ಡೇಂಜರಸ್​ ಜಾಗದ ಚಾಲೆಂಜ್​ ಜೊತೆ ಮತ್ತೆ ಡಾ.ಬ್ರೋ ಪ್ರತ್ಯಕ್ಷ: ಈ ಬಾರಿ ಸೀದಾ ಪಾತಾಳ ಲೋಕದ ದರ್ಶನ!

Published : Nov 21, 2025, 07:22 PM IST

ಕೆಲಕಾಲ ಯುಟ್ಯೂಬ್​ನಿಂದ ದೂರವಿದ್ದ ಡಾ.ಬ್ರೋ ಅಲಿಯಾಸ್ ಗಗನ್, ಇದೀಗ ಮಾರಿಟೇನಿಯಾ ದೇಶದ ವೀಡಿಯೋದೊಂದಿಗೆ ಮರಳಿದ್ದಾರೆ. ಇಲ್ಲಿನ ಭೂಗತ ಕೊಳವೆ ವ್ಯವಸ್ಥೆಯನ್ನು 'ಪಾತಾಳ ಲೋಕ' ಎಂದು ಹಾಸ್ಯಮಯವಾಗಿ ವರ್ಣಿಸಿ, ಅದರ ನಿಜವಾದ ಉದ್ದೇಶವನ್ನು ಕುತೂಹಲಕಾರಿಯಾಗಿ ವಿವರಿಸಿದ್ದಾರೆ.

PREV
17
ಡಾ.ಬ್ರೋ ಪ್ರತ್ಯಕ್ಷ

ಡಾ.ಬ್ರೋ ತಮ್ಮದೇ ಆಗಿರುವ ಸ್ವಂತ ಪ್ರವಾಸಿ ಉದ್ಯಮವನ್ನು ಶುರು ಮಾಡಿ ಯುಟ್ಯೂಬ್​ನಿಂದ ಸ್ವಲ್ಪ ದೂರವೇ ಉಳಿದಿದ್ದರು. ಯಾವ ದೇಶಕ್ಕೆ ಹೋದರೂ ಕನ್ನಡದಲ್ಲಿಯೇ ಮಾತನಾಡಿದ ಕನ್ನಡಿಗರ ಮನೆಮಗನಾಗಿ ಎಲ್ಲರ ಮೆಚ್ಚುಗೆ ಗಳಿಸಿದವರು ಡಾ.ಬ್ರೋ ಅರ್ಥಾತ್​ ಗಗನ್​.

27
ನಾಪತ್ತೆಯಾಗಿದ್ದ ಡಾ.ಬ್ರೋ

ಆದರೆ, ಸ್ವಂತ ಉದ್ಯಮ ಶುರು ಮಾಡಿದ ಮೇಲೆ ಸ್ವಲ್ಪ ತಿಂಗಳು ನಾಪತ್ತೆಯಾಗಿದ್ದರು. ಕೊನೆಗೆ ಹಳೆಯ ವಿಡಿಯೋಗಳನ್ನು ಶೇರ್​ ಮಾಡುತ್ತಿದ್ದರು. ಒಂದಷ್ಟು ದಿನ ಜನರು ಡಾ.ಬ್ರೋ ವಿಡಿಯೋಗಾಗಿ ತಡಕಾಡಿ ಕೊನೆಗೆ ಸುಮ್ಮನಾಗಿಬಿಟ್ಟಿದ್ದರು.

37
ಗಗನ್​ ವಿರುದ್ಧ ಅಸಮಾಧಾನ

ಅಷ್ಟಕ್ಕೂ ಅಯೋಧ್ಯೆ ಸೇರಿದಂತೆ ಕೆಲವು ಪೌರಾಣಿಕ ಸ್ಥಳಗಳಿಗೆ ಹೋಗಿ ಅಲ್ಲಿಯ ವರ್ಣನೆ ಮಾಡುತ್ತಿದ್ದಂತೆಯೇ ಅಚ್ಚರಿ ಎನ್ನುವಂತೆ ಇವರನ್ನು ಒಂದು ಪಕ್ಷದವರಂತೆ ಗುರುತಿಸಿ ಕೆಲವರು ಡಾ,ಬ್ರೋ ಅವರ ವಿರುದ್ಧ ತಿರುಗಿ ಬಿದ್ದದ್ದೂ ಇದೆ. ವಿಚಿತ್ರವಾದರೂ ಸತ್ಯ ಎನ್ನುವಂಥ ಈ ಸನ್ನಿವೇಶಗಳ ನಡುವೆಯೂ ಗಗನ್​ ಅವರ ಅಭಿಮಾನಿಗಳ ಸಂಖ್ಯೆ ಅಷ್ಟೇ ಏರುತ್ತಿದೆ ಎನ್ನುವುದೂ ಸುಳ್ಳಲ್ಲ.

47
ಪಾತಾಳ ಲೋಕಕ್ಕೆ

ಇಂತಿಪ್ಪ ಡಾ.ಬ್ರೋ ಇದೀಗ ತಮ್ಮ ಅಭಿಮಾನಿಗಳನ್ನು ಪಾತಾಳ ಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾರಿಟೇನಿಯಾ ದೇಶದ ಬಗ್ಗೆ ಕುತೂಹಲದ ಮಾಹಿತಿಗಳನ್ನು ಹಂಚಿಕೊಂಡಿರೋ ಡಾ.ಬ್ರೋ ಇಲ್ಲಿನ ಪಾತಾಳಕ್ಕೆ ಕರೆದುಕೊಂಡು ಹೋಗಿದ್ದಾರೆ.

57
ಪಾತಾಳದಲ್ಲಿ ಪೈಪ್​

ಇಲ್ಲಿ ಕೃಷಿ ಮಾಡುವ ಸಂಬಂಧ ನೀರಿನ ಸಂಗ್ರಹಕ್ಕೆ ಹೇಗೆ ಪಾತಾಳದಲ್ಲಿ ಪೈಪ್​ ಹಾಕಲಾಗಿದೆ. ಹತ್ತಾರು ಕಿಲೋ ಮೀಟರ್​ ದೂರದ ಪಾತಾಳ ಲೋಕವನ್ನು ಸೃಷ್ಟಿಸಲಾಗಿದೆ ಎಂದು ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ವಿವರಿಸಿದ್ದಾರೆ.

67
ಪ್ರಶ್ನೆ ಕೇಳಿದ ಗಗನ್​

ಕೊನೆಗೆ ಅಲ್ಲಿರುವ ಕೊಳವೆ ಒಂದನ್ನು ತೋರಿಸಿ ಇದು ಏಕೆ ಮಾಡಿದ್ದಾರೆ ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಅದನ್ನು ನೋಡಿದವರು ನೀರಿಗೆ ಎಂದು ಹೇಳುತ್ತಾರೆ ಎನ್ನುವುದು ಅವರಿಗೆ ಗೊತ್ತು. ಕೊನೆಗೆ ಅದು ಮಣ್ಣು ತೆಗೆಯಲು ಮಾಡಿದ್ದು, ಅಷ್ಟೂ ಗೊತ್ತಾಗಲ್ವಾ? ಹೇಗೆ ಪರೀಕ್ಷೆ ಪಾಸ್​ ಮಾಡಿದ್ರಿ ಎಂದು ತಲೆ ತಿಂದಿರೋ ಡಾ.ಬ್ರೋ, ಕುತೂಹಲ ರೀತಿಯಲ್ಲಿ ಇದನ್ನು ವಿವರಿಸಿದ್ದಾರೆ. 

77
ಇಲ್ಲಿದೆ ನೋಡಿ ಅವರ ವಿಡಿಯೋ

ಇಲ್ಲಿದೆ ನೋಡಿ ಅವರ ವಿಡಿಯೋ:

Read more Photos on
click me!

Recommended Stories