ಥೈಲ್ಯಾಂಡಲ್ಲಿ ಫ್ಯಾಮಿಲಿ ಜೊತೆ ಶ್ವೇತಾ ಚೆಂಗಪ್ಪ: ಪತಿಯನ್ನು ಸೌತ್ ಆಫ್ರಿಕನ್ ಕ್ರಿಕೆಟರ್‌ಗೆ ಹೋಲಿಸಿದ ಫ್ಯಾನ್ಸ್

First Published | May 3, 2024, 4:24 PM IST

ಕನ್ನಡದ ನಟಿ ನಿರೂಪಕಿ ಶ್ವೇತಾ ಚೆಂಗಪ್ಪ ತಮ್ಮ ಗಂಡ, ಮಗ ಮತ್ತು ಇತರ ಸ್ನೇಹಿತರ ಜೊತೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದು, ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಎರಡು ದಶಕಗಳಿಂದ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ (Shwetha Chengappa). ಇದೀಗ ತಮ್ಮ ಹೊಸ ಶೋ ಶುರುವಾಗಲಿರುವ ನಡುವೆಯೇ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. 

ಶ್ವೇತಾ ಚೆಂಗಪ್ಪ ತಮ್ಮ ಪತಿ ಕಿರಣ್, ಮಗ ಜಿಯಾನ್ ಮತ್ತು ಇತರ ಸ್ನೇಹಿತರ ಜೊತೆ ಸಮ್ಮರ್ ವೆಕೇಶನ್ ಎಂಜಾಯ್ ಮಾಡೋದಕ್ಕೆ ಥೈಲ್ಯಾಂಡ್ ಗೆ (Thailand) ತೆರಳಿದ್ದಾರೆ. ಜೊತೆಗೆ ಅಲ್ಲಿನ ಸಿಕ್ಕಾಪಟ್ಟೆ ಬಿಸಿಲಿನ ಬಗ್ಗೆಯೂ ದೂರಿದ್ದಾರೆ. 
 

Tap to resize

ಶ್ವೇತಾ ತಮ್ಮ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಥೈಲ್ಯಾಂಡ್ ಏರ್ ಪೋರ್ಟ್ ನಲ್ಲಿ (Airport) ಇಳಿದ ಬಳಿಕ ಫೋಟೋಸ್ ಮತ್ತು ಅಲ್ಲಿನ ಕೋಸು ಮೈ ಐಲ್ಯಾಂಡ್ ಬಿಸಿಲಿನಲ್ಲಿ ಜ್ಯೂಸ್ ಕುಡಿಯುತ್ತಾ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಬೀಚ್ ಬದಿಯಲ್ಲಿ ಕಪ್ಪು ಬಣ್ಣದ ಟೀಶರ್ಟ್, ಗ್ರೇ ಬಣ್ಣದ ಪ್ಯಾಂಟ್ ಧರಿಸಿ, ಕಣ್ಣಿಗೆ ಗಾಗಲ್ಸ್ ಹಾಕಿ, ಕೈಯಲ್ಲಿ ಜ್ಯೂಸ್ ಹಿಡಿದು ಪೋಸ್ ನೀಡಿರುವ ಶ್ವೇತಾ, ಉಫ್… ತುಂಬಾ ಹಾಟ್, ಈ ಹೀಟ್ ನ್ನು ತಡೆದುಕೊಳ್ಳಲು ಸಾಧ್ಯ ಆಗ್ತಿಲ್ಲ. ಏನ್ ಮಾಡೋದು ಜಸ್ಟ್ ಸ್ಮೈಲ್ ಆಂಡ್ ಬೇರ್ ಇಟ್ (Just smile and bare it) ಎಂದು ಬರೆದುಕೊಂಡಿದ್ದಾರೆ. 
 

ಶ್ವೇತಾ ನೋಡಿ ಅಭಿಮಾನಿಗಳು ಸಂತೂರ್ ಮಮ್ಮಿ, ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ, ಯಾವ ಬಾಲಿವುಡ್ ಹೀರೋಯಿನ್ ಗೂ ಕಡಿಮೆ ಇಲ್ಲ ನೀವು, ನಿಮ್ಮ ನಗು ಚೆನ್ನಾಗಿದೆ ನಿಮ್ಮ ಫ್ಯಾಮಿಲಿ ತುಂಬಾನೆ ಚೆನ್ನಾಗಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಇನ್ನು ಶ್ವೇತಾ ಅವರ ಪತಿಯನ್ನು ನೋಡಿದ ಅಭಿಮಾನಿಗಳು ಅನೇಕ ಜನರು ನಿಮ್ಮ ಪತಿ  ಥೇಟ್ ಸೌತ್ ಆಫ್ರಿಕಾದ ಕ್ರಿಕೇಟರ್ ತಬ್ರೀಸ್ ಶಂಸಿ (Tabraiz Shamsi) ತರಾನೆ ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಥಟ್ಟನೆ ನೋಡಿದರೆ ನಿಜವಾಗಿಯೂ ಕಿರಣ್ ಅವರು ಶಂಸಿ ಥರಾನೇ ಕಾಣಿಸ್ತಾರೆ ಅನ್ನೋದು ಸುಳ್ಳಲ್ಲ. 
 

ಇನ್ನು ಶ್ವೇತಾ ಚೆಂಗಪ್ಪ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಲ್ಲಿ (Comedy Khiladigalu premier league) ಜಡ್ಜ್ ಆಗಿ, ಅನುಶ್ರೀ, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್, ಕುರಿ ಪ್ರತಾಪ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ಒಂದು ಫ್ಯಾಮಿಲಿ ಟೂರ್ ಮಾಡಿ ಎಂಜಾಯ್ ಮಾಡ್ತಿದ್ದಾರೆ ಶ್ವೇತಾ
 

Latest Videos

click me!