platelets count ಗರ್ಭಿಣಿಯರಲ್ಲಿ ಕಡಿಮೆಯಾಗಲು ಕಾರಣಗಳಿವು..

First Published Mar 19, 2022, 5:54 PM IST

ಗರ್ಭಾವಸ್ಥೆಯಲ್ಲಿ, ಕೆಲವು ಮಹಿಳೆಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವು ಸಣ್ಣ ಪುಟ್ಟ ಸಮಸ್ಯೆ ಆದರೆ ಇನ್ನು ಕೆಲವು ಗಂಭೀರ ಸಮಸ್ಯೆಗಳು. ಕೆಲವೊಮ್ಮೆ ಸಮಸ್ಯೆಗಳು ಎಷ್ಟು ಹೆಚ್ಚಾಗುತ್ತವೆ ಎಂದರೆ, ಅದರಿಂದ  ತಾಯಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರಲ್ಲಿ ಒಂದು ಸಮಸ್ಯೆ ಪ್ಲೇಟ್ಲೆಟ್ ಸಂಖ್ಯೆ.
 

platelets

ಪ್ಲೇಟ್ಲೆಟ್(Platelet) ಎಣಿಕೆ
ಪ್ಲೇಟ್ಲೆಟ್ ಸಂಖ್ಯೆಯ ಇಳಿಕೆಯು ಮಹಿಳೆಯರನ್ನು ಕಾಡುವ ಹಲವು ಸಮಸ್ಯೆಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ರಕ್ತ ಹೆಪ್ಪುಗಟ್ಟುವಿಕೆಯನ್ನು ತಪ್ಪಿಸಲು ಗರ್ಭಿಣಿ ಮಹಿಳೆಯರ ಪ್ಲೇಟ್ಲೆಟ್ ಎಣಿಕೆ ಸರಿಯಾಗಿರಬೇಕು. ಹಾಗಾದರೆ ಪ್ಲೇಟ್ಲೆಟ್ ಎಷ್ಟಿರಬೇಕು ಎನ್ನುವುದರ ಬಗ್ಗೆ ತಿಳಿಯೋಣ. 

platelets

ಗರ್ಭಾವಸ್ಥೆಯಲ್ಲಿ(Pregnancy) ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಸಾಮಾನ್ಯ ಕುಸಿತವಿರುತ್ತದೆ. ಮೊದಲ ತ್ರೈಮಾಸಿಕದಲ್ಲಿ, ಸಾಮಾನ್ಯ ಎಣಿಕೆಯು ಸುಮಾರು 250,000 ಇದ್ದು, ಡೆಲಿವರಿ ಸಮಯದಲ್ಲಿ ಸುಮಾರು 225,000 ಕ್ಕೆ ಕಡಿಮೆಯಾಗುತ್ತದೆ. ಪ್ಲೇಟ್ಲೆಟ್ ಎಣಿಕೆಗಳು 100,000 ಕ್ಕಿಂತ ಕಡಿಮೆ ಇದ್ದರೆ ಅದರಿಂದ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. 

platelets

ಕಡಿಮೆ ಪ್ಲೇಟ್ಲೆಟ್ ಇದ್ದರೆ 
ಗರ್ಭಾವಸ್ಥೆಯಲ್ಲಿ, ಮಹಿಳೆಯ ದೇಹದಲ್ಲಿ ಪ್ಲೇಟ್ಲೆಟ್ ಎಣಿಕೆಯು 1,16,000 ಕ್ಕಿಂತ ಕಡಿಮೆ ಇದ್ದರೆ, ಆಗ ರಕ್ತಸ್ರಾವದ(Bleeding) ಸಾಧ್ಯತೆಗಳು ಹೆಚ್ಚಾಗುತ್ತವೆ. ಇದರಿಂದ ಡೆಲಿವರಿ ಸಮಯದಲ್ಲಿ ಮಹಿಳೆಯರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ. 

platelets

ಸಿಸೇರಿಯನ್ ಡೆಲಿವರಿ (Caesarean delivery)
ಗರ್ಭಕೋಶದಲ್ಲಿ ರಕ್ತ ಸ್ರಾವದ ಪ್ರಮಾಣ ಹೆಚ್ಚಳವಾದ ಕಾರಣ ಮಹಿಳೆಯರು ಸಿಜೇರಿಯನ್ ಹೆರಿಗೆಗೆ ಒಳಗಾಗಬೇಕಾಗುತ್ತದೆ. ನಾರ್ಮಲ್ ಡೆಲಿವರಿ ಆದರೆ ತಾಯಿ ಮಗು ಇಬ್ಬರ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಈ ಸಿಸೇರಿಯನ್ ಡೆಲಿವರಿ ಮಾಡುವುದು ಮುಖ್ಯವಾಗಿದೆ. 

platelets

ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ ಲೆಟ್ ಗಳಿಗೆ ಕಾರಣಗಳೇನು ಎಂದು ಇಲ್ಲಿದೆ.
ಜಿಂಕ್ (ZInc)
ದೇಹದಲ್ಲಿ ಸತುವಿನ ಕೊರತೆಯಿಂದಾಗಿ ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಗಳ ಸಮಸ್ಯೆ ಉಂಟಾಗಬಹುದು.
ಎಸ್.ಎಲ್.ಇ.
ಎಸ್ ಎಲ್ ಇ ಒಂದು ಆಟೋ ಇಮ್ಯೂನ್ ಅಸ್ವಸ್ಥತೆಯಾಗಿದ್ದು, ಇದರಿಂದಾಗಿ ಪ್ಲೇಟ್ ಲೆಟ್ ಎಣಿಕೆಯೂ ಗರ್ಭಾವಸ್ಥೆಯಲ್ಲಿ ಕಡಿಮೆಯಾಗುತ್ತದೆ.

platelets

ಔಷಧಗಳು
ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳುವ ವಿಶೇಷ ಔಷಧಿಗಳಿಂದ ಕೂಡ ಈ ಸಮಸ್ಯೆ ಉಂಟಾಗಬಹುದು.
ರಕ್ತದೊತ್ತಡ(Blood Pressure)
ರಕ್ತದೊತ್ತಡದಿಂದ ಬಳಲುತ್ತಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಪ್ಲೇಟ್ ಲೆಟ್ ಗಳ ಇಳಿಕೆಯ ಸಮಸ್ಯೆಯನ್ನು ಸಹ ಹೊಂದಬಹುದು.

platelets

ಕಡಿಮೆ ಪ್ಲೇಟ್ಲೆಟ್ ಎಣಿಕೆಯಿಂದ ಗಂಭೀರ ಸಮಸ್ಯೆ 
ಎಪಿಡ್ಯೂರಲ್ ಹೆಮಟೋಮಾ ಅಪಾಯದಿಂದಾಗಿ ಪ್ರಸವದ ಸಮಯದಲ್ಲಿ ಎಪಿಡ್ಯೂರಲ್ ಹೊಂದಲು ಅಸಮರ್ಥತೆ, ಇದರಲ್ಲಿ ಬೆನ್ನುಮೂಳೆಯಲ್ಲಿ ಅಸಹಜ ರಕ್ತ ಸಂಗ್ರಹವು ಬೆನ್ನುಹುರಿಹಾನಿಗೆ ಕಾರಣವಾಗಬಹುದು.
ಯೋನಿ ಅಥವಾ ಸಿಸೇರಿಯನ್ ಸೆಕ್ಷನ್ ಡೆಲಿವರಿ ಸಮಯದಲ್ಲಿ ರಕ್ತಸ್ರಾವ ಹೆಚ್ಚಾಗುವುದು.
ಪ್ಲೇಟ್ ಲೆಟ್ ಗಳ(Platelet) ಕಡಿತವು ತೀವ್ರವಾದ ಪ್ರಿಕ್ಲಾಂಪ್ಸಿಯಾದಿಂದ ಉಂಟಾದಲ್ಲಿ ಅಕಾಲಿಕ ಹೆರಿಗೆ ಉಂಟಾಗಬಹುದು

platelets

ಕೆಲವು ಆಹಾರಗಳು ಪ್ಲೇಟ್ಲೆಟ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ, ಅವುಗಳಲ್ಲಿ ಇವು ಸೇರಿವೆ:
ಡಾರ್ಕ್ ಚಾಕೊಲೇಟ್(Dark chocolate)
ಪಾಲಕ್ ಮತ್ತು ಹಸಿರು ತರಕಾರಿಗಳು
ಬಟಾಣಿ ಮತ್ತು ಬೇಳೆಕಾಳುಗಳು
ಮೊಟ್ಟೆಗಳು
 ಧಾನ್ಯಗಳು
ಡೈರಿ ಪರ್ಯಾಯಗಳು
ಕಿತ್ತಳೆ, ಬ್ರಸೆಲ್ಸ್ ಮೊಳಕೆಗಳು ಮತ್ತು ಕೆಂಪು ಮೆಣಸುಗಳಂತಹ ವಿಟಮಿನ್ ಸಿ ಸಮೃದ್ಧ ಆಹಾರ

click me!