ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ಮಂದಿರ ತುಂಬಾನೆ ಪವರ್ ಫುಲ್ ಆಗಿರುವ ಸ್ಥಳವಾಗಿದೆ. ಈ ಶಕ್ತಿ ಪೀಠಕ್ಕೆ ನೀವು ನಿಮ್ಮ ಸಂಗಾತಿ ಜೊತೆ ಒಂದು ಸಲವಾದ್ರು ಹೋಗಿ ಬರಬೇಕು. ಯಾಕೆ ಅನ್ನೋದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.
51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ಮಂದಿರಕ್ಕೆ ಸಂಗಾತಿ ಜೊತೆ ಒಂದೇ ಒಂದು ಸಲವಾದರೂ ಭೇಟಿ ನೀಡಲೇಬೇಕು ಎನ್ನಲಾಗುತ್ತದೆ. ಅದು ಯಾಕೆ? ಕಾಮಾಕ್ಯ ಮಂದಿರದ ವಿಶೇಷತೆ ಏನು? ದಂಪತಿಗಳು ಜೊತೆಯಾಗಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದರೆ, ಅದರಿಂದಾಗುವ ಪ್ರಯೋಜನಗಳು ಯಾವುದು ನೋಡೋಣ.
27
ಎಲ್ಲಿದೆ ಕಾಮಾಕ್ಯ ಮಂದಿರ
ಅಸ್ಸಾಂನ ಗುವಾಹಟಿ ನಗರದ ಪಶ್ಚಿಮ ಭಾಗದ ನೀಲಾಂಚಲ್ ಬೆಟ್ಟದ ಮೇಲೆ ಕಾಮಾಕ್ಷಿ ದೇವಿ ನೆಲಸಿದ್ದಾಳೆ. ಇಲ್ಲಿ ದೇವಿಯ ವಿಗ್ರಹವಿಲ್ಲ. ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಹತ್ತಿರದಲ್ಲಿ ಹರಿಯುವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ. ಮುಟ್ಟಾದ ಮೂರು ದಿನಗಳ ಕಾಲ ಈ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಗುತ್ತದೆ.
37
ಮುಟ್ಟಿನ ಬಟ್ಟೆಯೇ ಪ್ರಸಾದ
ದೇವಿಗೆ ಮೂರು ದಿನಗಳ ಋತು ಚಕ್ರಆದಾಗ, ದೇವಾಲಯದ ಗರ್ಭ ಗುಡಿಯಲ್ಲಿ ಬಿಳಿ ಬಟ್ಟೆಗಳನ್ನು ಹರಡಲಾಗುತ್ತದೆ ಮತ್ತು ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಮೂರು ದಿನಗಳ ನಂತರ ದೇವಾಲಯದ ಬಾಗಿಲು ತೆರೆದಾಗ, ಬಿಳಿ ಬಟ್ಟೆಯು ದೇವಿಯ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಬಟ್ಟೆಯನ್ನು ಅಂಬುವಾಚಿ ಬಟ್ಟೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನೇ ಭಕ್ತರಿಗೆ ಪ್ರಸಾದವಾಗಿ ಕೊಡಲಾಗುತ್ತದೆ.
ಗರ್ಭಗುಡಿಯಲ್ಲಿರುವ ಈ ಯೋನಿಯನ್ನು ಹೆಣ್ಣಿನ ಮರುಸೃಷ್ಟಿ ಸಾಮರ್ಥ್ಯದ ಪ್ರತೀಕವಾಗಿ ಪೂಜಿಸಲಾಗುತ್ತದೆ. ಅಸ್ಸಾಂನ ಗುವಾಹಟಿ ನಗರದ ಪಶ್ಚಿಮದಲ್ಲಿರುವ ಬಹಳ ಶಕ್ತಿಯುತವಾದ ಕ್ಷೇತ್ರದ ಗರ್ಭಗುಡಿಯಲ್ಲಿರುವುದು ಶಕ್ತಿ ದೇವತೆಯ ಯೋನಿ. ಸತಿಯ ದೇಹ 51 ಭಾಗಗಳಾಗಿ ದೇಶದ ಉದ್ದಗಲದಲ್ಲೂ ಬಿದ್ದು ವಿವಿಧ ಶಕ್ತಿಪೀಠಗಳಾಗಿ ಹೊಮ್ಮಿದಾಗ, ಇಲ್ಲಿ ಆಕೆಯ ಗರ್ಭ ಬಿದ್ದಿತು ಎಂಬ ಕತೆಯಿದೆ.
57
ಈ ಸ್ಥಳಕ್ಕೆ ಸಂಗಾತಿ ಜೊತೆ ಯಾಕೆ ಹೋಗಬೇಕು?
ಈ ಸ್ಥಳವು ಸ್ತ್ರೀ ಶಕ್ತಿಯನ್ನು ಹೊಂದಿರುವ ಪೀಠವಾಗಿದೆ. ಇಲ್ಲಿಗೆ ಸಂಗಾತಿ ಜೊತೆ ಭೇಟಿ ನೀಡೋದರಿಂದ ಸಂಬಂಧದಲ್ಲಿ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಅಲ್ಲದೇ ಸಂಬಂಧದ ನಡುವಿನ ಜಗಳ ನಿವಾರಣೆಯಾಗುತ್ತದೆ.
67
ಮದುವೆಯಾಗುವ ಆಸೆ ಇದ್ದರೆ ಇಲ್ಲಿ ಬನ್ನಿ
ನಿಮಗೆ ನೀವು ಪ್ರೀತಿಸಿದವರನ್ನೇ ಮದುವೆಯಾಗಬೇಕು ಅಥವಾ, ಮದುವೆ ಸರಿಯಾದ ರೀತಿಯಲ್ಲಿ ಆಗಬೇಕು ಎನ್ನುವ ಕನಸು ಇದ್ದರೆ, ಈ ದೇಗುಲಕ್ಕೆ ಭೇಟಿ ನೀಡಿ, ಇಲ್ಲಿ ದೇವಿಯ ಆಶೀರ್ವಾದ ಪಡೆದರೆ ಶೀಘ್ರದಲ್ಲೆ ನಿಮ್ಮ ಆಸೆಯಂತೆ ಮದುವೆಯಾಗುತ್ತದೆ.
77
ಮಗುವಾಗದಿದ್ದವರಿಗೆ ಮಗುವಾಗುತ್ತೆ
ಈ ದೇಗುಲದಲ್ಲಿ ಯೋನಿ ಇರೋದರಿಂದ, ಇದನ್ನು ಫಲವತ್ತತೆಯ ಸಂಕೇತವಾಗಿ ಪೂಜಿಸಲಾಗುತ್ತದೆ. ಹುಟ್ಟು ಇಲ್ಲಿಂದಲೇ ಸಾಧ್ಯವಾಗಿರೋದರಿಂದ ಈ ಸ್ಥಳವು ಅಷ್ಟೊಂದು ಪವರ್ ಫುಲ್ ಆಗಿದೆ. ಮಕ್ಕಳಾಗದೇ ಇರುವವರು ಅಥವಾ ಮಕ್ಕಳು ಮಾಡಲು ಪ್ಲ್ಯಾನ್ ಮಾಡುವವರು ಈ ದೇಗುಲಕ್ಕೆ ಬಂದು ಬೇಡಿಕೊಂಡರೆ ಶೀಘ್ರದಲ್ಲಿ ಮಕ್ಕಳ ಭಾಗ್ಯ ದೊರೆಯುತ್ತದೆ. ನಿಮ್ಮ ಸಂಬಂಧದಲ್ಲಿ ಆಧ್ಯಾತ್ಮಿಕ ಏಳಿಗೆಗಾಗಿ ಹಾಗೂ ಸಂಬಂಧ ಗಟ್ಟಿಯಾಗಿರಲು ಸಂಗಾತಿ ಜೊತೆ ಈ ದೇಗುಲಕ್ಕೆ ಒಂದು ಬಾರಿಯಾದರು ಭೇಟಿ ನೀಡಿ.