ಪ್ರಯಾಣ ಮಾಡಿ, ತಿಂಗಳಿಗೆ 50,000-70,000 ರೂ.ವರೆಗೆ ಸಂಪಾದಿಸಿ

Published : May 23, 2025, 06:06 PM IST

ಪ್ರಯಾಣಿಸುವ ಮೂಲಕ ಹಣ ಗಳಿಸಿ: ಮಲೆನಾಡಲ್ಲಿ ತಿರುಗಾಡ್ತಾ, ಬೀಚಲ್ಲಿ ಚಿಲ್ ಮಾಡ್ತಾ, ಜೇಬಲ್ಲಿ ಹಣ ಬರ್ತಿದ್ರೆ ಹೇಗಿರುತ್ತೆ ಅಂತ ಯೋಚಿಸಿ! ಇವಾಗ್ ಬಹಳಷ್ಟು ಜನ ಹೀಗೆ ಮಾಡ್ತಿದ್ದಾರೆ. ಪ್ರಯಾಣ ಮಾಡಿ ಹಣ ಗಳಿಸೋದು ಈಗ ಹೊಸ ಟ್ರೆಂಡ್. ತಿರುಗಾಡೋ ಹವ್ಯಾಸ ಇದ್ರೆ ಈ ಐಡಿಯಾ ನಿಮಗಾಗಿ. 

PREV
17
ಪ್ರಯಾಣದಿಂದ ಹಣ ಹೇಗೆ?

ಈಗ ತಿರುಗಾಡೋದಷ್ಟೇ ಅಲ್ಲ, ತಿರುಗಾಡಿ ತೋರಿಸಿ ಹೇಳಿ ಹಣ ಗಳಿಸಬಹುದು. ಸೋಶಿಯಲ್ ಮೀಡಿಯಾದಲ್ಲಿ ಟ್ರಾವೆಲ್ ವ್ಲಾಗ್, ರೀಲ್ಸ್, ಬ್ಲಾಗ್ ಮಾಡಿ ಜನ ತಿಂಗಳಿಗೆ 50,000 ರಿಂದ 70,000 ರೂಪಾಯಿವರೆಗೆ ಸಂಪಾದಿಸ್ತಿದ್ದಾರೆ.

27
ಏನ್ ಮಾಡ್ಬೇಕು?

ಪ್ರತಿ ಟ್ರಿಪ್‌ನ ಮೊಬೈಲ್ ಅಥವಾ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ. ಚೆನ್ನಾಗಿ ಎಡಿಟ್ ಮಾಡಿ Instagram, YouTube ಅಥವಾ Facebook ನಲ್ಲಿ ಹಾಕಿ. ನಿಮ್ಮ ಅನುಭವ ಹಂಚಿಕೊಳ್ಳಿ - ಏನು ಚೆನ್ನಾಗಿತ್ತು, ಬಜೆಟ್ ಫ್ರೆಂಡ್ಲಿ ಆಗಿತ್ತಾ, ಏನು ಟ್ರಿಕ್ಸ್ ಉಪಯೋಗಕ್ಕೆ ಬಂತು? ಜನರಿಗೆ ಮಾಹಿತಿ ಜೊತೆಗೆ ಮನರಂಜನೆ ಕೊಡಿ.

37
ಹಣ ಗಳಿಸೋ ದಾರಿಗಳು ಯಾವುವು?

YouTube ಮೂಲಕ - ವಿಡಿಯೋ ವೀಕ್ಷಣೆಯಿಂದ ಜಾಹೀರಾತಿನ ಹಣ
Instagram ಬ್ರ್ಯಾಂಡ್ ಡೀಲ್ಸ್ - ಪ್ರಯಾಣ ಬ್ರ್ಯಾಂಡ್‌ಗಳಿಂದ ಹಣ ಪಡೆದು ಪ್ರಚಾರ
ಅಫಿಲಿಯೇಟ್ ಮಾರ್ಕೆಟಿಂಗ್ - ಹೋಟೆಲ್, ಫ್ಲೈಟ್ ಲಿಂಕ್ ಹಂಚಿಕೊಂಡು ಕಮಿಷನ್
ಬ್ಲಾಗಿಂಗ್ - ಗೂಗಲ್ ಜಾಹೀರಾತಿನಿಂದ ಆದಾಯ
ಟ್ರಾವೆಲ್ ಕನ್ಸಲ್ಟೆನ್ಸಿ - ಇತರರ ಪ್ರವಾಸ ಯೋಜನೆ ಮಾಡಿ ಶುಲ್ಕ ಪಡೆಯುವುದು

47
ಯಾವ ಕೌಶಲ್ಯ ಬೇಕು?

ಮಾತನಾಡುವ ಮತ್ತು ವಿವರಿಸುವ ಉತ್ತಮ ಕೌಶಲ್ಯ
ಮೂಲ ವಿಡಿಯೋ ಅಥವಾ ಫೋಟೋ ಎಡಿಟಿಂಗ್
ಸ್ವಲ್ಪ ಸೃಜನಶೀಲ ಚಿಂತನೆ
ದಿನಾ ಸ್ವಲ್ಪ ಸಮಯ ಮತ್ತು ತಾಳ್ಮೆ
ಇಂಗ್ಲಿಷ್ ಬರದಿದ್ದರೆ ಪರವಾಗಿಲ್ಲ, ಹಿಂದಿ ವ್ಲಾಗರ್‌ಗಳಿಗೂ ದೊಡ್ಡ ಮಾರುಕಟ್ಟೆ ಇದೆ.

57
ಯಾವಾಗ ಹಣ ಬರಲು ಶುರುವಾಗುತ್ತದೆ?

ಪ್ರತಿದಿನ ಒಂದು ಸಣ್ಣ ವಿಡಿಯೋ ಅಥವಾ ರೀಲ್ ಹಾಕಿದರೆ, 2-3 ತಿಂಗಳಲ್ಲಿ ಉತ್ತಮ ಪ್ರತಿಕ್ರಿಯೆ ಬರಬಹುದು. ನಿರಂತರವಾಗಿ ಶ್ರಮಿಸಿದರೆ 6 ತಿಂಗಳಲ್ಲಿ 50,000-70,000 ರೂಪಾಯಿವರೆಗೆ ಸಂಪಾದಿಸಬಹುದು.

67
ಎಲ್ಲಿಂದ ಶುರು ಮಾಡಬೇಕು?

YouTube ಚಾನೆಲ್ ತೆರೆಯಿರಿ
Instagram ಖಾತೆಯಲ್ಲಿ ಟ್ರಾವೆಲ್ ರೀಲ್ಸ್ ಹಾಕಿ
Blogger/WordPress ನಲ್ಲಿ ಉಚಿತ ಬ್ಲಾಗ್ ರಚಿಸಿ
Google ನಿಂದ ಟ್ರಾಫಿಕ್ ತಂದು ಜಾಹೀರಾತು ಹಾಕಿ

77
ಯಾರಾದ್ರೂ ಮಾಡಬಹುದಾ?

ಹೌದು, ತಿರುಗಾಡುವುದು ನಿಮ್ಮ ಹವ್ಯಾಸವಾಗಿದ್ದರೆ, ಇಂದೇ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಬಹುದು. ಇದಕ್ಕೆ ದೊಡ್ಡ ಹೂಡಿಕೆ ಅಗತ್ಯವಿಲ್ಲ, ಆಫೀಸ್ ಕೂಡ ಬೇಡ. ಕೇವಲ ಸ್ಮಾರ್ಟ್‌ಫೋನ್, ಸೃಜನಶೀಲ ಐಡಿಯಾ ಇದ್ದರೆ ನೀವು ಟ್ರಾವೆಲ್‌ಪ್ರಿನರ್ ಆಗಬಹುದು!

Read more Photos on
click me!

Recommended Stories