Expensive Districts: ಕರ್ನಾಟಕದ ದುಬಾರಿ ಜಿಲ್ಲೆಗಳಿವು… ಇಲ್ಲಿ ಜೀವನ ಮಾಡ್ಬೇಕು ಅಂದ್ರೆ ಜೇಬು ತುಂಬಿರಬೇಕು

Published : May 23, 2025, 05:55 PM IST

ಕರ್ನಾಟಕದ ಯಾವ ಜಿಲ್ಲೆಗಳು ತುಂಬಾನೆ ದುಬಾರಿಯಾಗಿವೆ. ಅಲ್ಲಿ ಜೀವನ ಮಾಡಬೇಕು ಅಂದ್ರೆ ಜೇಬಲ್ಲಿ ಹಣ ತುಂಬಾ ಇದೆಯೇ ಎಂದು ನೋಡಬೇಕು. ಆ ಜಿಲ್ಲೆಗಳು ಯಾವುವು ನೋಡೋಣ. 

PREV
16
ದುಬಾರಿಯಾಗಿರುವ ಕರ್ನಾಟಕ ಟಾಪ್ 5 ಜಿಲ್ಲೆಗಳು

ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಎಲ್ಲವೂ ದುಬಾರಿಯಾಗಿದೆ. ತಿನ್ನೋ ತಿಂಡಿಯಿಂದ ಹಿಡಿದು, ತೊಡುವ ಬಟ್ಟೆಯವರೆಗೂ ಎಲ್ಲವೂ ದುಬಾರಿ. ಈ ದುಬಾರಿ ದುನಿಯಾದಲ್ಲಿ ನಾವು ಜೀವನ ಮಾಡೊದೆ ಕಷ್ಟವಾಗಿದೆ. ದುನಿಯಾನೇ ದುಬಾರಿಯಾಗಿರುವಾಗ ನಮ್ಮ ಜಿಲ್ಲೆಗಳು ದುಬಾರಿಯಾಗದೇ ಇರುತ್ತವೆಯೇ? ಇಲ್ಲಿದೆ ನೋಡಿ ಜೀವನ ಮಾಡೊದಕ್ಕೆ ತುಂಬಾನೆ ದುಬಾರಿಯಾಗಿರುವ (expensive districts)ಕರ್ನಾಟಕ ಟಾಪ್ 5 ಜಿಲ್ಲೆಗಳು.

26
ಬೆಂಗಳೂರು (Bengaluru)

ಮೊದಲನೇದಾಗಿ ಬೆಂಗಳೂರು. ಇಲ್ಲಿ ಜೀವನ ಮಾಡೋದು ಅಂದ್ರೆ, ಸಂಬಳ ಜಾಸ್ತಿ ಇರಲೇಬೇಕು. ಇಲ್ಲಾಂದ್ರೆ ನಾವು ಅಂದುಕೊಂಡಂತೆ ಬದುಕು ನಡೆಸೋದು ಕಷ್ಟ. ಇಲ್ಲಿ ಐಟಿ ಕಂಪನಿಗಳು, ಸ್ಟಾರ್ಟ್ ಅಪ್ ಕಂಪನಿಗಳು ಇರೋದರಿಂದ ಹಾಗೂ ದೇಶದ ಮೂಲೆ ಮೂಲೆಯಿಂದ ಇಲ್ಲಿ ಜನ ಬಂದು ಕೆಲಸ ಮಾಡೋದರಿಂದ ಇಲ್ಲಿನ ಜೀವನ ಕೂಡ ದುಬಾರಿಯಾಗಿದೆ.

36
ಬೆಳಗಾವಿ (Belagavi)

ರಾಜ್ಯದ ಎರಡನೇ ದುಬಾರಿ ಜಿಲ್ಲೆ ಅಂದ್ರೆ ಅದು ಬೆಳಗಾವಿ. ಇಲ್ಲಿ ಕೈಗಾರಿಕೆಗಳು ಅಧಿಕವಾಗಿರೋದರಿಂದ ಹಾಗೂ ಮುಂಬೈಗೆ ಹತ್ತಿರದಲ್ಲಿರೋದರಿಂದ ಜೀವನ ಕೂಡ ದುಬಾರಿಯಾಗಿವೆ. ಬೆಂಗಳೂರಿನಂತೆ ಅಲ್ಲದಿದ್ದರೂ ಕೂಡ, ಇಲ್ಲಿನ ನೆಲೆಸಬೇಕು ಅಂದ್ರೆ, ಸ್ವಲ್ಪ ಹಣ ಇರಲೇಬೇಕು.

46
ಮಂಗಳೂರು (Mangaluru)

ಮೂರನೇಯದಾಗಿ ಮಂಗಳೂರು, ಇದು ಎಜುಕೇಶನ್ ಹಬ್ ಕೂಡ ಹೌದು. ಇಲ್ಲಿ ಕಾಲಿಟ್ಟಲ್ಲೆಲ್ಲಾ ಒಂದೊಂದು ಶಾಲೆ, ಕಾಲೇಜು, ಎಲ್ಲವೂ ಇವೆ. ಹಾಗಾಗಿ ದೂರ ದೂರದಿಂದ, ಬೇರೆ ರಾಜ್ಯದಿಂದ ಜನ, ವಿದ್ಯಾರ್ಥಿಗಳು ಇಲ್ಲಿ ಬಂದು ನೆಲೆಸುತ್ತಾರೆ. ಹಾಗಾಗಿ ಇಲ್ಲಿನ ಊಟ ತಿಂಡಿ, ಮನೆ ಬಾಡಿಗೆ ದುಬಾರಿಯಾಗಿದೆ.

56
ತುಮಕೂರು (Tumakuru)

ನಾಲ್ಕನೇ ಸ್ಥಾನದಲ್ಲಿರೋದು ತುಮಕೂರು. ಈ ಜಿಲ್ಲೆ ಬೆಳೆಯುತ್ತಿರುವ ಇಂಡಷ್ಟ್ರಿಗಳನ್ನು ಹೊಂದಿದೆ. ಇದು ದೇಶದ ಇಂಡಷ್ಟ್ರಿಯಲ್ ಹಬ್ ಕೂಡ ಹೌದು. ಅಷ್ಟೇ ಅಲ್ಲ, ಇಂಡಷ್ಟ್ರಿಯಲ್ ಕಾರಿಡಾರ್, ಜಪಾನೀಸ್ ಟೌನ್ ಶಿಪ್ ಎಲ್ಲವೂ ಇಲ್ಲಿ ಪ್ರಗತಿಯಲ್ಲಿರೋದರಿಂದ ಇಲ್ಲಿನ ಜೀವನ ಕೂಡ ನಿಧಾನವಾಗಿ ದುಬಾರಿಯಾಗುತ್ತಿದೆ.

66
ಶಿವಮೊಗ್ಗ (Shimoga)

ಇನ್ನು ದುಬಾರಿ ಜಿಲ್ಲೆಗಳಲ್ಲಿ ಐದನೇ ಸ್ಥಾನದಲ್ಲಿರೋದು ನಮ್ಮ ಶಿವಮೊಗ್ಗ. ಶಿವಮೊಗ್ಗದಲ್ಲಿ ಎಪಿಎಂಸಿ ಯವರ ಬೃಹತ್ ಅಡಿಕೆ ಮಾರುಕಟ್ಟೆ ಇದೆ. ಅಷ್ಟೇ ಅಲ್ಲ ಇಲ್ಲಿ ಐಟಿ ಪಾರ್ಕ್ ಕೂಡ ಇದೆ. ಹಾಗಾಗಿ ಇಲ್ಲಿ ಕೂಡ ನಿಧಾನವಾಗಿ ಜನ ಜೀವನದ ದುಬಾರಿಯಾಗುತ್ತಾ ಸಾಗುತ್ತಿದೆ.

Read more Photos on
click me!

Recommended Stories