ಸ್ಕಿನ್ ನ್ಯಾಚುರಲ್ ಆಗಿಡಲು, ಈ ಫ್ಲವರ್ ಫೇಸ್ ಪ್ಯಾಕ್ ಟ್ರೈ ಮಾಡಿ!

First Published Jul 8, 2022, 6:31 PM IST

ಮಾನ್ಸೂನ್ ನಲ್ಲಿ, ಚರ್ಮದ ವಿಶೇಷ ಕಾಳಜಿ ವಹಿಸಬೇಕಾಗುತ್ತೆ. ಈ ಸೀಸನ್ ನಲ್ಲಿ, ನೀವು ಚರ್ಮದ ಬಗ್ಗೆ ಉತ್ತಮ ಕಾಳಜಿ ವಹಿಸದಿದ್ದರೆ, ಆಗ ಫಂಗಲ್, ಚರ್ಮದ ಮೇಲೆ ಬ್ಯಾಕ್ಟೀರಿಯಾದ ಸೋಂಕು ಮತ್ತು ಮೊಡವೆ ಸಹ ಸಂಭವಿಸಬಹುದು. ನೀವು ಚರ್ಮವನ್ನು ಹಾನಿಗೊಳಿಸದೆ ನೈಸರ್ಗಿಕ ರೀತಿಯಲ್ಲಿ ಆರೈಕೆ ಮಾಡಲು ಬಯಸಿದ್ರೆ, ನಿಮ್ಮ ಗಾರ್ಡನ್ ಹೂಗಳ ಸಹಾಯದಿಂದ ತ್ವಚೆಗೆ ಹೊಸ ಹೊಳಪು ನೀಡಿ.

ಅನೇಕ ಹೂವುಗಳ(Flowers) ಬಳಕೆಯು ಚರ್ಮದ ಆರೈಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇವುಗಳ ಸಹಾಯದಿಂದ, ಬ್ಯಾಕ್ಟೀರಿಯಾ ಮತ್ತು ಫಂಗಸ್ನಿಂದ ಚರ್ಮವನ್ನು ರಕ್ಷಿಸಲು ನೀವು ಸಹಾಯ ಮಾಡಬಹುದು. ಇಷ್ಟೇ ಅಲ್ಲ, ಇದರ ಸಹಾಯದಿಂದ ನೀವು ಇತರ ಅನೇಕ ಚರ್ಮದ ಸಮಸ್ಯೆ ಸಹ ನಿವಾರಿಸಬಹುದು. ನೀವು ಅವುಗಳನ್ನು ಫೇಸ್ ಮಾಸ್ಕ್ ಆಗಿ ಬಳಸಬಹುದು.

ಹೂವುಗಳಿಂದ ಹೀಗೆ ಫೇಸ್ ಪ್ಯಾಕ್ ಮಾಡಿ 
ಗುಲಾಬಿ(Rose) ಫೇಸ್ ಪ್ಯಾಕ್
ಗ್ಲಿಸರಿನ್ ಮತ್ತು ಗುಲಾಬಿ ದಳಗಳ ಸಹಾಯದಿಂದ ತಯಾರಿಸಿದ ಫೇಸ್ ಪ್ಯಾಕ್ ನೀವು ಸುಲಭವಾಗಿ ತಯಾರಿಸಬಹುದು. ಇದನ್ನು ತಯಾರಿಸಲು, ನೀವು ಕೆಲವು ಗುಲಾಬಿ ದಳಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ರುಬ್ಬಿ.

ಗುಲಾಬಿ ಪೇಸ್ಟ್ ಗೆ ಹಾಲು ಮತ್ತು ಗ್ಲಿಸರಿನ್ ಸೇರಿಸಿ. ಈಗ ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಇದನ್ನು ಬಳಸುವ ಮೂಲಕ, ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದು ಮತ್ತು ಅದು ಮೃದು ಮತ್ತು ಹೊಳೆಯುವ ಚರ್ಮ(Skin) ನಿಮ್ಮದಾಗುತ್ತೆ.

ಮಲ್ಲಿಗೆ(Jasmine) ಫೇಸ್ ಪ್ಯಾಕ್
ಒಣ ಚರ್ಮವನ್ನು ಹೊಂದಿರುವವರಿಗೆ ಮಲ್ಲಿಗೆ ಹೂವು ತುಂಬಾ ಪ್ರಯೋಜನಕಾರಿ. ಇದು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತೆ ಮತ್ತು ಬಣ್ಣ ಹೆಚ್ಚಿಸುತ್ತೆ. ಇದನ್ನು ನೀವು ಟ್ರೈ ಮಾಡಿ ಖಂಡಿತವಾಗಿಯೂ ಹೊಳೆಯುವ ತ್ವಚೆ ನಿಮ್ಮದಾಗುತ್ತೆ. 

ಮಲ್ಲಿಗೆ ಫೇಸ್ ಪ್ಯಾಕ್ (Face pack)ತಯಾರಿಸಲು, ಮೊದಲು ಮಲ್ಲಿಗೆ ಹೂವುಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ. ಈಗ ಅದಕ್ಕೆ ಸ್ವಲ್ಪ ಹಾಲು ಮತ್ತು ಬೇಸನ್ ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷಗಳ ನಂತರ ತೊಳೆಯಿರಿ.
 

ಲೋಟಸ್(Lotus)  ಫೇಸ್ ಪ್ಯಾಕ್ 
ಲೋಟಸ್ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುತ್ತೆ ಮತ್ತು ಚರ್ಮವನ್ನು ಪೋಷಿಸುತ್ತೆ. ಇದನ್ನು ಬಳಕೆ ಮಾಡೋದ್ರಿಂದ ಚರ್ಮ ಹೊಳೆಯಲು ಆರಂಭಿಸುತ್ತೆ  ಮತ್ತು ಕಲೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತೆ.

ಲೋಟಸ್ ಫೇಸ್ ಪ್ಯಾಕ್ ಬ್ಯಾಕ್ಟೀರಿಯಾ(Bacteria) ವಿರೋಧಿ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಮೊಡವೆ ಮತ್ತು ಎಸ್ಜಿಮಾದ ಸಮಸ್ಯೆಯನ್ನು ಸಹ ತೆಗೆದುಹಾಕುತ್ತೆ. ಇದನ್ನು ನೀವು ಬಳಸುವ ಮೂಲಕ ಸುಂದರ ತ್ವಚೆಯನ್ನು ಪಡೆಯಬಹುದು. 

ಲಿಲ್ಲಿ ಫೇಸ್ ಪ್ಯಾಕ್ 
ನೀವು ಲಿಲ್ಲಿ ದಳಗಳನ್ನು ಫೇಸ್ ಪ್ಯಾಕ್ ಆಗಿ ಬಳಸಿದರೆ, ಅದು ಮುಖವನ್ನು ಆಳವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತೆ ಮತ್ತು ಮುಖವನ್ನು ಹೊಳೆಯುವಂತೆ ಮಾಡುತ್ತೆ. ಫೇಸ್ ಪ್ಯಾಕ್ ಮಾಡಲು, ನೀವು ಲಿಲ್ಲಿಯನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್(Rose water)  ಸೇರಿಸಿ ಪೇಸ್ಟ್ ಮಾಡಬಹುದು. ಈಗ ಇದನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಹಚ್ಚಿ ಮತ್ತು ನಂತರ ಮುಖ ತೊಳೆಯಿರಿ.

ಸಂಪಿಗೆ(Champa) ಫೇಸ್ ಪ್ಯಾಕ್ 
ಸಂಪಿಗೆ ಹೂವು ಚರ್ಮವನ್ನು ಸ್ಮೂತ್ ಆಗಿಸುತ್ತೆ ಅಲ್ಲದೇ, ವಯಸ್ಸಾಗದಂತೆ ರಕ್ಷಿಸಲು ಸಹಾಯ ಮಾಡುತ್ತೆ. ಅದರ ಫೇಸ್ ಪ್ಯಾಕ್ ತಯಾರಿಸಲು, ನೀವು ಹೂವುಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ. ಈಗ ಅದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ಹಾಲು ಸೇರಿಸಿ. ಈ ಪೇಸ್ಟ್  ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿ. 15 ನಿಮಿಷಗಳ ನಂತರ ನಿಮ್ಮ ಮುಖ ತೊಳೆಯಿರಿ.

click me!