ಮಗುವಿಗೆ ಬಿಕ್ಕಳಿಕೆ ಹೆಚ್ಚಾದ್ರೆ ಏನು ಮಾಡೋದು?

First Published Jul 6, 2022, 7:19 PM IST

ನಮಗೆ ಬಿಕ್ಕಳಿಕೆ ಬಂದಾಗ, ಯಾರಾದರೂ ನಮ್ಮನ್ನು ಹೃದಯದಿಂದ ನೆನೆಪಿಸಿಕೊಳ್ಳುತ್ತಿದ್ದಾರೆ ಎಂದು ಜನರು ಹೇಳುತ್ತಾರೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಮಗುವೇ ಆಗಿರಲಿ ಅಥವಾ ವಯಸ್ಕರಾಗಿರಲಿ ಎಲ್ಲರಿಗೂ ಬಿಕ್ಕಳಿಕೆ ಬರುತ್ತೆ. ವಯಸ್ಕರಲ್ಲಿ, ಬಿಕ್ಕಳಿಕೆ ಸಾಮಾನ್ಯವಾಗಿ ಕೆಲವು ಸಮಯದಲ್ಲಿ ತಾನಾಗಿಯೇ ನಿಲ್ಲುತ್ತೆ. ಆದರೆ ಚಿಕ್ಕ ಮಕ್ಕಳ ಬಿಕ್ಕಳಿಕೆಗೆ ಏನು ಮಾಡಬೇಕೆಂದು ಪೋಷಕರಿಗೆ ಅರ್ಥವಾಗೋದಿಲ್ಲ.
 

ಹೆಚ್ಚಿನ ಮಕ್ಕಳು ಬಿಕ್ಕಳಿಕೆ ಸಮಸ್ಯೆಯಿಂದ ತಲೆಕೆಡಿಸಿಕೊಳ್ಳೋದಿಲ್ಲ, ಆದರೆ ಪೋಷಕರು ಅದರ ಬಗ್ಗೆ ಚಿಂತೆ ಪಡುತ್ತಾರೆ. ಮಕ್ಕಳಲ್ಲಿ ಬಿಕ್ಕಳಿಕೆಗೆ ಯಾವುದೇ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೂ ಕೆಲವು ಪರಿಸ್ಥಿತಿ ಮಕ್ಕಳಲ್ಲಿ ಬಿಕ್ಕಳಿಕೆಗೆ ಕಾರಣವೆಂದು ಹೇಳಲಾಗುತ್ತೆ.  ಮಕ್ಕಳ ದೈನಂದಿನ ದಿನಚರಿ ಅಥವಾ ಆಹಾರ ಪದ್ಧತಿ ಬಿಕ್ಕಳಿಕೆಗೆ ಕಾರಣವಾಗುತ್ತೆ. ಉದಾಹರಣೆಗೆ ಫಾಸ್ಟ್ ತಿನ್ನೋದು(Fast eating) ಅಥವಾ ತಪ್ಪು ರೀತಿ ತಿನ್ನೋದು ಬಿಕ್ಕಳಿಕೆಗೆ ಕಾರಣವಾಗಬಹುದು.
 

ಸಣ್ಣ ಮಕ್ಕಳು ಹುಟ್ಟಿದಾಗಿನಿಂದಲೂ ಬಿಕ್ಕಳಿಕೆ(Hiccup) ಹೊಂದಲು ಪ್ರಾರಂಭಿಸುತ್ತಾರೆ. ಸಂಶೋಧಕರ ಪ್ರಕಾರ, ನವಜಾತ ಶಿಶು ಇಪ್ಪತ್ತ ನಾಲ್ಕು ಗಂಟೆಗಳಲ್ಲಿ ಸುಮಾರು ಎರಡೂವರೆ ಶೇಕಡಾದಷ್ಟು ಸಮಯ ಬಿಕ್ಕಳಿಕೆಯಲ್ಲಿ ಕಳೆಯುತ್ತವೆ. ಮಕ್ಕಳು ಬೆಳೆದಂತೆ, ಬಿಕ್ಕಳಿಕೆಯ ಸಮಸ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತೆ.


ಬಿಕ್ಕಳಿಕೆಗೆ ಕಾರಣವೇನು?
ಮಕ್ಕಳಲ್ಲಿ ಬಿಕ್ಕಳಿಕೆಗೆ ಅನೇಕ ಕಾರಣ ಇರಬಹುದು. ಮಗುವಿಗೆ ಒಂದೇ ಸಮಯದಲ್ಲಿ ಹೆಚ್ಚು ಹಾಲುಣಿಸಿದರೆ(Feeding milk), ಅದರಿಂದಾಗಿ ಅದರ ಹೊಟ್ಟೆಯು ಊದಿಕೊಳ್ಳಲು ಪ್ರಾರಂಭಿಸುತ್ತೆ  ಮತ್ತು ಡಯಾಫ್ರಮ್ ಇದ್ದಕ್ಕಿದ್ದಂತೆ ಊದಿಕೊಳ್ಳಲು ಪ್ರಾರಂಭಿಸುತ್ತೆ. ಈ ಕಾರಣದಿಂದಾಗಿ ಅನೇಕ ಬಾರಿ ಬಿಕ್ಕಳಿಕೆ ಬರುತ್ತೆ.

ಅಲ್ಲದೆ ಅನೇಕ ಮಕ್ಕಳು ತರಾತುರಿಯಲ್ಲಿ ಹಾಲು(Milk) ಕುಡಿಯುತ್ತಾರೆ. ತ್ವರಿತ ಹಾಲುಣಿಸುವಿಕೆಯಿಂದಾಗಿ, ಹಾಲು ಮಗುವಿನ ಫುಡ್ ಪೈಪ್ನಲ್ಲಿ ಸಿಲುಕಿಕೊಳ್ಳುತ್ತೆ. ಇದರಿಂದಾಗಿ ಉಸಿರಾಟದ ಸಮಸ್ಯೆ ಪ್ರಾರಂಭವಾಗುತ್ತೆ ಮತ್ತು ಬಿಕ್ಕಳಿಕೆಯ ಸಮಸ್ಯೆಯೂ ಬರುತ್ತೆ.

ಮಕ್ಕಳ ಬಿಕ್ಕಳಿಕೆ ತಡೆಗಟ್ಟೋದು ಹೇಗೆ?
– ಸಾಮಾನ್ಯವಾಗಿ ವಯಸ್ಕರಂತೆ ಮಕ್ಕಳಲ್ಲಿ, ಬಿಕ್ಕಳಿಕೆ ಕೆಲವು ಸಮಯದಲ್ಲಿ ತಾನಾಗಿಯೇ ನಿಲ್ಲುತ್ತೆ, ಆದ್ದರಿಂದ ಬಿಕ್ಕಳಿಕೆ ಬಂದಾಗ ಕೆಲವು ನಿಮಿಷ ವೇಟ್ ಮಾಡಿ. ಸಣ್ಣ ಮಕ್ಕಳಿಗೆ ಒಂದೇ ಬಾರಿಗೆ ಹೆಚ್ಚು ಆಹಾರ ನೀಡಬೇಡಿ ಮತ್ತು ಕಡಿಮೆ ಸಮಯದಲ್ಲಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಆಹಾರ(Food) ನೀಡಿ.


– ಮಗುವಿನ ಬಿಕ್ಕಳಿಕೆ ನಿಲ್ಲದಿದ್ದರೆ, ಆವಾಗ ಏನು ಮಾಡೋದು ಎಂದು ಯೋಚನೆ ಮಾಡಬೇಡಿ. ಚಿಂತೆ ಬಿಟ್ಟು ಅವರ ಬಾಯಿಗೆ ಕೆಲವು ಸಕ್ಕರೆ(Sugar) ಕಾಳು ಹಾಕಿ. ಇದು ಬಿಕ್ಕಳಿಕೆಯನ್ನು ಬೇಗನೆ ತಡೆಯುತ್ತೆ. ಟ್ರೈ ಮಾಡಿ ನೋಡಿ. 

- ಬಿಕ್ಕಳಿಕೆಗಳ ಸಂದರ್ಭದಲ್ಲಿ, ಮಗುವಿನೊಂದಿಗೆ ಸ್ವಲ್ಪ ಸಮಯದವರೆಗೆ ಕುಳಿತುಕೊಳ್ಳಿ. ಮಗು ಹಾಲು ಕುಡಿಯುವಾಗ ಸ್ವಲ್ಪ ಪ್ರಮಾಣದ ಗಾಳಿ ಸಹ ನುಂಗುತ್ತವೆ. ನೇರವಾಗಿ ಕುಳಿತುಕೊಳ್ಳುವ ಮೂಲಕ, ಮಗು ಸೇವಿಸಿದ ಗಾಳಿ(Air) ತೆಗೆದುಹಾಕಲು ಸಾಧ್ಯವಾಗುತ್ತೆ ಮತ್ತು ಬಿಕ್ಕಳಿಕೆಯಿಂದ ಪರಿಹಾರ ಪಡೆಯುತ್ತೆ.

click me!