ಸ್ಮಾರ್ಟ್ ಫೋನನ್ನು ಟಾಯ್ಲೆಟ್ ಗೆ ತೆಗೆದುಕೊಂಡು ಹೋಗ್ಬೇಡಿ!

First Published Feb 21, 2021, 9:59 AM IST

ಇತ್ತೀಚಿನ ದಿನಗಳಲ್ಲಿ ಜನರು ಸ್ನೇಹಿತರನ್ನು ಅಥವಾ ಹೆಂಡತಿಯನ್ನು ಬೇಕಾದರೂ ಬಿಟ್ಟಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಫೋನ್ ಬಿಟ್ಟು ಇರಲಾರರು. ನೀವು ಸಹ ಸ್ಮಾರ್ಟ್ ಫೋನ್ ಅನ್ನು ಎಲ್ಲ ಕಡೆಯೂ ಕೊಂಡೊಯ್ಯುತ್ತೀರಾ, ಟಾಯ್ಲೆಟ್ ಗೆ ಕೂಡಾ? ಈ ಅಭ್ಯಾಸವು ಆರೋಗ್ಯದ ಮೇಲೆ ಉಂಟು ಮಾಡಬಹುದಾದ ಕೆಲವು ಗಂಭೀರವಾದ ದುಷ್ಪರಿಣಾಮಗಳನ್ನು ತಿಳಿಯಲು ಮುಂದೆ ಓದಿ.
 

ಹಿರಿಯ ವಯಸ್ಸಿನ ಕೆಲವು ಶಿಸ್ತಿನ ವ್ಯಕ್ತಿಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲರೂ ತಮ್ಮ ಫೋನ್ಗಳನ್ನು ಯಾವಾಗಲೂ ತಮ್ಮ ಹತ್ತಿರದಲ್ಲೇ ಇಟ್ಟು ಕೊಳ್ಳುತ್ತಾರೆ, ಅದರೊಂದಿಗೆ ಮಲಗುತ್ತಾರೆ ಮತ್ತು ಪ್ರತಿಯೊಂದು ಕೆಲಸ ಮಾಡುವಾಗಲೂ ಸ್ಮಾರ್ಟ್ ಫೋನ್ ಜೊತೆಗೆ ಇರಲೇಬೇಕು. ಅಷ್ಟೇ ಯಾಕೆ ಟಾಯ್ಲೆಟ್ಗೆ ಹೋಗುವಾಗಲೂ ಸಹ ಸ್ಮಾರ್ಟ್ ಫೋನ್ ಕೊಂಡೊಯ್ಯುತ್ತಾರೆ.
undefined
ಸ್ಮಾರ್ಟ್ ಫೋನ್ ಅನ್ನು ಟಾಯ್ಲೆಟ್ಗೆ ಒಯ್ಯುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಶೌಚಾಲಯದಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರೋದರಿಂದ ಅಲ್ಲಿ ಸ್ಮಾರ್ಟ್ ಫೋನ್ ಬಳಸುವುದುಯೋಗಕ್ಷೇಮದ ಮೇಲೆ ಹೇಗೆ ಗಂಭೀರ ಪರಿಣಾಮ ಬೀರಬಹುದು ಎಂಬುದನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
undefined
ಇದು ಹಾಮೋರ್ಹೊಯ್ಡ್ಸ್‌ಗೆ ಕಾರಣವಾಗಬಹುದುಇದು ಮೂಲವ್ಯಾಧಿಗೆ ಇನ್ನೊಂದು ಹೆಸರು. ಹೌದು, ಸ್ಮಾರ್ಟ್ ಫೋನ್ ಬ್ರೌಸ್ ಮಾಡುತ್ತಾ ಹೆಚ್ಚು ಹೊತ್ತು ಕುಳಿತು ಕೊಳ್ಳುವುದರಿಂದ ಗುದನಾಳದ ಮೇಲೆ ಒತ್ತಡವುಂಟಾಗುತ್ತವೆ. ಇದು ಗುದದ ಒಳಗೂ ಹೊರಗೂ ರಕ್ತನಾಳಗಳ ಮೇಲೆ ಪರಿಣಾಮ ಬೀಳುತ್ತದೆ. ಅದು ಅತಿಯಾದಾಗ ಸಮಸ್ಯೆಯಾಗುತ್ತದೆ.
undefined
ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಹೊತ್ತು ಕುಳಿತಾಗ ಇದು ಸಂಭವಿಸಬಹುದು. ಗುದನಾಳದ ಮೇಲೆ ಅನಗತ್ಯ ಒತ್ತಡವು ನೋವು, ಊತ ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು.ಇದು ಬ್ಯಾಕ್ಟೀರಿಯಾದ ಸೋಂಕುಗಳ ಅಪಾಯವನ್ನು ಹೆಚ್ಚಿಸಬಹುದು.
undefined
ಫೋನ್‌ಗಳು ಬಹಳಷ್ಟು ಕೀಟಾಣುಗಳನ್ನು ಆಕರ್ಷಿಸುತ್ತವೆ. ಆದರೆ ಅದನ್ನು ಟಾಯ್ಲೆಟ್‌ಗೆ ತೆಗೆದುಕೊಂಡು ಹೋದಾಗ, ಅದನ್ನು ಬೇಸಿನ್ ಅಥವಾ ಟಾಯ್ಲೆಟ್ ಪೇಪರ್ ರೋಲ್ ಮೇಲೆ ಇರಿಸಬಹುದು. ಆದರೆ ಮುಂದೆ ಕೈಗಳು ಯಾವ ಕಡೆ ಮುಟ್ಟಿವೆ ಎಂದು ಯಾರಿಗೆ ಗೊತ್ತು?
undefined
ಮೂತ್ರನಾಳಗಳಲ್ಲಿ, ಶೌಚಾಲಯಗಳಲ್ಲಿ, ಹ್ಯಾಂಡಲ್‌ಗಳಲ್ಲಿ, ಸಿಂಕ್‌ಗಳಲ್ಲಿ, ಇ.ಕೋಲಿಯಂತಹ ಮಲದ ಬ್ಯಾಕ್ಟೀರಿಯಾಗಳು ರೋಗ ಉಂಟುಮಾಡುವ ರೋಗಾಣುಗಳಿಂದ ಆವೃತವಾಗಿವೆ. ಇವು ಸ್ಮಾರ್ಟ್ ಫೋನ್ ಗೆ ವರ್ಗಾವಣೆಯಾದಾಗ, ಫೋನ್ ನಿಂದ ಉತ್ಪತ್ತಿಯಾಗುವ ಶಾಖವು ರೋಗಕಾರಕಗಳಿಗೆ ಪರಿಪೂರ್ಣವಾದ ವಾತಾವರಣವನ್ನು ಒದಗಿಸುತ್ತದೆ.
undefined
ಬಾತ್ ರೂಮ್ ಗಾಯ ಆಗುವ ಸಾಧ್ಯತೆ ಹೆಚ್ಚುಟಾಯ್ಲೆಟ್ ನಲ್ಲಿ ಫೋನ್ ಅನ್ನು ಬ್ರೌಸ್ ಮಾಡುವ ಅಭ್ಯಾಸದಲ್ಲಿದ್ದರೆ, ನೋಡುತ್ತಿರುವುದರಲ್ಲಿ ತುಂಬಾ ಮಗ್ನರಾಗಿರುವಾಗ ಕೆಲವೊಮ್ಮೆ ಎಲ್ಲಿದ್ದೀರಿ ಎಂದು ಅರಿವೇ ಇರುವುದಿಲ್ಲ.ಆಗ ಎದ್ದು ಜಾರಿ ಕೆಳಗೆ ಬೀಳಬಹುದು. ತಲೆಯನ್ನು ಗೋಡೆಗೆ ಗುದ್ದಿ ತಲೆಗೆ ಪೆಟ್ಟು ಬಿದ್ದು ಗಾಯಗೊಳ್ಳುವ ಸಾಧ್ಯತೆ ಸಹ ಇದೆ.
undefined
ಸೃಜನಶೀಲತೆಯ ಮೇಲೆ ಪರಿಣಾಮ ಬೀರುತ್ತೆಆ ಸಮಯವು ಮನಸ್ಸನ್ನು ರಿಚಾರ್ಜ್ ಮಾಡಲು ಮತ್ತು ಪ್ರತಿಫಲಿಸಲು ಅವಕಾಶ ನೀಡುತ್ತದೆ. ಸೃಜನಶೀಲತೆ ಅರಳಲು ಇದು ಅಗತ್ಯ. ಮನಸ್ಸು ಸದಾ ತಂತ್ರಜ್ಞಾನದೊಂದಿಗೆ ತೊಡಗಿಕೊಂಡಿದ್ದರೆ, ಸೃಜನಶೀಲತೆ ಹುಟ್ಟಿಕೊಳ್ಳಲು ಸಮಯ ಸಾಕಾಗುವುದಿಲ್ಲ..
undefined
click me!