Burj Khalifa: ದುಬೈನ ಬುರ್ಜ್ ಖಲೀಫಾದಲ್ಲಿ ಫ್ಲಾಟ್ ಹೊಂದಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ. ಅಲ್ಲಿ ಮನೆ ಖರೀದಿ ಮಾಡಬೇಕು ಅಂದ್ರೆ ಅವರು ಕೋಟ್ಯಾಧಿಪತಿಯೇ ಆಗಿರಬೇಕು. ಹಾಗಿದ್ರೆ ಬುರ್ಜ್ ಖಲೀಫಾದಲ್ಲಿ ಫ್ಲಾಟ್ ದರ ಎಷ್ಟಿರಬಹುದು ಅನ್ನೋದನ್ನು ನೋಡೋಣ.
ವಿಶ್ವದ ಅತಿ ಎತ್ತರದ ಕಟ್ಟಡ ಮತ್ತು ದುಬೈನ ಹೆಗ್ಗುರುತಾದ ಬುರ್ಜ್ ಖಲೀಫಾ ಕೇವಲ ಒಂದು ಕಟ್ಟಡವಲ್ಲ, ಬದಲಾಗಿ ಶ್ರೀಮಂತರಿಗೆ ಒಂದು ಸ್ಥಾನಮಾನ ನೀಡುವ ನಿವಾಸ ಎಂದೇ ಹೇಳಬಹುದು. ಬುರ್ಜ್ ಖಲೀಫಾ ಒಟ್ಟು 900 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಪ್ರಸ್ತುತ, ದುಬೈನ ಶ್ರೀಮಂತರ ಲಕ್ಸುರಿ ಜೀವನವನ್ನು ಚಿತ್ರಿಸುವ ನೆಟ್‌ಫ್ಲಿಕ್ಸ್ ಶೋ "ದೇಸಿ ಬ್ಲಿಂಗ್" ಶೋ ನಿಂದಾಗಿ ಮತ್ತೆ ಈ ಬುರ್ಜ್ ಖಲೀಫಾ ಬಗ್ಗೆ ಜನರಲ್ಲಿ ಕುತೂಹಲ ಮುಡಿದೆ. ಈ ಶೋದಿಂದಾಗಿ, ಜನರಿಗೆ ಬುರ್ಜ್ ಖಲೀಫಾದಲ್ಲಿ ಒಂದು ಫ್ಲಾಟ್ ದರ ಎಷ್ಟಿರಬಹುದು? ಲಕ್ಸುರಿ ರೂಮ್ ಬೆಲೆ ಎಷ್ಟು ಎನ್ನುವ ಕುತೂಹಲ ಹೆಚ್ಚಾಗಿದೆ. ಇಲ್ಲಿದೆ ಬುರ್ಜ್ ಖಲೀಫಾ ರೂಮ್ ಗಳ ಕುರಿತಾದ ಸಂಪೂರ್ಣ ಮಾಹಿತಿ.
25
ಆರಂಭಿಕ ಬೆಲೆ ಸುಮಾರು 3.4 ಕೋಟಿ ರೂಪಾಯಿ
ದುಬೈ ಪ್ರಾಪರ್ಟಿ ಲಿಸ್ಟಿಂಗ್ ಮತ್ತು ಮಾರ್ಕೆಟ್ ರಿಪೋರ್ಟಿಂಗ್ ವರದಿಗಳ ಪ್ರಕಾರ, ಬುರ್ಜ್ ಖಲೀಫಾದಲ್ಲಿನ ಫ್ಲಾಟ್‌ಗಳ ಬೆಲೆಗಳು ಸಾಮಾನ್ಯ ವ್ಯಕ್ತಿಗೆ ದಕ್ಕುವಂತದಲ್ಲ. ಇಲ್ಲಿ ಒಂದು ಆರಂಭಿಕ ಹಂತದ ಐಷಾರಾಮಿ ಸ್ಟುಡಿಯೋ ಅಪಾರ್ಟ್‌ಮೆಂಟ್ ಬೆಲೆ 15 ಲಕ್ಷ AEDಯಿಂದ 25 ಲಕ್ಷ AED (ಸುಮಾರು 3.4 ಕೋಟಿಯಿಂದ 5.7 ಕೋಟಿ ರೂಪಾಯಿಗಳು) ವೆಚ್ಚವಾಗುತ್ತದೆ.
35
ಬೆಡ್ ರೂಮ್ ಅಪಾರ್ಟ್‌ಮೆಂಟ್‌ಗಳ ಬೆಲೆ 5ಕೋಟಿಯಿಂದ ಶುರು
ಬೆಡ್ ರೂಮ್ ಅಪಾರ್ಟ್‌ಮೆಂಟ್‌ಗಳ ಬಗ್ಗೆ ಹೇಳುವುದಾದರೆ, ಒಂದು ಬೆಡ್ ರೂಮ್ ಇರುವ ಅಪಾರ್ಟ್‌ಮೆಂಟ್‌ನ ಬೆಲೆ 2.2 ಲಕ್ಷ AEDಯಿಂದ 4 ಲಕ್ಷ AED (ಸರಿಸುಮಾರು 5 ಕೋಟಿಯಿಂದ 9 ಕೋಟಿ ರೂಪಾಯಿಗಳು) ವರೆಗೆ ಇರುತ್ತದೆ. ಎರಡು ಬೆಡ್ ರೂಮ್ ಅಪಾರ್ಟ್‌ಮೆಂಟ್‌ಗಳಿಗೆ, 4.4 ಲಕ್ಷ AEDಯಿಂದ 7 ಲಕ್ಷ AED (ಸರಿಸುಮಾರು 10 ಕೋಟಿಯಿಂದ 16 ಕೋಟಿ ರೂಪಾಯಿಗಳು) ವರೆಗೆ ಪಾವತಿಸಬೇಕಾಗುತ್ತದೆ.
ಇನ್ನೂ ಹೆಚ್ಚಿನ ಐಷಾರಾಮಿ ರೂಮ್ ಬಯಸುವವರಿಗೆ, ಮೂರು ಬೆಡ್ ರೂಮ್ ಉಳ್ಳ ಐಷಾರಾಮಿ ಯೂನಿಟ್‌ಗಳ ಬೆಲೆ 80 ಲಕ್ಷ AEDಯಿಂದ 2 ಕೋಟಿ AED ಗೂ ಹೆಚ್ಚು. ಅತ್ಯಂತ ಐಷಾರಾಮಿ ಪೆಂಟ್‌ಹೌಸ್‌ಗಳು ಮತ್ತು ಅರ್ಮಾನಿ ನಿವಾಸಗಳು 35 ಲಕ್ಷ AEDಯಿಂದ100 ಲಕ್ಷ AED (ಅಂದರೆ ಸುಮಾರು 80 ಕೋಟಿಯಿಂದ 230 ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಬೆಲೆಯನ್ನು ಹೊಂದಿವೆ.
55
ಬುರ್ಜ್ ಖಲೀಫಾದಲ್ಲಿ ಮನೆ ಅಂದ್ರೆ, ವಿಶ್ವದ ಶ್ರೇಷ್ಠ ಸ್ಥಾನಮಾನ ಪಡೆದಂತೆ
ಬುರ್ಜ್ ಖಲೀಫಾದಲ್ಲಿ ಮನೆ ಮಾಡೋದು ಅಂದ್ರೆ ವಿಶ್ವದ ಶ್ರೇಷ್ಠ ಸ್ಥಾನಮಾನ ಪಡೆದಂತೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಂತಹ ಪ್ರಮುಖ ತಾರೆಗಳು ಬುರ್ಜ್ ಖಲೀಫಾದಲ್ಲಿ ಖಾಸಗಿ ಫ್ಲಾಟ್ ಹೊಂದಿದ್ದಾರೆ. ಅಷ್ಟೇ ಅಲ್ಲ ಇಟಾಲಿಯನ್ ಡಿಸೈನರ್ ಜಾರ್ಜಿಯೊ ಅರ್ಮಾನಿ ಕೂಡ ಅಲ್ಲಿ ಖಾಸಗಿ ನಿವಾಸವನ್ನು ಹೊಂದಿದ್ದಾರೆ. ಸಿಂಪಲ್ ಆಗಿ ಹೇಳೋದಾದರೆ ಬುರ್ಜ್ ಖಲೀಫಾದಲ್ಲಿ ಮನೆ ಖರೀದಿ ಮಾಡೋದು ಅಂದ್ರೆ, ಆಕಾಶದಲ್ಲಿ ಮನೆ ಮಾಡಿದಂತೆಯೇ ಅರ್ಥ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.