Published : Apr 23, 2025, 03:32 PM ISTUpdated : Apr 23, 2025, 04:26 PM IST
ಭಾರತದ ಈ ರಾಜ್ಯದಲ್ಲಿ ಹರಿಯುತ್ತಿರುವ ನದಿಯೊಂದು ಕೆಂಪು ಬಣ್ಣವನ್ನ ಹೊಂದಿದೆ. ಅದೇ ಕಾರಣಕ್ಕೆ ಈ ನದಿಯನ್ನು ರಕ್ತ ನದಿ ಎನ್ನುತ್ತಾರೆ. ಈ ನದಿಗೆ ಕೆಂಪು ಬಣ್ಣ ಬರೋದಕ್ಕೆ ಕಾರಣ ಏನು ಗೊತ್ತಾ?
ಭಾರತದಲ್ಲಿ ಒಂದು ನದಿ ಇದೆ, ಅದನ್ನು ಜನರು 'ರಕ್ತಸಿಕ್ತ ನದಿ' (bloody river) ಎಂದು ಕರೆಯುತ್ತಾರೆ. ಅದರ ಹೆಸರು ಕೇಳಿದರೆ ಸಾಕು, ಭಯ ಆಗುತ್ತೆ. ಕೆಂಪು ನೀರು ಮತ್ತು ಭಯಾನಕ ಪ್ರವಾಹ ಆ ನದಿಯನ್ನು ನಿಗೂಢವಾಗಿಸುತ್ತದೆ. ಇದರ ಹಿಂದಿನ ಸತ್ಯ ಏನು ಗೊತ್ತಾ?
26
ಲೋಹಿತ್ ನದಿಯನ್ನು (Lohit River) 'ರಕ್ತಸಿಕ್ತ ನದಿ' ಎಂದೂ ಕರೆಯುತ್ತಾರೆ. ಈ ನದಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿಯುತ್ತದೆ. ಅಷ್ಟಕ್ಕೂ ಈ ನದಿ ಯಾಕೆ ಕೆಂಪು ಬಣ್ಣದಿಂದ ಕೂಡಿದೆ. ಇದರ ನೀರು ಕೆಂಪಾಗಿ ಕಾಣೋದಕ್ಕೆ ರಕ್ತ ಕಾರಣವೇ?
36
ಲೋಹಿತ್ ನದಿಯು ಪೂರ್ವ ಟಿಬೆಟ್‌ನಲ್ಲಿರುವ ಝಯಾಲ್ ಚು ಪರ್ವತ ಶ್ರೇಣಿಯಿಂದ ಹುಟ್ಟುತ್ತದೆ. ಈ ನದಿ ಅರುಣಾಚಲ ಪ್ರದೇಶದಲ್ಲಿ ಸುಮಾರು 200 ಕಿಲೋಮೀಟರ್ ಹರಿಯುತ್ತದೆ. ಇದಾದ ನಂತರ ಅದು ಅಸ್ಸಾಂನ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಲೋಹಿತ್ ನದಿ ಅಂತಿಮವಾಗಿ ಬ್ರಹ್ಮಪುತ್ರ ನದಿಯನ್ನು (Brahmaputra river) ಸೇರುತ್ತದೆ.
46
ಈ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗೋದಕ್ಕೆ ಏನು ಕಾರಣ ಗೊತ್ತಾ? ಖಂಡಿತವಾಗಿಯೂ ನೀವು ಅಂದುಕೊಂಡಂತೆ ಇದಕ್ಕೆ ಕಾರಣ ರಕ್ತ ಅಲ್ವೇ ಅಲ್ಲ. ಇಲ್ಲಿ ನದಿಯಲ್ಲಿ ಕೆಂಪು ಮಣ್ಣು ಇರೋದರಿಂದ, ನದಿ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಹಾಗಾಗಿಯೇ ಈ ನದಿಯನ್ನು ರಕ್ತ ನದಿ ಅಥವಾ ಬ್ಲಡಿ ರಿವರ್ ಎನ್ನುತ್ತಾರೆ.
56
ಅಷ್ಟೇ ಅಲ್ಲ ಲೋಹಿತ್ ನದಿಗೆ ಅದರ ಅಪಾಯಕಾರಿ ಹರಿವು ಮತ್ತು ಬಣ್ಣದಿಂದಾಗಿ ಈ ಹೆಸರು ಬಂದಿದೆ. ಈ ನದಿಯು ತುಂಬಾನೆ ವೇಗದಲ್ಲಿ ಹರಿಯುತ್ತದೆ. ಇದರ ವೇಗಕ್ಕೆ ಜೀವವೇ ಹೋಗಬಹುದು ಅಷ್ಟೊಂದು ವೇಗವಾಗಿ ಹರಿಯುತ್ತೆ ನದಿ, ಜೊತೆಗೆ ಇದರ ಬಣ್ಣ ಕೆಂಪಾಗಿರೋದರಿಂದ ಈ ನದಿಯನ್ನು ರಕ್ತ ನದಿ ಎನ್ನುತ್ತಾರೆ.
66
ಈ ನದಿಯು ನೈಸರ್ಗಿಕ ಸೌಂದರ್ಯ ಮತ್ತು ನಿಗೂಢತೆಯಿಂದ ತುಂಬಿದೆ. ಈ ನದಿ ಕೇವಲ ಭಯಾನಕ ಮಾತ್ರ ಅಲ್ಲ. ನೈಸರ್ಗಿಸ ಸೌಂದರ್ಯದಿಂದ ಕೂಡ ಕೂಡಿದೆ. ಕೊನೆಯದಾಗಿ ಇದು ಬ್ರಹ್ಮ ಪುತ್ರ ನದಿಯನ್ನು ಸೇರಿ ದೊಡ್ಡ ನದಿಯಾಗಿ ಹರಿಯುತ್ತೆ.