ಲೈಂಗಿಕ ಕ್ರಿಯೆ ಎಂಜಾಯ್ ಮಾಡಲು ಕಾಂಡೋಮ್ ಆಯ್ಕೆ ಹೇಗಿರಬೇಕು?

Published : Jul 04, 2022, 04:24 PM IST

ಸಂಗಾತಿಯೊಂದಿಗೆ ಮೊದಲ ಬಾರಿ ಸೆಕ್ಸ್ ಎಂಜಾಯ್ ಮಾಡಲು ಬಯಸಿದ್ರೆ, ಕಾಂಡೋಮ್ ಬಳಸಲು ಮರೆಯಬೇಡಿ. ಕಾಂಡೋಮ್ ಬಳಸೋದ್ರಿಂದ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು, ಅಲ್ಲದೇ ಸಂತೋಷದ ಜೀವನ ನಿಮ್ಮದಾಗಬಹುದು. ಆದರೆ ಕೆಲವರಿಗೆ ಕಾಂಡೋಮ್ ಆಯ್ಕೆ ಸರಿಯಾಗಿ ಗೊತ್ತಿರದ ಕಾರಣ, ಸಮಸ್ಯೆ ಉಂಟಾಗಬಹುದು.

PREV
17
ಲೈಂಗಿಕ ಕ್ರಿಯೆ ಎಂಜಾಯ್ ಮಾಡಲು ಕಾಂಡೋಮ್ ಆಯ್ಕೆ ಹೇಗಿರಬೇಕು?

ನಿಮಗೆ ಸುರಕ್ಷಿತ ಸೆಕ್ಸ್(Sex) ಮಾಡಲು ಹೇಗೆ ಮತ್ತು ಯಾವ ಕಾಂಡೋಮ್ ಆಯ್ಕೆ ಮಾಡಬೇಕೆಂದು ತಿಳಿದಿಲ್ಲದಿದ್ದರೆ, ನಿಮಗಾಗಿ ಒಂದಷ್ಟು ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ನೀವು ತಿಳ್ಕೊಂಡ್ರೆ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಸಾಧ್ಯವಾಗುತ್ತೆ.

27

ನಿಮ್ಮ ಸಂಗಾತಿಯೊಂದಿಗಿನ(Relationship) ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡೋದು ಅಂದ್ರೆ ಅದು ಭಾವನಾತ್ಮಕವಾಗಿ ತುಂಬಾನೆ ಹಿತವಾಗಿರುತ್ತೆ. ಆದರೆ ಭಾವನೆಗಳಲ್ಲಿ ಕರಗಿ ಹೋಗುವ ಮೂಲಕ ಅಸುರಕ್ಷಿತ ಲೈಂಗಿಕತೆ ಕ್ರಿಯೆ ನಡೆಸುವುದು ಮುಂದೆ ನಿಮಗೂ ತೊಂದರೆಯನ್ನುಂಟು ಮಾಡಬಹುದು. 

37

ಕಾಂಡಮ್ (Condom)ಇಲ್ಲದೇ ಸೆಕ್ಸ್ ಮಾಡೋದು ಎಸ್ಟಿಡಿ ಮಾತ್ರವಲ್ಲದೆ ಅನಗತ್ಯ ಗರ್ಭಧಾರಣೆಯವರೆಗೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಕಾಂಡೋಮ್ ಬಳಸುವುದು ಮುಖ್ಯ. ಮೊದಲ ಬಾರಿಗೆ ನೀವು ಕಾಂಡೋಮ್ ಬಳಸುತ್ತಿದ್ದರೆ, ಯಾವ ಕಾಂಡೋಮ್ ಸರಿಯಾದ ಆಯ್ಕೆ ಎಂದು ತಿಳಿದಿಲ್ಲದಿದ್ದರೆ, ಕೆಲವು ಸಲಹೆಗಳು ಇಲ್ಲಿವೆ. 
 

47

ಗಾತ್ರ(Size)
ನೀವು ಸರಿಯಾದ ಗಾತ್ರದ ಕಾಂಡೋಮ್ ತೆಗೆದುಕೊಳ್ಳದಿದ್ದರೆ, ಅದು ಒಡೆದು ಹೋಗುವ ಅಥವಾ ಜಾರಿ ಬೀಳುವ ಸಾಧ್ಯತೆಯಿದೆ. ಇದು ಹಾಗಲ್ಲ, ಆದ್ದರಿಂದ ಗಾತ್ರಕ್ಕೆ ಅನುಗುಣವಾಗಿ ಅದನ್ನು ಆಯ್ಕೆ ಮಾಡುವುದು ಉತ್ತಮ. ಯಾವ ಕಂಪನಿಯ ಕಾಂಡೋಮ್ ತೆಗೆದುಕೊಳ್ಳಲಾಗಿದೆ ಅನ್ನೋದನ್ನು ಪರಿಶೀಲಿಸಿ, ಇದರಿಂದ ಆ ಕಾಂಡೋಮ್ ಗಾತ್ರವನ್ನು ಪತ್ತೆ ಮಾಡೋದು ಸುಲಭವಾಗುತ್ತೆ. 

57

ಮೆಟೀರಿಯಲ್(Material)
ಕಾಂಡೋಮ್ ಸಾಮಾನ್ಯವಾಗಿ ಲ್ಯಾಟೆಕ್ಸ್ ನಿಂದ ತಯಾರಿಸಲಾಗುತ್ತೆ. ಆದಾಗ್ಯೂ, ಅದರ ಬಗ್ಗೆ ಕಡಿಮೆ ಮಾಹಿತಿಯ ಕಾರಣದಿಂದಾಗಿ, ಈ ವಸ್ತುವು ಅಲರ್ಜಿಗಳಿಗೆ ಕಾರಣವಾಗಬಹುದು ಎಂದು ಕೆಲವೇ ಜನರಿಗೆ ತಿಳಿದಿದೆ. ಲ್ಯಾಟೆಕ್ಸ್ ಅಲರ್ಜಿ ಇರುವ ಜನರು ಲ್ಯಾಟೆಕ್ಸ್ ಅಲ್ಲದ ಕಾಂಡೋಮ್ ಖರೀದಿಸಬಹುದು.
 

67

ಅಳತೆ
ಕಾಂಡೋಮ್ ಬೇರೆ ಬೇರೆ ಅಳತೆಯಲ್ಲಿ ಬರುತ್ತೆ.ಸೆಕ್ಸ್ ಲೈಫ್(Sex life) ಎಂಜಾಯ್ ಮಾಡಲು ನಿಮಗೆ ಎಷ್ಟು ದಪ್ಪಗಿನ ಕಾಂಡೋಮ್ ಬೇಕು ಅನ್ನೋದನ್ನು ನೀವು ತಿಳಿದಿರಬೇಕು. ಇತ್ತೀಚಿನ ದಿನಗಳಲ್ಲಿ ಅಲ್ಟ್ರಾಥಿನ್ ಕಾಂಡೋಮ್ ಗಳ ಬೇಡಿಕೆ ಹೆಚ್ಚಾಗಿದೆ. ಇದನ್ನ ನೀವು ಆಯ್ಕೆ ಮಾಡಬಹುದು. 
 

77

ಟೆಕ್ಸ್ಚರ್ಡ್ ಕಾಂಡೋಮ್
ಕಾಂಡೋಮ್ ಗಳು ಸಾದಾ ಫಿನಿಶ್ ನಿಂದ ಟೆಕ್ಸ್ಚರ್ಡ್ ಔಟರ್ ಲೇಯತ್ ಸಹ ಬರುತ್ತವೆ. ಸಂಗಾತಿಗೆ ಇದು ಮೊದಲ ಅನುಭವವಾಗಿದ್ದರೆ, ಪ್ಲೇನ್ ಕಾಂಡೋಮ್ ಉತ್ತಮ ಆಯ್ಕೆಯಾಗಿದೆ, ಇದರಿಂದ ಅವರು ಆರಾಮದಾಯಕ ಅನುಭವ ಹೊಂದುತ್ತಾರೆ. ಇನ್ನು ಹೆಚ್ಚಿನ ಎಂಜಾಯ್ ಮಾಡಲು ಟೆಕ್ಸ್ಚರ್ಡ್ ಫಿನಿಶಿಂಗ್ ಹೊಂದಿರುವ ಕಾಂಡೋಮ್ ಆಯ್ಕೆ ಮಾಡಬಹುದು.

Read more Photos on
click me!

Recommended Stories