ಬ್ರಾ ಜಾಕೆಟ್‌ಗಿಂತ ವಿಚಿತ್ರ ಬಟ್ಟೆ ಬೇಕಾ; ಲಾಸ್ಯ ಉಡುಪಿನ ಬಗ್ಗೆ ಹಾಸ್ಯ ಮಾಡಿದ ನೆಟ್ಟಿಗರು!

First Published Dec 13, 2023, 10:51 AM IST

ಬಾಲಿವುಡ್ ಸೆಲೆಬ್ರಿಟಿಗಳ ರೀತಿ ರೆಡಿಯಾಗಿರುವ ಲಾಸ್ಯ ನಾಗ್ ನೋಡಿ ನೆಟ್ಟಿಗರು ಶಾಕ್. ಇದು ಟಿವಿ ಕಾರ್ಯಕ್ರಮ ಅಲ್ವೇ ಅಲ್ಲ....

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ ಜನಪ್ರಿಯ ನಟಿ ಲಾಸ್ಯ ನಾಗರಾಜ್ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ.

ಸುಮಾರು 1 ಲಕ್ಷ 87 ಸಾವಿರ ಫಾಲೋವರ್ಸ್ ಹೊಂದಿರುವ ಲಾಸ್ಯ ನಾಗರಾಜ್ ಬರೋಬ್ಬರಿ 1,695 ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ನಟಿ, ಡ್ಯಾನ್ಸರ್, ನ್ಯೂಟ್ರಿಶನಿಷ್ಟ್ ಮತ್ತು ಕೋರಿಯೋಗ್ರಾಫರ್ ಆಗಿ ಲಾಸ್ಯ ಕೆಲಸ ಮಾಡುತ್ತಿದ್ದಾರೆ. ಸೊಂಬೇರಿ ಫಿಲ್ಮ್ಸ್‌ನಲ್ಲಿ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ.

ಇಷ್ಟೆಲ್ಲಾ ಬ್ಯುಸಿಯಾಗಿರುವ ಲಾಸ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋನಲ್ಲಿ ಜಗಪ್ಪ ಪಾರ್ಟನರ್ ಅಗಿದ್ದರು.

ಈ ಜೋಡಿ ಸಖತ್ ಟಫ್ ಫೈಟ್ ಕೊಟ್ಟಿದ್ದಲ್ಲದೆ ವಿನ್ನರ್ ಟ್ರೋಫಿ ಕೂಡ ಪಡೆದರು. ಈ ಕಾರ್ಯಕ್ರಮದಲ್ಲಿ ಲಾಸ್ಯ ಒಂದು ರೀತಿ ಹೈಲೈಟ್, ಕಾರಣ ಉಡುಪು.

ಇನ್ನಿತ್ತರ ಸ್ಪರ್ಧಿಗಳಿಗಿಂತ ಲಾಸ್ಯ ಸಖತ್ ಡಿಫೆರೆಂಟ್ ಆಗಿ ರೆಡಿಯಾಗುತ್ತಿದ್ದರು. ಅದರಲೂ ಇತ್ತೀಚಿಗೆ ಅವರ ಲೇಸ್ ಬ್ರಾ, ಫ್ಲೋರಲ್ ಜಾಕೆಟ್ ಮತ್ತು ಗ್ರೀನ್ ಪ್ಯಾಂಟ್ ಲುಕ್ ಸಖತ್ ವೈರಲ್ ಆಗಿತ್ತು.

ಲಾಸ್ಯ ನೋಡಿ ಹಾಸ್ಯ ಮಾಡುವ ಜನರೂ ಇದ್ದಾರೆ...ಇನ್ನು ಕೆಲವರು ನೀವು ಸ್ಯಾಂಡಲ್‌ವುಡ್‌ನಲ್ಲಿ ಬಾಲಿವುಡ್ ನಟಿ ರೀತಿ ಮಿಂಚುತ್ತಿದ್ದೀರಿ ಎಂದು ಹೊಗಳುತ್ತಿದ್ದಾರೆ. 

click me!