ರಶ್ಮಿಕಾ ಅಟಲ್‌ ಸೇತು ಜಾಹೀರಾತಿಗೆ ಕಾಂಗ್ರೆಸ್‌ ಕಿಡಿ

By Kannadaprabha News  |  First Published May 18, 2024, 6:21 AM IST

ನಟಿ ರಶ್ಮಿಕಾ ಮಂದಣ್ಣ ಅವರು ನರೇಂದ್ರ ಮೋದಿ ಅವಧಿಯಲ್ಲಿ ನಿರ್ಮಿತ ಆಗಿರುವ ಅಟಲ್ ಸೇತುವನ್ನು ವಿಡಿಯೋದಲ್ಲಿ ಹೊಗಳಿರುವುದಕ್ಕೆ ಕೇರಳ ಕಾಂಗ್ರೆಸ್‌ ಘಟಕ ಕಿಡಿಕಾರಿದೆ. ‘ಇದು ಇ.ಡಿ. ನಿರ್ದೇಶನದ ಬಾಡಿಗೆ ಜಾಹೀರಾತು’ ಎಂದು ಕಿಡಿಕಾರಿದೆ. ರಶ್ಮಿಕಾ ಈ ಹಿಂದೆ ತೆರಿಗೆ ಇಲಾಖೆ ನೋಟಿಸ್‌ ಬಂದಿತ್ತು ಎನ್ನಲಾಗಿತ್ತು. ಹೀಗಾಗಿ ಕಾಂಗ್ರೆಸ್‌ ಈ ಆರೋಪ ಮಾಡಿದೆ.


ನವದೆಹಲಿ (ಮೇ.18): ನಟಿ ರಶ್ಮಿಕಾ ಮಂದಣ್ಣ ಅವರು ನರೇಂದ್ರ ಮೋದಿ ಅವಧಿಯಲ್ಲಿ ನಿರ್ಮಿತ ಆಗಿರುವ ಅಟಲ್ ಸೇತುವನ್ನು ವಿಡಿಯೋದಲ್ಲಿ ಹೊಗಳಿರುವುದಕ್ಕೆ ಕೇರಳ ಕಾಂಗ್ರೆಸ್‌ ಘಟಕ ಕಿಡಿಕಾರಿದೆ. ‘ಇದು ಇ.ಡಿ. ನಿರ್ದೇಶನದ ಬಾಡಿಗೆ ಜಾಹೀರಾತು’ ಎಂದು ಕಿಡಿಕಾರಿದೆ. ರಶ್ಮಿಕಾ ಈ ಹಿಂದೆ ತೆರಿಗೆ ಇಲಾಖೆ ನೋಟಿಸ್‌ ಬಂದಿತ್ತು ಎನ್ನಲಾಗಿತ್ತು. ಹೀಗಾಗಿ ಕಾಂಗ್ರೆಸ್‌ ಈ ಆರೋಪ ಮಾಡಿದೆ.

ಇದೇ ವೇಳೆ, ‘ರಶ್ಮಿಕಾ ತೋರಿಸಿದ ಅಟಲ್‌ ಸೇತು ಖಾಲಿ ಆಗಿದೆ ಎಂಬುದನ್ನು ಗಮನಿಸಿದ್ದೇವೆ. ಹೀಗಾಗಿ ಕಾಂಗ್ರೆಸ್‌ ಕಾಲದಲ್ಲಿ 2009ರಲ್ಲಿ ಉದ್ಘಾಟನೆಯಾದ ಮುಂಬೈನ ರಾಜೀವ್ ಗಾಂಧಿ ಬಾಂದ್ರಾ-ವರ್ಲಿ ಸೀ ಲಿಂಕ್ ಸೇತುವೆಯನ್ನು ನಾವು ಪರಿಶೀಲಿಸಿದೆವು. ₹ 1,634 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 5.6 ಕಿ.ಮೀ ಬಾಂದ್ರಾ-ವರ್ಲಿ ಸೀ ಲಿಂಕ್ ಯಾವುದೇ ಪ್ರಾಯೋಜಿತ ಜಾಹೀರಾತಿಲ್ಲದೆ ಜನಪ್ರಿಯತೆ ಗಳಿಸಿತು. ಇಲ್ಲಿ ಪ್ರತಿ ಕಾರಿಗೆ ₹85 ಶುಲ್ಕ ವಿಧಿಸಲಾಗುತ್ತದೆ. ಇದರ ಆದಾಯವು ಮಾರ್ಚ್ 2022 ರಲ್ಲಿ ₹9.95 ಕೋಟಿಗಳಷ್ಟಿತ್ತು’ ಎಂದಿದೆ.

Tap to resize

Latest Videos

ಅಟಲ್ ಸೇತುಗೆ ನಟಿ ರಶ್ಮಿಕಾ ಮೆಚ್ಚುಗೆಗೆ ಮೋದಿ ಕೃತಜ್ಞತೆ: ನ್ಯಾಷನಲ್ ಕ್ರಶ್ ಈಗ ನ್ಯಾಷನಲಿಸ್ಟ್‌ ಎಂದು ಕಾಮೆಂಟ್

‘ಆದರೆ ಅಟಲ್‌ ಸೇತು ₹17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಒಂದೇ ಟ್ರಿಪ್‌ಗೆ ಪ್ರತಿ ಕಾರಿಗೆ ₹250 ಟೋಲ್ ದರವನ್ನು ನಿಗದಿಪಡಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಅಸಹನೀಯವಾಗಿದೆ. ಇದರ ಉದ್ಘಾಟನೆಯ ನಂತರ, 102 ದಿನಗಳಲ್ಲಿ ಒಟ್ಟು ₹22.57 ಕೋಟಿ ಸಂಗ್ರಹಿಸಲಾಗಿದೆ. ಇದು ಕೇವಲ ₹6.6 ಕೋಟಿಯ ಮಾಸಿಕ ಆದಾಯಕ್ಕೆ ಸಮ’ ಎಂದು ಟೀಕಿಸಿದೆ.

ಮೋದಿ ಅಭಿವೃದ್ಧಿ ರಾಜಕೀಯಕ್ಕೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಬಹುಪರಾಕ್‌!

‘ಈ ದರದಲ್ಲಿ, ₹17,840 ಕೋಟಿ ಹೂಡಿಕೆಯನ್ನು ಮರುಪಡೆಯಲು 225 ವರ್ಷಗಳು ಬೇಕಾಗುತ್ತವೆ, ಆದರೆ ಬಡ್ಡಿಗೆ ಲೆಕ್ಕವಿಲ್ಲ. ಬಾಂದ್ರಾ-ವರ್ಲಿ ಸೀ ಲಿಂಕ್‌ಗೆ ಹೋಲಿಸಿದರೆ ಸೇತುವೆಯನ್ನು ಸರಿಸುಮಾರು 20% ವಾಹನಗಳು ಬಳಸುತ್ತಿವೆ ಎಂದು ಇದು ಸೂಚಿಸುತ್ತದೆ. ಉದ್ಘಾಟನೆಗೂ ಮುನ್ನ ಅಂದಾಜು ಮಾಸಿಕ ಆದಾಯ ₹30 ಕೋಟಿ ಬರಬೇಕಿತ್ತು. ಹೀಗಾಗಿ ಪ್ರತಿ ತಿಂಗಳು ₹23.4 ಕೋಟಿ ಕೊರತೆಯಾಗುತ್ತಿದೆ’ ಎಂದಿದೆ.

click me!