ಸಪ್ತಮಿ ಗೌಡ ಶೇರ್ ಮಾಡಿಕೊಂಡಿರುವ ಫೋಟೊಗಳು ಸಖತ್ ಕೂಲ್ ಆಗಿವೆ. ಬೆಂಗಳೂರಿನಲ್ಲಿ ಮಳೆ ಸುರಿದು ತಂಪಾಗಿದೆ. ಈ ಕೂಲ್ ವಾತಾವರಣದಲ್ಲಿ ಅಷ್ಟೇ ಕೂಲ್ ಆಗಿ ಸಪ್ತಮಿ ಗೌಡ ಫೋಟೊಶೂಟ್ ಮಾಡಿಕೊಂಡಿದ್ದಾರೆ.
ವೈಟ್ ಸ್ಲಿವ್ಲೆಸ್ ಟಾಪ್, ನೀಲಿ ಬಣ್ಣದ ಸ್ಕರ್ಟ್ ತೊಟ್ಟು ಬೆಂಗಳೂರಿನ ರಸ್ತೆಯಲ್ಲಿ ನಿಂತು ಸ್ಟೈಲಿಶ್ ಆಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಬೋಲ್ಡ್ ಅವತಾರ ನೆಟ್ಟಿಗರ ಗಮನ ಸೆಳೆಯುತ್ತಿದೆ.
ನಟಿ ಸಪ್ತಮಿ ಗೌಡ ಫೋಟೊಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. 'ನಮಗೆ ಎಷ್ಟು ಹೊಟ್ಟೆ ಉರಿಸ್ತೀರಂದ್ರೆ.. ಅಯ್ಯೋ ದೇವರೇ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅದೇ ಇನ್ನೊಬ್ಬ ನೆಟ್ಟಿಗ 'ಅದ್ಭುತ.. ಹಾಲಿವುಡ್ ಹೀರೋಯಿನ್ ಇಲ್ಲವೋ ಕೋರಿಯನ್ ಹೀರೋಯಿನ್ ಹಾಗೆ ಕಾಣಿಸುತ್ತಿದ್ದೀರ' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು 'ಬ್ಯೂಟಿಫುಲ್ ಪಿಕ್ಚರ್' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಈ ಹಿಂದೆ ಸಪ್ತಮಿ ಗೌಡ ‘ದಿ ವ್ಯಾಕ್ಸಿನ್ ವಾರ್’ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ನಿತಿನ್ಗೆ ನಾಯಕಿಯಾಗಿ ‘ತಮ್ಮುಡು’ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದಂತಾಗಿದೆ.
ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಸಪ್ತಮಿ ಗೌಡ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಸಪ್ತಮಿ ಗೌಡ ಹಲವಾರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಪ್ ಸಿಕ್ಕಾಗ ಹೊಸ ಹೊಸ ಫೋಟೊ ಶೂಟ್ಗಳನ್ನ ಮಾಡಿಸಿ, ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.
ಚಂದನವನದ ನಟಿ ಸಪ್ತಮಿ ಕಾಂತಾರ ಚಿತ್ರ ಹಿಟ್ ಆದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದು, ಈಕೆ ಕನ್ನಡಕ್ಕೆ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ನಟಿ ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಬಳಿಕ ಕಾಂತಾರದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿದ್ದಾರೆ.