ಇಂದಿರಾ ಗಾಂಧಿಯಿಂದ ಹಿಡಿದು ಅಸ್ನೋಟಿಕರ್ ವರೆಗೆ ಭಾರತದಲ್ಲಿ ಹತ್ಯೆಯಾದ ಕಾಂಗ್ರೆಸ್ ನಾಯಕರಿವರು!

First Published Apr 19, 2024, 6:40 PM IST

ಭಾರತದ ಇತಿಹಾಸದಲ್ಲಿ ಅನೇಕ ರಾಜಕಾರಣಿಗಳ ಹತ್ಯೆ ನಡೆದಿದೆ. ಅದೆಷ್ಟೋ ಬಲಿಷ್ಠ ನಾಯಕರನ್ನು ಹತ್ಯೆ ಮಾಡಲಾಗಿದೆ. ಅದರಲ್ಲಿ ವೈಯಕ್ತಿಕ ದ್ವೇಷದ ಕಾರಣ ಇರಬಹುದು. ರಾಜಕಾರಣ ಇರಬಹುದು. ಇಲ್ಲಿ ಟಾಪ್‌ ಕಾಂಗ್ರೆಸ್ ನಾಯಕರ ಹತ್ಯೆಗೆ ಕಾರಣ ಮತ್ತು ವ್ಯಕ್ತಿಗಳ ಬಗ್ಗೆ ನೀಡಲಾಗಿದೆ. ಅನೇಕರು ಸಿಖ್‌ ಉಗ್ರರಿಂದಲೇ ಮೃತಪಟ್ಟಿದ್ದಾರೆ.

ಪ್ರತಾಪ್ ಸಿಂಗ್ ಕೈರೋನ್ ಪಂಜಾಬ್ ಪ್ರಾಂತ್ಯದ 3 ನೇ ಮುಖ್ಯಮಂತ್ರಿ. ಕಾಂಗ್ರೆಸ್‌ ಮುಖಂಡ. ಭಾರತೀಯ ಸ್ವಾತಂತ್ರ್ಯ ಚಳವಳಿಯ ನಾಯಕ. ಬ್ರಿಟಿಷ್ ಆಡಳಿತದಲ್ಲಿ ಜೈಲಿಗೆ ಹೋಗಿ ಬಂದಿದ್ದವರು. ಪಶ್ಚಿಮ ಪಂಜಾಬ್ (ಪಾಕಿಸ್ತಾನ) ನಿಂದ ವಲಸೆ ಬಂದ 3 ಮಿಲಿಯನ್‌ಗಿಂತಲೂ ಹೆಚ್ಚು  ಜನರನ್ನು ಪೂರ್ವ ಪಂಜಾಬ್‌ನಲ್ಲಿ  ವಸತಿ, ಉದ್ಯೋಗಗಳು ಮತ್ತು ಭೂ ಹಂಚಿಕೆಯ ಮೂಲಕ ಪುನರ್ವಸತಿಗೆ ಅವಕಾಶ ಮಾಡಿಕೊಟ್ಟರು. ಫೆಬ್ರವರಿ 6, 1965 ರಂದು ದೆಹಲಿಯಿಂದ ಚಂಡೀಗಢಕ್ಕೆ ಹೋಗುತ್ತಿದ್ದಾಗ ಸೋನಿಪತ್ ಜಿಲ್ಲೆಯ ರಸೋಯ್ ಗ್ರಾಮದ ಬಳಿ  ಸುಚಾ ಬಸ್ಸಿ, ಬಲದೇವ್ ಸಿಂಗ್ ಮತ್ತು ನಹರ್ ಸಿಂಗ್ ಎಂಬುವವರು ಗುಂಡಿಕ್ಕಿ ಹತ್ಯೆ ಮಾಡಿದರು. ಕೊಲೆ ಪ್ರಕರಣವೊಂದರಲ್ಲಿ ಕೈರೋನ್ ವೈಯಕ್ತಿಕ ಆಸಕ್ತಿಯನ್ನು ಹೊಂದಿದ್ದ ಕಾರಣ ಈ ಹತ್ಯೆಯಾಯ್ತು. 1970 ರಲ್ಲಿ ಅಪರಾಧಿಗಳೆಂದು ಘೋಷಿಸಿ ಗಲ್ಲಿಗೇರಿಸಲಾಯಿತು, ಆದರೆ ನಾಲ್ಕನೇ ಆರೋಪಿ ದಯಾ ಸಿಂಗ್‌ಗೆ ಜೀವಾವಧಿ ಶಿಕ್ಷೆ ನಂತರ 1994 ರಲ್ಲಿ ಬಿಡುಗಡೆ ಮಾಡಲಾಯಿತು.

Balwant Rai Mehta

 ಬಲವಂತರಾಯ್ ಮೆಹ್ತಾ ಗುಜರಾತ್ ರಾಜ್ಯದ ಎರಡನೇ ಮುಖ್ಯಮಂತ್ರಿ. ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಪಂಚಾಯತಿ ರಾಜ್‌ನ ವಾಸ್ತುಶಿಲ್ಪಿ ಎಂದು ಇವರನ್ನು ಕರೆಯಲಾಗುತ್ತೆ. 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, 19 ಸೆಪ್ಟೆಂಬರ್ ರಂದು,  ಮುಖ್ಯಮಂತ್ರಿ ಮೆಹ್ತಾ ಅವರು ಮಿಥಾಪುರದ ಟಾಟಾ ಕೆಮಿಕಲ್ಸ್‌ನಿಂದ ಗಡಿ ಭಾಗ ಕಚ್ ಗೆ ಬೀಚ್‌ಕ್ರಾಫ್ಟ್ ಪ್ರಯಾಣಿಕ ವಿಮಾನದಲ್ಲಿ ಹಾರಿದರು. ಈ ವಿಮಾನವನ್ನು ಭಾರತೀಯ ವಾಯುಪಡೆಯ ಮಾಜಿ ಪೈಲಟ್ ಜಹಾಂಗೀರ್ ಇಂಜಿನಿಯರ್ ನಡೆಸುತ್ತಿದ್ದರು. ಇದನ್ನು ಪಾಕಿಸ್ತಾನದ ವಾಯುಪಡೆಯ ಪೈಲಟ್ ಕೈಸ್ ಹುಸೇನ್ ಹೊಡೆದುರುಳಿಸಿದರು. ಈ ದುರಂತದಲ್ಲಿ ಮೆಹ್ತಾ ಅವರ ಪತ್ನಿ, ಅವರ ಮೂವರು ಸಿಬ್ಬಂದಿ, ಪತ್ರಕರ್ತರು ಮತ್ತು ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ಕೃಷ್ಣ ಬಲ್ಲಭ್ ಸಹಾಯ್. ಕಾಂಗ್ರೆಸ್ ಮುಖಂಡ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರ. ಬಿಹಾರದ ನಾಲ್ಕನೇ ಮುಖ್ಯಮಂತ್ರಿಯಾದರು. 3 ಜೂನ್ 1974 ರಂದು ಸಿಂಧೂರಿನ ಹಜಾರಿಬಾಗ್ - ಪಾಟ್ನಾ ಹೆದ್ದಾರಿಯಲ್ಲಿ ಅವರ ಹಿಂದೂಸ್ತಾನ್ ಅಂಬಾಸಿಡರ್ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಾಗ ಸಹಾಯ್ ನಿಧನರಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎದುರು ಬಣ ಈ ಕೃತ್ಯ ನಡೆಸಿದೆ ಎಂಬುದಾಗಿ ಮಾತುಗಳು ಕೇಳಿಬಂದಿತ್ತು. 

ಲಲಿತ್ ನಾರಾಯಣ ಮಿಶ್ರಾ 1973 ರಿಂದ 1975 ರವರೆಗೆ ಭಾರತ ಸರ್ಕಾರದಲ್ಲಿ ರೈಲ್ವೇ ಮಂತ್ರಿಯಾಗಿದ್ದರು. ಸಮಸ್ತಿಪುರ್-ದರ್ಭಾಂಗ ಬ್ರಾಡ್ ಗೇಜ್ ರೈಲು ಮಾರ್ಗ ಉದ್ಘಾಟನೆಗೆ 2 ಜನವರಿ 1975 ರಂದು ಸಮಸ್ತಿಪುರಕ್ಕೆ ಭೇಟಿ ನೀಡಿದ ಸಂದರ್ಭ ಬಾಂಬ್ ಸ್ಫೋಟದಲ್ಲಿ ಮೃತಪಟ್ಟರು. ಇಂದಿರಾ ಗಾಂಧಿಯವರು ಈ ಕೊಲೆಗೆ ವಿದೇಶಿ ಶಕ್ತಿಗಳು ಕಾರಣ ಎಂದು ದೂರಿದರು. ಕೊಲೆ ನಡೆದು 33 ವರ್ಷವಾದರೂ ಪ್ರಕರಣ ಇತ್ಯರ್ಥವಾಗಲಿಲ್ಲ. 2013ರ ಹೊತ್ತಿಗೆ ಕೊಲೆಯ ಆರೋಪಿ 27 ವರ್ಷ ವಯಸ್ಸಿನ ವ್ಯಕ್ತಿ 65 ವರ್ಷ ವಯಸ್ಸಿನವನಾಗಿದ್ದನು. ನಿರಪರಾಧಿ ಎಂದು ಸಾಬೀತುಪಡಿಸಲು ಉಲ್ಲೇಖಿಸಿದ 39 ಸಾಕ್ಷಿಗಳಲ್ಲಿ 31 ಮಂದಿ ಮೃತಪಟ್ಟಿದ್ದರು. 20 ಕ್ಕೂ ಹೆಚ್ಚು ವಿವಿಧ ನ್ಯಾಯಾಧೀಶರು  ಈ ಪ್ರಕರಣವನ್ನು ಆಲಿಸಿದ್ದರು. 39 ವರ್ಷಗಳ ವಿಚಾರಣೆಯ ನಂತರ, 8 ಡಿಸೆಂಬರ್ 2014 ರಂದು ದೆಹಲಿ ನ್ಯಾಯಾಲಯವು ಮಿಶ್ರಾ ಹತ್ಯೆಯ ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತು.

ಸಂಜಯ್ ಗಾಂಧಿ ಸಂಸತ್ತು, ಲೋಕಸಭೆ ಸದಸ್ಯರಾಗಿದ್ದರು. ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ತಾಯಿಯ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಖ್ಯಸ್ಥರಾಗಿ ಮತ್ತು ಭಾರತದ ಪ್ರಧಾನಿಯಾಗುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು.  ಮಾರ್ಚ್ 1977 ರಲ್ಲಿ ಸಂಜಯ್ ಗಾಂಧಿ ಹತ್ಯೆ ಯತ್ನದಿಂದ ತಪ್ಪಿಸಿಕೊಂಡಿದ್ದರು. ಚುನಾವಣಾ ಪ್ರಚಾರದ ವೇಳೆ ಅಪರಿಚಿತ ಬಂದೂಕುಧಾರಿಗಳು ನವದೆಹಲಿಯಿಂದ ಆಗ್ನೇಯಕ್ಕೆ 300 ಮೈಲಿ ದೂರದಲ್ಲಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದರು. ಆದರೆ 23 ಜೂನ್ 1980 ರಂದು  ವಿಮಾನ ಅಪಘಾತದಲ್ಲಿ ಮೃತಪಟ್ಟರು. ಇದು ಹತ್ಯೆಯೆಂದೇ ಹೇಳಲಾಗುತ್ತದೆ.
 

ಲಾಲಾ ಜಗತ್ ನರೈನ್ ರಾಜಕೀಯ ಮುಖಂಡ, ಪತ್ರಕರ್ತ, ಎಂಪಿ ಕೂಡ ಆಗಿದ್ದರು. ಪಂಜಾಬ್  ಸಚಿವರಾಗಿದ್ದರು. ಜಗತ್, ಖಲಿಸ್ತಾನ್ ಚಳವಳಿಯ ವಿಮರ್ಶಕರಾಗಿದ್ದರು. ಇದೇ ಅವರ ಹತ್ಯೆ ಕಾರಣ ಎನ್ನಲಾಗುತ್ತಿದೆ. ಜನವರಿ 1981 ರಲ್ಲಿ ಅವರ ಹತ್ಯೆಗೆ ಸಂಚು ಹೂಡಲಾಗಿತ್ತು. ಆದ ತಪ್ಪಿಸಿಕೊಂಡು ಬದುಕುಳಿದಿದ್ದರು.  9 ಸೆಪ್ಟೆಂಬರ್ 1981 ರಂದು, ನರೈನ್ ಅವರನ್ನು ಇಬ್ಬರು ಹಂತಕರ ತಂಡವು ಗುಂಡಿಕ್ಕಿ ಕೊಂದಿತು. ಹಂತಕ ನಛತಾರ್ ಸಿಂಗ್ ರೋಡ್, ದಲ್ಬೀರ್ ಸಿಂಗ್ ಮತ್ತು ಸ್ವರಣ್ ಸಿಂಗ್ ರೋಡ್  ಎಂಬ ಮೂವರನ್ನು ಬಂಧಿಸಲಾಯ್ತು. 

ವಿಶ್ವ ನಾಥ್ ತಿವಾರಿ ಒಬ್ಬ ಭಾರತೀಯ ಲೇಖಕ ಮತ್ತು ಸಂಸದ. ಅವರು ಪಂಜಾಬಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಅವರು 1982 ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡರು ಮತ್ತು ಮರಣದವರೆಗೂ ಸೇವೆ ಸಲ್ಲಿಸಿದರು. 1984 ರಲ್ಲಿ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಚಂಡೀಗಢದ ಸೆಕ್ಟರ್ 24 ರಲ್ಲಿ ಖಲಿಸ್ತಾನಿ ಉಗ್ರಗಾಮಿಗಳಿಂದ ತಿವಾರಿ ಹತ್ಯೆಗೀಡಾದರು.
 

ಹದಿನೈದು ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ಭಾರತದ ಏಕೈಕ ಮಹಿಳಾ ಪ್ರಧಾನ ಮಂತ್ರಿ  ಇಂದಿರಾ ಪ್ರಿಯದರ್ಶಿನಿ ಗಾಂಧಿಯವರು 31 ಅಕ್ಟೋಬರ್ 1984 ರಂದು ನವದೆಹಲಿಯ ಸಫ್ದರ್‌ಜಂಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಬೆಳಿಗ್ಗೆ 9:30 ಕ್ಕೆ ಹತ್ಯೆಗೀಡಾದರು. ಆಕೆಯ ಸಿಖ್ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್  ಎಂಬಿಬ್ಬರು ಗುಂಡಿಕ್ಕಿದರು. ಸಿಖ್‌ರ ಪವಿತ್ರ ಗೋಲ್ಡನ್‌ ಟೆಂಪಲ್ ಮೇಲಿನ  ಆಪರೇಷನ್ ಬ್ಲೂ ಸ್ಟಾರ್‌ ಕಾರ್ಯಾಚರಣೆ ನಡೆಸಿದ್ದನ್ನು ಖಂಡಿಸಿ ಈ ಹತ್ಯೆಯಾಗಿತ್ತು. 

 ಲಲಿತ್ ಮಾಕೆನ್ ರಾಜಕೀಯ ಮುಖಂಡ,  1984 ರಲ್ಲಿ, ಅವರು ಸಂಸತ್ತಿನ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾದರು. ಭಾರತದ ಸಂಸತ್ತಿಗೆ ಆಯ್ಕೆಯಾಗುವ ಮೊದಲು ಅವರು ಮೆಟ್ರೋಪಾಲಿಟನ್ ಕೌನ್ಸಿಲರ್ ಆಗಿದ್ದರು. ಭಾರತದ ದಿವಂಗತ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಅಳಿಯ.  ಲಲಿತ್ ಮಾಕೆನ್ ವಿರೋಧಿ ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಖಲಿಸ್ತಾನಿಗಳು ಹತ್ಯೆ 1985 ರಲ್ಲಿ ಮಾಡಿದ್ದರು. ಗುಂಡಿಟ್ಟು ಹತ್ಯೆ ಮಾಡಿದಾಗ  ಪತ್ನಿ ಗೀತಾಂಜಲಿ ಕೂಡ  ಗುಂಡೇಟಿಗೆ ಬಲಿಯಾದರು.  ಪ್ರಕರಣ ಸಂಬಂಧ ಸುಖದೇವ್ ಸಿಂಗ್ ಸುಖ, ಹರ್ಜಿಂದರ್ ಸಿಂಗ್ ಜಿಂದಾ, ರಂಜಿತ್ ಸಿಂಗ್ ಎಂಬ ಮೂವರು ಸಿಖ್ ಉಗ್ರಗಾಮಿಗಳನ್ನು  ಬಂಧಿಸಿದರು. 1992ರಲ್ಲಿ ಪುಣೆಯ ಯೆರವಾಡ ​​ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಜೋಗಿಂದರ್ ಪಾಲ್ ಪಾಂಡೆ ಅವರು ಭಾರತದ ಪಂಜಾಬ್‌ನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರಾಗಿದ್ದರು. ಅವರು ಪಂಜಾಬ್ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ಸಚಿವರಾಗಿದ್ದರು. ಅವರು 1987 ರಲ್ಲಿ ಸಿಖ್ ಉಗ್ರಗಾಮಿಗಳಿಂದ ಕೊಲ್ಲಲ್ಪಟ್ಟರು.
 

vangaveeti mohana ranga

ವಂಗವೀಟಿ ಮೋಹನ ರಂಗ ರಾವ್ ಆಂಧ್ರಪ್ರದೇಶದ ಕಾಂಗ್ರೆಸ್ ಮುಖಂಡ, ವಿಜಯವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪ್ರಬಲ ನಾಯಕ. ರಂಗಾ ಅವರ ಹಿರಿಯ ಸಹೋದರ  ವಂಗವೀಟಿ ರಾಧಾ ವ್ಯವಹಾರಿಕ ಕಾರಣಗಳಿಂದ ಎದುರಾಳಿಗಳಿಂದ ಕೊಲೆಯಾದರು. ರಾಧಾ ನಿಧನದ ನಂತರ ಮೋಹನ ರಂಗ  ರಾಜಕೀಯವಾಗಿ ಪ್ರಬಲರಾದ್ರು. ಭೂ ಪಟ್ಟಾ ವಿತರಣೆಗಾಗಿ ರಂಗ ಅವರು ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದಾಗ 1988 ರಲ್ಲಿ ರಾಜಕೀಯ ಎದುರಾಳಿ ಗ್ಯಾಂಗ್ ಹತ್ಯೆ ಮಾಡಿತು.ಇಬ್ಬರು ನಿಯೋಜಿತ ಅಂಗರಕ್ಷಕರು ಮಧ್ಯಪ್ರವೇಶಿಸಲಿಲ್ಲ. ಈ ಕೊಲೆ  ಗಲಭೆಗೆ ಕಾರಣವಾಯಿತು. ವಿಜಯವಾಡ ನಗರದಲ್ಲಿ 40 ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿತ್ತು. 42 ಜನರು ಸಾವನ್ನಪ್ಪಿದ್ದಾರೆ.

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯು 21 ಮೇ 1991 ರಂದು ಭಾರತದ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಪರಿಣಾಮವಾಗಿ ಸಂಭವಿಸಿತು. ಕನಿಷ್ಠ 14 ಮಂದಿ ಕೊಲ್ಲಲ್ಪಟ್ಟಿದ್ದರು. ನೆರೆಯ ಶ್ರೀಲಂಕಾದಲ್ಲಿ ಸಕ್ರಿಯವಾಗಿದ್ದ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ ಈ ಕೃತ್ಯ ಎಸಗಿದ್ದಳು. ಹತ್ಯೆ ಪ್ರಕರಣದಲ್ಲಿ ಏಳು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ದರ್ಶನ್ ಸಿಂಗ್ ಕೈಪಿ  ಪಂಜಾಬ್‌ ನವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರಾಗಿದ್ದರು. ಅವರು ಜಲಂಧರ್‌ನಿಂದ ಐದು ಬಾರಿ ಪಂಜಾಬ್ ವಿಧಾನಸಭೆಗೆ ಆಯ್ಕೆಯಾಗಿದ್ದರು. 1992ರಲ್ಲಿ ಖಲಿಸ್ತಾನಿ ಉಗ್ರರ ಗುಂಡಿಗೆ ಬಲಿಯಾಗಿದ್ದರು.

ಇನ್ನು ರಾಗ್ಯಾ ನಾಯಕ್  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕರಾಗಿ ತೆಲಂಗಾಣದ ನಲ್ಗೊಂಡ ದೇವರಕೊಂಡ ಕ್ಷೇತ್ರವನ್ನು ಪ್ರತಿನಿಧಿಸಿದರು. 29 ಡಿಸೆಂಬರ್ 2001 ರಂದು, ಮಹೆಬೂಬ್‌ನಗರದ ಮಡ್ಡಿಮಡುಗು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾಗ ಪೀಪಲ್ಸ್ ವಾರ್ ಗ್ರೂಪ್ ಉಗ್ರಗಾಮಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು.

ಬಿಯಾಂತ್ ಸಿಂಗ್  ರಾಜಕಾರಣಿ ಮತ್ತು 1992 ರಿಂದ 1995 ರವರೆಗೆ ಪಂಜಾಬ್‌ನ 12 ನೇ ಮುಖ್ಯಮಂತ್ರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಅವರನ್ನು ಹತ್ಯೆ ಮಾಡಲಾಯಿತು. 31 ಆಗಸ್ಟ್ 1995 ರಂದು ಚಂಡೀಗಢದ ಸೆಕ್ರೆಟರಿಯೇಟ್ ಸಂಕೀರ್ಣದಲ್ಲಿ ಬಾಂಬ್ ಸ್ಫೋಟದಲ್ಲಿ ಬಿಯಾಂತ್ ಸಿಂಗ್ ಹತ್ಯೆಗೀಡಾದರು. ಈ ಸ್ಫೋಟವು 3 ಭಾರತೀಯ ಕಮಾಂಡೋಗಳು ಸೇರಿದಂತೆ 17 ಮಂದಿಯನ್ನು ಬಲಿ ತೆಗೆದುಕೊಂಡಿತು. ಖಲಿಸ್ತಾನ್ ಕಮಾಂಡೋ ಫೋರ್ಸ್ ಕೂಡ ಹತ್ಯೆಯಲ್ಲಿ ಭಾಗಿಯಾಗಿತ್ತು.

ರಾಜೋ ಸಿಂಗ್ ಭಾರತದ ಬಿಹಾರದ ರಾಜಕಾರಣಿ, 50 ವರ್ಷಗಳ ಕಾಲ  ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ನವಾಡ ಮತ್ತು ಶೇಖ್‌ಪುರ ಪ್ರದೇಶದ ಅಶೋಕ್ ಮಹತೋ ಗ್ಯಾಂಗ್‌ನಿಂದ ಸಿಂಗ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಯ್ತು. ಈ ಹತ್ಯೆಯು 2001 ರಲ್ಲಿ ರಾಷ್ಟ್ರೀಯ ಜನತಾ ದಳ ಶೇಖ್‌ಪುರ ಅಧ್ಯಕ್ಷ ಕಾಶಿ ಯಾದವ್ ಸೇರಿದಂತೆ 9 ಜನರ ಹತ್ಯೆಗೆ ಪ್ರತೀಕಾರವಾಗಿತ್ತು.

ನಂದ್ ಕುಮಾರ್ ಪಟೇಲ್  ಕಾಂಗ್ರೆಸ್ ನಿಂದ ಸತತವಾಗಿ ಐದು ಬಾರಿ ಖಾರ್ಸಿಯಾ ಅಸೆಂಬ್ಲಿ ಕ್ಷೇತ್ರಕ್ಕೆ ಆಯ್ಕೆಯಾದರು.  ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯ ಸರ್ಕಾರಗಳಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. 2013ರಲ್ಲಿ ದರ್ಭಾ ಕಣಿವೆಯಲ್ಲಿ ನಡೆದ ನಕ್ಸಲರ ದಾಳಿಯ ವೇಳೆ ಅವರನ್ನು ನಕ್ಸಲೀಯರು ಅಪಹರಿಸಿ ಹತ್ಯೆ ಮಾಡಿದ್ದರು. 25 ಮೇ 2013 ರಂದು, ಕಾಂಗ್ರೆಸ್ ಬೆಂಗಾವಲು ಪಡೆಯ ಮೇಲೆ ನಕ್ಸಲೀಯರು ನಡೆಸಿದ ದಾಳಿಯಲ್ಲಿ ಹಲವಾರು ಕಾಂಗ್ರೆಸ್ ನಾಯಕರು ಕೊಲ್ಲಲ್ಪಟ್ಟರು. ಕಾಂಗ್ರೆಸ್ ನಾಯಕ ಮಹೇಂದ್ರ ಕರ್ಮ, ಇಂದಿರಾ ಅವರ ನಿಕಟವರ್ತಿ ವಿದ್ಯಾ ಚರಣ್ ಶುಕ್ಲಾ  ಕೂಡ ಮೃತಪಟ್ಟರು. 

ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆ ವಾಲಾ ಪಂಜಾಬಿ ಗಾಯಕ, ಮೇ 2022 ರಲ್ಲಿ   ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ಕಾರಿನಲ್ಲಿ ಗುಂಡಿಕ್ಕಿ ಕೊಂದರು.  ಲಾರೆನ್ಸ್ ಬಿಷ್ಣೋಯ್  ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ . ಪೊಲೀಸರ ಪ್ರಕಾರ, 2021 ರಲ್ಲಿ ಅಕಾಲಿ ನಾಯಕ ವಿಕ್ಕಿ ಮಿಡ್ದುಖೇರಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮೂಸೆ ವಾಲಾನನ್ನು ಕೊಂದಿರುವುದಾಗಿ ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿದೆ.  

ವಸಂತ್ ಅಸ್ನೋಟಿಕರ್ ಕಾರವಾರ ಕಾಂಗ್ರೆಸ್ ಮುಖಂಡ, ಶಾಸಕ. ಅವರು 2000ರ ಫೆ.19ರಂದು ಕಾರವಾರದ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೇಲ್ಮನವಿದಾರ ಹಾಗೂ ಇತರೆ ಆರೋಪಿಗಳು ಅಸ್ನೋಟಿಕರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

click me!