ಬೋಲ್ಡ್ ಲುಕ್ ನಲ್ಲಿ ಗಾನವಿ ಲಕ್ಷ್ಮಣ್ ಫೋಟೋ ಶೂಟ್ : ಏನ್ ಪುಷ್ಪ ನಿನ್ನ ಅವತಾರ ಎಂದ ನೆಟ್ಟಿಗರು

First Published Apr 4, 2023, 5:57 PM IST

ಮಗಳು ಜಾನಕಿ ಬಳಿಕ ಹಲವಾರು ಚಿತ್ರಗಳಲ್ಲಿ ನಟಿಸಿದ್ರೂ ಸಹ ಇಂದಿಗೂ ಮಗಳು ಜಾನಕಿಯಾಗಿ ಪ್ರೇಕ್ಷಕರಿಗೆ ಹತ್ರ ಆಗಿರೋ ನಟಿ ಗಾನವಿ ಲಕ್ಷ್ಮಣ್ , ಇದೀಗ ತಮ್ಮ ಬೋಲ್ಡ್ ಫೋಟೋ ಶೂಟ್ ಮೂಲಕ ಜನ ಹುಬ್ಬೇರುವಂತೆ ಮಾಡಿದ್ದಾರೆ. 
 

ಕಿರುತೆರೆಯಲ್ಲಿ `ಮಗಳು ಜಾನಕಿ’ (Magalu Janaki) ಸೀರಿಯಲ್ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಮಲೆನಾಡಿನ ಸುಂದರಿ ಗಾನವಿ ಲಕ್ಷ್ಮಣ್, ಮೊದಲ ಸೀರಿಯಲ್ ನಲ್ಲೇ ತನ್ನ ಪ್ರಬುದ್ಧ ಅಭಿನಯದ ಮೂಲಕ ಜನಮನ ಗೆದ್ದಿದ್ದರು. ಆದಾದ ಬಳಿಕ ಅವರು ಹಲವು ಸಿನಿಮಾಗಳಲ್ಲೂ ನಟಿಸಿದ್ದರೂ, ಮಗಳು ಜಾನಕಿಯಾಗಿ ಜನಕ್ಕೆ ತುಂಬಾನೆ ಹತ್ರ ಆಗಿದ್ರು. 
 

ಸೀರಿಯಲ್ ಬಳಿಕ ರಿಷಬ್ ಶೆಟ್ಟಿ (Rishab Shetty) ನಟನೆಯ `ಹೀರೋ’, ಮತ್ತು ಭಾವಚಿತ್ರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ನಂತರ ಅವರು ನೇರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾದಲ್ಲೇ, ಶಿವಣ್ಣನಿಗೆ ನಾಯಕಿಯಾಗುವ ಚಾನ್ಸ್ ಗಿಟ್ಟಿಸಿಕೊಂಡ್ರು.

`ವೇದ’ ಚಿತ್ರದಲ್ಲಿ ಗಾನವಿ ಅಭಿನಯ ನೋಡಿ ಅಭಿಮಾನಿಗಳಂತೂ ವಾವ್ ಅಂದಿದ್ದಂತೂ ನಿಜ. ಆದ್ರೆ ಯಾವಾಗ್ಲೂ ಸೀರೆಯಲ್ಲೇ ಹೆಚ್ಚಾಗಿ ಕಾಣಿಸ್ತಿದ್ದ, ನಟಿ ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ (bold photos) ಆಗಿರುವ ಫೋಟೋಗಳನ್ನೇ ಹರಿಯ ಬಿಟ್ಟಿದ್ದಾರೆ. 

ಕೆಂಪು ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ನಟಿಯ ಮಾದಕ ನೋಟ (smokey eyes), ಬೋಲ್ಡ್ ಅವತಾರ  ನೋಡಿ ಜನರೇ ಈ ಸೆಕೆ ಇನ್ನಷ್ಟು ಬಿಸಿ ಏರಿತು ಅಂದಿದ್ರು. ಇದೀಗ ಮತ್ತೆ ವೈಟ್ ಟೀ ಶರ್ಟ್ ಲುಕ್‌ನಲ್ಲಿ ಬೋಲ್ಡ್ ಫೋಟೋ ಹರಿಯಬಿಟ್ಟಿದ್ದು, ಅಭಿಮಾನಿಗಳು ತರಹೇವಾರಿ ಕಾಮೆಂಟ್ಸ್ ಮಾಡ್ತಿದ್ದಾರೆ. 

ಕೆಲವರು ಫೋಟೋ ನೋಡುತ್ತಾ ಏನ್ ಪುಷ್ಪ ಇದು ನಿನ್ನ ಅವತಾರ ನಮ್ಮ ವೇದ ಅಣ್ಣನಿಗೆ ಹೇಳ್ಳ ಎಂದು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ನೆರಳು ಬೆಳಕಿನ ಆಟದಲ್ಲಿ ನಮ್ಮ ಈ ಅಪ್ಸರೆಯ ಅಂದ ಇಮ್ಮಡಿಸಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪುಷ್ಪ ಪುಷ್ಪ ಹೆವಿ ಆಗಿದೆ ಪುಷ್ಪ ಎಂದಿದ್ದಾರೆ.

ಇನ್ನೂ ಕೆಲವರಂತೂ ಅವರ ಹಾಟ್‌ನೆಸ್‌ಗೆ ಸೋತು ಹೋದಂತೆ ಕಾಣುತ್ತೆ. ನಿಮ್ಮ ಈ ಮಾದಕ ನೋಟಕ್ಕೆ ನಾನು ಹಿಪ್ನೋಟೈಸ್ (hypnotise)  ಆಗ್ಬಿಟ್ಟೆ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ತುಂಬಾನೆ ಹಾಟ್ ಆಗಿ ಕಾಣ್ತೀರಾ… ನಿಮ್ಮ ಸ್ಮೋಕಿ ಕಣ್ಣುಗಳಿಂದ ಕೊಂದೇ ಬಿಡೋ ತರ ಇದೆ ಎಂದಿದ್ದಾರೆ. 

ಇನ್ನು ಗಾನವಿ ಅವರ ಫೋಟೋಗಳಿಗೆ ನೆಗೆಟಿವ್ ಕಮೆಂಟ್ (negative comment) ಕೂಡ ಬಂದಿದ್ದು, ಸೀರೆ ಬಿಟ್ಟು ಇದಕ್ಕೆ ಬಂದ್ರಾ ಅಂತ ಕೇಳಿದ್ರೆ, ಕೆಲವರು ಮಗಳು ಜಾನಕಿ ಬಳಿಕ ಸ್ವಲ್ಪ ಫೇಮಸ್ ಆದ್ರೂ, ಅದಕ್ಕೆ ಈ ಬದಲಾವಣೆ ಎಂದು ಸಹ ಹೇಳಿದ್ದಾರೆ. 

ಅದೇನೆ ಇರಲಿ, ಇವರ ಗಾನವಿ (Ganavi Laxman) ಕರಿಯರ್ ವಿಷ್ಯಕ್ಕೆ ಬರೋದಾದ್ರೆ `ವೇದ’ ಚಿತ್ರದ ನಂತರ ಗಾನವಿ ಲಕ್ಷ್ಮಣ್ ತೆಲುಗಿನ `ರುದ್ರಂಗಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗು ಸಿನಿಮಾದಲ್ಲಿ ಕೂಡ ಗಾನವಿ ಕಾಣಿಸಿಕೊಳ್ತಿದ್ದಾರೆ.

click me!