
ಭಾಗ್ಯಲಕ್ಷ್ಮಿ ಸೀರಿಯಲ್ನ ಕುಸುಮಾ ಈಗ ಧರ್ಮಸಂಕಟದಲ್ಲಿದ್ದಾಳೆ. ಮಗ ತಾಂಡವ್ನ ವಿಚಿತ್ರ ನಡವಳಿಕೆ ಆಕೆಗೆ ಆತಂಕ ಮೂಡಿಸಿದೆ. ಆದರೆ ಮಗ ಶ್ರೇಷ್ಠಾಳ ಜೊತೆ ಸಂಬಂಧದಲ್ಲಿ ಇರುವುದು ಅವಳಿಗೆ ತಿಳಿಯದ ವಿಷಯ. ಆದರೆ ಸೊಸೆಯನ್ನು ಪತ್ನಿ ಎಂದು ಒಪ್ಪಿಕೊಳ್ಳದೇ 16 ವರ್ಷಗಳ ದಾಂಪತ್ಯ ಜೀವನವನ್ನು ಹಾಳು ಮಾಡಲು ತೊಡಗಿರುವ ಮಗನ ಬಗ್ಗೆ ಆಕೆಗೆ ಆಕ್ರೋಶವಿದೆ. ಹೇಗಾದರೂ ಮಾಡಿ ಮಗನ ದಾಂಪತ್ಯ ಜೀವನವನ್ನು ಸರಿ ಮಾಡುವುದು ಅವಳಿಗೆ ಇರುವ ಏಕೈಕ ಗುರಿ.
ಅದೇ ಇನ್ನೊಂದೆಡೆ, ಹಲವಾರು ಅಡೆತಡೆಗಳನ್ನು ಎದುರಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾಳೆ ಸೊಸೆ ಭಾಗ್ಯ. ಆದರೆ ನಂತರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಹೋಟೆಲ್ಗಳಿಗೆ ಎಡೆತಾಕುತ್ತಾಳೆ ಭಾಗ್ಯ. ಆದರೆ ಹೋದಲ್ಲೆಲ್ಲಾ ಆಕೆಗೆ ಅಪಮಾನ ಆಗುತ್ತದೆ. ಕೊನೆಗೂ ಯಶಸ್ವಿಯಾಗಿ ಸ್ಟಾರ್ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಈಕೆ.
ಸೀರಿಯಲ್ ವೀಕ್ಷಕರಿಂದ ಸಮಸ್ಯೆಯೊಂದಕ್ಕೆ ಉತ್ತರ ಬಯಸಿದ್ದಾಳೆ ಭಾಗ್ಯ: ನೀವು ಸಹಾಯ ಮಾಡ್ತೀರಾ?
ಆದರೆ ಸೊಸೆ ಕೆಲಸಕ್ಕೆ ಹೋಗುತ್ತಿರುವ ವಿಷಯ ಕುಸುಮಾಳಿಗೆ ಗೊತ್ತಿಲ್ಲ. ಸೊಸೆಗೆ ತೊಂದರೆ ಕೊಡಬಾರದು ಎನ್ನುವ ಕಾರಣಕ್ಕೆ ಕುಸುಮಾ ಗಂಡನಿಗೂ ಸುಳ್ಳು ಹೇಳಿ ಗುಟ್ಟಾಗಿ ಇನ್ನೊಂದು ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಆದರೆ ದಿನವೂ ಅವಳಿಗೆ ಗಂಡನ ಎದುರು ಸುಳ್ಳು ಹೇಳಿ ಹೋಗುವುದು ಕಷ್ಟವಾಗುತ್ತಿದೆ. ಅದರಿಂದ ಪಾರಾಗುವ ಯೋಚನೆಯನ್ನು ಮಾಡುತ್ತಿದ್ದಾಳೆ. ಇದರ ನಡುವೆಯೇ ನೇರಪ್ರಸಾರದಲ್ಲಿ ಕಾಣಿಸಿಕೊಂಡಿರುವ ಕುಸುಮಾ, ತನ್ನ ಮಗನ ವಿಚಿತ್ರ ನಡವಳಿಕೆಯಿಂದ ಬೇಸತ್ತಿದ್ದೇನೆ. ಅವನನ್ನು ಹೇಗೆ ಸರಿದಾರಿಗೆ ತರಬಹುದು ಎನ್ನುವ ಬಗ್ಗೆ ತಿಳಿಸಿ ಎಂದು ಕೋರಿಕೊಂಡಿದ್ದಾಳೆ. ನನಗೂ ಮಗನ ಮೇಲೆ ಬಹಳ ಪ್ರೀತಿ. ತಾಯಿ ಅಲ್ವಾ? ಮಗ ಎಂದರೆ ಪ್ರೀತಿ ಜಾಸ್ತಿ. ಅದರೆ ಈ ಥರ ಆಡ್ತಾ ಇದ್ದಾನೆ. ನನ್ನ ಬುದ್ಧಿ ಉಪಯೋಗಿಸಿ ಏನು ಮಾಡಬೇಕೋ ಎಲ್ಲಾ ಮಾಡಿದೆ. ಆದ್ರೂ ಹಿಡಿತಕ್ಕೆ ಸಿಕ್ತಾ ಇಲ್ಲ. ಹೇಗೆ ಲೈನ್ಗೆ ತರೋದು ಗೊತ್ತಾಗ್ತಾ ಇಲ್ಲ. ಸೊಸೆ ಕಂಡ್ರೆ ಖಾರ ತಿಂದೋರ ಥರ ಮಾಡ್ತಾನೆ. ಏನು ಮಾಡುವುದು ಎಂದು ಕೇಳಿದ್ದಾಳೆ.
ಗಂಡ- ಹೆಂಡತಿಯನ್ನು ಒಟ್ಟು ಮಾಡಬೇಕಿದೆ. ಬೇರೆ ದಾರಿ ತೋಚದೆ ಮನೆಯಲ್ಲಿ ಸುಳ್ಳು ಹೇಳಿ ಕೆಲಸಕ್ಕೆ ಸೇರಿದ್ದೇನೆ. ಮನೆ ಕಂತು ಕಟ್ಟಬೇಕಿದೆ. ಆದರೆ ಮಗ ತಾಮಡವ್ ತಾಂಡವ್ ಹೆಂಗೆ ಆಡ್ತಾನೆ ನೋಡಿ ಎಂದಿರುವ ಕುಸುಮಾ, ಅವನನ್ನು ಸರಿ ಮಾಡಲು ಸಜೆಷನ್ ಕೇಳಿದ್ದಾಳೆ. ಇದೇ ವೇಳೆ, ನನ್ನ ಸೊಸೆ ಭಾಗ್ಯ ಒಳ್ಳೆಯದು. ಆದ್ರೆ ಸ್ವಲ್ಪ ಪೆದ್ದು. ನನ್ನಷ್ಟು ಚುರುಕು ಇಲ್ಲ. ಟ್ರೇನಿಂಗ್ ಕೊಡ್ತಾ ಇದ್ದೇನೆ. ಮನಸ್ಸು ಒಳ್ಳೆಯದು. ಶ್ರೇಷ್ಠಾ ಹತ್ರ ಬೇರೆ ಹೇಳದೇ ಕೇಳದೇ ಸಾಲ ಮಾಡಿದ್ದಾಳೆ ಏನು ಮಾಡಬೇಕು ಅಂತನೇ ಅರ್ಥವಾಗ್ತಿಲ್ಲ ಎಂದಿದ್ದಾಳೆ.
ಶಾರುಖ್ ಖಾನ್ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್ ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.