ನಮ್ಮಲ್ಲಿ ಹೆಚ್ಚಿನವರು ಪೋರ್ನ್ ಸ್ಟಾರ್(porn Star) ಕೆಲಸ ಅಂದರೆ ಕೆಲವು ಹೊತ್ತಲ್ಲಿ ಮುಗಿದುಹೋಗುತ್ತೆ, ಕೈ ತುಂಬ ಕಾಸು ಬರುತ್ತೆ ಅಂತೆಲ್ಲ ಅಂದುಕೊಳ್ತಾರೆ. ಅವರನ್ನು ವೇಶ್ಯೆಯರಿಗೆ ಹೋಲಿಸೋದೂ ಇದೆ. ಆದರೆ ಅವರ ಲೈಫು(Life) ನಾವು ಅಂದುಕೊಂಡಷ್ಟು ಸಿಂಪಲ್(Simple) ಆಗಿಲ್ಲ.
ಇಲ್ಲೊಬ್ಬ ಪೋರ್ನ್ ಸ್ಟಾರ್ ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಲೈಫಲ್ಲಿ ಒಂದು ದಿನ ಹೇಗಿರುತ್ತೆ ಅನ್ನೋದನ್ನು ವಿವರಿಸಿದ್ದಾರೆ. ಪ್ರಪಂಚದ ಕೆಲವು ಪ್ರಸಿದ್ಧ ವಯಸ್ಕ ನಟರು ತಮ್ಮನ್ನು ವಿಭಿನ್ನ ರೀತಿಯಲ್ಲಿ ಬಹಿರಂಗಪಡಿಸಿದ್ದಾರೆ. ಪೋರ್ನ್ ಸ್ಟಾರ್ ಆಗಿರುವ ವೃತ್ತಿಜೀವನವು ಅವರ ವೈಯಕ್ತಿಕ ಜೀವನದ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದರ ಕುರಿತು ಮಾತನಾಡುತ್ತಾರೆ.
ಆಸ್ಟ್ರೇಲಿಯನ್ ಟಿವಿ ಸರಣಿ 'ಯು ಕ್ಯಾಂಟ್ ಆಸ್ಕ್ ದಟ್' ಶೋನಲ್ಲಿ ಎಕ್ಸ್-ರೇಟೆಡ್ ಪೋರ್ನ್ ಸ್ಟಾರ್‌ಗಳ ಇಂಟರ್‌ವ್ಯೂ ನಡೆಸಲಾಯಿತು. ಇದರಲ್ಲಿ 35 ವರ್ಷದ ಏಂಜೆಲಾ ವೈಟ್, ಶೋನಲ್ಲಿ ಕಾಣಿಸಿಕೊಂಡ ತಾರೆಗಳಲ್ಲಿ ಒಬ್ಬರಾಗಿದ್ದರು.
ಪೋರ್ನ್ ಕ್ವೀನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಲೈಂಗಿಕ ದೃಶ್ಯ ಮತ್ತು ಕೊಳಕು ತನ್ನ ಡೇಟಿಂಗ್ ಜೀವನದ ಮೇಲೆ ಹಾನಿಕಾರಕ ಪರಿಣಾಮ ಬೀರಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ನಾನು ಹದಿಹರೆಯದಿಂದಲೇ ಯಾವಾಗಲೂ ಅಶ್ಲೀಲತೆಯಿಂದ ಆಕರ್ಷಿತಳಾಗಿದ್ದೆ. ಆದರೂ ಮೊದಲ ಬಾರಿ ಸೆಕ್ಸ್‌ನಲ್ಲಿ ಭಾಗವಹಿಸಿದ ಅನುಭವ ಸ್ಪಲ್ಪ ಭಯಾನಕವಾಗಿತ್ತು. ಭಯ, ಮುಜುಗರ ಉಂಟಾಗಿತ್ತು ಎಂದು ಏಂಜೆಲಾ ಹೇಳಿದ್ದಾರೆ.
ಅಶ್ಲೀಲತೆಯು ತನ್ನ ಡೇಟಿಂಗ್ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಪೋರ್ನ್ ಸ್ಟಾರ್ ಒಪ್ಪಿಕೊಂಡರು. ನನ್ನ ವೈಯಕ್ತಿಕ ಜೀವನದಲ್ಲಿ ಇದು ಒಂದು ರೀತಿಯ ಹಾಳಾದ ಲೈಂಗಿಕತೆ ಎಂದು ನಾನು ಭಾವಿಸುತ್ತೇನೆ ಎಂದರು. ಮಾತ್ರವಲ್ಲ ಪೋರ್ನ್ ಸ್ಟಾರ್ ಆಗಿರುವುದರಿಂದ ಯಾರೂ ನಮ್ಮನ್ನು ಮದುವೆಯಾಗಲು, ನಮ್ಮ ಜೊತೆ ಸಂಬಂಧ ಇಟ್ಟುಕೊಳ್ಳಲು ಬಯಸುವುದಿಲ್ಲ. ನಾವು ಖುಷಿಯಿಂದ ಸಂಸಾರ ನಡೆಸಿ ಮಕ್ಕಳನ್ನು ಹೊಂದುವುದೂ ಅಸಾಧ್ಯ ಎಂದು ಬೇಸರ ತೋಡಿಕೊಂಡರು.