ಎದೆ ಗಾತ್ರ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸೋ ಬದಲು ಈ ಫುಡ್ ಸೇವಿಸಿ ನೋಡಿ!

First Published | Oct 26, 2022, 12:43 PM IST

ಸ್ತನಗಳ ಗಾತ್ರ ಚೆನ್ನಾಗಿದ್ದರೆ ಮಾತ್ರ ಮಹಿಳೆಯರು ಯಾವುದೇ ಡ್ರೆಸ್ ಹಾಕಿದರೂ ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಸ್ತನಗಳ ಗಾತ್ರ ಸಣ್ಣದಾಗಿದ್ರೆ ಏನು ಮಾಡೋದು? ಇದಕ್ಕಾಗಿ ಯಾವುದೇ ಸರ್ಜರಿ ಮಾಡಿಸುವ ಬದಲು ಉತ್ತಮ ಆಹಾರವನ್ನು ಸೇವಿಸಬೇಕು. ಇದರಿಂದ ಸ್ತನಗಳ ಗಾತ್ರ ಚೆನ್ನಾಗಿ ಕಾಣುತ್ತದೆ. ಮಹಿಳೆಯರೂ ಆಕರ್ಷಕವಾಗಿ ಕಾಣಿಸುತ್ತಾರೆ. ಅಷ್ಟೇ ಅಲ್ಲ ಆತ್ಮವಿಶ್ವಾಸವೂ ಹೆಚ್ಚಾಗುತ್ತೆ.

ಸ್ತನಗಳು(Breast) ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೊಡ್ಡ ಮತ್ತು ಬಿಗಿ ಸ್ತನಗಳು ಮಹಿಳೆಯರ ಲುಕ್ ಇನ್ನೂ ಆಕರ್ಷಕವಾಗಿಸುತ್ತೆ. ಆದ್ದರಿಂದ ಸಣ್ಣ ಬ್ರೆಸ್ಟ್ ಸೈಜಿನ ಮಹಿಳೆಯರಿಗೆ ಅಂತಹ ಆರು ಸೂಪರ್ ಆಹಾರಗಳು ಇಲ್ಲಿವೆ. ಇದರಿಂದ ದೊಡ್ಡ, ಆಕಾರ ಮತ್ತು ಬಿಗಿಯಾದ ಸ್ತನಗಳ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ಸ್ತನದ ಗಾತ್ರವನ್ನು ಹೆಚ್ಚಿಸಲು ಈಸ್ಟ್ರೋಜೆನ್ ಭರಿತ ಆಹಾರ ಸೇವಿಸಬೇಕು. ಅವುಗಳ ಬಗ್ಗೆ ತಿಳಿಯೋಣ. 

ಸೋಯಾ ಉತ್ಪನ್ನಗಳು(Soya products)

ಸೋಯಾ ಮತ್ತು ಸೋಡಾ ಉತ್ಪನ್ನಗಳಾದ ಸೋಯಾ ಮಿಲ್ಕ್, ಸೋಯಾಬೀನ್, ಟೋಫು, ಚೀಸ್ ಪ್ರೋಟೀನ್ (Cheese Protein) ಸಮೃದ್ಧವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಇದು ಐಸೋಫ್ಲೇವೋನ್‌ಗಳಿಂದ ಸಮೃದ್ಧವಾಗಿದೆ, ಅಷ್ಟೇ ಅಲ್ಲ ಇದು ಈಸ್ಟ್ರೋಜೆನ್‌ನಂತೆ ಕಾರ್ಯನಿರ್ವಹಿಸುತ್ತೆ ಮತ್ತು ಸ್ತನಗಳ ಗಾತ್ರ ಹಿಗ್ಗಿಸುವಲ್ಲಿ ಸಹಾಯ ಮಾಡುತ್ತೆ.

Tap to resize

ಸಮುದ್ರದ ಮೀನು

ಸೀಗಡಿ(Prawns) ಮುಂತಾದ ಸಮುದ್ರ ಮೀನುಗಳಲ್ಲಿ ಒಮೆಗಾ 3 ಹೇರಳವಾಗಿ ಕಂಡು ಬರುತ್ತೆ, ಇದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತೆ. ಈ ಕಾರಣದಿಂದಾಗಿ ಸ್ತನದ ಗಾತ್ರ ಹೆಚ್ಚುತ್ತದೆ. ಹಾಗಾಗಿ ಸಣ್ಣ ಬ್ರೆಸ್ಟ್ ಸೈಜ್ ಹೊಂದಿರುವವವರು ಇದನ್ನು ಟ್ರೈ ಮಾಡಿ ನೋಡಿ.  

ಮೆಂತ್ಯ (fenugreek seeds )

ಮೆಂತ್ಯ ಸಾಕಷ್ಟು ಫೈಟೋಸ್ಟೆಜೆನ್ ಹೊಂದಿರುತ್ತೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತೆ. ಈ ಕಾರಣದಿಂದಾಗಿ ಪೌಷ್ಟಿಕಾಂಶವು ಸ್ತನವನ್ನು ಚೆನ್ನಾಗಿ ತಲುಪುತ್ತೆ. ಮೆಂತ್ಯವನ್ನು ಕುದಿಸಿ ಮತ್ತು ಪ್ರತಿದಿನ ಅದರ ನೀರನ್ನು ಕುಡಿದು ನೀವೇ ಅದರ ಮ್ಯಾಜಿಕ್ ನೋಡಿ.

ಹಾಲು (Milk)

ನಿಯಮಿತವಾಗಿ ಹಾಲಿನ ಸೇವನೆಯು ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತೆ. ಇದು ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತೆ ಹಾಲು ಫಲವತ್ತತೆಯನ್ನು ಸಹ ಸರಿಪಡಿಸುತ್ತೆ. ಇವೆಲ್ಲವೂ ಸ್ತನಗಳ ಬೆಳವಣಿಗೆಗೆ ಸಹಾಕಾರಿ.

ಲೀನ್ ಮೀಟ್ (Lean meat)

ಲೀನ್ ಮೀಟ್ ಸ್ತನದ ಗಾತ್ರವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಇದು ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಹಾಗಾಗಿ ಇದನ್ನು ವಾರಕ್ಕೆ ಒಮ್ಮೆಯಾದರೂ ತಿಂದು ಸಣ್ಣ ಬ್ರೆಸ್ಟ್ ಸೈಜ್ ಹೊಂದಿರುವವರು ತಮ್ಮ ಬ್ರೆಸ್ಟ್ ಸೈಜ್ ಸುಧಾರಿಸಿಕೊಳ್ಳಬಹುದು.

ಸೀಡ್ಸ್ (Seeds)

ಆರೋಗ್ಯಕರ ಕೊಬ್ಬು ಸೀಡ್ಸ್‌ನಲ್ಲಿ ಹೇರಳವಾಗಿ ಕಂಡುಬರುತ್ತೆ. ಇದು ದೇಹದ ಹಾರ್ಮೋನುಗಳನ್ನು ಸುಧಾರಿಸುತ್ತೆ ಮತ್ತು ನಿಯಂತ್ರಿಸುತ್ತೆ. ಲಿನ್ಸೀಡ್,  ಸೂರ್ಯಕಾಂತಿ, ಕುಂಬಳಕಾಯಿ, ಎಳ್ಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ನೀವು ಅದನ್ನು ಸ್ನಾಕ್ಸ್ ಆಗಿ ಸಹ ತೆಗೆದುಕೊಳ್ಳಬಹುದು.

ಸ್ತನ ಮಸಾಜ್ (Breast massage)ಅತ್ಯಗತ್ಯ

ಸ್ತನದ ಗಾತ್ರವನ್ನು ಹೆಚ್ಚಿಸುವಲ್ಲಿ ಮಸಾಜ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತೆ. ಸ್ತನ ಮಸಾಜ್ ನಿಯಮಿತವಾಗಿ ಮಾಡಬೇಕು. ಇದು ಸ್ನಾಯುಗಳಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತೆ. ಅಲ್ಲದೇ, ಸ್ತನಗಳಲ್ಲಿ ಮಸಲ್ ಹೆಚ್ಚಾಗುತ್ತೆ. ಈ ಕಾರಣದಿಂದಾಗಿ ಸ್ತನಗಳಲ್ಲಿ ಕ್ರಮೇಣ ಬೆಳವಣಿಗೆ ಕಂಡುಬರುತ್ತೆ. ಮಸಾಜ್‌ಗಾಗಿ, ತೆಂಗಿನೆಣ್ಣೆ, ಸಾಸಿವೆ ಎಣ್ಣೆ, ಹರಳೆಣ್ಣೆ ಅಥವಾ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಬಹುದು. ಮಸಾಜ್ ಮಾಡುವ ಮೊದಲು ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಮತ್ತು ನಂತರ ಸರ್ಕ್ಯುಲೇಶನ್ ಮೋಷನ್‌ನಲ್ಲಿ ಮಸಾಜ್ ಮಾಡಿ. 

Latest Videos

click me!