Prajwal Revanna : ದುಬೈಗೆ ಹಾರಿದ್ರಾ ಪ್ರಜ್ವಲ್‌ ರೇವಣ್ಣ?  ಬೆಂಗಳೂರಿಗೆ ಬರೋದು ಡೌಟಾ..?

Prajwal Revanna : ದುಬೈಗೆ ಹಾರಿದ್ರಾ ಪ್ರಜ್ವಲ್‌ ರೇವಣ್ಣ? ಬೆಂಗಳೂರಿಗೆ ಬರೋದು ಡೌಟಾ..?

Published : May 03, 2024, 12:36 PM ISTUpdated : May 03, 2024, 12:37 PM IST

ಪ್ರಜ್ವಲ್‌ ರೇವಣ್ಣ ಅವರು ಜರ್ಮನಿಯಿಂದ ದುಬೈಗೆ ಹೋಗಿದ್ದಾರೆ ಎನ್ನಲಾಗಿದೆ. ದುಬೈನಿಂದ ನೇರವಾಗಿ ಬೆಂಗಳೂರಿಗೆ ಬರುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆಯಾದರೂ ಖಚಿತ ಮಾಹಿತಿ ತಿಳಿದುಬಂದಿಲ್ಲ. 

ಪ್ರಜ್ವಲ್‌ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Pen drive case) ಸಂಬಂಧಿಸಿದಂತೆ ದಿನ ದಿನವೂ ಹೊಸ ಹೊಸ ಬೆಳವಣಿಗೆ ಆಗುತ್ತಿದೆ. ಈ ನಡುವೆ ಜರ್ಮನಿಯಲ್ಲಿ ಇದ್ದ ಪ್ರಜ್ವಲ್‌ ರೇವಣ್ಣ(Prajwal Revanna Sex Scanda) ಅವರು ದುಬೈಗೆ (Dubai) ಹೋಗಿದ್ದಾರೆ ಎನ್ನಲಾಗಿದೆ. ಹಾಗೆಯೇ ದುಬೈನಿಂದ ನೇರವಾಗಿ ಬೆಂಗಳೂರಿಗೆ(Bengaluru) ಬರುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಈ ನಡುವೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲ ಕಾಲಾವಕಾಶ ಕೇಳಿದ್ದು, ಮೊನ್ನೆ ರಾತ್ರಿಯೇ ಪ್ರಜ್ವಲ್ ದುಬೈಗೆ ತೆರಳಿರುವ ಬಗ್ಗೆ ಮಾಹಿತಿ ಇದೆ. ಇದರ ಜೊತೆಗೆ ನಾನು ಬೆಂಗಳೂರಲ್ಲಿ ಇಲ್ಲ ಎಂದು ಟ್ವೀಟ್ ಮಾಡಿದ್ದು, ಅವರು ಎಲ್ಲಿದ್ದಾರೆ ಎಂದು ಈವರೆಗೂ ಸಹ ಯಾವುದೇ ಖಚಿತ ಮಾಹಿತಿಯೇ ಇಲ್ಲ ಎನ್ನಲಾಗಿದೆ. ಅದರಲ್ಲೂ ಪ್ರಜ್ವಲ್ ಬಗ್ಗೆ ಕುಟುಂಬಸ್ಥರಿಂದಲೂ ಮಾಹಿತಿ ಸಿಗುತ್ತಿಲ್ಲವಾದ್ದರಿಂದ ಎಸ್‌ಐಟಿಗೆ (SIT) ತಲೆನೋವಾಗಿ ಪರಿಣಮಿಸಿದೆ. ಮಹತ್ವದ ವಿಚಾರ ಏನೆಂದರೆ ಮೇ 15 ಮಧ್ಯಾಹ್ನ 12.30ಕ್ಕೆ ರಿಟರ್ನ್ ಟಿಕೆಟ್ ಬುಕ್ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ರಾಜ್ಯದಲ್ಲಿ ಆಗುತ್ತಿರುವ ತೀವ್ರತರದ ಬದಲಾವಣೆಗಳನ್ನು ಗಮನಿಸಿದ್ರೆ ಅವರು ಬೆಂಗಳೂರಿಗೆ ಬರುತ್ತಾರಾ ಅಥವಾ ಮತ್ತೆ ಜರ್ಮನಿಗೆ ತೆರಳುತ್ತಾರಾ ಅನ್ನೋ ಪ್ರಶ್ನೆ ಕಾಡುತ್ತಿದೆ.

ಇದನ್ನೂ ವೀಕ್ಷಿಸಿ:  CoviShield: ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆಯೇ ಜೀವಕ್ಕೆ ಕುತ್ತು ತರುತ್ತಾ? ಹೃದಯಾಘಾತ ಸಮಸ್ಯೆಗೆ ಕೋವಿಶೀಲ್ಡ್ ಕಾರಣನಾ?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more