Photos| ಚೀರಾಡಲೂ ಅವಕಾಶವಿಲ್ಲ, ಕ್ಷಣಾರ್ಧದಲ್ಲಿ 7 ಮಂದಿ ಸಜೀವ ದಹನ!

First Published Feb 17, 2020, 12:01 PM IST

ಲಕ್ನೋ- ಆಗ್ರಾ ಎಕ್ಸ್ ಪ್ರೆಸ್ ವೇನಲ್ಲಿರುವ ಬಂಗಾರ್ ಮೌ ಕಟ್ ಬಳಿ ಹರ್ದೋಯಿ ಕಡೆ ತೆರಳುತ್ತಿದ್ದ ವ್ಯಾನ್ ಒಂದರ ಟಯರ್ ಸಿಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು, ಮುಂಬದಿಯಲ್ಲಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ವ್ಯಾನ್ ಟ್ರಕ್ ಗೆ ಡಿಕ್ಕಿ ಹೊಡೆದ ಬಳಿಕ ಭಯಾನಕ ಘಟನೆ ನಡೆದಿದೆ. ಯಾಕೆಂದರೆ ಗ್ಯಾಸ್ ಸಿಲಿಂಡರ್ ಹೊಂದಿದ್ದ ವ್ಯಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗಿದ್ದ ಜನರುಇ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೂ ಮೊದಲೇ ಸುಟ್ಟು ಕರಕಲಾಗಿದ್ದಾರೆ. ರಕ್ಷಿಸಲು ಧಾವಿಸಿದ್ದ ಜನರೂ ಬೆಂಕಿಯನ್ನು ಕಂಡು ಹೆಜ್ಜೆ ಮುಂದಿಡಲು ಭಯ ಬಿದ್ದಿದ್ದಾರೆ. ಅಗ್ನ ನರ್ತನ ಎಷ್ಟಿತ್ತೆಂದರೆ ಒಳಗಿದ್ದ 7 ಮಂದಿಗೆ ಚೀರಾಡಲೂ ಅವಕಾಶ ಸಿಗದೆ ಜೀವಂತ ಸುಟ್ಟು ಕರಕಲಾಗಿದ್ದಾರೆ.

ವ್ಯಾನ್ ನಲ್ಲಿ ಚಾಲಕ ಸೇರಿದಂತೆ ಇಬ್ಬರು ಯುವಕರು, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಇದ್ದರು.
undefined
ಅಪಘಾತ ಬಳಿ ವ್ಯಾನ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಯಾರಿಗೂ ಹೊರಬರಲು ಸಾಧ್ಯವಾಗಿಲ್ಲ. ಹೀಗಾಗಿ 7 ಮಂದಿ ಜೀವಂತ ಸಮಾಧಿಯಾಗಿದ್ದಾರೆ.
undefined
ವ್ಯಾನ್ ಸಂಪೂರ್ಣವಾಗಿ ಟ್ರಕ್ ನಡು ಸಿಲುಕಿದ್ದರಿಂದ ಕೂಡಲೇ ರಕ್ಷಣಾ ಕಾರ್ಯ ನಡೆಸುವುದೂ ಅಸಾಧ್ಯವಾಗಿದೆ. ಹೀಗಾಗೇ ವ್ಯಾನ್ ಚಾಲಕನಿಗೂ ಹೊರ ಬರಲು ಸಾಧ್ಯವಾಗಲಿಲ್ಲ. ಈ ಭಯಾನಕ ದೃಶ್ಯ ಕಂಡು ಕೆಲ ಹೊತ್ತು ಪೊಲೀಸರೂ ನಿಂತಲ್ಲೇ ನಿಂತುಕೊಂಡಿದ್ದರು.
undefined
ಕೂಡಲೇ ಕ್ರೇನ್ ಕರೆಸಿಕೊಂಡಿದ್ದರಿಂದ, ಟ್ರಕ್ ಅಡಿಯಲ್ಲಿ ಸಿಲುಕಿದ್ದ ವ್ಯಾನ್ ನ್ನು ಎಳೆದು ಹೊರ ತೆಗೆದಿದ್ದಾರೆ. ಈ ನಡುವೆ ಸ್ಥಳಕ್ಕಾಗಮಿಸಿದ 3 ಅಗ್ನಿಶಾಮಕ ವಾಹನಗಳು ಬಹಳ ಕಷ್ಟಪಟ್ಟು ಅಗ್ನಿ ನಂದಿಸುವ ಕಾರ್ಯ ನಡೆಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಎಲ್ಲರ ದೇಹಗಲೂ ಸುಟ್ಟು ಕರಕಲಾಗಿದ್ದವು.
undefined
ಈ ಭೀಕರ ಅಪಘಾತದಿಂದ ಉನ್ನಾವ್ ಹಾಗೂ ಹರ್ದೋಯಿ ರಸ್ತೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
undefined
ರಕ್ಷಣಾ ಕಾರ್ಯ ಆರಂಭಿಸಿದ ಬರೋಬ್ಬರಿ 2 ಗಂಟೆಗಳ ಬಳಿಕ ಸುಟ್ಟ ದೇಹಗಳನ್ನು ಹೊರ ತೆಗೆಯಲಾಯಿತು. ಬಳಿಕವಷ್ಟೇ ವಾಹನ ಚಾಲನೆ ಆರಂಭಗೊಂಡಿದೆ.
undefined
ನಾಸಿರಾಪುರ್ ಹಳ್ಳಿಯ ಜನರು ವ್ಯಾನ್ ನಲ್ಲಿದ್ದ ಜನರನ್ನು ರಕ್ಷಿಸಲು ಧಾವಿಸುವ ಮೊದಲೇ ಬೆಂಕಿ ಆವರಿಸಿಕೊಂಡಿದ್ದು, ಒಳಗಿದ್ದ ಜನರು ನರಳಾಡಲಾರಂಭಿಸಿದ್ದರು. ರಕ್ಷಿಸಲು ಯಾವುದೇ ದಾರಿ ಉಳಿದಿರಲಿಲ್ಲ. ಅಲ್ಲದೇ ಈ ನಡುವೆ ವ್ಯಾನ್ ಒಳಗಿನಿಂದ ಪಟಾಕಿಯಂತೆ ಶಬ್ಧಗಳೂ ಬರುತ್ತಿದ್ದು, ಇದು ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿತ್ತು.
undefined
click me!