ಇನ್ನೇನು ಕೆಲವೇ ದಿನಗಳಲ್ಲಿ 2026 ಕಾಲಿಡಲಿದೆ. ಇದಾಗಲೇ ಹಲವರು ಅದರಲ್ಲಿಯೂ ಹೆಚ್ಚಾಗಿ ಉದ್ಯೋಗಸ್ಥರು ಮುಂದಿನ ವರ್ಷದ ಕ್ಯಾಲೆಂಡರ್ ತೆಗೆದು ರಜೆಯ ಲೆಕ್ಕಾಚಾರ ಹಾಕಲು ಶುರು ಮಾಡಿಕೊಂಡಿದ್ದಾರೆ. ಯಾವಾಗ ರಜೆ ಸಿಗುತ್ತೆ, ಎಲ್ಲಿಗೆ ಹೋಗಬೇಕು ಎನ್ನುವ ಪ್ಲ್ಯಾನ್ ಎಲ್ಲಾ ಫಿಕ್ಸ್ ಮಾಡುವ ಟೈಮ್ ಇದು. ಸುದೀರ್ಘ ರಜೆ ಇದ್ದ ಸಮಯದಲ್ಲಿ, ಎಲ್ಲಾ ಕಡೆ ರಶ್ ಇರುವ ಕಾರಣ, ಆರೇಳು ತಿಂಗಳು ಮೊದಲೇ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಇನ್ನು 2-3 ದಿನಗಳು ರಜೆ ಇದ್ದಲ್ಲಿ ಹತ್ತಿರದಲ್ಲೇ ಎಲ್ಲಾದರೂ ಟ್ರಿಪ್ ಹೋಗಿ ಬರುವ ಪ್ಲ್ಯಾನ್ ಮಾಡುವವರೂ ಇದ್ದಾರೆ. ಹಾಗಿದ್ದರೆ ಅಂಥವರಿಗಾಗಿ ಇಲ್ಲೊಂದು ಕ್ಯಾಲೆಂಡರ್ ಇದೆ.