
ನವದೆಹಲಿ (ಮೇ.17): ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್‌ನಿಂದ ಹಲ್ಲೆಗೊಳಗಾದ ಆಪ್ ಸಂಸದೆ ಸ್ವಾತಿ ಮಲಿವಾಲ್ ದಾಖಲಿಸಿದ್ದ ದೂರಿನ ಎಲ್ಲ ವಿವರ ಬಹಿರಂಗವಾಗಿದೆ. ಇದೇ ವೇಳೆ ಶುಕ್ರವಾರ ದಿಲ್ಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ಹಾಜರಾದ ಅವರು ನ್ಯಾಯಾಲಯದ ಮುಂದೆ ಸಮಸ್ತ ಘಟನಾವಳಿಯ ಹೇಳಿಕೆ ನೀಡಿದ್ದಾರೆ.
ಅದರಲ್ಲಿ ಬಿಭವ್ ಕುಮಾರ್ ಎಷ್ಟು ಹೇಳಿದರೂ ಕೇಳದೆ ತನಗೆ ಮೇಲಿಂದ ಮೇಲೆ ಹಲ್ಲೆ ಮಾಡಿದ. ನಿನ್ನನ್ನು ಸಮಾಧಿ ಮಾಡುವೆ ಎಂದು ಬೆದರಿಸಿದ. ಹೀಗಾಗಿ ತಾನೂ ಆತ್ಮರಕ್ಷಣೆಗಾಗಿ ಆತನ ತಲೆಯನ್ನು ಟೇಬಲ್‌ಗೆ ಅಪ್ಪಳಿಸಿ ಹಲ್ಲೆ ಮಾಡಿದೆ ಹಾಗೂ ಒದ್ದೆ ಎಂದು ಹೇಳಿದ್ದಾರೆ.
Swati Maliwal case: ಮುಖ, ಎದೆ, ಹೊಟ್ಟೆ, ದೇಹದ ಸೂಕ್ಷ್ಮ ಭಾಗಗಳ ಮೇಲೆ ಕೇಜ್ರಿವಾಲ್ ಆಪ್ತನಿಂದ ಹಲ್ಲೆ
ಎಫ್‌ಐಆರ್‌ನಲ್ಲೇನಿದೆ?
ಸೋಮವಾರ ಮುಂಜಾನೆ ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ಹೋದೆ ಅಲ್ಲಿನ ಭದ್ರತಾ ಸಿಬ್ಬಂದಿ, ಸಿಎಂ ಬರುವವರೆಗೆ ಒಂದು ರೂಂನಲ್ಲಿ ಕಾಯುವಂತೆ ಹೇಳಿದರು.
ಕೆಲ ಕ್ಷಣಗಳ ಬಳಿಕ ಬಿಭವ್ ಕುಮಾರ್ ಸ್ವಾತಿಯಿದ್ದ ರೂಂಗೆ ಬಂದು ಸಕಾರಣವಿಲ್ಲದೆ ನನ್ನ ಮೇಲೆ ನಿಂದನೆ ಹಾಗೂ ಬೈಗುಳವನ್ನು ಪ್ರಾರಂಭಿಸಿದರು. ತನಾನು ನಿಂದನೆಯನ್ನು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಭಿಭವ್ ನನ್ನ ಕೆನ್ನೆಗೆ 7-8 ಬಾರಿ ಬಾರಿಸಿದ. ಇದರಿಂದ ಆಕ್ರೋಶಗೊಂಡ ನಾನು ಕಾಪಾಡುವಂತೆ ಕಿರುಚಿದರೂ ಯಾರೂ ನೆರವಿಗೆ ಧಾವಿಸಲಿಲ್ಲ.
ಬಳಿಕ ಆತ್ಮರಕ್ಷಣೆಯ ಸಲುವಾಗಿ ಭಿಭವ್‌ಗೆ ಕಾಲಿನಿಂದ ಒದ್ದೆ.ತಲೆಯನ್ನು ಟೇಬಲ್ ಮೇಲೆ ಅಪ್ಪಳಿಸಿದೆ. ಇದರಿಂದ ಮತ್ತಷ್ಟು ಆಕ್ರೋಶಭರಿತನಾದ ಬಿಭವ್ ನೆಲದ ಮೇಲೆ ಬಿದ್ದಿದ್ದ ನನ್ನನ್ನು ತುಳಿದು, ಎಳೆದಾಡಿದ. ಶರ್ಟನ್ನು ಎಳೆದ ರಭಸಕ್ಕೆ ನನ್ನ ಶರ್ಟ್ ಗುಂಡಿಗಳು ಹರಿದು ಹೋದವು. ಬಳಿಕ ಆತ ನನ್ನ ಎದೆ, ಹೊಟ್ಟೆ, ಜಠರ ಮುಂತಾದ ಅಂಗಗಳಿಗೆ ಒದ್ದು ಹಲ್ಲೆ ಮಾಡಿದ. ಕೊನೆಗೆ ನಾನು ಋತುಚಕ್ರದಲ್ಲಿದ್ದೇನೆ ಎಂದೆ. ಆದರೂ ಬಿಭವ್ ತನ್ನ ಹಲ್ಲೆಯನ್ನು ಮುಂದುವರಿಸಿದ.
ಪ್ರಜ್ವಲ್ ರೇಪ್ ಬಗ್ಗೆ ಕಿಡಿಕಾರಿದ್ದ ಆಪ್, ಸ್ವಾತಿ ವಿಷಯದಲ್ಲಿ ಮೌನ!
ಕೊನೆಗೆ ಸಾವರಿಸಿಕೊಂಡು ಎದ್ದು ಪೊಲೀಸ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಷಯ ತಿಳಿಸಿದೆ. ಆಗ ಬಿಭವ್ ದರ್ಪದಿಂದ ‘ಏನು ಬೇಕಾದರೂ ಮಾಡಿಕೋ. ನಿನ್ನ ಮೂಳೆಯನ್ನು ಮುರಿದು ನಿನ್ನನ್ನು ಸಮಾಧಿ ಮಾಡುತ್ತೇವೆ’ ಎಂದು ಗದರಿಸಿದ. ಪೊಲೀಸರು ಬರುವವರೆಗೆ ಇರುತ್ತೇನೆ ಎಂದರೂ ಕೇಳದೆ ಮನೆಯಿಂದ ಹೊರದಬ್ಬಿಸಿದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ