Children Care: ಮಗು ರಾತ್ರಿ ಪದೇ ಪದೇ ಎದ್ದೇಳುತ್ತಾ? ಹಸಿವಾಗಿರಬಹುದು ನೋಡಿ

First Published | Sep 12, 2022, 5:50 PM IST

ರಾತ್ರಿಯಲ್ಲಿ, ಮಗು ನಿದ್ರೆ ಮಾಡಿದ ಮೇಲೆ ಮತ್ತೆ ಮತ್ತೆ ಎದ್ದೇಳಲು ಪ್ರಾರಂಭಿಸುತ್ತೆ. ಇದಕ್ಕೆ ಕಾರಣ ಹಲವಾರಿದೆ. ಮಗು ಹೀಗೆ ಪದೇ ಪದೇ ಎದ್ದರೆ ಮಗುಗೆ ಹಸಿವಾಗಿದೆ ಅಥವಾ ಸಾಕಷ್ಟು ಆಹಾರ ಸಿಕ್ಕಿಲ್ಲ ಎಂದು ಅರ್ಥಮಾಡಿಕೊಳ್ಳಿ. ಅನೇಕ ಪೋಷಕರು ತಮ್ಮ ಮಗು ಕಡಿಮೆ ನಿದ್ರೆ ಮಾಡುತ್ತೆ ಅಥವಾ ಮತ್ತೆ ಮತ್ತೆ ಎಚ್ಚರಗೊಳ್ಳುತ್ತೆ ಎಂದು ಚಿಂತಿತರಾಗಿರುತ್ತಾರೆ. ಆದ್ರೆ ನಿಮಗೆ ಗೊತ್ತಾ? ಮಗುವಿನ ಉತ್ತಮ ಮತ್ತು ಗಾಢ ನಿದ್ರೆಯು ಅದರ ಆಹಾರದೊಂದಿಗೆ ಸಂಪರ್ಕ ಹೊಂದಿದೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದು ಬಂದಿದೆ.

ಸ್ತನ್ಯಪಾನ ಮಾಡಿದ ಮಕ್ಕಳಿಗೆ ಮತ್ತೆ ಮತ್ತೆ ಹಸಿವಾಗೋದು ಸಾಮಾನ್ಯವಾಗಿದೆ, ಇದರಿಂದಾಗಿ ಅವರಿಗೆ ಸರಿಯಾಗಿ ನಿದ್ರೆ(Sleep) ಮಾಡಲು ಸಾಧ್ಯವಾಗೋದಿಲ್ಲ. ಮಗುವಿಗೆ ಬೇಗ ಸೋಲಿಡ್ ಫುಡ್ ನೀಡಲು ಪ್ರಾರಂಭಿಸಿದ್ರೆ, ಆಗ ಮಗುವಿನ ನಿದ್ರೆಯೂ ಸುಧಾರಿಸಬಹುದು. ಮಗುವಿನ ಹೊಟ್ಟೆ ತುಂಬುತ್ತದೆ, ಅಲ್ಲದೇ ಮಗು ಚೆನ್ನಾಗಿ ನಿದ್ರೆ ಮಾಡುತ್ತದೆ.

ಮಗುವಿನ ನಿದ್ರೆ ಪೂರ್ಣಗೊಳ್ಳದಿದ್ದಾಗ, ಅದರ ನಡವಳಿಕೆ ಬದಲಾಗಲು ಪ್ರಾರಂಭಿಸುತ್ತೆ. ಮಗು  ಕಿರಿಕಿರಿ, ಹಠಮಾರಿತನ ಮತ್ತು ಹೆಚ್ಚು ಕೋಪವನ್ನು(Angry) ತೋರಿಸಲು ಪ್ರಾರಂಭಿಸುತ್ತೆ. ಮಗುವಿನ ಉತ್ತಮ ನಿದ್ರೆಗಾಗಿ ಯಾವಾಗ ಮತ್ತು ಎಷ್ಟು ಆಹಾರವನ್ನು ನೀಡಬೇಕು ಎಂದು ತಿಳಿಯೋಣ.

Tap to resize

ಸಾಲಿಡ್ ಫುಡ್ (Solid food)ಯಾವಾಗ ಪ್ರಾರಂಭಿಸಬೇಕು
ಮಗುವಿನ ಗಾಢ ನಿದ್ರೆಯು ಮಗುವಿನ ಆಹಾರಕ್ಕೆ ಸಂಬಂಧಿಸಿದೆ. ಪ್ರತಿ ಮಗುವಿನ ಹಸಿವು ಮತ್ತು ನಿದ್ರೆಯ ಮಾದರಿ ವಿಭಿನ್ನವಾಗಿರುತ್ತೆ. ಹೆಚ್ಚಿನ ಪೋಷಕರು ಮಗುವಿನ ಹಸಿವನ್ನು ನೋಡಿ ನಾಲ್ಕು ತಿಂಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ನೀಡಲು ಪ್ರಾರಂಭಿಸುತ್ತಾರೆ.

ಮಗುವಿನ ಅಪಾಟೈಟ್ ತುಂಬಾ ವೀಕಾಗಿರುತ್ತೆ, ಆದ್ದರಿಂದ 6 ತಿಂಗಳ ನಂತರ, ಮಗುವಿಗೆ 
ಸೋಲಿಡ್ ಫುಡ್ ನೀಡಲು ಪ್ರಾರಂಭಿಸಬೇಕು. 6 ತಿಂಗಳ ಮಗುವಿನ ಹೊಟ್ಟೆ ಎದೆಹಾಲಿಂದ ಮಾತ್ರ ತುಂಬಲು ಸಾಧ್ಯವಿಲ್ಲ, ಆದ್ದರಿಂದ ಮಗುವಿನ ಡೋಸ್ ಗೆ ಅನುಗುಣವಾಗಿ ಎದೆ ಹಾಲುಣಿಸೋದನ್ನು(Breast feeding) ಪ್ರಾರಂಭಿಸಬಹುದು.

ಏಳರಿಂದ ಒಂಬತ್ತು ತಿಂಗಳಲ್ಲಿ ಸ್ಟಾರ್ಚ್(Starch) ಅಗತ್ಯ
ಏಳರಿಂದ ಒಂಬತ್ತು ತಿಂಗಳ ಮಗುವಿನ ಆಹಾರದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತೆ. ಈ ಸಮಯದಲ್ಲಿ ಮಗುವಿನ ಹಸಿವು ಹೆಚ್ಚಾಗಲು ಪ್ರಾರಂಭಿಸುತ್ತೆ ಮತ್ತು ಮಗುವಿನ ಚಟುವಟಿಕೆಯೂ ಬದಲಾಗುತ್ತೆ. ಆವಾಗ ಮಗುವಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಆಹಾರಗಳನ್ನು ನೀಡಬೇಕಾಗುತ್ತೆ.

ಏಳರಿಂದ ಒಂಭತ್ತು ತಿಂಗಳುಗಳಲ್ಲಿ, ಮಗುವಿಗೆ ಪೋಷಕಾಂಶಗಳ ಜೊತೆಗೆ ಸ್ಟಾರ್ಚ್ ನೀಡೋ ಅಗತ್ಯವಿದೆ. ಮಗುವಿಗೆ ರಾಗಿ, ಓಟ್ಸ್(Oats),  ಆಲೂಗಡ್ಡೆ, ರವೆ, ಸಾಗು, ಬ್ರೆಡ್ ಮತ್ತು ಅಕ್ಕಿಯಂತಹ ಸ್ಟಾರ್ಚ್ಗಳನ್ನು ನೀಡಬಹುದು. ಅವು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ.

10 ತಿಂಗಳಿಗೆ ಉಪ್ಪನ್ನು(Salt) ನೀಡಬಹುದು.
ಮಗು ಬೆಳೆದಂತೆ, ಅದರ ಜೀರ್ಣಾಂಗ ವ್ಯವಸ್ಥೆಯು ಸಹ ಬಲಗೊಳ್ಳಲು ಪ್ರಾರಂಭಿಸುತ್ತೆ. ಈ ಸಮಯದಲ್ಲಿ ಮಗು ತೆಗೆದುಕೊಳ್ಳುವ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತೆ. 10 ರಿಂದ 12 ತಿಂಗಳುಗಳಲ್ಲಿ, ಮಗುವಿನ ಹಸಿವಿನಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತೆ. ಆವಾಗ ಮಗು ತನಗೆ ಇಷ್ಟ ಇದ್ದ ಆಹಾರಗಳನ್ನು ಮಾತ್ರ ಸೇವಿಸಲು ಪ್ರಾರಂಭಿಸುತ್ತೆ.

10 ತಿಂಗಳ ಮಗುವಿಗೆ ಉಪ್ಪು, ಸಕ್ಕರೆ ಮತ್ತು ಜೇನುತುಪ್ಪವನ್ನು(Honey) ನೀಡಬಹುದು. ಅಲ್ಲದೆ, ಈ ವಯಸ್ಸಿನಲ್ಲಿ, ಮಗುವಿಗೆ ಬೇಯಿಸಿದ ಮೊಟ್ಟೆಗಳು ಮತ್ತು ಡೈರಿ ಉತ್ಪನ್ನಗಳನ್ನು ಸಹ ನೀಡಬಹುದು ಆದರೆ ಸಣ್ಣ ಪ್ರಮಾಣದಲ್ಲಿ. ಹೀಗೆ ಮಾಡೋದ್ರಿಂದ ಮಗು ರಾತ್ರಿ ಮತ್ತೆ ಮತ್ತೆ ಎದ್ದೇಳೋದಿಲ್ಲ. 
 

Latest Videos

click me!