ಗಾಳಿಪಟದ ಸಿಂಪಲ್ ಬೆಡಗಿ ಡೈಸಿ ಬೋಪಣ್ಣ ಹಾಟ್ ಲುಕ್ ನೋಡಿ ದಂಗಾದ ಫ್ಯಾನ್ಸ್!

First Published | Apr 18, 2024, 5:44 PM IST

ಗಾಳಿಪಟ ಸಿನಿಮಾದಲ್ಲಿ ಸಿಂಪಲ್ ಹುಡುಗಿ ಪಾತ್ರದಲ್ಲಿ ಗಮನ ಸೆಳೆದಿದ್ದ ಡೈಸಿ ಬೋಪಣ್ಣ ಇದೀಗ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಡೈಸಿ ಸ್ಟೈಲ್ ನೋಡಿ ಫ್ಯಾನ್ಸ್ ಶಾಖ್ ಆಗಿದ್ದಾರೆ. 
 

ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ಗಾಳಿಪಟ ಸಿನಿಮಾದಲ್ಲಿ ಸಿಂಪಲ್ ಹುಡುಗಿಯಾಗಿ ಸೌಮ್ಯ ಪಾತ್ರದಲ್ಲಿ ಕನ್ನಡಿಗರ ಹೃದಯ ಗೆದ್ದ ನಟಿ ಡೈಸಿ ಬೋಪಣ್ಣ (Daisy Bopanna). ಈ ಸಿನಿಮಾ ನಂತರ ಡೈಸಿ, ಹಲವಾರು ಜನರ ಕ್ರಶ್ ಆಗಿದ್ದು ಸುಳ್ಳಲ್ಲ.. 
 

ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಕನ್ನಡ ಮಾತ್ರವಲ್ಲದೇ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ನಟಿಸಿದ್ದು ಬೆರಳೆಣಿಕೆಯ ಚಿತ್ರವಾದರೂ ಡೈಸಿ ನಟಿಸಿದ ಹಲವು ಸಿನಿಮಾಗಳು ಇಂದಿಗೂ ಜನಪ್ರಿಯತೆ ಪಡೆದಿವೆ. 
 

Latest Videos


ಇಂಧ್ರು ಮುದಲ್ ಎನ್ನುವ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡೈಸಿ ಬೋಪಣ್ಣ, ಕಿಚ್ಚ ಸುದೀಪ್ ಜೊತೆಗೆ ರಂಗ ಎಸ್‌ಎಸ್‌ಎಲ್‌ಸಿ, ಬಿಂಬ, ಭಗವಾನ್, ಗರಂ ಮಸಾಲಾ, ರಮೇಶ್ ಅರವಿಂದ್ (Ramesh Aravind) ಜೊತೆಗೆ ರಾಮ ಶ್ಯಾಮ ಭಾಮಾ, ಜಾಕ್‌ಪಾಟ್, ಐಶ್ವರ್ಯ, ಸತ್ಯವಾನ್ ಸಾವಿತ್ರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. 
 

2012 ರ ನಂತರ ಸಿನಿಮಾ ರಂಗದಿಂದ ದೂರವೇ ಉಳಿದುಕೊಂಡಿರುವ ಡೈಸಿ,  ಸದ್ಯ ಅಮಿತ್ ಜಯು (Amit Jayu) ಎನ್ನುವ ಮುಂಬೈ ಮೂಲದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಅಲ್ಲೆ ನೆಲೆಯೂರಿದ್ದಾರೆ. ಆದ್ರೆ ಡೈಸಿ ಸಿನಿಮಾಕ್ಕೆ ಕಂ ಬ್ಯಾಕ್ ಮಾಡಲಿ ಎಂದು ಇಂದಿಗೂ ಅಭಿಮಾನಿಗಳು ಕಾಯ್ತಿದ್ದಾರೆ. 

ಇವರನ್ನು ನೋಡಿ ಜನ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಗಾಳಿಪಟದಲ್ಲಿ ಸಿಂಪಲ್ ಟೀಚರ್ ಆಗಿದ್ದೋರು, ಇದೀಗ ಮಾಡರ್ನ್ ಫಾರೀನ್ ಟೀಚರ್ ತರ ಕಾಣಿಸ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ತುಂಬಾ ಜನ ಕಾಮೆಂಟ್ ಮಾಡಿ ತುಂಬಾ ಹಾಟ್ ಆಗಿದ್ದೀರಿ, ಬೋಲ್ಡ್ ಆಗಿ ಕಾಣಿಸುತ್ತೀರಿ, 40 ವರ್ಷ ಆದ್ರೂ ನಿಮ್ಮ ಬ್ಯೂಟಿ ಹಾಗೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. 
 

click me!