Weekend getaways Karnataka: ಬೆಂಗಳೂರಿನ ಟ್ರಾಫಿಕ್ ಮತ್ತು ಕೆಲಸದ ಒತ್ತಡದಿಂದ ಬೇಸತ್ತಿದ್ದೀರಾ? ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಲು ಪ್ರಕೃತಿಯ ಮಡಿಲಿಗಿಂತ ಉತ್ತಮ ತಾಣ ಮತ್ತೊಂದಿಲ್ಲ. ಕೇವಲ 300 ಕಿ.ಮೀ ವ್ಯಾಪ್ತಿಯಲ್ಲಿರುವ ಈ 5 ಅದ್ಭುತ ಗಿರಿಧಾಮಗಳು ವಾರಾಂತ್ಯದ ಪ್ರವಾಸಕ್ಕೆ ಪರ್ಫೆಕ್ಟ್ ಆಗಿವೆ.
ಹಚ್ಚ ಹಸಿರು, ಜಲಪಾತಗಳು ಮತ್ತು ಆಹ್ಲಾದಕರ ಹವಾಮಾನ ಬೆಂಗಳೂರಿನ ಸುತ್ತಮುತ್ತ 300 ಕಿ.ಮೀ. ದೂರದೊಳಗೆ ಅನೇಕ ಸುಂದರ ಗಿರಿಧಾಮಗಳಿವೆ. ನಗರದ ಜಂಜಾಟ ಮತ್ತು ಟ್ರಾಫಿಕ್‌ನಿಂದ ದೂರವಿದ್ದು, ನೆಮ್ಮದಿಯ ವಾರಾಂತ್ಯವನ್ನು ಕಳೆಯಲು ಇವು ಸೂಕ್ತ ತಾಣಗಳಾಗಿವೆ. ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ವಾರಾಂತ್ಯದಲ್ಲಿ ಎಲ್ಲಾದರೂ ಒಳ್ಳೆಯ ಪ್ರವಾಸಿ ತಾಣಕ್ಕೆ ಹೋಗಬೇಕೆಂದು ಬಯಸಿದರೆ, ಈ ಗಿರಿಧಾಮಗಳು ನಿಮ್ಮ ಮೊದಲ ಆಯ್ಕೆಯಾಗಿರಲಿ. ಕುಟುಂಬ ಮತ್ತು ಮಕ್ಕಳೊಂದಿಗೆ ಅಥವಾ ಏಕಾಂಗಿಯಾಗಿ ಸಮಯ ಕಳೆಯಲು ಇವು ಅತ್ಯುತ್ತಮವಾಗಿವೆ. ಹಚ್ಚ ಹಸಿರು, ಜಲಪಾತಗಳು ಮತ್ತು ಆಹ್ಲಾದಕರ ಹವಾಮಾನವು ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುವುದರಲ್ಲಿ ಸಂಶಯವಿಲ್ಲ.
26
ಕೊಡಗು (Coorg)
ಕೊಡಗು (Coorg) ಕೊಡಗು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದನ್ನು 'ಭಾರತದ ಸ್ಕಾಟ್ಲೆಂಡ್' ಎಂದೂ ಕರೆಯುತ್ತಾರೆ. ಇಲ್ಲಿನ ತಾಪಮಾನ ಸಾಮಾನ್ಯವಾಗಿ 15–22°C ಇರುತ್ತದೆ. ತೇಗ ಮತ್ತು ರೋಸ್‌ವುಡ್ ಕಾಡುಗಳಿಂದ ಆವೃತವಾಗಿರುವ ಇಲ್ಲಿ ಕಾಫಿ ತೋಟಗಳಲ್ಲಿ ನೇಚರ್ ವಾಕ್, ತಡಿಯಾಂಡಮೋಲ್ ಶಿಖರಕ್ಕೆ ಚಾರಣ, ಬರಪೋಲೆಯಲ್ಲಿ ರಿವರ್ ರಾಫ್ಟಿಂಗ್ ಮತ್ತು ರಾಜಾ ಸೀಟ್‌ನಲ್ಲಿ ಸುಂದರ ಸೂರ್ಯಾಸ್ತವನ್ನು ವೀಕ್ಷಿಸಬಹುದು. ಇಲ್ಲಿನ ಕೆಫೆಗಳಲ್ಲಿ ಸಿಗುವ ಬಿಸಿ ಬಿಸಿ ಫಿಲ್ಟರ್ ಕಾಫಿ ಸವಿಯುವುದು ಒಂದು ಅದ್ಭುತ ಅನುಭವ.
36
ಚಿಕ್ಕಮಗಳೂರು (Chikmagalur)
ಚಿಕ್ಕಮಗಳೂರು (Chikmagalur) ಬೆಂಗಳೂರಿಗೆ ಹತ್ತಿರವಿರುವ ಮತ್ತೊಂದು ಅದ್ಭುತ ತಾಣವಿದು. ಕರ್ನಾಟಕದ ಅತ್ಯಂತ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ (1,930 ಮೀ) ಇಲ್ಲಿದೆ. ಇಲ್ಲಿನ ಮಂಜು ಮುಸುಕಿದ ಬೆಳಗ್ಗೆ ಮತ್ತು ಕಾಫಿ ತೋಟಗಳು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ತಾಪಮಾನ 14 ರಿಂದ 20°C ಇರುತ್ತದೆ. ಚಾರಣ ಮಾಡುವುದು, ಹೆಬ್ಬೆ ಜಲಪಾತಕ್ಕೆ ಭೇಟಿ ನೀಡುವುದು, ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ ಪ್ರವಾಸ ಮತ್ತು ತೋಟದ ಹೋಂ ಸ್ಟೇಗಳಲ್ಲಿ ತಂಗುವುದು ಅತ್ಯಂತ ಆಹ್ಲಾದಕರವಾಗಿರುತ್ತದೆ.
ಸಕಲೇಶಪುರ (Sakleshpur) ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಹಾಸನ ಜಿಲ್ಲೆಯ ಸಕಲೇಶಪುರ ಒಂದು ಅದ್ಭುತ ಗಿರಿಧಾಮ. ಸುಮಾರು 900 ಮೀ ಎತ್ತರದಲ್ಲಿರುವ ಈ ತಾಣ ಶಾಂತಿಯುತ ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ. ಏಲಕ್ಕಿ, ಕಾಳುಮೆಣಸು ಮತ್ತು ಅಡಿಕೆ ತೋಟಗಳಿಂದ ಕೂಡಿದ ಇಲ್ಲಿನ ಹೋಂ ಸ್ಟೇಗಳು ಖಾಸಗಿ ಮಳೆಕಾಡುಗಳಂತೆ ಅನುಭವ ನೀಡುತ್ತವೆ. ಮಳೆಗಾಲದಲ್ಲಿ ಇಲ್ಲಿನ ತಾಪಮಾನ 16–22°C ಇರುತ್ತದೆ. ಇಲ್ಲಿ ಮಂಜರಾಬಾದ್ ಕೋಟೆ, ಬಿಸ್ಲೆ ಘಾಟ್ ವೀಕ್ಷಣೆ ಮತ್ತು ತೋಟದ ಮನೆಗಳಲ್ಲಿ ವಾಸ್ತವ್ಯ ಹೂಡುವುದು ವಿಶೇಷ ಅನುಭವ ನೀಡುತ್ತದೆ.
56
ಊಟಿ (Ooty)
ಊಟಿ (Ooty) ನೀಲಗಿರಿ ಬೆಟ್ಟಗಳ ನಡುವೆ ಇರುವ ಊಟಿಯನ್ನು 'ಗಿರಿಧಾಮಗಳ ರಾಣಿ' ಎಂದು ಕರೆಯಲಾಗುತ್ತದೆ. ಯುನೆಸ್ಕೋ ಪಾರಂಪರಿಕ ತಾಣವಾದ 'ನೀಲಗಿರಿ ಮೌಂಟೇನ್ ರೈಲ್ವೆ' ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ತಾಪಮಾನ 10–20°C ಇರುತ್ತದೆ. ಇಲ್ಲಿನ ಬಟಾನಿಕಲ್ ಗಾರ್ಡನ್, ದೊಡ್ಡಬೆಟ್ಟ ಪೀಕ್, ಪೈಕಾರಾ ಜಲಪಾತ ಮತ್ತು ವಿಶಾಲವಾದ ಚಹಾ ತೋಟಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
66
ಕೊಡೈಕೆನಾಲ್ (Kodaikanal)
ಕೊಡೈಕೆನಾಲ್ (Kodaikanal) ತಮಿಳುನಾಡಿನ ಪಳನಿ ಬೆಟ್ಟಗಳಲ್ಲಿರುವ ಇದನ್ನು 'ಗಿರಿಧಾಮಗಳ ರಾಜಕುಮಾರಿ' ಎನ್ನಲಾಗುತ್ತದೆ. ಇಲ್ಲಿನ ಪೈನ್ ಕಾಡುಗಳು, ನಕ್ಷತ್ರಾಕಾರದ ಸರೋವರ ಮತ್ತು ಕೋಕರ್ಸ್ ವಾಕ್‌ನಂತಹ ವೀಕ್ಷಣಾ ತಾಣಗಳು ಎಂತವರನ್ನೂ ಮಂತ್ರಮುಗ್ಧಗೊಳಿಸುತ್ತವೆ. ಇಲ್ಲಿನ ತಾಪಮಾನ 8–18°C ಇರುತ್ತದೆ. ಸಿಲ್ವರ್ ಕ್ಯಾಸ್ಕೇಡ್ ಜಲಪಾತ ವೀಕ್ಷಣೆ ಮತ್ತು ಕಾಡಿನ ನಡುವಿನ ನಡಿಗೆ ನಿಮಗೆ ಪುನಶ್ಚೇತನ ನೀಡುತ್ತದೆ. ಇದು ಅಷ್ಟೊಂದು ಜನದಟ್ಟಣೆ ಇಲ್ಲದ ಪ್ರಶಾಂತ ತಾಣವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.