ಸ್ತನದಲ್ಲಿ ಕಾಣಿಸುವ ಇಂಥ ಸಮಸ್ಯೆಗೇನೂ ಟೆನ್ಷನ್ ಮಾಡಿಕೊಳ್ಳೋದು ಬೇಡ!

First Published | Jul 7, 2022, 5:05 PM IST

ಮಹಿಳೆಯರ ದೇಹದ ರಚನೆಯು ಹೇಗಿದೆಯೆಂದರೆ ಅವರು ಒಂದಲ್ಲ ಒಂದು ದಿನ ಯಾವುದಾದರೂ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಸ್ತನದ ಸಮಸ್ಯೆ (problem in breast) ಕೂಡ ಒಂದು. ಸ್ತನಕ್ಕೆ ಸಂಬಂಧಿಸಿದ ಮೂರು ಸಮಸ್ಯೆಗಳನ್ನು ಮಹಿಳೆಯರು ಸಾಮಾನ್ಯವಾಗಿ ಪ್ರತಿದಿನ ಎದುರಿಸುತ್ತಾರೆ. ಆದರೆ ಅದರ ಬಗ್ಗೆ ಭಯಪಡುವ ಬದಲು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಗಮನ ಹರಿಸಬೇಕು.

ಮಹಿಳೆಯರ ಸ್ತನದ (breast) ಮೇಲಿನ ಕೂದಲು ಅಥವಾ ದದ್ದು ಎಲ್ಲವೂ ಸಾಮಾನ್ಯ. ಆದರೆ ಮಹಿಳೆಯರು ಅದರ ಬಗ್ಗೆ ತುಂಬಾ ಅಸಮಾಧಾನಗೊಂಡಿರುತ್ತಾರೆ. ಸ್ತನವು ಮಹಿಳೆಯ ದೇಹದ ಅತ್ಯಂತ ಸೂಕ್ಷ್ಮ ಭಾಗ. ಈ ಕಾರಣದಿಂದಾಗಿ ಅವರು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎಲ್ಲರಿಂದಲೂ ಮುಚ್ಚಿಡುತ್ತಾರೆ. ಸ್ತನದ ಮೇಲೆ ಉಂಟಾಗುವ ಹೆಚ್ಚಿನ ಸಮಸ್ಯೆಗಳು ಸಾಮಾನ್ಯ. ಅದಕ್ಕಾಗಿ ಚಿಕಿತ್ಸೆ ಪಡೆಯೋದು ಉತ್ತಮ. ಸ್ತನ ಮತ್ತು ಅದರ ಚಿಕಿತ್ಸೆಗೆ ಸಂಬಂಧಿಸಿದ ಮೂರು ಸಮಸ್ಯೆಗಳನ್ನು ನಾವು ನಿಮಗೆ ತಿಳಿಸುತ್ತೇವೆ.

ಸ್ತನದ ಮೇಲೆ ಕಾಣಿಸಿಕೊಂಡಿರುವ ದದ್ದುಗಳು ಅಥವಾ ಮೊಡವೆ

ಸ್ತನದ ಮೇಲೆ ಮೊಡವೆ (pimple on breast) ಅಥವಾ ದದ್ದುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಮಹಿಳೆಯರು ದೂರುತ್ತಾರೆ. ಕೆಲವು ಔಷಧಿಗಳ ಮೂಲಕ ಇದನ್ನು ನಿವಾರಿಸಬಹುದು. ಆದರೆ ಇದರ ನಂತರವೂ, ಅದು ಸರಿಯಾಗಿಲ್ಲದಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. 

Tap to resize

ಸ್ತನದ ಮೇಲೆ ಯಾವುದೇ ದದ್ದುಗಳು ಉಂಟಾಗದಂತೆ ಯಾವಾಗಲೂ ಸಡಿಲ-ಫಿಟ್ಟಿಂಗ್ ಬಟ್ಟೆ (loose fitting dress) ಧರಿಸಿ. ಬ್ರಾ ಮತ್ತು ಶರ್ಟ್ ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. ಅನೇಕ ಜನರು ಒಳ ಉಡುಪನ್ನು ಸ್ನಾನ ಗೃಹದಲ್ಲಿಯೇ ಒಣಗಿಸುವ ಅಭ್ಯಾಸ ಹೊಂದಿದ್ದಾರೆ. ಇದರಿಂದ ಬಟ್ಟೆಯಲ್ಲಿ ಕೀಟಾಣುಗಳು ಹೆಚ್ಚಾಗುತ್ತವೆ ಮತ್ತು ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ಹೆಚ್ಚಿಸುತ್ತೆ.

ದದ್ದುಗಳನ್ನು ತಪ್ಪಿಸಲು ನೀವು ಮಾಡಬೇಕಾದ್ದು ಏನು?

ಎಕ್ಸರ್ ಸೈಸ್ (exercise) ಬಳಿಕ ಸ್ವಚ್ಛವಾದ ಬಟ್ಟೆ ಧರಿಸಿ
ಬೆವರನ್ನು ಒರೆಸಲು ಸ್ವಚ್ಛವಾದ ಬಟ್ಟೆ ಬಳಸಿ
ಸ್ಯಾಲಿಸಿಲಿಕ್ ಆಸಿಡ್ ಪ್ಯಾಡ್ ನಿಂದ ಮೊಡವೆಗಳನ್ನು ಸ್ವಚ್ಛಗೊಳಿಸುವುದು
ವ್ಯಾಯಾಮದ ನಂತರ ತಕ್ಷಣ ಸ್ನಾನ ಮಾಡಿ ಮತ್ತು ಸ್ತನ ಸ್ವಚ್ಛಗೊಳಿಸಿ

ಸ್ತನದ ಮೇಲೆ ಕೂದಲು

ಸ್ತನದ ಮೇಲೆ ಕೂದಲನ್ನು ಹೊಂದಿರುವುದು ಮಹಿಳೆಯರಿಗೆ ಇರಿಟೇಟ್ ಅನಿಸುತ್ತೆ. ಹಾರ್ಮೋನುಗಳ ಬದಲಾವಣೆಯಿಂದಾಗಿ (harmonal changes), ಸ್ತನದ ಮೇಲೆ ಕೂದಲು ಹೊರಬರುತ್ತದೆ. ಕೆಲವು ಯುವತಿಯರಿಗೆ ಪ್ರೌಢಾವಸ್ಥೆಯಲ್ಲಿ ಕೂದಲು ಕಾಣಿಸಿಕೊಳ್ಳುತ್ತೆ. ಆದರೆ ಕೆಲವರಿಗೆ ಗರ್ಭಧಾರಣೆ ನಂತರ ಇದು ಕಾಣಿಸಿಕೊಳ್ಳುತ್ತೆ.  ಆದರೆ, ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ಅದನ್ನು ಸುಲಭವಾಗಿ ತೆಗೆದುಹಾಕಬಹುದು. 

ಸ್ತನದ ಮೇಲಿನ ಕೂದಲನ್ನು ನಿವಾರಿಸಲು ನೀವು ವ್ಯಾಕ್ಸ್, ಪ್ಲಕಿಂಗ್, ರೇಜರ್, ಚಿಕಿತ್ಸೆಗೆ ಕೂಡ ಒಳಗಾಗಬಹುದು. ಆದಾಗ್ಯೂ, ಗರ್ಭಿಣಿಯರು ರೇಜರ್ ತಪ್ಪಿಸಬೇಕು, ಏಕೆಂದರೆ ರೇಜರ್ ನಂತರ ಕೂದಲು ಗಟ್ಟಿಯಾಗಿ ಹೊರಬರುತ್ತದೆ. ಇದು ಮಕ್ಕಳಿಗೆ ಸ್ತನ್ಯಪಾನ (Breast Feeding) ಮಾಡಲು ಕಷ್ಟವಾಗಬಹುದು.

ಸ್ತನ ಎಸ್ಜಿಮಾ

 ಸ್ತನ ಎಸ್ಜಿಮಾ ಉಂಟಾದರೆ ಚರ್ಮವು ಒಣಗುತ್ತದೆ. ಇದರಿಂದಾಗಿ ಮೊಲೆ ತೊಟ್ಟುಗಳ ಸುತ್ತಲೂ, ಸ್ತನಗಳ ನಡುವೆ, ಸ್ತನಗಳ ಕೆಳಗೆ ಅಥವಾ ತುದಿಯಲ್ಲಿ ಕಪ್ಪು ಬಣ್ಣ ಉಂಟಾಗುತ್ತೆ.  ಈ ಕಾರಣದಿಂದಾಗಿ ಚರ್ಮವು ಹೆಚ್ಚು ಸೂಕ್ಷ್ಮವಾಗುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಸ್ತನ ಕ್ಯಾನ್ಸರ್ ನ (breast cancer) ರೋಗಲಕ್ಷಣ

 - ಮೊಲೆತೊಟ್ಟುಗಳ ಪ್ರದೇಶದಲ್ಲಿ ತುರಿಕೆ ಮತ್ತು ಜುಮ್ಮೆನಿಸುವಿಕೆ
- ಒಣ ಅಥವಾ ದಪ್ಪ ಚರ್ಮ, ಅಥವಾ ಫ್ಲೇಕಿ ಚರ್ಮ
- ಚಪ್ಪಟೆಯಾದ ಅಥವಾ ಮಡಚಿದ ಮೊಲೆತೊಟ್ಟು
- ಮೊಲೆತೊಟ್ಟುಗಳ ಚರ್ಮದಲ್ಲಿ ಹಳದಿ ಅಥವಾ ರಕ್ತ ಸೋರಿಕೆ ಅನುಭವ

ಮೊಲೆತೊಟ್ಟುಗಳಲ್ಲಿ, ಎಸ್ಜಿಮಾ ತುಂಬಾ ಸಾಮಾನ್ಯ. ಆದರೆ ಅದಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಗಂಭೀರ ಕಾಯಿಲೆಯ ರೂಪ ಪಡೆಯಬಹುದು. ಆದ್ದರಿಂದ ನಿಮಗೆ ಎಸ್ಜಿಮಾ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲಾ, ನೀವು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಿ ತೆಗೆದುಕೊಳ್ಳಬೇಕು.

Latest Videos

click me!