ಸೆಕ್ಸ್(Sex) ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವನ್ನು ಮತ್ತಷ್ಟು ಸ್ಟ್ರಾಂಗ್ ಆಗಿಸುತ್ತೆ. ಕೆಲವು ಪುರುಷರು ಸಂಗಾತಿಯೊಂದಿಗೆ ಸೆಕ್ಸ್ ಮಾಡಿದ ಬಳಿಕ ನಿದ್ರೆ ಮಾಡ್ತಾರೆ, ಆದರೆ ಕೆಲವರು ಫ್ಲರ್ಟ್ ಮಾಡುತ್ತಾರೆ ಇನ್ನು ಕೆಲವರು ಸಂಗಾತಿಯೊಂದಿಗೆ ಮಾತನಾಡುತ್ತಾರೆ. ಆ ಸಮಯದಲ್ಲಿ ಪತಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ತಿಳಿಯೋಣ…
ಸೆಕ್ಸ್ ಎಂಜಾಯ್ ಮಾಡಿರಬಹುದೇ?
ಸೆಕ್ಸ್ ನಂತರ ಪುರುಷನು ಯೋಚಿಸೋ ಒಂದು ವಿಷ್ಯ ಅಂದ್ರೆ, ಸಂಗಾತಿ ಅದನ್ನು ಎಂಜಾಯ್(Enjoy) ಮಾಡಿರಬಹುದೇ ಇಲ್ಲವೋ ಎಂಬುದು. ಅನೇಕ ಜನರು ತಮ್ಮ ಸಂಗಾತಿ ತಮ್ಮಂತೆ ಸೆಕ್ಸ್ ಎಂಜಾಯ್ ಮಾಡಿದ್ದಾರೋ? ಅನ್ನೋ ಬಗ್ಗೆ ತುಂಬಾನೆ ಯೋಚಿಸುತ್ತಾರೆ.
ಆರ್ಗಾಸಂ(Orgasm) ಆಗಿದೆಯೇ?
ಮಹಿಳೆಯ ಪರಾಕಾಷ್ಠೆ ತಲುಪುವುದು ಎಂದರೆ ಪುರುಷನಿಗೆ ದೊಡ್ಡ ಸಾಧನೆಯೇ ಆಗಿದೆ. ಆಧುನಿಕ ಸಂಸ್ಕೃತಿಯಲ್ಲಿ, ಹಾಸಿಗೆಯಲ್ಲಿ ಪುರುಷರ ಕಾರ್ಯಕ್ಷಮತೆಯನ್ನು ಅವರು ತಮ್ಮ ಸಂಗಾತಿಯನ್ನು ತೃಪ್ತಿಪಡಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ. ಪುರುಷರು ಈ ಬಗ್ಗೆ ಯೋಚನೆ ಮಾಡಿಯೇ ಮಾಡುತ್ತಾರೆ.
ತಬ್ಬಿಕೊಳ್ಳಬೇಕೆ(Hug) ಅಥವಾ ಮಲಗಬೇಕೆ?
ಸೆಕ್ಸ್ ನಂತರ, ಪುರುಷನು ತಮ್ಮ ಸಂಗಾತಿಯನ್ನು ತಬ್ಬಿಕೊಳ್ಳಬೇಕೇ ಅಥವಾ ತಕ್ಷಣವೇ ನಿದ್ರೆ ಮಾಡಬೇಕೆ ಎನ್ನುವ ಬಗ್ಗೆ ಯೋಚನೆ ಮಾಡ್ತಾರೆ. ಕೆಲವು ಜನರು ಸೆಕ್ಸ್ ಮಾಡಿದ ಬಳಿಕ ಮತ್ತೆ ಮಲಗಲು ಬಯಸುತ್ತಾರೆ. ಒಟ್ಟಲ್ಲಿ ಅವರಿಗೆ ಈ ಎಲ್ಲಾ ಕನ್ ಫ್ಯೂಶನ್ ಇರುತ್ತೆ.
ನೆನಪಿಸಿಕೊಳ್ತಾರೆ
ಸೆಕ್ಸ್ ಬಳಿಕ ವ್ಯಕ್ತಿಯು ಶಾಂತವಾಗಿದ್ದರೆ, ಅವನು ಸ್ವಲ್ಪ ಸಮಯದ ಹಿಂದೆ ಹಾಸಿಗೆಯಲ್ಲಿ ಮಾಡಿದ ಎಲ್ಲಾ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾನೆ. ನೀವು ನೀಡಿದ ಸಂತೋಷವನ್ನು(Happy) ಅವರು ರಹಸ್ಯವಾಗಿ ಎಂಜಾಯ್ ಮಾಡುತ್ತಿರಬಹುದು, ಅಲ್ಲದೇ ನೆಕ್ಸ್ಟ್ ರೌಂಡ್ ಬಗ್ಗೆ ಯೋಚ್ನೆ ಮಾಡ್ತಿರುತ್ತಾರೆ.
ಸ್ನಾನ(Bath) ಮಾಡಬೇಕೆ?
ಸೆಕ್ಸ್ ಬಳಿಕ ಎದ್ದು ಏನನ್ನಾದರೂ ಮಾಡೋದು, ಅಸಭ್ಯ ಎಂದು ಕೆಲವರು ಭಾವಿಸುತ್ತಾರೆ. ಆದರೆ ಈ ಕ್ರಿಯೆಯ ಸಮಯದಲ್ಲಿ, ವ್ಯಕ್ತಿಯು ಬೆವರುತ್ತಾನೆ. ಹಾಗಾಗಿ, ಶವರ್ ಮಾಡೋದು ತುಂಬಾನೆ ಮುಖ್ಯ. ಹಾಗೇ ಮಾಡಬೇಕೆಂದು ಸಂಗಾತಿ ಬಯಸಿದ್ರೆ ನೀವು ಅವರ ಬಯಕೆ ಅರ್ಥ ಮಾಡ್ಕೊಳಿ.