitis)
ಹೆಪಟೈಟಿಸ್-ಎ ಮತ್ತು ಇ ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತವೆ. ಹೆಪಟೈಟಿಸ್-ಎ ಒಂದು ಸೌಮ್ಯ ಕಾಯಿಲೆಯಾಗಿದ್ದು, ಇದನ್ನು ಬೇಗ ಗುಣಪಡಿಸಬಹುದು. ಆದರೆ ಹೆಪಟೈಟಿಸ್-ಇ ಸೋಂಕಿಗೆ ಒಳಗಾದ ಮಹಿಳೆಯರಲ್ಲಿ ಮರಣ ಪ್ರಮಾಣ ಶೇ. 20ವರೆಗೆ ಹೆಚ್ಚಾಗಬಹುದು, ಇದು ಪಿತ್ತಜನಕಾಂಗವನ್ನು ಸಂಪೂರ್ಣವಾಗಿ ವಿಫಲಗೊಳಿಸುತ್ತೆ.

Tap to resize

2. ಹೆಪಟೈಟಿಸ್ ಬಿ ಮತ್ತು ಸಿ(Hepatitis B & C)

ಸಾಮಾನ್ಯವಾಗಿ ಅವು ಲೈಂಗಿಕ ಚಟುವಟಿಕೆ ಅಥವಾ ಹೆಮಟೋಜೆನಸ್ ಮಾರ್ಗದಿಂದ ಹರಡುವ ದೀರ್ಘಕಾಲದ ಸೋಂಕು. ಇದು ತೀವ್ರವಾದ ಹೆಪಟೈಟಿಸ್ ಗೆ ಕಾರಣವಾಗಬಹುದು, ಇದು ಕಾಮಾಲೆಗೂ ದಾರಿ ಮಾಡಿ ಕೊಡುತ್ತೆ. ಆದುದರಿಂದ ಲೈಂಗಿಕ ಚಟುವಟಿಕೆ ಸಂದರ್ಭದಲ್ಲಿ ಜಾಗರೂಕರಾಗಿರೋದು ಮುಖ್ಯ.

3. ಔಷಧೋಪಚಾರದಿಂದಾಗಿ ಹೆಪಟೈಟಿಸ್

ಪ್ಯಾರಾಸಿಟಮಾಲ್(Paracetomal) ಅಥವಾ ಆಂಟಿ-ಟ್ಯೂಬರ್ ಕ್ಯುಲೋಸಿಸ್ ಔಷಧಿಗಳಂತಹ ಕೆಲವು ಔಷಧಿಗಳು ಯಕೃತ್ತಿಗೆ ಹಾನಿಯನ್ನುಂಟು ಮಾಡಬಹುದು.

4. ಆಟೋಇಮ್ಯೂನ್ ಹೆಪಟೈಟಿಸ್(Auto Immune Hepatitis)

ಇದು ಬಹಳ ಅಪರೂಪದ ಸ್ಥಿತಿ. ಇದರಿಂದಾಗಿ ಅಂಟಿಬಿಯೋಟಿಕ್ ಸ್ವತಃ ಯಕೃತ್ತನ್ನು ನಾಶಪಡಿಸುತ್ತವೆ. ಇದರಿಂದಲೂ ಹೆಪಟೈಟಿಸ್ ಸಮಸ್ಯೆ ಉಟಾಗುವ ಸಾಧ್ಯತೆ ಹೆಚ್ಚಿದೆ‌. ಆದ್ದರಿಂದ ಸಾಕಷ್ಟು ಜಾಗ್ರತೆ ಅಗತ್ಯ.

5. ಪಿತ್ತಜನಕಾಂಗದ ಸಿರೋಸಿಸ್

ಇದು ದೀರ್ಘಕಾಲದ ಸ್ಥಿತಿಯಾಗಿದ್ದು, ಕುಗ್ಗುವಿಕೆ ಮತ್ತು ಯಕೃತ್ತಿನ ವೈಫಲ್ಯದಿಂದಾಗಿ ಯಕೃತ್ತಿನ ಫೈಬ್ರೋಸಿಸ್ ನಿಂದ (Fibrosisi) ಉಂಟಾಗುತ್ತೆ .

b) ಗರ್ಭಧಾರಣೆಗೆ ಸಂಬಂಧಿಸಿದ ಪರಿಸ್ಥಿತಿಗಳು

1. ಅಧಿಕ ರಕ್ತದೊತ್ತಡದಿಂದಾಗಿ HELLP ಸಿಂಡ್ರೋಮ್
ಗರ್ಭಧಾರಣೆಯ ಸಮಯದಲ್ಲಿ ಪ್ರೀಕ್ಲಾಂಪ್ಸಿಯಾ ಅಥವಾ ಅಧಿಕ ಬಿಪಿ ಪಿತ್ತಜನಕಾಂಗದ ಹಾನಿಗೆ ಕಾರಣವಾಗಬಹುದು, ಇದು ಕಾಮಾಲೆಗೆ ಕಾರಣವಾಗಬಹುದು

2. ಗರ್ಭಾವಸ್ಥೆಯಲ್ಲಿ(Pregnancy) ಕೋಲೆಸ್ಟಾಸಿಸ್

ಇದು ಸಾಮಾನ್ಯವಾಗಿ ಗರ್ಭಧಾರಣೆಯ ಕೊನೆಯ 3 ತಿಂಗಳಲ್ಲಿ ಕಂಡುಬರುತ್ತೆ. ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಭ್ರೂಣದ ಸಾವಿಗೆ ಕಾರಣವಾಗಬಹುದು.

3. ಗರ್ಭಾವಸ್ಥೆಯಲ್ಲಿ ತೀವ್ರ ಕೊಬ್ಬಿನ ಯಕೃತ್ತು(Fatty Liver)

ಯಕೃತ್ತು ಇದ್ದಕ್ಕಿದ್ದಂತೆ ವಿಫಲವಾಗುವ ಅತ್ಯಂತ ಅಪರೂಪದ ಸ್ಥಿತಿ. ಇದು ಗರ್ಭಾವಸ್ಥೆಯಲ್ಲಿ ಮಾತ್ರ ಸಂಭವಿಸುತ್ತೆ. ಇದರಿಂದಾಗಿ ಸಾವಿನ ಪ್ರಮಾಣ (Death Rate) ಸಾಕಷ್ಟು ಹೆಚ್ಚಾಗಿದೆ.

ಗರ್ಭಾವಸ್ಥೆಯಲ್ಲಿ ಕಾಮಾಲೆಯು ಅಪಾಯಕಾರಿಯೇ?

ಗರ್ಭಧಾರಣೆ ವೇಳೆ ಹೆಚ್ಚಿನ ಮಹಿಳೆಯರಲ್ಲಿ ಕಾಮಾಲೆ ಸಾಕಷ್ಟು ಸೌಮ್ಯವಾಗಿರುತ್ತೆ, ಇದನ್ನು ಸುಲಭವಾಗಿ ನಿರ್ವಹಿಸಬಹುದು. ಆದಾಗ್ಯೂ, ಪ್ರೀ-ಎಕ್ಲಾಂಪ್ಸಿಯಾ ಅಥವಾ HELLP ಸಿಂಡ್ರೋಮ್ ಮತ್ತು ಇತರ ರೋಗಗಳಂತಹ ಕೆಲವು ಪರಿಸ್ಥಿತಿಗಳಲ್ಲಿ, ಇದು ಯಕೃತ್ತು ವೈಫಲ್ಯದ ತೀವ್ರತೆಯನ್ನು ಅವಲಂಬಿಸಿ ತಾಯಿ ಮತ್ತು ಮಗು ಇಬ್ಬರಲ್ಲೂ ಗಂಭೀರ ಸ್ಥಿತಿಯನ್ನು ಉಂಟುಮಾಡಬಹುದು.  

ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ತೊಡಕುಗಳು

1. ಯಕೃತ್ತಿಗೆ ತೀವ್ರವಾದ ಹಾನಿ, ಇದು ಯಕೃತ್ತಿನ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
2. ನರ್ವಸ್ ಸಿಸ್ಟಮ್ ಸಮಸ್ಯೆಗಳು
3. ಮೂತ್ರಪಿಂಡಗಳು(Kidney) ಕೆಲಸ ಮಾಡೋದನ್ನು ನಿಲ್ಲಿಸುತ್ತವೆ ಮತ್ತು ರಕ್ತಸ್ರಾವ ಪ್ರಾರಂಭವಾಗುತ್ತೆ 

ಮಗುವಿಗೆ ಏನು ಅಪಾಯ?

1. ಅಕಾಲಿಕ ಲೇಬರ್(Labour) ಮತ್ತು ಹೆರಿಗೆ
2. ಅಸಮರ್ಪಕ ಒಸ್ಯ್ಗೆನಶನ್ ಮತ್ತು ಶಿಶು ಅಭಿವೃದ್ಧಿ
3. ಗರ್ಭದಲ್ಲಿರುವ ಮಗುವಿನ ಸಾವು ಅಥವಾ ಸತ್ತ ಮಗುವಿನ ಜನನ 
4. ವೈರಲ್ ಹೆಪಟೈಟಿಸ್-ಬಿ ಮತ್ತು ಇ ನಂತಹ ಸೋಂಕುಗಳು ತಾಯಿಯಿಂದ ಮಗುವಿಗೆ ಹರಡಬಹುದು

ಕಾಮಾಲೆಯನ್ನು ಹೇಗೆ ತಪ್ಪಿಸಬಹುದು?

ಗರ್ಭಾವಸ್ಥೆಯಲ್ಲಿ ಕಾಮಾಲೆ ಯಾರ ಮೇಲೂ ಪರಿಣಾಮ ಬೀರಬಹುದು, ಮತ್ತು ದುರದೃಷ್ಟವಶಾತ್ ಅದನ್ನು ತಡೆಗಟ್ಟಲು ಯಾವುದೇ ವಿಶೇಷ ಕ್ರಮಗಳಿಲ್ಲ. ಆದರೆ, ಗರ್ಭಿಣಿಯರು ಮೂಲ ನೈರ್ಮಲ್ಯವನ್ನು(Cleanliness) ಕಟ್ಟುನಿಟ್ಟಾಗಿ ಪಾಲಿಸೋದು ಮುಖ್ಯ.

1. ರಸ್ತೆ ಬದಿಯ ಗಾಡಿಗಳಿಂದ ಏನನ್ನೂ ತಿನ್ನಬೇಡಿ
2. ಆಹಾರವನ್ನು ತಿನ್ನುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ.(Hand wash)

3. ಎಣ್ಣೆಯುಕ್ತ ಮತ್ತು ಆಳವಾಗಿ ಕರಿದ ಆಹಾರಗಳಿಂದ ದೂರವಿರಿ, ಏಕೆಂದರೆ ಅವು ಕೆಟ್ಟ ಕೊಲೆಸ್ಟ್ರಾಲ್  ಉಂಟುಮಾಡುತ್ತವೆ.
4. ಹೆಪಟೈಟಿಸ್-ಬಿ(Hepatitis B) ನಂತಹ ಸೋಂಕು ಹರಡೋದನ್ನು ತಡೆಯಲು ಅಗತ್ಯವಾದ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಿರಿ.
 

Latest Videos

click me!