Rivers Flowing to Pakistan: ಸಿಂಧೂ ನದಿ ಅಲ್ಲದೇ, ಈ 5 ನದಿಗಳು ಕೂಡ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತೆ

Published : Apr 25, 2025, 04:05 PM ISTUpdated : Apr 25, 2025, 04:46 PM IST

ಭಾರತದ ಅನೇಕ ನದಿಗಳು ದೇಶದೊಳಗೆ ಮಾತ್ರವಲ್ಲದೆ ನೆರೆಯ ದೇಶಗಳಿಗೂ ಹರಿಯುತ್ತವೆ. ಸಿಂಧೂ ನದಿಯ ಹೊರತಾಗಿ, ಪಾಕಿಸ್ತಾನದ ಗಡಿಯನ್ನು ಪ್ರವೇಶಿಸುವ 5 ಪ್ರಮುಖ ನದಿಗಳು ಅಲ್ಲಿನ ಜೀವನದ ಭಾಗವಾಗಿವೆ.  

PREV
17
Rivers Flowing to Pakistan: ಸಿಂಧೂ ನದಿ ಅಲ್ಲದೇ, ಈ 5 ನದಿಗಳು ಕೂಡ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತೆ

ಪಹಲ್ಗಾಮ್ ಭಯೋತ್ಪಾದಕ (Pahalgam Terrorist Attack) ದಾಳಿಯ ನಂತರ, ಭಾರತವು ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸಿತು ಮತ್ತು ಪಾಕಿಸ್ತಾನದ ಮೇಲೆ ಜಲದಾಳಿಯನ್ನು ಪ್ರಾರಂಭಿಸಿತು. ಈ ವಿಷ್ಯ ನಿಮಗೆ ಗೊತ್ತೇ ಇದೆ. ಆದರೆ, ಸಿಂಧು ನದಿ ಮಾತ್ರಾನ ಭಾರತದಿಂದ ಪಾಕಿಸ್ತಾನಕ್ಕೆ ಹರಿಯೋದು?
 

27

ಖಂಡಿತಾ ಇಲ್ಲ. ಭಾರತದ ಆರು ನದಿಗಳು ಪಾಕಿಸ್ತಾನದಲ್ಲಿ ಹರಿಯುತ್ತಿವೆ. ಸಿಂಧೂ, ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತವೆ.
 

37

ಸಿಂಧೂ ನದಿ (Sindhu River) ಪಾಕಿಸ್ತಾನದ ಜೀವನಾಡಿಯಾಗಿದ್ದು, ಇದರ ಮೇಲೆ 80% ಕೃಷಿ ಮತ್ತು 237 ಮಿಲಿಯನ್ ಜನರು ಅವಲಂಬಿತರಾಗಿದ್ದಾರೆ. ಇದೀಗ ಸಿಂಧೂ ನದಿ ಜಲ ಒಪ್ಪಂದವನ್ನು ಭಾರತ ರದ್ದುಗೊಳಿಸಿದೆ. 
 

47

ರಾವಿ ನದಿಯು (Ravi River) ಹಿಮಾಚಲ ಪ್ರದೇಶದಿಂದ ಹುಟ್ಟುತ್ತದೆ ಮತ್ತು ಪಾಕ್ ನತ್ತ ಈ ನದಿ ಹರಿಯುತ್ತದೆ. ಇನ್ನು ಪಾಕಿಸ್ತಾನದಲ್ಲಿ ಇದನ್ನು ಲಾಹೋರ್ ನದಿ ಎಂದು ಕರೆಯಲಾಗುತ್ತದೆ.
 

57

ಬಿಯಾಸ್ ನದಿಯ ನೀರು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಹರಿಯುವ ಸಟ್ಲೆಜ್ ನದಿಯನ್ನು ಸೇರುತ್ತದೆ. ಸಟ್ಲೆಜ್ ನದಿ ಪಾಕಿಸ್ತಾನದ (Pakistan) ಪಂಜಾಬ್‌ನಲ್ಲಿ ಚೆನಾಬ್ ಮೂಲಕ ಸಿಂಧೂ ನದಿಯನ್ನು ಸೇರುತ್ತದೆ.
 

67

ಝೀಲಂ ನದಿ ಜಮ್ಮು ಮತ್ತು ಕಾಶ್ಮೀರದಿಂದ ಪ್ರಾರಂಭವಾಗಿ ಪಾಕಿಸ್ತಾನದ ಪಂಜಾಬ್ ವರೆಗೆ ಹರಿಯುತ್ತದೆ. ಇನ್ನು ಚೆನಾಬ್ ನದಿ ಹಿಮಾಚಲ ಪ್ರದೇಶದ ಲಾಚಾ ಪಾಸ್‌ನಲ್ಲಿ ಹುಟ್ಟಿ ಪಾಕಿಸ್ತಾನವನ್ನು ಪ್ರವೇಶಿಸುತ್ತದೆ.
 

77

1960 ರ ಸಿಂಧೂ ಜಲ ಒಪ್ಪಂದದ (Indus water treety) ಪ್ರಕಾರ, ಭಾರತವು ರಾವಿ, ಬಿಯಾಸ್, ಸಟ್ಲೆಜ್ ಮತ್ತು ಪಾಕಿಸ್ತಾನವು ಸಿಂಧೂ, ಝೀಲಂ, ಚೆನಾಬ್ ನದಿಗಳನ್ನು ಪಡೆದುಕೊಂಡಿತು. ಭಾರತದ ಈ ನಿರ್ಧಾರವು ಪಾಕಿಸ್ತಾನದಲ್ಲಿ ತೀವ್ರ ನೀರಿನ ಕೊರತೆಗೆ ಕಾರಣವಾಗಬಹುದು, ಇದರಿಂದಾಗಿ ಅದು ಪ್ರತಿ ಹನಿ ನೀರಿಗೂ ಹಾತೊರೆಯುತ್ತದೆ.

Read more Photos on
click me!

Recommended Stories